ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಕ್ತ

ವಿಕಿಸೋರ್ಸ್ದಿಂದ

ರಕ್ತ ಮನುಷ್ಯ ಹಾಗೂ ಇನ್ನಿತರ ಕಶೇರುಕಗಳ (ವರ್ಟಿಬ್ರೇಟ್ಸ್) ದೇಹದಲ್ಲಿಯ ಪ್ರಮುಖ ರಕ್ತನಾಳವ್ಯವಸ್ಥೆಯಲ್ಲಿ (ವಾಸ್ಕುಲರ್ ಸಿಸ್ಟಮ್) ಪರಿಚಲಿಸುವ, ಕೆಂಪುಬಣ್ಣದ ದ್ರವ (ಬ್ಲಡ್). ನೆತ್ತರು, ರುಧಿರ, ಪರ್ಯಾಯನಾಮಗಳು. ಕಾರಣಾಂತರಗಳಿಂದ ದೇಹದ ಒಳಗೆ ಇಲ್ಲವೆ ಹೊರಗೆ ಎಲ್ಲಿ ಗಾಯವಾದರೂ ರಕ್ತ ಹೊರಬರುತ್ತದೆ. ಎಲ್ಲ ಕಶೇರುಕಗಳ ದೇಹದಲ್ಲೂ ಅನಿಲಿಡ ವಂಶಕ್ಕೆ ಸೇರಿದ ಎರೆಹುಳು, ಜಿಗಣೆ ಮತ್ತು ಇನ್ನಿತರ ಸಮುದ್ರವಾಸಿ ಹುಳುಗಳು ಹಾಗೂ ಅವುಗಳಿಗಿಂತ ಮೇಲ್ದರ್ಜೆಯ ಅಕಶೇರುಕಗಳ ದೇಹದಲ್ಲೂ ರಕ್ತ ಇದೆ. ಕೆಲವು ಹುಳುಗಳಲ್ಲಿ ರಕ್ತ ಮಾಸಲು - ಹಸರು ಬಣ್ಣಕ್ಕೂ ಕೆಲವೊಂದು ಚಿಪ್ಪುಪ್ರಾಣಿಗಳು ಹಾಗೂ ಸಂಧಿಪದಿಗಳಲ್ಲಿ ತಿಳಿನೀಲಿ ಬಣ್ಣಕ್ಕೂ ಇರುವುದುಂಟು. ಮನುಷ್ಯನ ವಿಚಾರವಾಗಿ ಹೇಳುವುದಾದರೆ ಕಣಗಳೂ (ಸೆಲ್ಸ್) ಕಣೀತ್ರಗಳೂ (ಕಿರುತಟ್ಟೆಗಳು; ಪ್ಲೇಟ್‍ಲೆಟ್ಸ್) ನಿಲಂಬಿತಗೊಂಡಿರುವ (ಸಸ್ಪೆಂಡೆಡ್) ರಕ್ತದ್ರವದಿಂದ (ಜೀವಿರಸ; ಪ್ಲಾಸ್ಮ) ಈ ದ್ರವ ಕೂಡಿದೆ. ಕ್ಷಾರೀಯ ಗುಣವುಳ್ಳದ್ದು ಈ ದ್ರವ. ಸಾಪೇಕ್ಷ ಸಾಂದ್ರತೆ 1.050 - 1.060.

ಪ್ರಸ್ತುತ ಲೇಖನವನ್ನು ಈ ಮುಂದಿನ ಉಪಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಿದೆ. 1 ಸ್ಥೂಲಪರಿಚಯ 2 ರಕ್ತಪರಿಚಲನೆ 3 ಹೀಮೋಗ್ಲಾಬಿನ್ 4 ರಕ್ತದ ರಚಿತವಸ್ತುಗಳು 5 ರಕ್ತಸ್ರಾವ 6 ರಕ್ತ ಗರಣೆಗಟ್ಟುವಿಕೆ 7 ರಕ್ತ ಪಂಗಡಗಳು 8 ರಕ್ತಪೂರಣೆ

1. ಸ್ಥೂಲ ಪರಿಚಯ: ಸಾಮ್ಯಾನ್ಯವಾಗಿ ಮನುಷ್ಯರ ದೇಹದಲ್ಲಿ 5 - 6 ಲೀಟರುಗಳಷ್ಟು ರಕ್ತ ಇರುತ್ತದೆ. ಈ ವಿಷಯ ಶಿರಶ್ಛೇದನ ಮಾಡಿದ ಅಪರಾಧಿಗಳಲ್ಲಿ ರಕ್ತದ ನೇರ ಅಳತೆಯಿಂದ ಸುಮಾರು 200 ವರ್ಷಗಳಿಗೆ ಹಿಂದೆಯೇ ತಿಳಿದು ಬಂದಿತ್ತು. ವಿವಿಧ ಪ್ರಯೋಗಗಳಿಂದ ಅಪ್ರತ್ಯಕ್ಷವಾಗಿ ಮಾಪನ ಮಾಡಿ ದೇಹತೂಕದ 1 / 12 ರಷ್ಟು ರಕ್ತ ಇರುತ್ತದೆಂದು ನಿರ್ಧರಿಸಲಾಗಿದೆ. ರಕ್ತಪ್ರಮಾಣ ದೇಹತೂಕವನ್ನು ಅನುಸರಿಸಿರುವುದಕ್ಕಿಂತ ಹೆಚ್ಚು ಕರಾರುವಾಕ್ಕಾಗಿ ದೇಹದ ಮೇಲ್ಮೈ ಅಳತೆಯನ್ನು ಅನುಸರಿಸಿದೆ ಎಂದೂ ಗೊತ್ತಾಗಿದೆ. ಸಸ್ತನಿಗಳಲ್ಲೆಲ್ಲ ಸಾಮಾನ್ಯವಾಗಿ ಮನುಷ್ಯನಲ್ಲಿರುವಂತೆ ದೇಹತೂಕದ ಸುಮಾರು 1 / 12 ರಷ್ಟು ರಕ್ತ ಇರುತ್ತದೆ ಎನ್ನಬಹುದು. ಪಕ್ಷಿಗಳಲ್ಲಿ ದೇಹತೂಕದ 1 / 10 ರಷ್ಟು ರಕ್ತ ಇರುವುದೂ ಮೀನುಗಳಲ್ಲಿ ದೇಹತೂಕದ ಕೇವಲ ಶೇ. 2 - 3 ರಷ್ಟು ಅವುಗಳ ಮರಿಗಳಲ್ಲಿ (ಲಾರ್ವ) ಶೇ. 40 ರಷ್ಟೂ ರಕ್ತ ಇರುವುದು ತಿಳಿದಿದೆ. ಅತ್ಯಂತ ಹೆಚ್ಚಾಗಿ ಇರುವುದು ಶಂಖದ ಹುಳು ಜಾತಿಯಲ್ಲಿ ಇವುಗಳಲ್ಲಿ ದೇಹದ ಘನಗಾತ್ರದ ಶೇ. 90 ಭಾಗ ರಕ್ತವೇ.

ದೇಹದಲ್ಲಿ ರಕ್ತ ಸ್ವಸ್ಥಾನದಲ್ಲಿರುವಾಗ (ಹೃದಯ ಹಾಗೂ ರಕ್ತನಾಳಗಳ ಒಳಗೆ) ಅದು ಸದಾ ದ್ರವರೂಪದಲ್ಲಿರುವುದು ಒಂದು ವೈಶಿಷ್ಟ್ಯ. ಆದರೆ ದೇಹದಿಂದ ಹೊರಬಂದ ರಕ್ತ ನಾಲ್ಕಾರು ಮಿನಿಟುಗಳಲ್ಲಿ ಗರಣೆ ಕಟ್ಟಿ ಘನೀಕರಿಸುವುದು ಅದರ ಇನ್ನೊಂದು ಗುಣಗಳೂ ಅಗತ್ಯ. ಸಾಧಾರಣವಾಗಿ ದೇಹದ ಯಾವ ಭಾಗದಲ್ಲಿ ಗಾಯವಾದರೂ ರಕ್ತಸ್ರಾವವಾಗುವುದರಿಂದ ಅದು ದೇಹದ ಎಲ್ಲೆಡೆಯೂ ಇರುತ್ತದೆ ಎಂಬುದು ಸ್ಪಷ್ಟ. ಗಾಯವಾದಾಗ ರಕ್ತನಾಳಗಳು ಛಿದ್ರಗೊಂಡು ಒಳಗೆ ಹರಿಯುತ್ತಿರುವ ರಕ್ತ ಹೊರಬರುವುದೆಂಬುದು ಎಲ್ಲರಿಗೂ ತಿಳಿದ ವಿಷಯ. ನಾಳಗಳಲ್ಲಿ ರಕ್ತ ಹರಿಯುತ್ತಿರಬೇಕಾದರೆ ಅದು ದ್ರವರೂಪದಿಂದ ಇರಬೇಕಾದುದು ಅಗತ್ಯವೆನ್ನುವುದು ಸ್ಪಷ್ಟ. ಏಕೆಂದರೆ ರಕ್ತ ಅಲ್ಲೆ ಗರಣೆ ಕಟ್ಟಿಕೊಳ್ಳುವಂತಿದ್ದರೆ ಅದು ಪ್ರವಹಿಸುವುದಕ್ಕೆ ಅಡಚಣೆ ಆಗುವುದು ವಿಶಾದ. ಆದರೆ ಗಾಯವಾಗಿ ನಾಳದಿಂದ ಹೊರಬಂದ ರಕ್ತ ಗರಣೆಗಟ್ಟಿಕೊಳ್ಳಬೇಕಾದುದೇ ಅಪೇಕ್ಷಣೀಯ. ಗರಣೆಯಿಂದ ರಕ್ತನಾಳದ ಗಾಯ ಮುಚ್ಚಿಕೊಂಡು ಮರಣಾಂತಕವಾಗಿ ರಕ್ತ ನಷ್ಟವಾಗುವುದು ತಪ್ಪುತ್ತದೆ.

ಪಿಚಕಾರಿಯ ಮೂಲಕ ಮನುಷ್ಯ ರಕ್ತವನ್ನು ತೆಗೆದು ಒಂದು ಪ್ರನಾಳದಲ್ಲಿಟ್ಟರೆ ಅದು ನಾಲ್ಕರು ಮಿನಿಟುಗಳಲ್ಲಿ ಗಟ್ಟಿಯಾಗುತ್ತದೆ. ಆದರೆ ಅದಕ್ಕೆ ಕೊಂಚ ಪೊಟ್ಯಾಸಿಯಮ್ ಆಕ್ಸಲೇಟ್ ಪುಡಿಯನ್ನು ಸೇರಿಸಿದರೆ ರಕ್ತ ದ್ರವರೂಪದಲ್ಲೇ ಇರುತ್ತದೆ. ಪ್ರನಾಳವನ್ನು ಹಾಗೆಯೇ ಇಟ್ಟಿದ್ದರೆ ಸುಮಾರು 1 / 2 - 1 ಗಂಟೆಯೊಳಗೆ ರಕ್ತ ಅದರ ಅರ್ಧಕ್ಕಿಂತ ಕಡಿಮೆಯಾಗಿ (ಸುಮಾರು 45%) ತಳದ ಕೆಂಪು ಗಟ್ಟಾಗಿಯೂ ಅರ್ಧಕ್ಕಿಂತ ಹೆಚ್ಚಾಗಿ (ಸುಮಾರು 55%) ಗಷ್ಟಿನ ಮೇಲೆ ತಿಳೀ ಹಳದಿ ಬಣ್ಣದ ದ್ರವವಾಗಿಯೂ ಬೇರ್ಪಡುತ್ತದೆ. ದ್ರವಕ್ಕೆ ರಕ್ತದ್ರವ (ಪ್ಲಾಸ್ಮ) ಎಂದು ಹೆಸರು. ತಳದ ಗಷ್ಟನ್ನು ಗುಂಡುಸೂಜಿಯ ತಲೆಯಷ್ಟು ತೆಗೆದು 0.9% ಸೋಡಿಯಮ್ ಕ್ಲೋರೈಡ್ ದ್ರಾವಣದ ತೊಟ್ಟಿನಲ್ಲಿಟ್ಟು ಸೂಕ್ಷ್ಮದರ್ಶಕದ ಮೂಲಕ ನೋಡಿದರೆ ವಿಶಿಷ್ಟರಚನೆಯ ಘಟಕಗಳಿಂದಾಗಿರುವುದು (ಫಾರಮ್ಡ್ ಎಲಿಮೆಂಟ್ಸ್) ವ್ಯಕ್ತವಾಗುತ್ತದೆ. ಎಲ್ಲೆಲ್ಲೂ ದುಂಡನೆಯ ಮಾಸಲು ಕೆಂಪುಬಣ್ಣದ ಸಣ್ಣ ಕಣಗಳಿರುವುದು ಗೋಚರವಾಗುತ್ತದೆ. ಇವು ರಕ್ತದ ಕೆಂಪು ಕಣಗಳು (ರೆಡ್‍ಬ್ಲಡ್ ಕಾರ್ಪಸಲ್ಸ್; ಆರ್.ಬಿ.ಸಿ.). ಇವು ದೇಹದ ಕೋಶಗಳಿಗೆ ಆಮ್ಲಜನಕವನ್ನು ಒದಗಿಸಿ ಅವುಗಳಿಂದ ಕಾರ್ಬನ್ ಡೈ ಆಕ್ಸೈಡ್‍ನ್ನು ಹೊತ್ತೊಯ್ಯುತ್ತವೆ. ಇವುಗಳ ನಡುವೆ ಎಲ್ಲೊ ಅಲ್ಲೊಂದು ಇಲ್ಲೊಂದು ಕೆಂಪು ಕಣಗಳಿಗಿಂತ ಸ್ವಲ್ಪ ದೊಡ್ಡದಾದ ಬಣ್ಣವಿಲ್ಲದೆ ಕಣಗಳೂ ಕಾಣಿಸುತ್ತವೆ. ಇವು ವರ್ಣರಹಿತ ಕಣಗಳು (ಹ್ವೈಟ್ ಬ್ಲಡ್ ಕಾರ್ಪಸಲ್ಸ್ ; ಡಬ್ಲ್ಯೂ. ಬಿ.ಸಿ.). ಇವು ಸಾಮಾನ್ಯವಾಗಿ ದೇಹವನ್ನು ವಿಷಾಣುಗಳ ಧಾಳಿಯಿಂದ ರಕ್ಷಿಸುತ್ತವೆ. ಜೊತೆಗೆ ಅಲ್ಲಲ್ಲಿ ಕೆಂಪುಕಣಗಳು 1 / 4 ಭಾಗಕ್ಕಿಂತಲೂ ಕಿರಿದಾಗಿರುವ, ರವೆಯಂಥ ರಚನೆಗಳು ಗುಂಪುಗುಂಪಾಗಿ ಕಾಣಿಸುತ್ತದೆ. ಇವುಗಳಿಂದ ರಕ್ತದ ಕಣಿತ್ರಗಳೆಂದು (ಬ್ಲಡ್ ಪ್ಲೇಟ್ ಲೆಟ್ಸ್) ಹೆಸರು. ರಕ್ತಸ್ರಾವಸ್ತಂಭನದಲ್ಲಿ ಇವು ಮುಖ್ಯಪಾತ್ರ ವಹಿಸುತ್ತದೆ. ಮನುಷ್ಯ ದೇಹದ ಒಟ್ಟು ರಕ್ತ ಸುಮಾರು 5 ಲೀಟರುಗಳಷ್ಟು ರಕ್ತದ್ರವವೂ ಇದೆ. ಇವು ಸುಮಾರು ರಚಿತಘಟಕಗಳೂ 2.75 ಲೀಟರುಗಳಷ್ಟು ರಕ್ತದ್ರವವೂ ಇದೆ. ಇವು ಸುಮಾರು ಇಷ್ಟೇ ಪ್ರಮಾಣದಲ್ಲಿ ದೇಹದಲ್ಲಿ ಇರುವುದು ಅಗತ್ಯ. ಹೆಚ್ಚು ಕಡಿಮೆ ಆದರೆ ಅದು ಅನಾರೋಗ್ಯ ಸ್ಥಿತಿಯ ಸೂಚಕವೇ ಸರಿ.

ರಕ್ತನಾಳಗಳಲ್ಲಿ ಇರುವ ರಕ್ತದ್ರವ, ದೇಹದೊಳಗೆ ಎಲ್ಲೆಲ್ಲೂ ಕಂಡೂ ಕಾಣಿಸದಂತೆಯೂ ಇರುವ ಅಂಗಾಂಶದ್ರವ (ಟಿಷ್ಯೂ ಫ್ಲೂಯಿಡ್), ಇವೆರಡರ ನಡುವೆ ವಸ್ತು ವಿನಿಮಯ (ನೀರು, ಅನಿಲಗಳೂ ಸೇರಿದಂತೆ) ನಿರಂತರವೂ ಜರುಗುತ್ತಲೇ ಇದು ದೇಹದ ಎಲ್ಲ ಕೋಶಗಳಿಗೂ ಆಹಾರ ಸರಬರಾಜಾಗಿ ಅವುಗಳಿಂದ ತಯಾರಾದ ಉಪಯುಕ್ತ ಹಾಗೂ ವಿಸರ್ಜನವಸ್ತುಗಳು ರಕ್ತದ್ರವವನ್ನು ಸೇರುತ್ತದೆ. ಅಧಿಕ ವಮನ, ಭೇಧಿ, ಅಧಿಕವಾಗಿ ಬೆವರುವಿಕೆ, ಚುಚ್ಚುವುದರ ಮೂಲಕ ದ್ರವದುಂಬಿಕೆ, ಮೂತ್ರ ಪಿಂಡರೋಗ ಇತ್ಯಾದಿಗಳಿಂದ ಅಂಗಾಂಶದ್ರವದ ಮೊತ್ತದಲ್ಲಿ ಹೆಚ್ಚು ಕಡಿಮೆ ಆದಾಗ ಅನುಗುಣವಾಗಿ ರಕ್ತದ ಘಟಕಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ. ರಕ್ತಸ್ರಾವವಾದಾಗಲೂ ವ್ಯತ್ಯಾಸವಾಗುವುದು ವ್ಯಕ್ತ. ಇಂಥ ವ್ಯತ್ಯಾಸಗಳಿಂದ ರಕ್ತದ ಒತ್ತಡದಲ್ಲಿ ಏರುಪೇರು, ಮತ್ತಿತರ ತೊಂದರೆಗಳೂ ಉಂಟಾಗುತ್ತವೆ. ಆದ್ದರಿಂದ ಒಟ್ಟು ರಕ್ತ ಹಾಗೂ ಘಟಕಗಳ ಘನಗಾತ್ರ ಹೆಚ್ಚುಕಡಿಮೆ ಆಗದಂತೆ ವಿಶಿಷ್ಟ ನಿಯಂತ್ರಣ ಕ್ರಮಗಳು ದೇಹದಲ್ಲಿ ಏರ್ಪಟ್ಟಿವೆ. ನೀರಡಿಕೆ, ಮೂತ್ರೋತ್ಪಾದನೆ ಹಾಗೂ ಅದರ ಘನಸಾಂದ್ರತೆಯಲ್ಲಿ ಹೆಚ್ಚು ಕಡಿಮೆಗಳಾಗುವುದು ಇವೆಲ್ಲ ಮುಖ್ಯ ನಿಯಂತ್ರಣ ಕ್ರಮಗಳು.

2. ರಕ್ತಪರಿಚಲನೆ: ಕಶೇರುಕಗಳ ರಕ್ತನಾಳಗಳಲ್ಲಿ ರಕ್ತ ಹರಿಯುತ್ತಲೇ ಇರುವುದಕ್ಕೆ ಕಾರಣ ಎಂದರೆ ತಾನಾಗಿಯೇ ಕ್ರಮಬದ್ಧವಾಗಿ ಮಿಡಿಯುತ್ತ ರಕ್ತವನ್ನು ರೇಚುಸುತ್ತಲೇ (ಪಂಪ್) ಇರುವ ಹೃದಯ. ಮನುಷ್ಯನಲ್ಲಿ ಹೃದಯ ಎಂಬುದು ಮಿನಿಟಿಗೆ ಸುಮಾರು 70 ಬಾರಿ ಮಿಡಿಯುವ, ನಾಲ್ಕು ಕುಹರಗಳ ಒಂದು ರೇಚಕ (ಪೋರ್ ಚೇಂಬರ್ಡ್ ಪಂಪ್). ಮೇಲಿನ ಎರಡು ಕುಹರಗಳು ಎಡಬಲ ಹೃತ್ಕರ್ಣಗಳು (ಏಟ್ರಿಯ). ಇದಕ್ಕೆ ಅನುಕ್ರಮವಾಗಿ ಫುಪ್ಪುಸಗಳಿಂದ ಮತ್ತು ದೇಹದ ಇತರ ಎಡೆಗಳಿಂದ ದೊಡ್ಡ ರಕ್ತನಾಳಗಳ ಮೂಲಕ ಸತತವಾಗಿ ಹರಿದು ಬಂದು ತುಂಬಿಕೊಳ್ಳುವ ರಕ್ತವನ್ನು ಇವು ತಮ್ಮ ಅಡಿಯಲ್ಲಿ ಇರುವ ಎಡಬಲ ಹೃತ್ಕುಕ್ರ್ಷಿಗಳೂ ಏಕಕಾಲಿಕವಾಗಿ ಸಂಕುಚಿಸಿ ತಮ್ಮಿಂದ ಹೊರಡುವ ರಕ್ತನಾಳಗಳೊಳಕ್ಕೆ ರಕ್ತವನ್ನು ದಬ್ಬುತ್ತದೆ. ಬಲಹೃತ್ಕುಕ್ಷಿಯಿಂದ ಹೊರಡುವುದು ಫುಪ್ಪುಸಧಮನಿ (ಪಲ್ಮನರಿ ಆರ್ಟರಿ). ಇದು ತನ್ನ ಎಡಬಲ ಕವಲುಗಳ ಮೂಲಕ ಆಯಾ ಕಡೆಯ ಫುಪ್ಪುಸಗಳಿಗೆ ರಕ್ತವನ್ನು ಒಯ್ಯುತ್ತದೆ. ಅಲ್ಲಿಂದ ಫುಪ್ಪುಸ ಅಭಿಧಮನಿಗಳು (ಪಲ್ಮನರಿ ವೇಯ್ನ್ಸ್) ಎಂಬ ನಾಲ್ಕು ರಕ್ತನಾಳಗಳ ಮೂಲಕ ಪ್ರವಹಿಸುತ್ತದೆ. ಅಯೋರ್ಟ ಛತ್ರಿಕೋಲಿನ ಹಿಡಿಯುವಂತೆ ಕಮಾನಾಗಿ ಪ್ರಾರಂಭವಾಗಿ ಬೆನ್ನುಮೂಳೆಯ ಮುಂದೆ ನೇರವಾಗಿ ಸೊಂಟದವರೆಗೆ ಇಳಿದು ಅಲ್ಲಿ ಎರಡು ಕವಲಾಗಿ ಎಡಬಲ ಕಿಬ್ಬೊಟ್ಟೆ ಭಾಗಗಳಿಗೂ ಇಳಿಯುತ್ತಿರುವ ನೇರ ಭಾಗದಿಂದಲೂ ಉದ್ಭವಿಸುವ ಕವಲುಗಳು ತಲೆ, ಕೈಗಳು, ಎದೆ ಹಾಗೂ ಉದರದ ಎಲ್ಲ ಅಂಗಗಳಿಗೆ ರಕ್ತಪೂರೈಕೆ ಮಾಡುತ್ತವೆ. ದೇಹದ ಕೆಳಭಾಗದಿಂದ ಹಿಂದಿರುಗುವ ರಕ್ತ ಉನ್ನತ ಮಹಾಭಿಧಮನಿ (ಇನ್‍ಪೀರಿಯರ್ ವೀನಕೇವ) ಎಂಬ ದೊಡ್ಡ ರಕ್ತನಾಳದ ಮೂಲಕವೂ ತಲೆ, ಕೈಗಳು ಹಾಗೂ ಮುಂಡದ ಮೇಲು ಭಾಗದಿಂದ ವಾಪಸಾಗುವ ರಕ್ತ ಉನ್ನತ ಮಹಾಭಿದಮನಿ (ಸುಪಿರಿಯರ್ ನೀನಕೇವ) ಎಂಬ ದೊಡ್ಡ ರಕ್ತನಾಳದ ಮೂಲಕವೂ ಬಲಹೃತ್ಕರ್ಣವನ್ನು ಸೇರುತ್ತದೆ. ಬಲಹೃತ್ಕುಕ್ಷಿಗಳ ನಡುವೆ, ಎಡಹೃತ್ಕರ್ಣ ಹೃತ್ಕುಕ್ಷಿಗಳ ನಡುವೆ, ಬಲಹೃತ್ಕುಕ್ಷಿ ಫುಪ್ಪುಸಧಮನಿ ಇವುಗಳ ನಡುವೆ ಮತ್ತು ಎಡಹೃತ್ಕುಕ್ಷಿ ಮಹಾಪಧಮನಿ ನಡುವೆ ಒಮ್ಮುಖವಾಗಿ ಮಾತ್ರ ತೆರೆದುಕೊಳ್ಳುವ ಕವಾಟಗಳಿವೆ (ವಾಲ್ಟ್). ಹೃತ್ಕುಕ್ಷಿಗಳಿಂದ ರೇಚಿಸಲ್ಪಟ್ಟ ರಕ್ತ ಫುಪ್ಪುಸಧಮನಿ ಮತ್ತು ಮಹಾಪಧಮನಿಗಳಿಗೆ ಹರಿದುಹೋಗಬಲ್ಲದೇ ವಿನಾ ಆಯಾ ಹೃತ್ಕರ್ಣಗಳಿಗೆ ಹಿಂದಕ್ಕೆ ಹರಿದುಹೋಗಲಾರುದು. ಹೃತ್ಕರ್ಣ ಹೃತ್ಕುಕ್ಷಿಗಳ ನಡುವಣ ಕವಾಟಗಳು ಇದಕ್ಕೆ ಆಸ್ಪದ ಕೊಡುವುದಿಲ್ಲ. ಅಂತೆಯೇ ರಕ್ತದಿಂದ ಹಿಗ್ಗಿಸಲ್ಪಟ್ಟಿರುವ ಫುಪ್ಪುಸಧಮನಿ ಮತ್ತು ಮಹಾಪಧಮನಿಗಳು ತಮ್ಮ ಸ್ಥಿತಿಸ್ಥಾಪಕಸಾಮಥ್ರ್ಯದಿಂದ ಸಹಜಸ್ಥಿತಿಗೆ ಬಂದಾಗ ಅವುಗಳೊಳಗಿನ ರಕ್ತ ಆಯಾ ಹೃತ್ಕುಕ್ಷಿಗಳಿಗೆ ಹಿಂದಿರುಗಲು ಅವುಗಳ ನಡುವೆ ಇರುವ ಕವಾಟಗಳು ಅವಕಾಶ ಮಾಡಿಕೊಡುವುದಿಲ್ಲ. ಆದ್ದರಿಂದ ರಕ್ತ ಫುಪ್ಪುಸಧಮನಿಗಳು ಮತ್ತು ಮಹಾಪಧಮನಿಗಳಲ್ಲಿ ಇನ್ನೂ ಮುಂದಕ್ಕೇ ಹರಿದು ಹೋಗಬೇಕು. ಹೀಗೆ ಮುಂದುಮುಂದಕ್ಕೆ ತಳ್ಳಿಸಿಕೊಂಡೇ ರಕ್ತ ಅವುಗಳ ಅಂತ್ಯ ಕವಲುಗಳ ಮೂಲಕ ಕ್ರಮವಾಗಿ ಫುಪ್ಪಸಗಳ ಮತ್ತು ದೇಹದ ಇತರ ಎಲ್ಲ ಭಾಗಗಳ ಮೂಲೆ ಮೂಲೆಗಳನ್ನೂ ತಲುಪುತ್ತದೆ. ಪ್ರವಾಹ ಮುಂದುವರಿದು ರಕ್ತ ಅಂತಿಮವಾಗಿ ಹೃದಯವನ್ನೇ ಪುನಃ ಸೇರುತ್ತದೆ. ಚಕ್ರಾಕಾರವಾದ ಈ ರಕ್ತಚಲನೆಗೆ ರಕ್ತಪರಿಚಲನೆ (ಬ್ಲಡ್ ಸಕ್ರ್ಯುಲೇಷನ್) ಎಂದು ಹೆಸರು. ಇಲ್ಲಿ 2 ಪ್ರದಕ್ಷಿಣೆಗಳನ್ನು ಗಮನಿಸಬಹುದು. ಎಡಹೃತ್ಕುಕ್ಷಿಯಿಂದ ರೇಚಿಸಲ್ಪಟ್ಟ ರಕ್ತ ದೇಹದ ಎಲ್ಲ ಮೂಲೆಗಳಿಗೂ ಪೂರೈಕೆ ಆಗಿ ಮತ್ತೆ ಬಲಹೃತ್ಕರ್ಣವನ್ನು ಸೇರುವುದೆ ಒಂದು; ಬಲಹೃತ್ಕುಕ್ಷಿಯಿಂದ ರೇಚಿಸಲ್ಪಟ್ಟ ರಕ್ತ ಪುಪ್ಪಸಗಳಲ್ಲಿ ಮಾತ್ರ ಪರಿಚಲಿಸುತ್ತ ಪುನಃ ಎಡಹೃತ್ಕರ್ಣವನ್ನು ಸೇರುವುದು ಇನ್ನೊಂದು. ಹೃದಯದಿಂದ ಆಚೆಗೆ ರಕ್ತವನ್ನು ಒಯ್ಯುವ ರಕ್ತನಾಳಗಳಿಗೆಲ್ಲ ಅಪಧಮನಿಗಳೆಂದೂ (ಆರ್ಟರೀಸ್), ದೇಹದ ನಾನಾ ಮೂಲೆಗಳಿಂದಲೂ ರಕ್ತವನ್ನು ವಾಪಸ್ಸು ಹೃದಯಕ್ಕೆ ಒಯ್ಯುವ ರಕ್ತನಾಳಗಳಿಗೆಲ್ಲ ಅಭಿಧಮನಿಗಳೆಂದೂ (ವೆಯ್ನ್) ಹೆಸರು. ಒಂದು ನಿರ್ದಿಷ್ಟ ಅಂಗ ಇಲ್ಲೇ ದೇಹ ಭಾಗಕ್ಕೆ ಯುಕ್ತ ಅಪಧಮನಿಯ ಮೂಲಕ ರಕ್ತಪೂರೈಕೆ ಆಗುವುದು ಮಾಮೂಲು. ಅನೇಕ ಕಡೆಗಳಲ್ಲಿ ಒಂದೆ ದೇಹಭಾಗಕ್ಕೆ 2 - 3 ಅಪಧಮನಿಗಳು ರಕ್ತಪೂರೈಕೆ ಮಾಡುವುದೂ ಇದೆ. ಅಪಧಮನಿಯೊಂದು ಪದೇ ಪದೇ ಕವಲಾಗುತ್ತ ಸುಮಾರು 1 ಮಿಮೀ ವ್ಯಾಸದಷ್ಟು ಸಣ್ಣದಾದ ಕಿರಿ ಅಪಧಮನಿಗಳು (ಆರ್ಟಿರಿಯೋಲ್ಸ್) ಎಂದಾಗುತ್ತದೆ. ಮಾತ್ರವಲ್ಲದೆ ರಕ್ತವನ್ನು ನಿರ್ದಿಷ್ಟಕ್ಷೇತ್ರದ ಉದ್ದ, ಅಗಲ ಮತ್ತು ಗಾತ್ರಕ್ಕೂ ತಲುಪಿಸುತ್ತದೆ ಕೂಡ. ಪ್ರತಿಯೊಂದು ಕಿರಿ ಅಪಧಮನಿ ಮುಂದೆ ಇನ್ನೂ ಸಣ್ಣ ಶಾಖೆಗಳಾಗಿ ಅಂತಿಮವಾಗಿ ಬರೀ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮರಕ್ತನಾಳಗಳಾಗುತ್ತದೆ. ಈ ನಾಳಗಳಿಗೆ ಲೋಮನಾಳಗಳು (ಕ್ಯಾಪಿಲ್ಲೆರೀಸ್) ಎಂದು ಹೆಸರು. ಇವೂ ಕವಲೊಡೆಯುವುದಾದರೂ ಕವಲುಗಳು ಸಣ್ಣವಾಗದೆ ಮತ್ತು ಬೇರೆ ಕವಲುಗಳೊಡನೆ ಸೇರಿಕೊಳ್ಳುತ್ತ ಪುನೈ ಒಡೆಯುತ್ತ ಒಂದು ಬಲೆ ಅಥವಾ ಜಾಲರಿಯಂತಾಗುತ್ತದೆ. ಲೋಮನಾಳದ ಜಾಲರಿಗಳು (ಕ್ಯಾಪಿಲ್ಲೆರಿ ಪ್ಲೆಕ್ಸಸ್ ಅಥವಾ ನೆಟ್‍ವರ್ಕ್) ಆ ಕ್ಷೇತ್ರದ ಕೋಶಗಳೆಲ್ಲದರ ನಿಕಟಸಂಪರ್ಕ ಪಡೆದಿರುತ್ತದೆ. ಲೋಮನಾಳಗಳ ವ್ಯಾಸ ಅತಿ ಕಿರಿದು. ಮಿಲಿಮೀಟರಿನ ಸಾವಿರ ಭಾಗಗಳಲ್ಲಿ 3 - 30 ಭಾಗಗಳಷ್ಟಿರಬಹುದು (0.001 ಮಿಮೀ 1m) ಇವುಗಳ ಭಿತ್ತಿಯೂ ಅತಿ ತೆಳುವೇ. ಈ ಭಿತ್ತಿಯ ಮೂಲಕ ಲೋಮನಾಳಗಳೊಳಗಿರುವ ರಕ್ತ ಮತ್ತು ಕೋಶಗಳ ಆವರಣ ದ್ರವ (ಇಂಟರ್‍ಸೆಲ್ಯುಲರ್ ಅಥವಾ ಇನ್‍ಟರ್‍ಸ್ಟೀಷಿಯಲ್ ಪ್ಲೂಯಿಡ್, ಟಿಷ್ಯೂ ಪ್ಲೂಯಿಡ್) ಇವುಗಳ ನಡುವೆ ವಸ್ತುಗಳ ವಿನಿಮಯ ಜರುಗುತ್ತದೆ.

ಎಡಹೃತ್ಕುಕ್ಷಿಯಿಂದ ಹೊರಬೀಳುವ ರಕ್ತದಲ್ಲಿ ಆಹಾರಾಂಶಗಳು, ಆಕ್ಸಿಜನ್ ಹಾರ್ಮೋನುಗಳು ಮತ್ತಿತರ ಉಪಯುಕ್ತ ವಸ್ತುಗಳೂ ದೇಹದಿಂದ ವಿಸರ್ಜಿತವಾಗಬೇಕಾದ ಯೂರಿಯ ಮುಂತಾದ ವಸ್ತುಗಳೂ ಹೇರಳವಾಗಿ ಇರುತ್ತವೆ. ದೇಹದ ವಿವಿಧ ಭಾಗಗಳಲ್ಲಿ ಮಹಾಪಧಮನಿಯ ಅಂತ್ಯಕಿರಿಗವಲುಗಳಿಂದ ಉದ್ಭವಿಸುವ ಲೋಮನಾಳ ಜಾಲರಿಗಳ ರಕ್ತದಲ್ಲಿಯೂ ಈ ವಸ್ತುಗಳು ಏನೂ ವ್ಯತ್ಯಾಸವಾಗದೆ ಇದ್ದು ದೇಹಕೋಶಗಳಿಗೆಲ್ಲ ಆಹಾರಾಂಶಗಳು ಆಕ್ಸಿಜನ್ನೂ ಸರಬರಾಜಾಗುತ್ತದೆ. ಹಾರ್ಮೊನುಗಳು ಮತ್ತಿತರ ಉಪಯುಕ್ತ ವಸ್ತುಗಳೂ ಹೀಗೆಯೇ ಎಲ್ಲಾ ಕೋಶಗಳನ್ನು ತಲಪಿದರೂ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೀರಲ್ಪಟ್ಟು ಕಾರ್ಯೋನ್ಮುಖವಾಗುತ್ತವೆ. ಇತರ ನಿರ್ದಿಷ್ಟ ಸ್ಥಳಗಳಲ್ಲಿ ಇಂಥ ವಸ್ತುಗಳನ್ನು ರಕ್ತವೇ ಹೀರಿಕೊಂಡುವಿಡುವುದೂ ಉಂಟು. ಎಲ್ಲೆಡೆಯೂ (ಮೂತ್ರಜನಕಾಂಗಗಳನ್ನು ಬಿಟ್ಟು) ಉತ್ಪತ್ತಿ ಆ ವಿಸರ್ಜನಾ ವಸ್ತುಗಳು ರಕ್ತದಿಂದ ಹೀರಲ್ಪಡುತ್ತದೆ. ಹಾಗೆಯೇ ಎಲ್ಲಾ ಕಡೆಗಳಲ್ಲೂ ಉತ್ಪತ್ತಿ ಅಗುತ್ತಲೇ ಇರುವ ಕಾರ್ಬನ್ ಡೈ ಆಕ್ಸೈಡನ್ನು ಈ ಲೋಮನಾಳ ಜಾಲರಿಗಳ ರಕ್ತ ಹೀರಿಕೊಳ್ಳುತ್ತದೆ. ಲೋಮನಾಳ ಜಾಲರಿಗಳಿಂದ ಹಿಂದಿರುಗುವ ರಕ್ತದಲ್ಲಿ ಆಕ್ಸಿಜನ್ ಕಡಿಮೆ ಆಗಿಯೂ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿಯೂ ಹಾಗೆಯೇ ಆಹಾರಾಂಶ ಸ್ವಲ್ಪ ಕಡಿಮೆ ಆಗಿಯೂ ವಿಸರ್ಜಿತ ವಸ್ತುಗಳು ಹೆಚ್ಚಾಗಿಯೂ ಇರುವುದು ವ್ಯಕ್ತ; ಆದರೆ ಆಹಾರಪಚನ ಕಾಲದಲ್ಲಿ ಕರುಳಿನಿಂದ ಹಿಂದಿರುಗುವ ರಕ್ತ ಆಹಾರಾಂಶಗಳನ್ನು ಹೀರಿಕೊಂಡಿರುವುದರಿಂದ ಅದರಲ್ಲಿ ಆಹಾರಾಂಶ ಮೊದಲಿಗಿಂತಲೂ ಹೆಚ್ಚಾಗಿಯೇ ಇರುತ್ತೆನ್ನುವುದು ವಾಸ್ತವದ ಸಂಗತಿ. ಮೂತ್ರಜನಕಾಂಗಗಳಿಂದ ಹಿಂದಿರುಗುವ ರಕ್ತದಲ್ಲಿ ವಿಸರ್ಜನೆ ಆಗತಕ್ಕ ವಸ್ತುಗಳು ಮೊದಲೇ ವಿಲೆ ಆಗಿರುವುದರಿಂದ, ಅವು ಬಲು ಕಡಿಮೆ ಪ್ರಮಾಣದಲ್ಲಿರುತ್ತವೆ.

ದೇಹದ ಬೇರೆ ಬೇರ ಕಡೆಗಳಲ್ಲಿ ಸಾಮಾನ್ಯವಾಗಿ ಮತ್ತು ವಿಶಿಷ್ಟವಾಗಿ ವಸ್ತುವಿನಿಮಯ ಆದ ಮೇಲೆ ರಕ್ತ ವಾಪಸ್ಸು ಹೃದಯದ ಬಲ ಹೃತ್ಕರ್ಣವನ್ನು ಬಂದುಸೇರುತ್ತದೆ. ಅನಂತರ ಈ ರಕ್ತ ಬಲಹೃತ್ಕುಕ್ಷಿಯ ರೇಚನದಿಂದ ಫುಪ್ಪುಸಗಳಿಗೆ ಒಯ್ಯಲ್ಪಡುವುದೂ ಉಂಟು. ಫುಪ್ಪುಸಗಳಲ್ಲಿ ಈ ರಕ್ತ ಕಾರ್ಬನ್ ಡೈ ಆಕ್ಸೈಡನ್ನು ಕಳೆದುಕೊಂಡು ಬದಲಾಗಿ ಆಕ್ಸಿಜನ್ನನ್ನು ಹೀರಿಕೊಳ್ಳೂತ್ತದೆ. ಇದು ಪುನಃ ಹೃದಯದ ಎಡಭಾಗವನ್ನು ಹೊಕ್ಕು ಪುನಃ ರೇಚಿಸಲ್ಪಟ್ಟು ಮಹಾಪಧಮನಿಯ ಮೂಲಕ ಮುಂದಿನ ಪ್ರದಕ್ಷಿಣೆಯನ್ನು ಪ್ರಾರಂಭಿಸುತ್ತದೆ. ಒಟ್ಟಿನಲ್ಲಿ ಪರಿಚಲಿಸುತ್ತಿರುವ ರಕ್ತದಲ್ಲಿ ಸದಾಕಾಲವೂ ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್, ಆಹಾರಾಂಶಗಳು, ವಿಸರ್ಜನವಾಗಬೇಕಾದ ಅಂಶಗಳು, ಹಾರ್ಮೋನುಗಳು ಮತ್ತಿತರ ಉಪಯುಕ್ತ ವಸ್ತುಗಳು ಎಲ್ಲವೂ ಇದ್ದೇ ಇರುತ್ತವೆ. ನಿರ್ದಿಷ್ಟ ಸ್ಥಳಗಳಲ್ಲಿ ಇವು ದೇಹಕೋಶಗಳಿಗೆ ಒದಗಿಯೋ ದೇಹಕೋಶಗಳಿಂದ ದತ್ತವಾಗಿಯೊ ಫುಪ್ಪುಸಗಳಲ್ಲಿ ಹೀರಿಕೆ - ಬಿಡುಗಡೆಗಳಾಗಿಯೊ ಮೂತ್ರಜನಕಾಂಗಗಳಲ್ಲಿ ವಿಸರ್ಜಿತವಾಗಿಯೊ ಹೆಚ್ಚು ಕಡಿಮೆ ಆಗುತ್ತಲೆ ಇರುತ್ತದೆ. ಈ ವಿನಿಮಯ ರಕ್ತದ ಒಂದು ಪ್ರಮುಖ ಕ್ರಿಯೆ. ಇದು ಜರುಗಲೆಂದೇ ರಕ್ತ ಪರಿಚಲಿಸುತ್ತಲೆ ಇರಬೇಕಾದ ಅಗತ್ಯವಿದೆ. ರಕ್ತಪರಿಚಲನೆಯಿಂದ ದೇಹದ ವಿವಿಧ ಭಾಗಗಳ ಸ್ಥಿತಿಯಲ್ಲಿ ಏರುಪೇರುಗಳು ಸರಿತೂಗಲ್ಪಟ್ಟು ದೇಹ ಸಹಜಸ್ಥಿತಿಗೆ ಮರಳುವುದು ಸಾಧ್ಯ. ದೇಹ ಉಷ್ಣತೆಯ ಸಮತೋಲ, ದೇಹದ ಸಹಜಪ್ರತ್ಯಾಮ್ಲೀಯತೆಯ (ನಾರ್ಮಲ್ ಆಲ್ಕಲೈನ್ ಕಂಡೀಷನ್ - ಸಾಮಾನ್ಯವಾಗಿ ಇದು ಠಿ ಊ 7.4 ರಷ್ಟು ಇರುತ್ತದೆ.) ಸಮತೋಲ, ದೇಹಕೋಶಗಳು, ಕೋಶಾವರಣದ್ರವ, ರಕ್ತ ಈ ಮೂರು ನೀರಿನ ಅಂಶದ ಸಮತೋಲ. ಇವು ರಕ್ತಪರಿಚಲನೆಯಿಂದಲೇ ಮುಖ್ಯವಾಗಿ ಸಾಧಿಸಲ್ಪಡತಕ್ಕಂಥವು.

ವಿವಿಧ ಪ್ರಾಣಿಗಳಲ್ಲಿ ರಕ್ತದಘನಗಾತ್ರ ಹಾಗೂ ದೇಹದ ಘನಗಾತ್ರವನ್ನೂ ಪರಸ್ಪರ ಹೋಲಿಸಿದಾಗ ರಕ್ತದ ಪ್ರಮಾಣ ಕಡಿಮೆ ಆಗಿದ್ದರೆ ಅದು ಪ್ರಾಣಿದೇಹದಲ್ಲಿ ವೇಗವಾಗಿ ಪರಿಚಲಿಸುತ್ತಿರಬೇಕೆಂಬುದು ವೇದ್ಯ. ಆದರೆ ರಕ್ತದ ಘನಗಾತ್ರ ಹೆಚ್ಚಾಗಿಯೇ ಇದ್ದರೆ ಅದು ನಿಧಾನವಾಗಿಯೇ ಪರಿಚಲಿಸುತ್ತ ದೇಹದ ಎಲ್ಲೆಡೆಗಳನ್ನೂ ತಲುಪಲು ಸಾಧ್ಯ. ಹೀಗಾಗಿ ಕೀಟಗಳಲ್ಲಿ (ದೇಹದ 25% ರಕ್ತ) ರಕ್ತದ ಒಂದು ಪ್ರದಕ್ಷಿಣೆಗೆ 30 - 35 ಮಿನಿಟುಗಳೇ ಆಗುತ್ತವೆ. ಆದರೆ ದೇಹತೂಕಕ್ಕೆ ಹೋಲಿಸಿದರೆ ರಕ್ತದ ಪ್ರಮಾಣ ಕಡಿಮೆಯೇ ಆಗಿರುವ (ಸುಮಾರು 8%) ಮನುಷ್ಯರಲ್ಲಿ ಪರಿಚಲನೆಯ ಕಾಲ 20 - 25 ಸೆಕೆಂಡುಗಳಷ್ಟಿರುತ್ತದೆ. ನಾಯಿಗಳಲ್ಲಿ ಪರಿಚಲನೆಯ ಕಾಲ ಸುಮಾರು 16 ಸೆಕೆಂಡುಗಳಷ್ಟೂ ಮೊಲಗಳಲ್ಲಿ ಕೇವಲ 7.5 ಸೆಕೆಂಡುಗಳಷ್ಟೂ ಎಂಬುದು ತಿಳಿದಿದೆ.

ರಕ್ತಪರಿಚಲನೆಗೆ ಕಾರಣವಾದ ಹೃದಯದ ಮಿಡಿತದ ವೇಗ ಸಾಮಾನ್ಯವಾಗಿ ಪ್ರಾಣಿಯ ಚಟುವಟಿಕೆಯನ್ನು ಅನುಸರಿಸಿದೆ. ಸಾಮಾನ್ಯ ಚಟುವಟಿಕೆಯ ಮನುಷ್ಯರಲ್ಲಿ ಹೃದಯ ಮಿನಿಟಿಗೆ ಸುಮಾರು 70 ಬಾರಿ ಮಿಡಿಯುವುದಾದರೂ ಹೆಚ್ಚಿನ ಚಟುವಟಿಕೆಯವರೇ ಆದ ಮಕ್ಕಳಲ್ಲಿ 80 - 90 ಬಾರಿಗೂ ಮೀರಿದ ಮಿಡಿತದ ವೇಗ ಇರುತ್ತದೆ. ಅಂತೆಯೇ ದೇಹಕ್ರಿಯೆಗಳು ತ್ವರಿತವಾಗಿ ಜರುಗುತ್ತಿರುವ ಕಾಲಗಳಲ್ಲಿ (ಉದಾರಹರಣೆಗೆ ವ್ಯಾಯಾಮ, ಜ್ವರ) ಮಿಡಿತದ ವೇಗ ಹೆಚ್ಚಾಗಿರುತ್ತದೆ. ಬದಲು ತೀರ ಜಡವ್ಯಕ್ತಿಗಳಲ್ಲಿ ಹೃದಯದ ಮಿಡಿತದ ವೇಗ 60ಕ್ಕೂ ಕಡಿಮೆ ಇರಬಹುದು. ಅಂತೆಯೇ ದೀರ್ಘಕಾಲಿಕ ಅಂಗಸಾಧನೆಯಲ್ಲಿ ನಿರತರಾದ ಮಲ್ಲರಲ್ಲಿ ಅವರ ವಿಶ್ರಾಂತಿ ಅವಧಿ ಸಾಪೇಕ್ಷವಾಗಿ ಜಡಾವಧಿಯಾಗಿರುವುದರಿಂದ ಅವರ ಹೃದಯಮಿಡಿತದ ವೇಗವೂ ಸಾಮಾನ್ಯವಾಗಿ 60 ಕ್ಕಿಂತ ಕಡಿಮೆಯೇ ಇರುತ್ತದೆ. ಅತಿ ದೊಡ್ಡ, ಅದರ ಮಂದ ಚಟುವಟಿಕೆಯದ್ದು ಎನಿಸುವ ತಿಮಿಂಗಲದಲ್ಲಿ ಹೃದಯ ಮಿನಿಟಿಗೆ ಕೇವಲ 7 ಬಾರಿ ಮಿಡಿಯುತ್ತದೆ ಎಂದು ಗೊತ್ತಾಗಿದೆ. ಆನೆಗಳಲ್ಲಿ ಇದು 46 ರಷ್ಟು ಇರುತ್ತದೆ. ಚಟುವಟಿಕೆಯೇ ಪ್ರಧಾವಾಗಿರುವ ಬೆಕ್ಕಿನಲ್ಲಿ ಹೃದಯಮಿಡಿತದ ವೇಗ ಮಿನಿಟಿಗೆ 240 ಸಾರಿ ಇರಬಹುದು ಎನ್ನಲಾಗಿದೆ ಅತ್ಯಂತ ಚಟುವಟಿಕೆಯಿದ್ದು ಎನಿಸುವ ಝೇಂಕಾರ ಪಕ್ಷಿಯಲ್ಲಿ (ಹಮ್ಮಿಂಗ್ ಬರ್ಡ್) ಹೃದಯ ಮಿನಿಟಿಗೆ 1000ಕ್ಕೂ ಮೇಲ್ಪಟ್ಟು ಮಿಡಿಯುತ್ತೆಂದು ಗೊತ್ತಾಗಿದೆ.

2. ಹಿಮೋಗ್ಲಾಬಿನ್: ರಕ್ತದ ಕೆಂಪುಕಣಗಳ ಬಣ್ಣಕ್ಕೂ ಒಟ್ಟು ರಕ್ತ ಕೆಂಪಾಗಿರುವುದಕ್ಕೂ ಕಾರಣ ಹೀಮೋಗ್ಲಾಬಿನ್ ಎಂಬ ಕೆಂಪು ಬಣ್ಣದಪ್ರೋಟೀನ್, ರಕ್ತ ಸಮರ್ಥವಾಗಿ ಆಕ್ಸಿಜನ್ ಕಾರ್ಬನ್ ಡೈ ಆಕ್ಸೈಡ್‍ಗಳನ್ನುನಿರ್ದಿಷ್ಟ ಸ್ಥಳಗಳಲ್ಲಿ ಹೊತ್ತು ಮತ್ತು ಬಿಡುಗಡೆ ಮಾಡುವುದು ಹೀಮೋಗ್ಲಾಬಿನ್ನಿನ ಸ್ವಭಾವದಿಂದಲೇ. 100 ಮಿಲೀಗಳಷ್ಟು ರಕ್ತದಲ್ಲಿ ಅಂದರೆ, ಸುಮಾರು 45 ಮಿಲೀಗಳ ಕಣಗಳಲ್ಲಿ ಸುಮಾರು 14 ಗ್ರಾಮ್‍ಗಳಷ್ಟು ಹೀಮೋಗ್ಲಾಬಿನ್ ಇರುತ್ತದೆ. ಇಷ್ಟೂ ಕೆಂಪುರಕ್ತ ಕಣಗಳ ಒಳಗೆ ಇರುತ್ತದೆ. 100 ಮಿಲೀಗಳಷ್ಟು ರಕ್ತದ್ರವದಲ್ಲಿರುವ ಇಟ್ಟು ಪ್ರೋಟೀನುಗಳು ಸುಮಾರು 8 ಗ್ರಾಮ್‍ಗಳು ಮಾತ್ರ. ರಕ್ತದ್ರವದಲ್ಲಿ ಇದಕ್ಕಿಂತ ಹೆಚ್ಚು ಪ್ರೊಟೀನ್ ಇರುವುದು ಸಾಧ್ಯವಿಲ್ಲ. ಹಾಗೆ ಹೆಚ್ಚಾಗಿದ್ದರೆ ರಕ್ತದ ಒತ್ತಡ ಹೆಚ್ಚು ಆಗುತ್ತದೆ. ಅಲ್ಲದೆ ನೀರು ಹಾಗೂ ಅದರಲ್ಲಿ ಲೀನವಾಗಿರುವ ಪದಾರ್ಥಗಳು ಅಂಗಾಂಶದ್ರವದೊಡನೆ (ಟಿಷ್ಯೂ ಫ್ಲೂಯಿಡ್) ವಿನಿಮಯವಾಗುವುದರಲ್ಲಿ ಏರುಪೇರು ಉಂಟಾಗುತ್ತದೆ. ಹೀಗಾಗದಿರಲೆಂದೇ ಕಶೇರುಕಗಳಲ್ಲಿ ಹೀಮೋಗ್ಲಾಬಿನ್ ಕೆಂಪುಕಣಗಳ ಒಳಗೇ ಅರ್ಥಾತ್ ವಿನಿಮಯ ಪ್ರಭಾವಬಾಹಿರವಾಗಿ ಇರುತ್ತದೆ. ಅಕಶೇರುಕಗಳಲ್ಲಿ ಹೀಮೋಗ್ಲಾಬಿನ್ ರಕ್ತದ್ರವದಲ್ಲಿ ಇರುವುದು ನಿಜ. ಆದರೆ ವಿನಿಮಯಕ್ಕೆ ಧಕ್ಕೆ ಆಗದಿರುವಷ್ಟು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಈ ಹಿಂದೆ ತಿಳಿಸಿರುವಂತೆ ಕೆಲವು ಹುಳುಗಳಲ್ಲಿ ರಕ್ತ ತಿಳಿಹಸುರು ಬಣ್ಣ ಇರುವುದಕ್ಕೆ ಕಾರಣ ಅವುಗಳ ರಕ್ತದ್ರವದಲ್ಲಿ ಹೀಮೋಗ್ಲಾಬಿನ್ನಿನ ಬದಲು ಕ್ಲೋರೋಕ್ರುಯೋರಿನ್ ಎಂಬ ಹಸರು ಬಣ್ಣ ಪ್ರೋಟೀನ್ ಇರುವುದು. ಕ್ಲೋರೋಕ್ರುಯೋರಿನ್ ಅಣುವಿನಲ್ಲೋ ಹೀಮೋಗ್ಲಾಬಿನ್ನಿನಲ್ಲಿಯಂತೆಯೇ ಕಿಂಚಿತ್ತಾಗಿ ಕಬ್ಬಿಣ ಸಂಯೋಜಿತವಾಗಿರುತ್ತದೆ. ಕೆಲವು ಚಿಪ್ಪುಪ್ರಾಣಿಗಳು ಮತ್ತು ನಳ್ಳಿಚಾತಿಯ ಪ್ರಾಣಿಗಳ ರಕ್ತ ತಿಳಿನೀರಿನ ಬಣ್ಣಕ್ಕೆ ಇರುವುದರ ಕಾರಣ ಅವುಗಳ ರಕ್ತದ್ರವದಲ್ಲಿ ಹೀಮೋಸೈಯನಿನ್ ಎಂಬ (ಕಬ್ಬಿಣದ ಬದಲು ಕಿಂಚಿತ್ತಾಗಿ ತಾಮ್ರ ಸಂಯೋಗಿ ಆದ) ಪ್ರೋಟೀನು ಇರುವುದು.

3. ರಕ್ತದ ರಚಿತವಸ್ತುಗಳು: (i) ರಕ್ತದ ಕಣಿತ್ರಗಳು (ಕಿರುತಟ್ಟೆಗಳು; ಬ್ಲಡ್ ಪ್ಲೇಟ್‍ಲೆಟ್ಸ್). ಒಂದು ಘನ ಮಿಮೀ ರಕ್ತದಲ್ಲಿ ಸುಮಾರು 8 ಲಕ್ಷದಷ್ಟು ಇರುವ ಇವು ರಕ್ತಕಣಗಳಲ್ಲೆಲ್ಲ ಅತ್ಯಂತ ಸಣ್ಣವು. ಸುಮಾರು 2m (m + 0.001 ಮಿಮೀ) ವ್ಯಾಸವಿರುವ ಇವುಗಳಲ್ಲಿ ಅಣುಕೇಂದ್ರ ಇರುವುದಿಲ್ಲ. ಬಹುಶಃ ಇವು ಕೆಲವು ವಿಶಿಷ್ಟ ರಾಸಾಯನಿಕಗಳ ಉಗ್ರಾಣಗಳಾಗಿದ್ದು ಛಿದ್ರಣದಿಂದ ಆ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಮುಖ್ಯ ರಾಸಾಯನಿಕಗಳೆಂದರೆ ಥ್ರಾಂಬೊಪ್ಲಾಸ್ಟಿನ್, ಹಿಸ್ಟಮಿನ್, ಸಿರೋಟೋನಿನ್ ಮತ್ತು ಅಡ್ರೀನಲಿನ್. ರಕ್ತ ಪರಿಚಲಿಸುತ್ತಿರುವಾಗ ಕಣಿತ್ರಗಳು ಬಿಡಿಬಿಡಿಯಾಗಿಯೇ ಇರುವುದಾದರೂ ರಕ್ತದಿಂದ ತೇವವಾಗುವ ಸ್ಥಳದಲ್ಲಿ ಇವು ತಕ್ಷಣ ಒಂದಕ್ಕೊಂದು ಅಂಟಿಕೊಂಡು ಸಣ್ಣ ದೊಡ್ಡ ಗುಂಪುಗಳಾಗುತ್ತದೆ. ಶೀಘ್ರದಲ್ಲಿ ಇವು ಛಿದ್ರಿಸಿ ಇಲ್ಲಿ ತಿಳಿಸಿದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಥ್ರಾಂಬೋಪ್ಲಾಸ್ಟಿನ್ ಮತ್ತು ಸಿರೋಟೋನಿನ್‍ಗಳು ರಕ್ತಸ್ರಾವಸ್ತಂಭನಕ್ಕೆ ಕಾರಣವಾಗಿರುವ ರಾಸಾಯನಿಕಗಳೆಂದು ವ್ಯಕ್ತವಾಗಿವೆ. ಆದ್ದರಿಂದ ರಕ್ತದಲ್ಲಿ ಕಣಿತ್ರಗಳ ಸಂಖ್ಯೆ ಕಾರಣಾಂತಂರಗಳಿಂದ ಕಡಿಮೆ ಆದಾಗ ರಕ್ತಸ್ರಾವ ಕಂಡುಬರುತ್ತದೆ. ಮುಖ್ಯವಾಗಿ ಚರ್ಮದ ಅಡಿಯಲ್ಲಿ ಆಗುವ ಈ ರಕ್ತಸ್ರಾವಕ್ಕೆ ಪರ್‍ಪ್ಯೂರ್ ಎಂದು ಹೆಸರು. ಕಣಿತ್ರಗಳು ರಕ್ತದಲ್ಲಿ ಪರಿಚಲಿಸುತ್ತಿರುವಾಗಲೂ ನಿರಂತರವಾಗಿ ನಾಶವಾಗುತ್ತಲೇ ಇರುತ್ತವೆ. ಇವುಗಳ ಸರಾಸರಿ ಜೀವಿತಾವಧಿ 4 - 6 ದಿವಸಗಳು ಮಾತ್ರ. ನಾಶವಾಗುತ್ತಲೇ ಇರುವ ಕಣಿತ್ರಗಳ ಬದಲು ಸುಮಾರು ಅಷ್ಟೇ ಸಂಖ್ಯೆಯಲ್ಲಿ ನಿರಂತವಾಗಿ ಹೊಸ ಕಣಿತ್ರಗಳು ಉದ್ಭವಿಸುವುದರಿಂದ ರಕ್ತದಲ್ಲಿ ಅವುಗಳ ಸಂಖ್ಯಾಬದಲಾವಣೆ ಅಷ್ಟಾಗಿ ಕಂಡುಬರುವುದಿಲ್ಲ. ಮೂಳೆಮಜ್ಜೆ ಹಾಗೂ ಗುಲ್ಮದಲ್ಲಿ ಇರುವ ಬಹುಕೋಶ ಕೇಂದ್ರಗಳಿರುವ ಮತ್ತು ಅಮೀಬಂದಂಥ, ಚಟುವಟಿಕೆ ತೋರುವ ದೈತ್ಯಕೋಶಗಳ (ಜಯಂಟ್ ಸೆಲ್ಸ್) ಚಾಟುಗಳ ಛಿದ್ರತೆಯಿಂದ ಬಿಡುಗಡೆಯಾದ ಚೂರುಗಳಾಗಿ ಕಣಿತ್ರಗಳು ಉದ್ಭವಿಸುತ್ತವೆ.

(ii) ರಕ್ತದ ವರ್ಣರಹಿತ ಕೋಶಗಳು ಅಥವಾ ರಕ್ತದ ಶ್ವೇತಕಣಗಳು (ಡಬ್ಲ್ಯೂ. ಬಿ. ಬಿ.) ; ನಿಜವಾಗಿ ಇವು ಬೆಳ್ಳಗೆ ಇರುವುದೇ ಇಲ್ಲ. ಆದರೂ ಸೂಕ್ಷ್ಮದರ್ಶದಕ ಮೂಲಕ ರಕ್ತಕಣಗಳನ್ನು ಗುರುತಿಸಿದಾಗಿನಿಂದ (ಸುಮಾರು 400 ವರ್ಷಗಳು). ಇವು ವರ್ಣರಹಿತವಾಗಿರುವುದು ಖಾತರಿ ಆಗಿದ್ದರೂ ಅಂದಿನಿಂದ ಇಂದಿನತನಕವೂ ಇವನ್ನು ಬಿಳಿರಕ್ತಕಣಗಳೆಂದೇ ತಪ್ಪಾಗಿಯೇ ಕರೆದು ವ್ಯವಹರಿಸುತ್ತಿರುವುದಾಗಿದೆ. ರಕ್ತದ ಕೆಂಪುಕಣಗಳಿಗೆ ಹೋಲಿಸಿದರೂ ಎಂದೂ ಬಿಳಿಯಾಗಿ ಕಾಣಿಸದ ಇವನ್ನು ಬಿಳಿಕಣಗಳೆಂದು ಕರೆಯುವುದು ಒಂದು ಅಪ್ರಯೋಗವಾಗೇ (ಮಿಸ್‍ನೋಮರ್) ಉಳಿದುಬಂದಿದೆ.

ವರ್ಣರಹಿತ ಕಣಗಳು ನಿಜವಾಗಿ ರಕ್ತಕೋಶಗಳು. ಅವುಗಳಲ್ಲಿ ಪ್ರತಿಯೊಂದರಲ್ಲೂ ಕೋಶಕೇಂದ್ರವಿರುತ್ತದೆ. ಮತ್ತು ಬೇರೆ ದೈಹಿಕ ಜೀವಂತ ಕೋಶಗಳಲ್ಲಿಯಂತೆಯೇ ಚಯಾಪಚಯ ಕ್ರಿಯೆ ಚುರುಕಾಗಿ ಜರುಗುತ್ತಿರುತ್ತದೆ. ಒಂದು ಘನ ಮೀ ರಕ್ತದಲ್ಲಿ 6000 ದುಂದ 10,000 ವರ್ಣರಹಿತ ರಕ್ತಕೋಶಗಳಿರುತ್ತವೆ. ಬೇರೆ ಬೇರೆ ದಿವಸಗಳಲ್ಲಿ, ದಿವಸದ ವಿವಿಧ ವೇಳೆಗಳಲ್ಲಿ ಅವುಗಳ ಸಂಖ್ಯೆಯ ಈ ಮಿತಿಯಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ.

ವರ್ಣರಹಿತ ರಕ್ತಕೋಶಗಳು ದೇಹದ ಒಳಹೊಕ್ಕು ಸೂಕ್ಷ್ಮಕ್ರಿಮಿಗಳೊಡನೆ ಹೋರಾಡಿ ಅವನ್ನು ನಾಶಮಾಡಿ ಅವುಗಳ ಸೋಂಕಿನ ವಿರುದ್ಧ ದೇಹವನ್ನು ಸಂರಕ್ಷಿಸುತ್ತವೆ. ಇದೇ ರಕ್ತಕಣಗಳ ಮುಖ್ಯಕ್ರಿಯೆ ಮತ್ತು ಅದೇ ಕಾರಣದಿಂದ ಇವುಗಳ ಜೀವಿತಾವಧಿ ಕೆಲವೇ ಗಂಟೆಗಳಿಂದ 3 - 4 ದಿವಸಗಳಿರಬಹುದು. ಹೋರಾಟದಲ್ಲಿ ಈ ಕೋಶಗಳೇ ಅನೇಕವಾಗಿ ನಾಶಹೊಂದುವುದೂ ಇದೆ. ನಾಶವಾದ ಕೋಶಗಳು ಸತ್ತಕ್ರಿಮಿಗಳು, ನಶಿಸಿದ ಸ್ಥಳೀಯ ದೇಹಕೋಶಗಳು, ಇವೆಲ್ಲವೂ ಸೇರಿ ಕೀವು (ಪಸ್) ಎಂದಾಗುತ್ತದೆ. ನಾಶವಾಗುವ ವರ್ಣರಹಿತ ರಕ್ತಕೋಶಗಳ ಬದಲು ಹೊಸ ಕೋಶಗಳು ಹೆಚ್ಚು ಸಂಖ್ಯೆಯಲ್ಲಿಯೇ ಉತ್ಪತ್ತಿ ಆಗುತ್ತಿದ್ದು ಇಂಥ ಕೀವುಯುಕ್ತ ಸೋಂಕುಗಳಿಂದ ವ್ಯಕ್ತಿ ಬಾಧಿತವಾಗಿರುವಾಗ ವರ್ಣರಹಿತ ರಕ್ತಕೋಶಗಳ ಸಂಖ್ಯೆ 15 - 20 ಸಾವಿರದವರೆಗೂ ಏರುವುದು ವಿಶಿಷ್ಟ ಲಕ್ಷಣ. ಆದ್ದರಿಂದ ಕೋಶ ಸಂಖ್ಯಾವೃದ್ಧಿಯಾಗಿರುವುದು ಕಂಡುಬಂದರೆ ಅದು ದೇಹದಲ್ಲಿ ಎಲ್ಲೋ ಬಹುಶಃ ಅವ್ಯಕ್ತವಾಗಿಯೇ ಇಂಥ ಪ್ರಸಂಗವಿದೆ ಎಂಬ ತೀರ್ಮಾನಕ್ಕೆ ಬರುವುದಿದೆ. ಈ ಸ್ಥಿತಿಗೆ ವ್ಯತಿರಿಕ್ತವಾಗಿ ವರ್ಣರಹಿತರಕ್ತಕೋಶಗಳ ಸಂಖ್ಯೆ ಕಡಿಮೆ ಆಗುವುದೂ (3 - 4 ಸಾವಿರ) ಕಂಡುಬರುವುದುಂಟು. ಇದು ಆಕ್ರಮಣಕಾರಿ ಕ್ರಿಮಿಗಳ ಮೇಲ್ಗೈ ಸೂಚನೆ, ಕ್ರಿಮಿಕೃತ ರೋಗದ ತೀವ್ರಾವಸ್ಥೆಯ ಸೂಚನೆ ಹಾಗೂ ವ್ಯಕ್ತಿ ರೋಗಕ್ಕೆಬಲಿಯಾಗುವ ಸೂಚನೆ ಎಂದು ತಿಳಿಯಬಹುದು. ಕ್ರಿಮಿಗಳನ್ನು ಹೀಗೆ ಕಬಳಿಸಿ ನಾಶಮಾಡುವ ರಕ್ತದ ವರ್ಣರಹಿತಕೋಶಗಳನ್ನು ಕಬಳಿಕ ಕೋಶಗಳು (ಫೇಗೋಸೈಟ್ಸ್) ಎಂದೇ ಕರೆಯಲಾಗಿದೆ. ಕಬಳಿಕಕೋಶಗಳಲ್ಲಿ 2 ವಿಧ: ದೊಡ್ಡ ಕಬಳಿಕಕೋಶಗಳು (ಮ್ಯಾಕ್ರೋಫೀಜೀಸ್) ಮತ್ತು ಸಣ್ಣ ಕಬಳಿಕಕೋಶಗಳು (ಮೈಕ್ರೋಫೇಜೀಸ್). ಮ್ಯಾಕ್ರೋಪೇಜಿಗೆ ಮಾನೋಸೈಟ್ ಎಂಬ ಹೆಸರೂ ಇದೆ. ಮೈಕ್ರೋಫೇಜಿಗೆ ಪಾಲಿಮಾರ್ಪೊನ್ಯೂಕ್ಲಿಯರ್ ಕೋಶ (ರೂಢಿಯಾಗಿ ಪಾಲಿಮರ್ಫ್) ಎಂದೂ ಹೆಸರಿದೆ. ಪಾಲಿಮಾರ್ಪ್‍ಗಳಿಗೆ ಮಣಿಯದ ಕ್ರಿಮಿಗಳನ್ನು ಮ್ಯಾಕ್ರೊಫೇಜೀಗಳು ಕಬಳಿಸುತ್ತವೆ. ಮ್ಯಾಕ್ರೋಪೇಜಿಗಳು ಸೋಂಕಿನ ವಿಷಾಣುಗಳಷ್ಟನ್ನೇ ಅಲ್ಲದೆ ರಕ್ತಪರಿಚಲನೆಯಲ್ಲಿರುವ ನಿರ್ಜೀವ ಕಣಿತ್ರಗಳನ್ನೂ (ಪಾರ್ಟಿಕ್ಯುಲೇಟೆಡ್ ಮ್ಯಾಟರ್) ಕಬಳಿಸಿ ರಕ್ತಶುದ್ಧಿ ಮಾಡುತ್ತವೆ. ನಿರ್ಜೀವಕಣಗಳು ವಿವಿಧ ದೇಹಕೋಶಗಳ ಅವನತಿಯಿಂದ ಉದ್ಭವಿಸಿದ್ದುವೇ ಆಗಿರಬಹುದು. ರಕ್ತದ ಕೆಂಪುಕಣಗಳ ಅವನತಿಯಿಂದ ಹೊರಬಂದ ಹೀಮೋಗ್ಲಾಬಿನ್ ಎಂಬ ಪ್ರೋಟೀನ್ ವಸ್ತುವಿನ ಕಣೀತ್ರಗಳೂ ಹೀಗೆ ಕಬಳಿಕೆಗೆ ಒಳಗಾಗುತ್ತವೆ.

ರಕ್ತದ ವರ್ಣರಹಿತ ಕೋಶಗಳಲ್ಲಿ ಸಾಮಾನ್ಯವಾಗಿ 5 ಬಗೆಗಳನ್ನು ಗುರುತಿಸಲಾಗಿದೆ. ಅತಿತೆಳು ರಕ್ತಲೇಪನವನ್ನು ಗಾಜಿನ ಫಲಕದ ಮೇಲೆ ಪಡೆದು, ಒಣಗಿಸಿ ಅನಂತರ ವಿಶಿಷ್ಟವರ್ಣ ವಸ್ತುಗಳಿಂದ (ಸ್ಪೆಷಲ್ ಸ್ಟೆಂiÀಯ್ನ್‍ರೋಮನಾವ್‍ಸ್ಕಿ) ಎಂಬವ ವಿವರಿಸಿರುವ ಹಲವು ಇಂಥವು) ವಿಶಿಷ್ಟವಾಗಿ ರಕ್ತಲೇಪನವನ್ನು ಸಂಸ್ಕರಿಸಿ ಒಳಗಿಸಿ ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಲಾಗುತ್ತದೆ. ಹಾಗೆ ವೀಕ್ಷಿಸಿದಾಗ ಎಲ್ಲೆಲ್ಲೂ ಕಂದುಛಾಯೆಯ ಕೆಂಪುರಕ್ತಗಣಗಳೂ ಅವುಗಳ ನಡುವೆ ಅಲ್ಲಲ್ಲಿ ಕೆಂಪು ಮತ್ತು ನೀಲಿವರ್ಣಗಳಿಂದ ರಂಜಿತವಾದ ರಕ್ತಕೋಶಗಳೇ ರಕ್ತಕೋಶಗಳೂ ಹಾಗೂ ಕಣಿತ್ರಗಳ ಗುಂಪುಗಳೂ ಕಂಡುಬರುತ್ತವೆ. ಹೀಗೆ ಕಾಣಿಸುವ ಕೋಶಗಳೇ ರಕ್ತದ ವರ್ಣರಹಿತ ಕೋಶಗಳು. ಇವುಗಳ ಕೋಶಕೇಂದ್ರವೂ ಕೋಶದ್ರವ್ಯದಲ್ಲಿರುವ (ಸೈಟೋಪ್ಲಾಸ್ಮ್) ರವೆಯಂಥ ಘನಪದಾರ್ಥಗಳೂ ವರ್ಣವಸ್ತುಗಳಿಂದ ರಂಜಿತವಾಗಿ ನೀಲಿ ಹಾಗೂ ಕೆಂಪುಬಣ್ಣವುಳ್ಳ ರಚನೆಗಳಾಗಿ ಕಂಡುಬರುವುದರಿಂದ ವರ್ಣರಹಿತ ರಕ್ತಗಳನ್ನು ಗುರುತಿಸಬಹುದು ಹಾಗೂ ವಿಂಗಡಿಸಬಹುದು.

ವರ್ಣರಹಿತ ರಕ್ತಕಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಬಹುದಾದವು ಎಂದರೆ ಪಾಲಿಮಾರ್ಫ್‍ಗಳು. ಇವು ಕೆಂಪುರಕ್ತಕಣಗಳ ಸುಮಾರು 1.5 ರಷ್ಟು ವ್ಯಾಸ ಉಳ್ಳವಾಗಿ (ಅಂದರೆ 9 - 11 m) ಇರುತ್ತವೆ. ಇವುಗಳ ಕೋಶದ್ರವದಲ್ಲಿಯೂ ಕೆಂಪು ನೀಲಿ ಬಣ್ಣದ ನುಚ್ಚಿನಂಥ ದ್ರವ್ಯ ಹೇರಳವಾಗಿ ಇರುತ್ತದೆ. ಕೋಶಕೇಂದ್ರ ದೇಹದ ಕೋಶಗಳಲ್ಲಿ ಸಾಮಾನ್ಯವಾಗಿ ಇರುವಂತೆ ದುಂಡುಗಿರುವುದಿಲ್ಲ. ಬದಲು ವಿವಿಧ ರೂಫವಾಗಿ ಮತ್ತು 1 - 5 ತುಕ್ಕುಡಗಳು ಒಂದಕ್ಕೊಂದು ಜಂಟಿಸಿದಂತೆ ಇರುತ್ತದೆ. ಕೋಶಕೇಂದ್ರದ ಈ ವೈವಿದ್ಯವೇ ಈ ರಕ್ತಕೊಶಗಳಿಗೆ ಪಾಲಿಮಾರ್ಪೊ ನ್ಯೂಕ್ಲಿಯರ್ ಸೆಲ್ಸ್ ಎಂದು ಹೆಸರಿರುವುದಕ್ಕೆ ಕಾರಣ. 1 ಘನ ಮಿಮೀ ರಕ್ತದಲ್ಲಿ 5000 - 7000, ಒಟ್ಟು ವರ್ಣರಹಿತ ಕಣಗಳಲ್ಲಿ 60 - 70% ರಷ್ಟು ಪಾಲಿಮಾರ್ಪ್‍ಗಳಿರುತ್ತವೆ. ಮೂರು ತುಕ್ಕುಡಗಳ ಕೋಶಕೇಂದ್ರವಿರುವ ಪಾಲಿಮಾರ್ಫ್ ನಡುವಯಸ್ಸಿನ ಕೋಶ; 5 ತುಕ್ಕಡಗಳದ್ದು ವೃದ್ಧಕೋಶ; 1 - 2 ತುಕ್ಕುಡಗಳುಳ್ಳದ್ದು ಎಳೆಯ ಪಾಲಿಮಾರ್ಪ್. ಸಾಮಾನ್ಯವಾಗಿ 3 - 4 ತುಕ್ಕುಡಗಳ ಕೋಶಕೇಂದ್ರವಿರುವ ಕೋಶಗಳೇ ಹೆಚ್ಚಾಗಿ (ಒಟ್ಟು ಪಾಲಿಮಾರ್ಪ್‍ಗಳಲ್ಲಿ ಸುಮಾರು 70%) ಇರುತ್ತವೆ. 5 ತುಕ್ಕುಡಗಳುಳ್ಳ ಕೋಶಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಾಗ ಪಾಲಿಮಾರ್ಪ್‍ಗಳ ಉತ್ಪತ್ತಿ ಕಡಿಮೆ ಆಗಿದೆಯೆಂದೂ 1 - 2 ತುಕ್ಕುಡಗಳ ಕೋಶಕೇಂದ್ರವಿರುವ ಪಾಲಿಮಾರ್ಪ್‍ಗಳೇ ಹೆಚ್ಚಾಗಿದ್ದಾಗ ಅವುಗಳ ಸಂಖ್ಯಾಭಿವೃದ್ಧಿ ತೀವ್ರಗತಿಯಿಂದ ಆಗುತ್ತಿದೆ ಎಂದೂ ಯಾವ ಸಂದರ್ಭಗಳಲ್ಲಿ ಹೀಗಾಗುವುದೆಂಬುದನ್ನೂ ವಿಶಿಷ್ಟವಾಗಿ ಅರ್ಥೈಸಿದೆ. ಪಾಲಿಮಾರ್ಫ್‍ಗಳಲ್ಲಿಯೇ ಇಂಥ ವಿಂಗಡನೆ ಮಾಡಿ ಅರಿಯುವ ವಿಧಾನಕ್ಕೆ ಆರ್ನೆತ್ ಕೌಂಟ್ ಎಂದು ಹೆಸರು. ಸ್ವಲ್ಪ ಹೆಚ್ಚು ಕಡಿಮೆ ಪಾಲಿಮಾರ್ಫಿನದೇ ವ್ಯಾಸದ (ಕೆಂಪುಕಣದ 1 1/2 ಯಷ್ಟು, 10 - 11m) ಇನ್ನೆರಡು ಬಗೆಯ ವರ್ಣರಹಿತ ರಕ್ತಕಣಗಳಿವೆ, ಇಯೋಸಿನೋಫಿಲ್ ಎಂಬ ಬಗೆಯಲ್ಲಿ ಕೋಶಕೇಂದ್ರ 2 - 3 ತುಕ್ಕುಡಗಳಿಂದ ಮಾತ್ರ ಆಗಿರುತ್ತದೆ. ಕೋಶದ್ರವದ ನುಚ್ಚುಕಣಗಳು ವರ್ಣಸಂಸ್ಕಾರವಾದ ಬಳಿಕ ಅಚ್ಚ ಕೆಂಪಗೆ ಕಾಣುತ್ತವೆ. ಒಟ್ಟು ವರ್ಣರಹಿತ ಕಣಗಳಲ್ಲಿ ಇಯೋಸಿನೋಫಿಲ್‍ಗಳು 2 - 4% ನಷ್ಟು ಒಂದು ಘನ ಮಿಮೀ ರಕ್ತದಲ್ಲಿ 150 - 250 ಗಳಷ್ಟು ಇರುತ್ತವೆ. ದೇಹದಲ್ಲಿ ಒಗ್ಗದಿಕೆಯ (ಅಲರ್ಜಿ) ಪ್ರತಿಕ್ರಿಯೆ ಉಂಟಾಗಿ ಗೂರಲು, ಎಕ್ಸೀಮ ಮುಂತಾದ ಅಸ್ವಸ್ಥಸ್ಥಿತಿಗಳು ಉಂಟಾದಾಗ ಮತ್ತು ಕರುಳಿನಲ್ಲಿ ಹುಳುಗಳು ಇದ್ದಾಗ ಇಯೋಸಿನೋಫಿಲ್‍ಗಳು ಸಂಖ್ಯೆ ಹೆಚ್ಚಾಗುತ್ತದೆ. ಇಂಥ ಸ್ಥಿತಿಗಳಲ್ಲಿ ಒಂದು ಘನಮಿಮೀ ರಕ್ತದಲ್ಲಿ 600 - 800 ರಷ್ಟು, ಒಟ್ಟು ವರ್ಣರಹಿತ ಕಣಗಳಲ್ಲಿ 6 - 8% ನಷ್ಟು ಇಯೋಸಿನೋಫಿಲ್‍ಗಳು ಇರಬಹುದು. ಈ ಸ್ಥಿತಿ ಪತ್ತೆ ಆದಾಗ ಕಾರಣಭೂತ ಅಸ್ವಸ್ಥತೆಯನ್ನು ಶಂಕಿಸಬಹುದು. ಅವ್ಯಕ್ತಕಾರಣದಿಂದ ಬರುವ ಟ್ರಾಫಿಕಲ್ ಇಯೋಸಿನೋಫಿಲ್‍ಗಳಿಗಿಂತ ಸ್ವಲ್ಪ ಚಿಕ್ಕದಾಗಿ, 1 - 2 ಹಾಲೆಗಳು ಮಾತ್ರವಿರುವ ಕೋಶಕೇಂದ್ರ ಉಳ್ಳದ್ದಾಗಿ ಕೋಶದ್ರವದಲ್ಲಿ ಅಲ್ಪವಾಗಿಯೇ ಇರುವ ಮತ್ತು ವರ್ಣಸಂಸ್ಕಾರದಲ್ಲಿ ನೀಲಿಬಣ್ಣ ಪಡೆಯುವ ನುಚ್ಚುದ್ರವ್ಯವಿರುವ ವರ್ಣರಹಿತಕೋಶಗಳಿಗೆ ಬೇಸೋಫಿಲ್‍ಗಳೆಂದು ಹೆಸರು. ಒಟ್ಟು ವರ್ಣರಹಿತ ಕಣಗಳಲ್ಲಿ ಇವುಗಳ ಪ್ರಮಾಣ ಕೇವಲ 0 - 0.5%; ಒಂದು ಘನಮಿಮೀ ರಕ್ತದಲ್ಲಿ 0 - 50 ಇಂಥ ಕಣಗಳಿರಬಹುದು. ಯಕೃತ್ತು, ಫುಪ್ಪುಸ, ಮಜ್ಜೆ ಇತ್ಯಾದಿ ಅಂಗಗಳಲ್ಲಿ ಸುಮಾರು ಇಂಥ ರಚನೆಯ ಕಣಗಳು ಇರುತ್ತವೆ. ಇವಕ್ಕೆ ಮಾಸ್ಟ್ ಕೋಶಗಳು ಎಂದು ಹೆಸರು. ಬಹುಶಃ ಇವೂ ರಕ್ತದ ಬೇನೋಫಿಲ್‍ಗಳೂ ಒಂದೇ ಬಗೆಯ ಆದರೆ ಸ್ಥಿರ ಇಲ್ಲದೇ ಚರಕೋಶಗಳೆಂದು ಹೇಳಲಾಗಿದೆ. ಮಾಸ್ಟ್ ಕೋಶಗಳೂ ಬಹುಶಃ ರಕ್ತದ ಬೇಸೋಫಿಲ್‍ಗಳೂ ಹೆಪಾರಿನ್ ಎಂಬ ರಕ್ತಗರಣ ಪ್ರತಿರೋಧಕವಸ್ತುವನ್ನು ಉತ್ಪಾದಿಸುತ್ತವೆ.

ರಕ್ತದ ಕೆಂಪುಕಣಗಳಷ್ಟೆ ವ್ಯಾಸದ ವರ್ಣರಹಿತ ಕಣಗಳನ್ನು ದುಗ್ಧರಸಕಣಗಳು (ಲಿಂಪೋಸಯಟ್ಸ್) ಎಂದು ಕರೆದಿದೆ. ಇವುಗಳ ಕೋಶಕೇಂದ್ರ ಗುಂಡಗೆ ದೊಡ್ಡದಾಗಿದ್ದು ಕಣವನ್ನು ಹೆಚ್ಚು ಕಡಿಮೆ ಪೂರ್ತ ಆಕ್ರಮಿಸಿರುತ್ತದೆ. ಹೊರಗಿನ ಸ್ತರದಂತೆ ಸ್ವಲ್ಪ ಕೊಂಚವಾಗಿರುವ ಕೋಶದ್ರವದಲ್ಲಿಯೂ ಯಾವ ಬಗೆಯ ನುಚ್ಚುದ್ರವ್ಯವೂ ಇರುವುದಿಲ್ಲ. ದುಗ್ಧರಸಕಣಗಳ ಶೇ ಪ್ರಮಾಣ 20 - 26 ರಷ್ಟು ಒಂದು ಘನ ಮಿಮೀ ರಕ್ತದಲ್ಲಿ 1500 - 2500 ಕಣಗಳಿರುತ್ತವೆ. ದೀರ್ಘಕಾಲಿಕ ರೋಗಗಳಲ್ಲಿ (ಉದಾಹರಣೆಗೆ ಕ್ಷಯ) ಇವುಗಳ ಸಂಖ್ಯೆ ಹೆಚ್ಚಾಗುವುದಿದೆ (35% ಕ್ಕೂ ಹೆಚ್ಚು, ಒಂದು ಘನ ಮಿಮೀ ರಕ್ತದಲ್ಲಿ 3000 - 6000 ಕೋಶಗಳಷ್ಟು). ಇದೇ ರಚನೆಯ, ಆದರೆ ಇವುಗಳ 1.5 ರಷ್ಟು ವ್ಯಾಸದ ದೊಡ್ಡ ದುಗ್ಧರಸಕಣಗಳಿರುವುದೂ ಉಂಟು.

ಇಲ್ಲಿ ಹೇಳಿರುವ ಮ್ಯಾಕ್ರೋಫೇಜಿಗಳು ಅಥವಾ ಮಾನೋಸೈಟ್‍ಗಳು ರಕ್ತದ ವರ್ಣರಹಿತ ಕಣಗಳ ಪೈಕಿ ಅತಿದೊಡ್ಡವು. ಇವುಗಳ ವ್ಯಾಸ ಸು. 20m. ಅಂದರೆ ರಕ್ತದ ಕೆಂಪುಕಣಗಳ 2.5 ರಷ್ಟು. ಇವುಗಳ ಗಾತ್ರಕ್ಕೆ ಹೋಲಿಸಿದರೆ ಕೋಶಕೇಂದ್ರ ಚಿಕ್ಕದೆಂದೇ ಹೇಳಬೇಕು. ಅಲ್ಲದೆ ಕೋಶದ ಮಧ್ಯದಲ್ಲಿರದೆ ಎಲ್ಲೋ ಮೂಲೆಯಲ್ಲಿರುತ್ತದೆ. ಕೋಶದ್ರವ ಹೆಚ್ಚಾಗಿಯೇ ಇರುವುದು ವ್ಯಕ್ತ. ಅಲ್ಲದೆ ಅದರಲ್ಲಿ ಯಾವ ಬಗೆಯ ನುಚ್ಚುನುರಿದ್ರವ್ಯಗಳೂ ಸಾಮಾನ್ಯವಾಗಿ ಇರುವುದಿಲ್ಲ. ಮಾನೋಸೈಟ್‍ಗಳ ಶೇಕಡಾವಾರು ಪ್ರಮಾಣ 2 - 3 ರಷ್ಟು; ಒಂದು ಘನ ಮಿಮೀ ರಕ್ತದಲ್ಲಿ 150 - 200 ಇಂಥ ವರ್ಣರಹಿತ ಕೋಶಗಳಿರುತ್ತವೆ.

ಒಟ್ಟಿನಲ್ಲಿ ವರ್ಣರಹಿತಕಣಗಳನ್ನು ನುಚ್ಚುದ್ರವ್ಯರಹಿತ ಕೋಶಗಳು (ಎಗ್ರ್ಯಾನ್ಯೂ ಲೋಸೈಟ್ಸ್) ಮತ್ತು ನುಚ್ಚುದ್ರವ್ಯಸಹಿತ ಕಣಗಳು (ಗ್ರ್ಯಾನ್ಯುಲೊಸೈಟ್ಸ್) ಎಂದು ವಿಂಗಡಿಸುವುದು ವಾಡಿಕೆ. ಶೇಕಡಾವಾರು ಪ್ರಮಾಣದಲ್ಲಿ (ಇದಕ್ಕೆ ಡಿಫರೆನ್ಷಿಯಲ್ ಡಬ್ಲ್ಯೂ. ಬಿ. ಸಿ. ಕೌಂಟ್ ಎಂದು ಹೆಸರಿದೆ) ನುಚ್ಚುದ್ರವ್ಯಕೋಶಗಳೇ ಹೆಚ್ಚಾಗಿರುತ್ತವೆ (ಸುಮಾರು 70% ಮೇಲ್ಪಟ್ಟು) ಕಾರಣಾಂತರಗಳಿಂದ (ತೀವ್ರ ಸೋಂಕು ಅನೇಕ ಬಗೆಯ ಆಧುನಿಕ ಸಂಯೋಜಿತ ಔಷಧಗಳ ಸೇವನೆ ಇತ್ಯಾದಿ) ಈ ಕೋಶಗಳ ಪ್ರಮಾಣ ಕಡಿಮೆ ಆಗುತ್ತದೆ. ಸ್ವಾಭಾವಿಕವಾಗಿಯೇ ಪರೋಕ್ಷವಾಗಿ ನುಚ್ಚು ರಹಿತಕೋಶಗಳ ಶೇಕಡಾವಾರು ಪ್ರಮಾಣ ಹೆಚ್ಚಾಗುತ್ತದೆ. (ಶೇಕಡಾ 40 ಕ್ಕೂ ಲೋಸೈಟೊಸಿಸ್) ಎಂದು ಹೆಸರು. ಈ ಪರಿಸ್ಥಿತಿ ಗಂಡಾಂತರದ ಸೂಚನೆ. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ವಿಷಯ ಎಂದರೆ ಈ ಸ್ಥಿತಿಯಲ್ಲಿ ವಾಸ್ತವವಾಗಿ ಕೋಶಗಳು ಮುಂಚೆ ಎಷ್ಟಿರುತ್ತವೋ ಈ ಸ್ಥಿತಿಯಲ್ಲೂ ಅಷ್ಟೇ ಇರುತ್ತವೆ. ಆದರೆ ದೇಹರಕ್ಷಣೆಯಲ್ಲಿ ಪ್ರತಿಯೊಂದು ಕ್ಷಣದಲ್ಲೂ ಭಾಗವಹಿಸುತ್ತಿರುವ ನುಚ್ಚುದ್ರವ್ಯಸಹಿತ ಕೋಶಗಳು (ಮುಖ್ಯವಾಗಿ ಪಾಲಿಮಾರ್ಫ್‍ಗಳು) ಅಧಿಕವಾಗಿ ನಾಶವಾಗುತ್ತ ಅವು ವಿರಳವಾಗುವುದು ನುಚ್ಚುರಹಿತ ಕೋಶಸಂಖ್ಯಾಭಿವೃದ್ಧಿಯಾಗಿರುವಂತೆ ತೋರುವ ಸ್ಥಿತಿಗೆ ಕಾರಣ.

ರಕ್ತದ ವರ್ಣರಹಿತ ಕಣಗಳು ಒಂದುಘನ ಮಿಮೀ ರಕ್ತದಲ್ಲಿ ಇರುವ ಸಂಖ್ಯೆ ಎಷ್ಟು. ಆ ಸಂಖ್ಯೆ ಹೆಚ್ಚೋ ಕಡಿಮೆಯೋ ಎನ್ನುವ ತಪಾಸಣೆಗೆ ಟೋಟಲ್ ಡಬ್ಲ್ಯೂ. ಬಿ. ಸಿ ಕೌಂಟ್ ಎಂದು ಹೆಸರು. ಇದು ಹೇಗಾದರೂ ಇರಲಿ, ವಿವಿಧ ಬಗೆಯ ವರ್ಣರಹಿತ ಕೋಶಗಳ ಶೇಕಡಾವಾರು ಪ್ರಮಾಣದ ತಪಾಸಣೆಗೆ ಡಿಫರೆನ್ಷಿಯಲ್ ರಕ್ತದಲ್ಲಿ ವಿವಿಧ ಬಗೆಯ ವರ್ಣರಹಿತ ಕೋಶಗಳು ಎಷ್ಟೆಷ್ಟಿವೆ ಎಂಬುದನ್ನು ಗೊತ್ತುಮಾಡಬಹುದು. ಈ ಲೆಕ್ಕಾಚಾರಕ್ಕೆ ಆಬ್ಸೊಲ್ಯೂಟ್ ಕೌಂಟ್ ಎಂದು ಹೆಸರು. ಇಂಥ ತಪಾಸಣೆಗಳಿಂದ ದೇಹದ ಅನಾರೋಗ್ಯಸ್ಥಿತಿಯ ತನಿಖೆಗೆ ಬಲು ಅನುಕೂಲವಾಗಿದೆ. ರಕ್ತದ ವರ್ಣರಹಿತಕಣಗಳು ಸಾಮಾನ್ಯವಾಗಿ ಸೋಂಕು ವಿರುದ್ಧ ದೇಹರಕ್ಷಣೆಯ ಕಾರ್ಯದ್ಲಲಿ ತೊಡಗಿದ್ದು ಪ್ರಸಂಗತ್ವೇನ ಹಲವೇ ಗಂಟೆಗಳು ಗರಿಷ್ಠ 3 - 4 ದಿವಸಗಳಲ್ಲಿ ನಾಶಗೊಳ್ಳುತ್ತಿದ್ದರೂ ಸಾಮಾನ್ಯ ಆರೋಗ್ಯಸ್ಥಿತಿಯಲ್ಲಿ ಅವುಗಳ ಸಂಖ್ಯೆ ಕೊಂಚ ಹೆಚ್ಚು ಕಡಿಮೆ ಈ ಹಿಂದೆ ವಿವರಿಸಿರುವಂತೆಯೇ ಇರುವುದರಿಂದ, ನಾಶವಾಗುತ್ತಲೇ ಇರುವ ರಕ್ತದ ಈ ಕೋಶಗಳ ಬದಲು ಹೊಸ ಹೊಸ ಕೋಶಗಳು ಉದ್ಭವಿಸುತ್ತಲೇ ಇರುತ್ತವೆ ಎಂದು ನಿರೀಕ್ಷಿಸಬೇಕಾಗಿದ್ದು ಸಹಜವೇ. ಬಹುಶಃ ಒಂದೊಂದು ಬಗೆಯ ಕೋಶನಾಶದಿಂದ ಲಭಿಸಿದ ವಸ್ತುಗಳೇ ಇಂಥ ಕೋಶ ಸಂಖ್ಯಾಭಿವೃದ್ಧಿಗೆ ಪ್ರಚೋದಕ ಕಾರಣವಾಗಿರುತ್ತವೆ. ವಿಶಿಷ್ಟ ಪರಿಸ್ಥಿತಿಗಳಲ್ಲಿ ಬೇರೆ ಪ್ರಚೋದನೆಗಳು ಇರುವುದೂ ವ್ಯಕ್ತವಾಗಿದೆ. ಸಾಮಾನ್ಯವಾಗಿ ನುಚ್ಚುಸಹಿತ ಕೋಶಗಳೆಲ್ಲ ಕೆಂಪುವರ್ಣದ ಮಜ್ಜೆಅಂಗಾಂಶದಲ್ಲಿ ತಯಾರಾಗುತ್ತವೆ (ಸಾಧಾರಣವಾಗಿ ತೆಟ್ಟೆ ಮೂಳೆಗಳಲ್ಲಿರುವ ಮಜ್ಜೆ). ದುಗ್ಧರಸಕಣ, ದುಗ್ಧರಸ ಗ್ರಂಥಿಗಳೂ ಮತ್ತೂ ಅಂಥದೇ ಅಂಗಾಂಶವಿರುವ ಮೆಂಡಿಕೆ (ಟೌನ್‍ಸಿಲ್), ಗುಲ್ಮ, ಅಂತ್ರಪುಚ್ಚ (ವರ್ಮಿಫಾರಮ್ ಅಫೆಂಡಿಕ್ಸ್), ಥೈಮಸ್ ಇವುಗಳಲ್ಲಿ ಉತ್ಪತ್ತಿಯಾಗುತ್ತವೆ. ದೊಡ್ಡ ಕಬಳಿಕ ಕಣಗಳು (ಮ್ಯಾಕ್ರೊಫೇಜೀಸ್) ಬಹುಶಃ ಮಜ್ಜೆ, ದುಗ್ಧರಸಗ್ರಂಥಿ ಇತ್ಯಾದಿ ಎರಡು ಕಡೆಗಳಲ್ಲು ಉದ್ಭವಿಸುತ್ತವೆ. ಉತ್ಪತ್ತಿ ಅತ್ಯಧಿಕವಾಗಿದ್ದು ನುಚ್ಚುಸಹಿತ ಕಣಗಳೊ ದುಗ್ಧರಸಕಣಗಳೊ ಪರಿಚಲನೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರಬಹುದು (ಒಂದು ಘನ ಮಿಮೀಗೆ 50,000 ಕ್ಕೆ ಮೇಲ್ಪಟ್ಟು), ಬಹುಶಃ ಇದು ಅನುಗುಣ ಉತ್ಪತ್ಯಾಂಗಗಳ ಏಡಿಗಂತಿ ಪರಿಸ್ಥಿತಿ ಎನ್ನಲಾಗಿದೆ. ರಕ್ತದ ಅರ್ಬುದ (ಬ್ಲಡ್ ಕ್ಯಾನ್ಸರ್) ಎಂಬ ಈ ಸ್ಥಿತಿ ಮಾರಕ. ವೈe್ಞÁನಿಕವಾಗಿ ಈ ಸ್ಥಿತಿಗೆ ಲ್ಯುಕೀಮಿಯ ಎಂದಿದೆ. ಈಚೆಗೆ ಲ್ಯುಕೀಮಿಯಕ್ಕೆ ಚಿಕಿತ್ಸಕ ಔಷಧಗಳು ಪತ್ತೆ ಆಗಿವೆ.

(iii) ರಕ್ತದಕೆಂಪುಕಣಗಳು (ರೆಡ್‍ಬ್ಲಡ್ ಕಾರ್ಪಸಲ್ಸ್ - ಆರ್. ಬಿ. ಸಿ): ರಕ್ತದ ರಚಿತ ಘಟಕಗಳಲ್ಲಿ ಅತ್ಯಂತ ಹೆಚ್ಚಾಗಿರುವುದು ಇವೇ. ಒಂದು ಘನ ಮಿಮೀ ರಕ್ತದಲ್ಲಿ ಸುಮಾರು 50 ಲಕ್ಷ ಕೆಂಪುಕಣಗಳಿರುತ್ತವೆ. ಕೆಂಪುಕಣಗಳ ವೈಯಕ್ತಿಕವಾಗಿ ಮಾಸಲು ಕೆಂಪಾಗಿದ್ದರೂ ರಕ್ತ ಕಡುಗೆಂಪಾಗಿರುವುದಕ್ಕೆ ಈ ಕಣಗಳು ಅಷ್ಟು ಅಗಾಧ ಸಂಖ್ಯೆಯಲ್ಲಿರುವುದೇ ಕಾರಣ. ಕಣದ ಕೆಂಪುಬಣ್ಣಕ್ಕೆ ಕಾರಣ ಅದರೊಳಗೆ ಹೀಮೋಗ್ಲಾಬಿನ್ ಎಂಬ ಕೆಂಪುಬಣ್ಣದ ಪ್ರೋಟೀನ್ ಇರುವುದು ಸರಿಯಷ್ಟೇ. ವಾಸ್ತವವಾಗಿ ಕೆಂಪುಕಣ ಹೀಮೋಗ್ಲಾಬಿನ್ನಿನ ದಾಸ್ತಾನುಸ್ಥಳ ಮಾತ್ರ ಎಂದು ಭಾವಿಸಬಹುದು. ಏಕೆಂದರೆ ಕಣದಲ್ಲಿ ಕೋಶಕೇಂದ್ರವಾಗಲಿ ಬಹುಶಃ ಕೋಶದ್ರವ್ಯವಾಗಲಿ (ಸೈಟೋಪ್ಲಾಸಮ್) ಇರುವುದಿಲ್ಲ. ಪಕ್ಕದಿಂದ ನೋಡಿದರೆ ಪ್ರತಿಯೊಂದು ಕಣವೂ ದ್ವಿನಿಮ್ನಮಸೂರದಂತೆ (ಬೈಕಾನ್‍ಕೇವ್) ಕಂಡರೂ ಚಪ್ಪಟೆಯಾಗೆ ಕೂತಿರುವಂತೆ ನೋಡಿದರೆ ದುಂಡಗಿನ ತಟ್ಟೆಯಂತಿರುತ್ತದೆ (ಡಿಸ್ಕ್). ಇದರ ವ್ಯಾಶ 7 - 8m. ಅತ್ಯಂತ ದಪ್ಪ ಸ್ಥಳವಾದ ಕಣದ ಅಂಚಿನಲ್ಲಿಸುಮಾರು 2m ದಪ್ಪವಾಗಿರುತ್ತದೆ. ಹೆಂಗಸರಲ್ಲಿ ಮತ್ತು ಸಣ್ಣ ಮಕ್ಕಳಲ್ಲಿ ಒಂದು ಘನ ಮಿಮೀ ರಕ್ತದಲ್ಲಿ ಕೆಂಪುಕಣಗಳು ಅನುಕ್ರಮವಾಗಿ 45 ಲಕ್ಷ ಮತ್ತು 60 - 65 ಲಕ್ಷ ಇರುತ್ತದೆ. ಕೆಂಪುಕಣಗಳಲ್ಲಿ ಕೋಶಕೇಂದ್ರವಿಲ್ಲದಿರುವುದು ಸ್ತನಿಗಳಲ್ಲಿ ಮಾತ್ರ. ಮಿಕ್ಕ ಕಶೇರುಕಗಳಲ್ಲಿ ಕೋಶಕೇಂದ್ರ ಇರುವುದಷ್ಟೇ ಅಲ್ಲದೆ ಕಣವೂ ದೊಡ್ಡದಾಗಿರುತ್ತದೆ. ಉಭಯಚರಿಗಳಲ್ಲಿ (ಆಂಫಿಬಿಯ) ಕೆಂಪುಕಣಗಳು ಅಂಡಾಕಾರವಾಗಿದ್ದು 1100 ಘನವಾಗಿರುವುದರಿಂದ ಇವುಗಳಲ್ಲಿ ಒಂದು ಘನ ಮಿಮೀ. ರಕ್ತದಲ್ಲಿ 40 - 170 ಸಾವಿರ ಕಣಗಳು ಮಾತ್ರವಿರುತ್ತವೆ. ಪಕ್ಷಿಗಳಲ್ಲಿ ಕೆಂಪುಕಣಗಳುಸುಮಾರು 150 ಘನ ಮೈಕ್ರಾನ್‍ಗಳಷ್ಟು ದೊಡ್ಡವು. ಸ್ತನಿಗಳಲ್ಲಿ ಸಾಮಾನ್ಯವಾಗಿ ಕೆಂಪುಕಣದ ಧನ ಮೊತ್ತ ಇದಕ್ಕೂ ಕಡಿಮೆ. ಮನುಷ್ಯನ ಕೆಂಪುಕಣ ಸುಮಾರು 90 m. ಸ್ತನಿಗಳಲ್ಲಿ ಕೆಂಪುಕಣ ಸಾಮಾನ್ಯವಾಗಿ ಗುಂಡಾಗಿ ಇರುವುದಾದರೂ ಒಂಟೆಗಳಲ್ಲಿ ಇದು ಎಳ್ಳಿನ ಕಾಳಿನಂತೆ ಇರುವುದು. ವ್ಯಾಸ ಸಾಮಾನ್ಯವಾಗಿ ಎಲ್ಲ ಸ್ತನಿಗಳಲ್ಲು 7 - 8 m ಗಳಷ್ಟು ಇರುವುದಾದರೂ ಮೇಕೆಗಳಲ್ಲಿ 4 m ನಷ್ಟಿರುತ್ತದೆ. ಕಸ್ತೂರಿಮೃಗದಲ್ಲಿ ಇನ್ನೂ ಕಡಿಮೆ (2.5 m). ಕೆಂಪುಕಣದ ವ್ಯಾಸಕ್ಕೂ ದೇಹದ ಗಾತ್ರಕ್ಕೂ ಯಾವುದೇ ಹೋಲಿಕೆ ಇಲ್ಲದಿದ್ದರೂ ಆನೆಗಳಲ್ಲಿ ಇದು ಅತ್ಯಂತ ದೊಡ್ಡದಾಗಿ (8.5 m) ಇರುವುದು ನಿಜ.

ಕೆಂಪುಕಣದ ಮುಖ್ಯ ಕ್ರಿಯೆ ಆಕ್ಸಿಜನ್ ಮತ್ತು ಕಾರ್ಬನ್ ಡೈ ಆಕ್ಸೈಡ್‍ಗಳ ವಾಹಕವಾಗಿ ವರ್ತಿಸುವುದೇ. ವಾಸ್ತವವಾಗಿ ಇದೊಂದೇ ಕೆಂಪುಕಣದ ಕ್ರಿಯೆ ಎಂದು ಭಾವಿಸಬಹುದಾದಷ್ಟು ಈ ಕ್ರಿಯೆ ಪ್ರಮುಖವಾಗಿದೆ. ಕೆಂಪುಕಣದ ಒಳಗಿರುವ ಹೀಮೋಗ್ಲಾಬಿನ್ ಎಂಬುದು ಆಕ್ಸಿಜನ್ ಮತ್ತು ಕಾರ್ಬನ್ ಡೈ ಆಕ್ಸೈಡುಗಳೆರಡರ, ಜೊತೆಯಲ್ಲಿಯೂ ಏಕಕಾಲಿಕವಾಗಿ ಸ್ಥಿರಸಂಯೋಗವಾಗಿರದೆ (ಫರ್‍ಮ್ಲಿ ಕಂಬೈನ್ಡ್) ಹೋಮೋಗ್ಲಾಬಿನ್ ಮತ್ತು ಈ ಅನಿಲಗಳ ಸಂಯೋಗ ಒಂದು ರೀತಿಯ ಅಳ್ಳಕ ಸಂಯೋಗವಾಗಿರುತ್ತದೆ (ಲೂಸ್ಲಿಕಂಬೈನ್ಡ್), ತತ್ಪಲವಾಗಿ ಹೀಮೋಗ್ಲಾಬಿನ್ ಆಕ್ಸಿಜನ್ನಿನೊಡನಾಗಲಿ ಕಾರ್ಬನ್ ಡೈ ಆಕ್ಸೈಡಿನೊಡನಾಗಲಿ ಅಧಿಕ ಪ್ರಮಾಣದಲ್ಲಿ ಸಂಯೋಜಿತವಾಗಿದ್ದಲ್ಲಿ ಸಂಧರ್ಭಾನುಸಾರು ಹೆಚ್ಚುವರಿಯನ್ನು ಬಿಡುಗಡೆ ಮಾಡಿ ಕಡಿಮೆ ಪ್ರಮಾಣ ಅನಿಲವುಳ್ಳ ಸಂಯೋಗವಾಗಿ ಪರಿವರ್ತಿಸಬಹುದು. ಈ ಸಂಯೋಜನೆಯ ಇನ್ನೊಂದು ವೈಶಿಷ್ಟ್ಯ ಎಂದರೆ ಸಂಯೋಗದಲ್ಲಿ ಈ ಎರಡು ಅನಿಲಗಳ ಪರಸ್ಪರ ಪ್ರಮಾಣ. ಹೀಮೋಗ್ಲಾಬಿನ್ ಹೆಚ್ಚು ಆಕ್ಸಿಜನ್ನಿನೊಡನೆ ಸಂಯೋಗವಾಗಿರುವಾಗ ಅದರೊಡನೆ ಕಾರ್ಬನ್ ಡೈ ಆಕ್ಸೈಡ್ ಕಡಿಮೆ ಪ್ರಮಾಣದಲ್ಲಿ ಮಾತ್ರ ಸಂಯೋಗವಾಗಿರಬಲ್ಲದು. ಅರ್ಥಾತ್ ಹಿಮೋಗ್ಲಾಬಿನ್ ಹೆಚ್ಚು ಆಕ್ಸಿಜನ್ನನ್ನು ಹೀರಿಕೊಂಡಾಗ ಅದರೊಡನೆ ಸಂಯೋಜಿಸಿದ್ದ ಕಾರ್ಬನ್ ಡೈ ಆಕ್ಸೈಡಿನ ಹೆಚ್ಚುವರಿ ಬಿಡುಗಡೆ ಆಗುತ್ತದೆ. ಇದಕ್ಕೆ ವಿರುದ್ಧವಾಗಿ ಆಕ್ಸಿಜನ್ನನ್ನು ಹೀಮೋಗ್ಲಾಬಿನ್ ಬಿಡುಗಡೆಮಾಡಿದಾಗ ಅದರೊಡನೆ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಸಂಯೋಗವಾಗುತ್ತದೆ. ಫುಪ್ಪುಸಗಳಲ್ಲಿ ರಕ್ತಹರಿಯುತ್ತಿರುವಾಗ ಹೀಮೋಗ್ಲಾಬಿನ್ ಹೀಗೆ ಆಕ್ಸಿಜನ್ನನ್ನು ಹೀರಿ ಕಾರ್ಬನ್ ಡೈ ಆಕ್ಸೈಡನ್ನು ಬಿಡುತ್ತದೆ; ಮತ್ತು ರಕ್ತ ದೇಹದ ಮಿಕ್ಕೆಲ್ಲೆಡೆಗಳಲ್ಲು ಹರಿಯುತ್ತಿರುವಾಗ ಆ ಕಡೆಗಳಲ್ಲೆಲ್ಲ ರಕ್ತ ಆಕ್ಸಿಜನ್ನನ್ನು ಬಿಡುಗಡೆ ಮಾಡಿ ಪೂರೈಕೆ ಮಾಡುವುದರಿಂದ ಅಲ್ಲೆಲ್ಲ ಉತ್ಪತ್ತಿಯಾಗುತ್ತಲೇ ಇರುವ ಕಾರ್ಬನ್ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತದೆ.

ರಕ್ತಪರಿಚಲನೆಯಲ್ಲಿ ರಕ್ತಕಣಗಳು ತಮಗಿಂತಲೂ ವ್ಯಾಸ ಕಿರಿದಾಗಿರಬಹುದಾದ ಲೋಮನಾಳಗಳಲ್ಲಿ ನುಸುಳಿಕೊಂಡು ಹೋಗುವುದು ವ್ಯಕ್ತ. ಈ ನಿರಂತರ ಬಲವಂತದಿಂದ ಕೆಂಪುಕಣಗಳಿಗೆ ಜಖಮ್ ಆದಂತಾಗಿ ಅವು ಕ್ರಮೇಣ ದುರ್ಬಲಗೊಳ್ಳುತ್ತ ಕೊನೆಗೆ ಛಿದ್ರಗೊಂಡು ಚೂರುಚೂರುಗಳಾಗುತ್ತವೆ. ಗಂಟೆ ಗಂಟೆಯೂ ಕೋಟ್ಯಂತರ ಕೆಂಪುಕಣಗಳಿಗೆ ಹೀಗೆ ನಾಶವಾಗುತ್ತಲೇ ಇದ್ದರೂ ಹೀಮೋಗ್ಲಾಬಿನ್ ಯುಕ್ತ ಚೂರುಗಳು ರಕ್ತಪರಿಚಲನೆಯಲ್ಲಿ ಕಂಡುಬರುವುದು ಅಪರೂಪ. ಕಾರಣ ಈ ಚೂರುಗಳು ದೇಹದ ನಾನಾ ಭಾಗಗಳಲ್ಲಿ (ಮಜ್ಜೆ, ಗುಲ್ಮ, ಯುಕೃತ್ತು, ಇತ್ಯಾದಿ) ಇರುವ ದೊಡ್ಡ ಕಬಳಿಕ ಕಣಗಳಿಂದ (ಮ್ಯಾಕ್ರೋಪೇಜೀಸ್) ನಿರಂತವಾಗಿ ಭಕ್ಷಣವಾಗಿಬಿಡುತ್ತಿರುವುದು. ಈ ಕಣಗಳಲ್ಲಿ ರಕ್ತಕಣ ಚೂರುಗಳು ಪೂರ್ತಿಯಾಗಿ ನಾಶಗೊಳ್ಳುವುದು ಮಾತ್ರವಲ್ಲದೆ ಬಿಡುಗಡೆ ಆದ ಹೀಮೋಗ್ಲಾಬಿನ್ ಬಿಲಿರೂಬಿನ್ ಎಂಬ ಪಿತ್ತರಸವರ್ಣವಾಗಿ ಪರಿವರ್ತಿತವಾಗುತ್ತವೆ ಕೂಡ; ಮತ್ತು ಪಿತ್ತರಸದ ಮೂಲಕ ವಿಸರ್ಜಿತವಾಗುತ್ತದೆ. ಆದ್ದರಿಂದ ಕೆಂಪುಕಣಲಯಗಳು ಕಾರಣಾಂತರಗಳಿಂದ ಹೆಚ್ಚಾಗಿದ್ದಾಗ ಒಂದು ವಿಧವಾದ ಕಾಮಾಲೆ (ಜಾಂಡೀಸ್) ತಲೆದೋರಬಹುದು.

ಕೆಂಪುರಕ್ತಕಣಗಳು ಪ್ರತಿಯೊಂದು ಮಿನಿಟ್ಟಿನಲ್ಲೂ ಕೋಟಿಕಟ್ಟಲೆ ಸಂಖ್ಯೆಯಲ್ಲಿ ಹೀಗೆ ನಾಶವಾಗುತ್ತಿದ್ದರೂ ಒಂದು ಘಮಮಿಮೀ ರಕ್ತದಲ್ಲಿ ಅವುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಬರುವುದಿಲ್ಲ. ಏಕೆಂದರೆ ನಾಶವಾಗುವ ಕೆಂಪು ಕಣಗಳಿಗೆ ಬದಲಾಗಿ ಸುಮಾರು ಅಷ್ಟೇ ಹೊಸಕಣಗಳು ಸತತವಾಗಿ ಉತ್ಪತ್ತಿ ಆಗುತ್ತ ರಕ್ತಪರಿಚಲನೆಗೆ ಸೇರಿಕೊಳ್ಳುತ್ತಿರುತ್ತವೆ. ಹೊಸ ಕೆಂಪುಕಣಗಳು ಉತ್ಪತ್ತಿ ಆಗುವುದು ವಯಸ್ಕರಲ್ಲಿ ಕೆಂಪು ಮಜ್ಜೆಗಳಲ್ಲಿ ಮತ್ತು ಮೇಲ್ತೋಳು ಹಾಗೂ ತೊಡೆಮೂಳೆಗಳ ಮೇಲುಕೊನೆಗಳಲ್ಲಿ ಕಂಡಬರುತ್ತದೆ. ಪೂರ್ಣವಾಗಿ ಬೆಳೆದ ಭ್ರೂಣದಲ್ಲಿ ಮತ್ತು ಸಣ್ಣ ಮಕ್ಕಳಲ್ಲಿ ಎಲ್ಲ ಮೂಳೆಗಳಲ್ಲೂ ಕೆಂಪುಮಜ್ಜೆಯೇ ಇದ್ದು ಅಲ್ಲೆಲ್ಲವೂ ಕೆಂಪುಕಣಗಳ ಉತ್ಪತ್ತಿ ಆಗುತ್ತದೆ. ಉತ್ಪತ್ತಿ ಆಗಿ ಪರಿಚಲನೆಗೆ ಸೇರಿದ್ದಂದಿನಿಂದ ಛಿದ್ರವಾಗಿ ನಾಶವಾಗುವ ತನಕ ಕೆಂಪುಕಣದ ಜೀವಿತಾವಧಿ 100 - 120 ದಿವಸಗಳು.

ಕೆಂಪುಕಣಗಳು ಕೆಂಪುಮಜ್ಜೆಯಲ್ಲಿ ಮತ್ತೆ ಆಗುವುದಕ್ಕೆ ಬಹುಶಃ ಅವುಗಳ ಸಂತತ ನಾಶವೇ ಅನುರೂಪವಾದ ಸಂತತ ಪ್ರಚೋದನೆ ಎಂದು ಹೇಳಲಾಗಿದೆ. ಕೆಂಪುಕಣನಾಶದಿಂದ ರಕ್ತದ ಆಕ್ಸಿಜನ್ ಭರಣಸಾಮಥ್ರ್ಯ ಕಡಿಮೆ ಆಗುವುದು ವ್ಯಕ್ತ. ಆಕ್ಸಿಜನ್ ಕೊರತೆ ಪ್ರಯೋಗಾಲಯದಲ್ಲಿ ಮಾಪಿಸಲು ಸಾಧ್ಯವಿಲ್ಲದಷ್ಟು ಕಡಿಮೆ ಇದ್ದರೂ ಬಹುಶಃ ಆ ಕೊರತೆ ಕೆಂಪುಮಜ್ಜೆಯನ್ನು ಪ್ರಚೋದಿಸಲು ನೈಸರ್ಗಿಕವಾಗಿ ಸಮರ್ಥವಾಗಿರುತ್ತದೆ ಮತ್ತು ಅನುಗುಣವಾಗಿ ಹೊಸ ಕೆಂಪುಕಣಗಳು ಉತ್ಪತ್ತಿ ಆಗುವಂತೆ ಮಾಡುತ್ತಿದೆ. ದೇಹದಲ್ಲಿ ಕಾರಣಾಂತರಗಳಿಂದ ಆಕ್ಸಿಜನ್ ಕೊರತೆ ಕಂಡುಬಂದಾಗ ಕೆಂಪು ರಕ್ತಕಣಗಳ ಸಂಖ್ಯೆ ಏರುವುದರಿಂದ (ಒಂದು ಘನ ಮಿಮೀನಲಲ್ಲಿ 60 - 65 ಲಕ್ಷ) ಮೇಲಿನ ವಾದ ಸರಿ ಎಂದು ಭಾವಿಸಲಾಗಿದೆ.

ಹೊಸಕೆಂಪುಕಣಗಳು ಉತ್ಪತ್ತಿ ಆಗುತ್ತಿರುವ ಹಂತಗಳಲ್ಲಿ ಅವುಗಳ ಮಾತೃಕೋಶಗಳಲ್ಲಿ ಕೋಶದ್ರವ್ಯವೂ ಕೋಶಕೇಂದ್ರವೂ ಇದ್ದು ಮಾತೃಕೋಶ ವಿಭಜನೆಯಿಂದ ಅಂತಿಮವಾಗಿ ಕೆಂಪುಕಣಗಳು ಫಲಿಸುತ್ತವೆ. ವಿಭಜನೆ ಮತ್ತು ಪರಿವರ್ತನೆಯ ವಿವಿಧ ಹಂತಗಳಲ್ಲಿ ಕ್ರಮೇಣ ಕೋಶದ್ರವ್ಯ ಕಡಿಮೆ ಆಗುತ್ತ ಬದಲು ಹೀಮೋಗ್ಲಾಬಿನ್ ಕಂಡುಬರುತ್ತ ಅಂತಿಮವಾಗಿ ಕೋಶಕೇಂದ್ರವೂ ಮಾಯವಾಗಿ ಕೆಂಪುಕಣ ಫಲಿಸುತ್ತದೆ. ಈ ಘಟೆನೆಗಳಿಗೆ ಅಗತ್ಯವಾದ ಕಾಲಾವಧಿ 8 - 10 ದಿವಸಗಳು.

ಈ ಅವಧಿಯಲ್ಲಿ ಹೊಸ ಜೀವಕೋಶದ ಉತ್ಪತ್ತಿ ಆಗಿ ಅದರೊಳಗೆ ಹೀಮೋಗ್ಲಾಬಿನ್ ತುಂಬಿಕೊಳ್ಳಬೇಕಷ್ಟೇ. ಕೋಶದ್ರವ್ಯದ ಮತ್ತು ಹೀಮೋಗ್ಲಾಬಿನ್ನಿನ ಸಂಯೋಜನೆ ಮೊದಲುದರ್ಜೆಯ (ಫಸ್ಟ್ ಕ್ಲಾಸ್) ಪ್ರೋಟೀನುಗಳು ಅಗತ್ಯ. ಆದ್ದರಿಂದ ಅವುಗಳ ಸರಬರಾಜು ಆವಶ್ಯಕತೆಗೆ ಅನುಗುಣವಾಗಿರಬೇಕು. ಹೀಮೋಗ್ಲಾಬಿನ್ನಿನಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕಬ್ಬಿಣದ ಸರಬರಾಜು ಆವಶ್ಯಕ. ಇವುಗಳಿಗೆ ಆಹಾರದಲ್ಲಿನ ಯುಕ್ತ ಪೌಷ್ಟಿಕಾಂಶಗಳೇ ಮೂಲವಾಗಿರುವುದರಿಂದ ಯುಕ್ತ ಆಹಾರಸೇವನೆ ರಕ್ತಕಣ ಸಂಖ್ಯಾಭಿವೃದ್ಧಿಗೆ ಬಲು ಅಗತ್ಯ. ಈ ಅಂಶಗಳಲ್ಲದೆ ಆಹಾರದಲ್ಲಿ ವೈಟಮಿನ್ ಃ13, ವೈಟಮಿನ್ ಅ, ಕಿಂಚಿತ್ ಪ್ರಮಾಣದಲ್ಲಿ ತಾಮ್ರ ಇತ್ಯಾದಿಗಳೂ ಅತ್ಯಗತ್ಯ.

ಈ ಅಂಶಗಳಲ್ಲಿ ಒಂದೋ ಹಲವೋ ಕೊರತೆ ಆದರೆ ಸ್ವಾಭಾವಿಕವಾಗಿಯೇ ಕೆಂಪು ರಕ್ತಕಣಗಳ ಸಂಖ್ಯಾಭಿವೃದ್ಧಿ ಕುಂಠಿತಗೊಳ್ಳುತ್ತದೆ. ಕೆಂಪುರಕ್ತಕಣನಾಶ ಮಾಮೂಲಾಗಿಯೇ ಇರುವುದರಿಂದ ಇಂಥ ಪರಿಸ್ಥಿತಿಯಲ್ಲಿ ದೇಹದಲ್ಲಿ ಕೆಂಪುಕಣಗಳ ಸಂಖ್ಯೆ ಇಳಿಮುಖವಾಗುತ್ತದೆ. ಒಂದು ಘನಮಿಮೀ ರಕ್ತದಲ್ಲಿ ಕೇವಲ ಹತ್ತು ಲಕ್ಷ ಕೆಂಪುಕಣಗಳಷ್ಟು ಕಡಿಮೆಯಾಗಬಹುದು. ಇದಕ್ಕೆ ಪಾಂಡುರೋಗ (ಅನೀಮಿಯ) ಎಂದು ಹೆಸರು. ವಿವಿಧ ಘಟಕಗಳ ಕೊರತೆಯಿಂದ ವಿವಿಧ ರೀತಿಯ ಪಾಂಡುರೋಗ ತಲೆದೋರವುದಿದೆ. ತಕ್ಕ ಘಟಕವನ್ನು ಚಿಕಿತ್ಸಕವಾಗಿ ಬಳಸಿ ಪಾಂಡುರೋಗವನ್ನು ನಿವಾರಿಸಬಹುದು.

ರಕ್ತಪರೀಕ್ಷೆ (ನ್ಯಾಯಾಲಯಕ್ಕೆ ಸಂಬಂಧಿಸಿದಂತೆ): ವ್ಯಕ್ತ, ಬಟ್ಟೆ, ಸುಟ್ಟ ವಸ್ತುಗಳು, ಆಯುಧಗಳು ಇತ್ಯಾದಿಗಳ ಮೇಲೆ ಕೆಂಪು ಅಥವಾ ಹಸುರು ಕಲೆಗಳಿರಬಹುದು. ಇವು ರಕ್ತಕಲೆಗಳೇ ಆಗಿದ್ದರೆ ಮನುಷ್ಯ ರಕ್ತಕಲೆಗಳೇ ಎಂದು ತನಿಖಿಸಬೇಕಾಗುತ್ತದೆ. ಇದನ್ನು ರಾಸಾಯನಿಕ ಕ್ರಮ, ಸೂಕ್ಷ್ಮದರ್ಶಕ ಪರೀಕ್ಷ ಮತ್ತು ರೋಹಿತಕರ್ಶಕ (ಸ್ಪೆಕ್ಟ್ರಾಸ್‍ಸ್ಕೋಪ್) ಪರಾಕ್ಸೈಡನ್ನೂ ಬೆರಸಿ ನೀಲಿ ಬಣ್ಣ ಸಾರಕ್ಕೆ ಬೆನ್‍ಸಿಡೀನನ್ನೂ ಹೈಡ್ರೋಜನ್ ಪರಾಕ್ಸೈಡನ್ನೂ ಬೆರೆಸಿ ನೀಲಿ ಬಣ್ಣ ಫಲಿಸುತ್ತದೆಯೇ ನೋಡುವುದು ಮೊದಲನೆಯದು. ಕಲೆಯಸಾರಕ್ಕೆ ಕಿಂಚಿತ್ ಉಪ್ಪನ್ನೂ ಗ್ಲೇಸಿಯಲ್ ಅಸೆಟಿಕ್ ಆಮ್ಲವನ್ನೂ ಗಾಜಿನ ಫಲಕದ ಮೇಲೆಯೇ ಸೇರಿಸಿ ತೆಳುಗಾಜನ್ನು (ಕವರ್ ಗ್ಲಾಸ್) ಮುಚ್ಚಿಗುಳ್ಳೆಬರುವ ತನಕವೂ ಕಾಸಿ ಆರಿಸಿ ಸೂಕ್ಷ್ಮದರ್ಶಕದ ಕೆಳಗಿಟ್ಟುನೋಡಿದಾಗ ತುಕ್ಕಿನ ಬಣ್ಣದ ವಿಶಿಷ್ಟ ಆಕಾರದ ಹರಳುಗಳು (ಕ್ರಿಸ್ಟಲ್) ಕಾಣಬರುತ್ತವೆಯೇ ಎಂದುನೋಡುವುದು ಎರಡನೆಯದು. ಕಲೆಯ ಸಾರವನ್ನುರೋಹಿತದರ್ಶಕದ ಮೂಲಕ ನೊಡುತ್ತ ನೈಸರ್ಗಿಕ ರೋಹಿತದಲ್ಲಿ ಕಾಣುವ ಆ ಮತ್ತು ಇಎಂಬ ಗೆರೆಗಳ ಮಧ್ಯೆ ಎರಡು ಹೆಚ್ಚುವರಿ ಮಸುಕು ಗೆರೆಗಳು ಕಾಣಿಸುತ್ತವೆಯೇ ಎಂದು ನೋಡುವುದು ಮೂರನೆಯದು. ಇವೆಲ್ಲ ಕಲೆ ರಕ್ತದ್ದೇ ಎಂದು ಮಾತ್ರ ತಿಳಿಸಬಲ್ಲವು. ಮನುಷ್ಯ ರಕ್ತ ಲಸಿಕೆಯ ಪ್ರತಿವಸ್ತುವಿನ (ಆಂಟಿಬಾಡಿ) ಜೊತೆ ಕಲೆಯ ಸಾರವನ್ನು ಸೇರಿಸಿದಾಗ ಅವು ಬೆರೆಯುವ ಸ್ಥಳದಲ್ಲಿ ಬಗ್ಗಡದಂತೆ ಕಂಡುಬಂದರೆ ಕಲೆಯ ಸಾರ ಮನುಷ್ಯ ರಕ್ತದ್ದೇ ಎಂದು ನಿರ್ಧರಿಸಬಹುದು.

5. ರಕ್ತಸ್ರಾವ: ಹೃದಯ ಹಾಗೂ ರಕ್ತನಾಳಗಳ ಒಳಗೇ ಪರಿಚಲಿಸುತ್ತಿರುವ ರಕ್ತ ಅವುಗಳ ರೋಗ ಹಾಗೂ ಗಾಯ ವಿಶೇಷಗಳಿಂದ ಹೊರಬರುವಿಕೆ (ಬ್ಲೀಡಿಂಗ್: ಹೆಮೊರೆಜ್). ರಕ್ತ ಹೆಪ್ಪುಗಟ್ಟುವಿಕೆಯಲ್ಲಿ (ಕೊಯಾಗ್ಯುಲೇಷನ್; ಕ್ಲಾಟಿಂಗ್) ಅವ್ಯವಸ್ಥೆ ಉಂಟಾದಾಗಲೂ ರಕ್ತಸ್ರಾವವಾಗಬಹುದು. ಪ್ರಕಾಶಯುತವಾದ ಕೆಂಪುರಕ್ತ ಚಿಮ್ಮಿಚಿಮ್ಮಿ ಹೊರಬರುತ್ತಿದ್ದರೆ ಅದು ಅಪಧಮನಿಯಿಂದ ಆಗುತ್ತಿರುವ ರಕ್ತಸ್ರಾವ (ಆರ್ಟೀರಿಯಲ್ ಬ್ಲೀಡಿಂಗ್). ಸಾಧಾರಣವಾಗಿ ಆಳವಾದ ಗಾಯಗಳಾದಾಗ ಅಪಧಮನಿ ಛಿದ್ರಗೊಳ್ಳುವುದು ಸಾಮಾನ್ಯ ಪ್ರತಿಯೊಂದು ಸಲವೂ ಹೃದಯ ಮಿಡಿದಾಗ ಹೀಗೆ ರಕ್ತ ಚಿಮ್ಮುತ್ತದೆ. ಮಸುಕು ಕೆಂಪುಬಣ್ಣದ ರಕ್ತ ನಿಧಾನವಾಗಿ ಒಂದೇ ಸಮನೆ ಹರಿದುಬರುತ್ತಿದ್ದರೆ ಅದು ಅಭಿಧಮನಿಯಿಂದ ಆಗುತ್ತಿರುವ ರಕ್ತಸ್ರಾವ (ವೇಯ್ನ್ ಬ್ಲೀಡಿಂಗ್). ಸಾಮಾನ್ಯ ಗಾಯಗಳಲ್ಲಿ ಕಂಡುಬರುವುದು ಇಂಥ ರಕ್ತಸ್ರಾವವೇ. ರಕ್ತ ಹರಿದು ಹೋಗದೆ ಸ್ವಲ್ಪ ಮಾತ್ರ ಜಿನುಗಿ ಹೊರಬರುವುದು ಲೋಮನಾಳಗಳಿಂದ ಆಗುವ ಎಂಬುದು ಈ ಮೂರು ಬಗೆಯ ಸ್ರಾವಗಳ ಮಿಶ್ರಣ. ರಕ್ತಸ್ರಾವ ಸಾಮಾನ್ಯವಾಗಿ 5-10 ಮಿನಿಟುಗಳಲ್ಲಿಯೇ ತಾನಾಗಿಯೇ ತೆಗೆದುಕೊಳ್ಳಬೇಕಾದುದು ಅಗತ್ಯ. ಏಕೆಂದರೆ ಇಂಥ ರಕ್ತಸ್ರಾವ ತಡೆಯೇ ಇಲ್ಲದೆ ಮುಂದುವರಿಯುತ್ತ ಪ್ರಾಣಾಪಾಯವೇ ಸಂಭವಿಸಬಹುದು.

ರಕ್ತಸ್ರಾವ ಕಣ್ಣಿಗೆ ಕಾಣಿಸುವಂತಿರಬಹುದು ಇಲ್ಲವೆ ಕಾಣದಂತಿರಬಹುದು. ಕಣ್ಣಿಗೆ ಕಾಣಿಸದೇ ಇರುವ ರಕ್ತಸ್ರಾವವನ್ನು ವಮನ, ಶ್ಲೇಷ್ಮ. ಮೂತ್ರ, ಮಲ-ಇವುಗಳಲ್ಲಿ ರಕ್ತವಿರುವುದನ್ನೂ ಇಲ್ಲವೇ ಅವು ರಕ್ತದಂತೆ ಕೆಂಪಾಗಿರುವುದನ್ನೂ ನೊಡಿ ಪತ್ತೆ ಮಾಡಬಹುದು. ಮಲ ಟಾರಿನಂತೆ ಕಪ್ಪಾಗಿದ್ದರೂ ಅನ್ನನಾಳದಲ್ಲಿ ರಕ್ತಸ್ರಾವ ಆಗಿದೆ ಎಂದು ತಿಳಿಯಬೇಕು. ಗುಪ್ತರಕ್ತಸ್ರಾವ ಹೀಗೂ ಪತ್ತೆಗೆ ಬಾರದಂಥ ಸಂದರ್ಭಗಳೂ ಇವೆ. ವ್ಯಕ್ತಿ ಬಿಳಿಚಿಕೊಂಡು ತೀವ್ರ ಗತಿಯಿಂದ ನಾಡಿ ಮಿಡಿಯುತ್ತಿರುವುದು- ಇಂಥ ಲಕ್ಷಣಗಳಿಂದ ಗುಪ್ತರಕ್ತಸ್ರಾವನ್ನು ಗುರುತಿಸಬೇಕಾಗುತ್ತದೆ. ಕಣ್ಣಿಗೆ ಕಾಣಿಸುವ, ತಾನಾಗಿಯೇ ನಿಂತುಕೊಳ್ಳದ ರಕ್ತಸ್ರಾವವನ್ನು ನಿಲ್ಲಿಸಲು ಆ ಸ್ಥಳವನ್ನು ಶುದ್ಧವಾದ ಹೆಬ್ಬಿಟ್ಟಿನಿಂದಾಲೋ ಅಂಗೈಯಿಂದಲೋ ಭದ್ರವಾಗಿ ಅದುಮಿ ಹಿಡಿದಿರಬೇಕು. ಚಿಮ್ಮುತ್ತ ರಕ್ತ ಹೊರಬರುತ್ತಿದ್ದರೆ ಆ ಸ್ಥಳಕ್ಕೆ ಮೇಲೆ (ಅಂದರೆ ಹೃದಯದ ಕಡೆಗೆ) ಸಿಕ್ಕುವ ನಾಡಿಯನ್ನು ಒತ್ತಿ ಹಿಡಿಯಬೇಕು. 5-10 ಮಿನಿಟುಗಳ ಅನಂತರ ನಿಧಾನವಾಗಿ ಒತ್ತಡವನ್ನು ಸಡಿಲಿಸಬಹುದು. ಸಣ್ಣ ಪುಟ್ಟ ಗಾಯಗಳಿಂದ ಆಗುವ ಯಾವುದೇ ಬಗೆಯ ರಕ್ತಸ್ರಾವದಿಂದ ಆಗುವ ರಕ್ತನಷ್ಟ ಬಲುಕಡಿಮೆ; ಗರಿಷ್ಠ ಎಂದರೆ 5-10 ಮಿಲಿಲೀಟರುಗಳಷ್ಟು ಇರಬಹುದು. ಇದರಿಂದ ದೇಹಕ್ಕೆ ಏನೂ ಭಾಧಕವಿಲ್ಲ. ವಾಸ್ತವವಾಗಿ ಒಮ್ಮೆಗೆ 50-100 ಮಿಲಿಲೀಟರುಗಳಷ್ಟು ರಕ್ತನಷ್ಟವಾದರೂ ದೇಹಕ್ಕೆ ಏನೂ ತೊಂದರೆ ಆಗದು. ಇನ್ನೂ ಹೆಚ್ಚಿನ ಮೊತ್ತದಲ್ಲಿ ರಕ್ತಸ್ರಾವವಾದರೆ ಅದರಿಂದ ಆಗುವ ತೊಂದರೆಗಳು ರಕ್ತಸ್ರಾವದ ಮೊತ್ತ ಮತ್ತು ವೇಗವನ್ನು ಆಧರಿಸಿದೆ. ಅತೀವ ಸುಸ್ತು, ಸಂಕಟ, ನೀರಡಿಕೆ, ಮೈಬೆವತು ಚಳಿಯಾಗುವುದೂ ರಕ್ತಸ್ರಾವ ಮುಂದುವರಿಯುತ್ತಲೇ ಇದ್ದರೆ ಸುಸ್ತುಧಕ್ಕೆಯೂ ಕಂಡುಬರುತ್ತವೆ. ಸುಸ್ತುಧಕ್ಕೆಗೆ ತಕ್ಷಣ ಚಿಕಿತ್ಸೆ ಒದಗಿಸದಿದ್ದರೆ ಅದರಿಂದಲೇ ಅಂತಿಮವಾಗಿ ಮರಣ ಸಂಭವಿಸಬಹುದು. ಯಾವುದೇ ಸಂದರ್ಭದಲ್ಲೂ ಒಮ್ಮೆಲೇ ಸುಮಾರು 1 ಲೀಟರ್‍ನಷ್ಟು ರಕ್ತ ಕಳೆದುಹೋದರೆ ಚಿಕಿತ್ಸೆ ನೀಡಿದರೂ ಬದುಕುಳಿಸುವುದು ಬಲು ಕಷ್ಟ. ಮಕ್ಕಳಲ್ಲಿ ಇದರ ಕಾಲುಭಾಗ ರಕ್ತನಷ್ಟವೇ ಮಾರಕವಾಗಿ ಪರಿಣಮಿಸುತ್ತದೆ. ರಕ್ತಸ್ರಾವ ಬಲು ನಿಧಾನವಾಗಿ 2-3 ದಿವಸಗಳ ಪರ್ಯಂತ ಆಗುತ್ತಿರುವ ಸಂದರ್ಭಗಳಲ್ಲಿ ಒಟ್ಟು ಇಂತಿಷ್ಟು ರಕ್ತಸ್ರಾವವೇ ಆಗಿದೆ ಎನಿಸಿದರೂ ಬರೀ ರಕ್ತನಷ್ಟವೊಂದರಿಂದಲೇ ಪ್ರಾಣಾಪಾಯ ಇರುವುದಿಲ್ಲ. ರಕ್ತಸ್ರಾವ ಸಾಮಾನ್ಯವಾಗಿ ತಾನಾಗಿಯೇ ನಿಂತುಹೋಗುವ ವಿಚಾರದ ಪ್ರಸ್ತಾಪ ಆಗಿದೆ. ಗಾಯ ಇರುವ ಸ್ಥಳದಲ್ಲಿ ರಕ್ತಹೊರಬಂದ ಕೂಡಲೇ ಅದರಲ್ಲಿರುವ ಕಿರಿಕಣಗಳು (ಪ್ಲೇಟ್‍ಲೆಟ್ಸ್- ಪ್ರತಿಯೊಂದು ಕಣದ ವ್ಯಾಸ 3/1000 ಮಿಮೀ; ಒಂದು ಘನ ಮಿಮೀ ರಕ್ತದಲ್ಲಿ ಇಂಥವು ಸುಮಾರು 3 ಲಕ್ಷದಷ್ಟಿರುತ್ತವೆ) ಲಕ್ಷಾಂತರ ಗಟ್ಟಲೆ ಒಂದಕ್ಕೊಂದು ಅಂಟಿಕೊಂಡು ಕಣ್ಣಿಗೆ ಕಾಣಿಸುವಂಥ ಗುಂಪುಗಳಾಗುತ್ತವೆ ಮತ್ತು ಶೀಘ್ರದಲ್ಲೇ ಅವನತಿ ಹೊಂದುತ್ತವೆ. ಈ ಅವನತಿಯಿಂದ ಅವುಗಳಲ್ಲಿರುವ ಹಲವು ವಿಶಿಷ್ಟ ರಾಸಾಯನಿಕಗಳು ಬಿಡುಗಡೆ ಆಗುತ್ತವೆ. ಇವುಗಳ ಪೈಕಿ ಸಿರೋಟೋನಿನ್ ಎಂಬುದು ಒಂದು. ಇದು ಸ್ಥಳೀಯವಾಗಿ ರಕ್ತನಾಳಗಳ ಮೇಲೆ ವರ್ತಿಸಿ ಸಂಕುಚನದಿಂದ ಅವುಗಳ ವ್ಯಾಸ ಕಿರಿದಾಗುವಂತೆ ಮಾಡುತ್ತದೆ. ಹೀಗೆ ಕಿರಿದಾದ ರಕ್ತನಾಳಗಳು ಒಸರಿರುವ ರಕ್ತ ಗರಣೆ ಕಟ್ಟಿಕೊಂಡು (ಇದಕ್ಕೂ ಸಾಮಾನ್ಯವಾಗಿ ಕಿರಿಕಿಣಗಳ ಅವನತಿಯೇ ಪ್ರಾರಂಭಿಕ ಕಾರಣ) ನಾಳಕ್ಕೆ ಆಗಿರುವ ಗಾಯವನ್ನು ಮುಚ್ಚಿಬಿಡುತ್ತವೆ. ರಕ್ತಸ್ರಾವವಾದ ಮೇಲೆ ಅಪಧಮನಿಗಳಲ್ಲೂ ಅದಕ್ಕಿಂತಲೂ ದೊಡ್ಡ ಅಭಿಧಮನಿಗಳಲ್ಲಿ ಈ ನೈಸರ್ಗಿಕ ಕ್ರಿಯಾತಂತ್ರದಿಂದ (ಮೆಕ್ಯಾನಿಸಮ್) ರಕ್ತಸ್ರಾವ ತಾನಾಗಿಯೇ 5-8 ಮಿನಿಟುಗಳಲ್ಲಿ ನಿಂತುಕೊಳ್ಳುವುದಾದರೂ ಇನ್ನೂ ದೊಡ್ಡ ರಕ್ತನಾಳಗಳಿಂದಾಗುವ ರಕ್ತಸ್ರಾವನ್ನು ಹೊಲಿದೇ ನಿಲ್ಲಿಸಬೇಕಾಗುತ್ತದೆ.

ಕಿರಿಕಣಗಳ ಸಂಖ್ಯೆ ಕಾರಣಾಂತರಗಳಿಂದ ಕಡಿಮೆ ಆಗಿಹೋಗಿರುವಾಗ ಇಲ್ಲಿ ಹೇಳಿರುವ ಕ್ರಿಯಾತಂತ್ರ ಪರಿಣಾಮಕಾರಿಯಾಗಿರದೆ ರಕ್ತಸ್ರಾವ ನಿಂತುಕೊಳ್ಳಲು ಬಹಳಷ್ಟು ಕಾಲ ಹಿಡಿಯುತ್ತದೆ. ಪರ್‍ಪ್ಯುರ ಎಂಬ ರೋಗದಲ್ಲಿ ಚರ್ಮದ ಅಡಿಯ ಲೊಮನಾಳಗಳು ಅವ್ಯಕ್ತ ಜಖಮ್ಮಿನಿಂದ ಗಾಯಗೊಂಡು ಅತ್ಯಲ್ಪ ಪ್ರಮಾಣದಲ್ಲಿ ರಕ್ತ ಒಸರುವಾಗ ಬಹಳಷ್ಟು ಕಾಲ ಒಸರುತ್ತಲೇ ಇರುವುದರಿಂದ ಚರ್ಮದ ಅಡಿ ರಕ್ತಗಟ್ಟಿ ನೀಲಿ, ಹಸುರು ಇತ್ಯಾದಿ ಬಣ್ಣದ ಕಿರಿ ಹಾಗೂ ಹಿರಿಮಚ್ಚೆಗಳು ಕಾಣಬರುತ್ತವೆ. ಹೀಮೋಫೀಲಿಯ ಎಂಬ ರೋಗದಲ್ಲಿ (ಹೆಂಸರಲ್ಲಿ ಅವ್ಯಕ್ತವಾಗಿದ್ದು ಗಂಡಸರಲ್ಲಿ ಮಾತ್ರ ವ್ಯಕ್ತವಾಗಿರುವುದು ಈ ರೋಗದ ವೈಶಿಷ್ಟ್ಯ) ರಕ್ತಗರಣೆ ಕಟ್ಟಿಕೊಳ್ಳುವುದು ಬಲು ನಿಧಾನ. ಹೀಗಾಗಿ ಗಾಯದಿಂದ ರಕ್ತಸ್ರಾವವಾಗುವುದನ್ನು ರಕ್ತಗರಣೆ ತಕ್ಕಷ್ಟು ಶೀಘ್ರವಾಗಿ ಮುಚ್ಚಿ ಬಿಡುವುದಕ್ಕಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಸಣ್ಣ ಗಾಯಗಳಿಂದಲೂ ಬಹಳಷ್ಟು ಕಾಲ ರಕ್ತಸ್ರಾವವಾಗುತ್ತಲೇ ಇರುವುದಿದೆ. ಯುಕ್ತ ಕ್ರಮಗಳಿಂದ ಈ ಸ್ಥಿತಿಗಳಲ್ಲಿ ರಕ್ತಸ್ರಾವವಾಗುವುದನ್ನು ನಿಲ್ಲಿಸಬಹುದು.

ಅಗಾಧ ರಕ್ತಸ್ರಾವದ ಪರಿಣಾಮಗಳಿಗೆಲ್ಲ ಕಾರಣ ದೇಹದಲ್ಲಿನ ರಕ್ತದ ಘನಗಾತ್ರ (ಬ್ಲಡ್ ವಾಲ್ಯೂಮ್) ಕಡಿಮೆ ಆಗುವುದೇ. ಇದರ ನೇರ ಪರಿಣಾಮ ಎಂದರೆ ರಕ್ತದ ಒತ್ತಡ ಕುಸಿಯವುದು. ಇದರಿಂದ ದೇಹದ ಎಲ್ಲ ಅಂಗಗಳಿಗೆ ರಕ್ತಪೂರೈಕೆ ಕಡಿಮೆ ಆಗುತ್ತದೆ. ಪ್ರಮುಖ ಅಂಗಗಳಾದ ಮಿದುಳು. ಹೃದಯ ಹಾಗೂ ಮೂತ್ರಪಿಂಡಗಳಿಗೆ ಈ ಸಂದರ್ಭದಲ್ಲಿಯೂ ರಕ್ತ ಸಾಕಷ್ಟು ಒದಗುವಂತೆ ದೇಹದಲ್ಲಿ ತಾನಾಗಿಯೇ ವ್ಯವಸ್ಥೆಯಾಗುತ್ತದೆ. ಚರ್ಮ, ಅನ್ನನಾಳ, ಗುಲ್ಮ ಇವುಗಳಲ್ಲಿನ ರಕ್ತನಾಳಗಳು ಸಂಕುಚಿಸುವುದರಿಂದ ಅಲ್ಲೆಲ್ಲ ಪೂರೈಕೆ ಆಗುವ ರಕ್ತದಲ್ಲಿ ಉಳಿತಾಯವಾಗಿ ಅಷ್ಟುಮೊತ್ತದ ರಕ್ತ ಈ ಪ್ರಮುಖ ಅಂಗಗಳಿಗೆ ಒದಗುತ್ತದೆ. ಆದರೆ ರಕ್ತಸ್ರಾವ ಮುಂದುವರಿದು ರಕ್ತದ ಒತ್ತಡ ಇನ್ನೂ ಕುಸಿದರೆ ಪ್ರಮುಖ ಅಂಗಗಳಿಗೂ ರಕ್ತಪೂರೈಕೆಯ ಖೋತ ಉಂಟಾಗುವುದು. ಅಲ್ಲೆಲ್ಲ ಆಕ್ಸಿಜನ್ನಿನ ಕೊರತೆ ಉಂಟಾಗುವುದರಿಂದ ತೀವ್ರ ನಿಶ್ಯಕ್ತಿ ಕಾಣಬರುತ್ತವೆ. ದೇಹದಲ್ಲಿ ಉಳಿದಿರುವ ರಕ್ತದ ಮೊತ್ತ ಇನ್ನೂ ಕಡಿಮೆ ಆಗದಿರುವ ಸಲುವಾಗಿ ಮೂತ್ರೋತ್ಪತ್ತಿ ತಗ್ಗುತ್ತದೆ; ಬಾಯಿ ಒಣಗುತ್ತದೆ. ಸ್ಥಿತಿ ಇನ್ನೂ ಹದಗೆಟ್ಟರೆ ಸುಸ್ತುಧಕ್ಕೆ ಪರಿಣಮಿಸುತ್ತದೆ. ಆದ್ದರಿಂದ ರಕ್ತಸ್ರಾವವಾದ ಬಳಿಕ ಚಿಕಿತ್ಸೆ ಮಾಡಬೇಕಾದರೆ ಕಡಿಮೆ ಬಿದ್ದ ರಕ್ತದ ಮೊತ್ತವನ್ನು ಮಾಮೂಲು ಮಟ್ಟಕ್ಕೆ ಏರಿಸಬೇಕು. ಇದಕ್ಕಾಗಿ ಚುಚ್ಚುಮದ್ದಿನ ರೀತಿ 0.8% ಸೋಡಿಯಮ್ ಕ್ಲೋರೈಡ್ ದ್ರಾವಣ, ಪ್ರೋಟೀನ್ ದ್ರಾವಣ, ರಕ್ತರಸ ಪುಡಿಯ (ಪ್ಲಾಸ್ಮಪೌಡರ್) ದ್ರಾವಣ ಇಲ್ಲವೇ ವ್ಯಕ್ತಿಗೆ ಒಗ್ಗುವ ಇನ್ನೊಬ್ಬರ ರಕ್ತ ಇವನ್ನು ಕೊಡಬೇಕು.

6. ರಕ್ತ ಗರಣೆಗಟ್ಟುವಿಕೆ: ರಕ್ತಹೆಪ್ಪು ಗಟ್ಟುವಿಕೆ: ರಕ್ತ ಘನೀಕರಣ ಪರ್ಯಾಯನಾಮಗಳು (ಕ್ಲಾಟಿಂಗ್ ಆಫ್ ಬ್ಲಡ್: ಕೊಯಾಗ್ಯುಲೇಷನ್ ಆಫ್ ಬ್ಲಡ್). ಹೃದಯ ಮತ್ತು ರಕ್ತನಾಳಗಳಲ್ಲಿರುವ ರಕ್ತ ದ್ರವರೂಪದಲ್ಲಿ ಇರುವುದೆಂದೂ ಹೊರಬಂದಾಗ ಗರಣೆಗಟ್ಟುವುದೆಂದ ಹೇಳಿದೆ. ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿರುವುವು ಎರಡು. ಮೊದಲನೆಯದು. ಹೃದಯ ಹಾಗೂ ರಕ್ತನಾಳಗಳು ಭಿತ್ತಿಯ ಒಳಮೈ ರಕ್ತದಿಂದ ತೋಯದಂಥ ಅತಿ ನುಣುಪು ರಚನೆಯಿಂದ ಆಗಿರುವಿಕೆ. ಇದರಿಂದ ರಕ್ತ ಹೆಪ್ಪುಗಟ್ಟದೆ ದ್ರವರೂಪದಲ್ಲೇ ಇರುತ್ತದೆ. ಗಾಯದಿಂದಾಗಿ ರಕ್ತ ಹೊರಬಂದು ಗಾಯಸ್ಥಳವನ್ನು ತೇವಮಾಡುವುದರಿಂದ ಅದರ ದ್ರವವಾಗಿಯೇ ಇರುವ ಸ್ವಭಾವದ ಬದಲಾವಣೆ ಆಗಿ ಆ ಸ್ಥಳದಲ್ಲಿ ದ್ರವರಕ್ತ ಘನೀಕರಿಸುತ್ತದೆ. ಎರಡನೆಯದು, ದೇಹದಲ್ಲಿ ರಕ್ತ ಚಲಿಸುತ್ತಲೇ ಇರುವುದರಿಂದ ಘನೀಕರಣಕ್ಕೆ ಕಾಲಾವಕಾಶವಿರುವುದಿಲ್ಲ. ರಕ್ತ ಹೊರಬಂದಾಗ ಚಲಿಸದೆ ಸ್ಥಿರವಾಗಿರುವಾಗ ಉರಿಊತ, ಪೆಡಸಣೆ (ಅಧಿರೋಮ) ಮುಂತಾದ ಕಾರಣಗಳಿಂದ ಹೃದಯ ಹಾಗು ರಕ್ತನಾಳಗಳ ಒಳಮೈ ತರಕಲಾಗಿ ಅದನ್ನು ರಕ್ತ ಒದ್ದೆ ಮಾಡಬಲ್ಲದ್ದಾಗುತ್ತದೆ. ಜೊತೆಗೆ ಈ ಸ್ಥಿತಿಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯಾಗಬಹುದು. ರಕ್ತದಿಂದ ಒದ್ದೆ ಆಗುವ ಪ್ರಕ್ರಿಯೆಯಿಂದ ಆ ತನಕ ತಡೆಹಿಡಿಯಲ್ಪಟ್ಟಿರುವ ಒಂದು ವಿಶಿಷ್ಟ ಕ್ರಿಯಾವಿಧಾನದ ಬಿಡುಗಡೆ ಆದಂತಾಗಿ ರಕ್ತ ನಾಲ್ಕರು ಮಿನಿಟುಗಳಲ್ಲಿ ಘನೀಕರಿಸುವುದು ಸಾಧ್ಯವಾಗುತ್ತದೆ.

ರಕ್ತದಿಂದ ಒದ್ದೆಯಾಗುವ ಸ್ಥಳದಲ್ಲಿ ಮಾತ್ರ ರಕ್ತದ ಕಣಿತ್ರಗಳು (ಕಿರುತಟ್ಟೆಗಳು) ಒಂದಕ್ಕೊಂದು ಅಂಟಿಕೊಂಡು ಸಣ್ಣ ದೊಡ್ಡ ಗುಂಪುಗಳಾಗುತ್ತವೆ ಮತ್ತು ಛಿದ್ರಗೊಂಡು ನಾಶವಾಗಲು ಪ್ರಾರಂಭಿಸುತ್ತದೆ. ಗಾಯದಿಂದ ರಕ್ತನಾಳದ ಮತ್ತು ಸ್ಥಳೀಯ ಇತರ ದೇಹ ಕೋಶಗಳು ನಾಶವಾಗುವುದರಿಂದ ಬಿಡುಗಡೆಯಾದ ವಸ್ತುವೂ (ಇದಕ್ಕೆ ಅಂಗಾಂಶ ಥ್ರಾಂಬೊಪ್ಲಾಸ್ಟಿನ್ ಎಂದು ಹೆಸರು) ರಕ್ತ ಹೆಪ್ಪಾಗುವಿಕೆಯ ವಿಧಾನವನ್ನು ಪ್ರಾರಂಭಿಸಬಲ್ಲದ್ದು. ವಿಧಾನ ಹೇಗೇ ಪ್ರಾರಂಭವಾದರೂ ಅನಂತರ ಮುಂದಿನ ಘನೀಕರಣ ಪ್ರಕ್ರಿಯೆಗಳು ತಾವಾಗಿಯೇ ಮುಂದುವರಿದು ಇನ್ನೊಂದೆರಡು ಮಿನಿಟುಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಪರಿಸ್ಥಿತಿ ಹೀಗಿರುವಾಗ ರಕ್ತದಿಂದ ಒದ್ದೆ ಆಗದಂತೆ ಮೇಣ ಇಲ್ಲವೇ ಎಣ್ಣೆಯಿಂದ ಸಂಸ್ಕರಿಸಿದ ಪಿಚಕಾರಿಯ ಮೂಲಕ ಹೆಚ್ಚು ಗಾಯವಾಗದಂತೆ ಜಾಗರೂಕತೆಯಿಂದ ರಕ್ತವನ್ನು ಎಳೆದು ಹಾಗೆಯೇ ಸಂಸ್ಕರಿಸಿದ ಗಾಜಿನ ಪಾತ್ರೆಯಲ್ಲಿಟ್ಟರೆ ಆ ರಕ್ತವೂ ಗರಣೆಗಟ್ಟುವುದಿಲ್ಲ ವೇನೋ ಎನ್ನಿಸಿದರು ವಾಸ್ತವವಾಗಿ ಅದೂ ಗರಣೆಕಟ್ಟುತ್ತದೆ. ಆದರೆ ಬಲು ತಡವಾಗಿ ಮಾತ್ರ. ಇದನ್ನು ಶೈತ್ಯೀಕರಿಸಿ ಇಟ್ಟರೆ ಗರಣೆ ಕಟ್ಟುವುದು ಇನ್ನೂ ನಿಧಾನ ಒಂದೆರಡು ಗಂಟೆಗಳೇ ಆಗಬಹುದು. ರಕ್ತವನ್ನು 560ಅನಷ್ಟು ಬೆಚ್ಚಗೆ ಮಾಡಿ ಅನಂತರ ತಣಿಯಲು ಬಿಟ್ಟರೆ ಅಂಥ ರಕ್ತ ಸಾಮಾನ್ಯವಾಗಿ ಗರಣೆಗಟ್ಟುವುದೇ; ಇಲ್ಲ. ಹಾಗೆಯೇ ಸೋಡಿಯಮ್ ಸಲ್ಫೇಟ್ ಮುಂತಾದ ತಟಸ್ಥ (ನ್ಯೂಟ್ರಲ್) ಲವಣಗಳನ್ನು ಬೆರಸಿಟ್ಟರೂ ಆ ರಕ್ತ ಗರಣೆ ಕಟ್ಟುವುದಿಲ್ಲ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಕಿಣ್ವಗಳ ಪಾತ್ರವಿದೆ ಎಂದು ಇವೆರಡು ಪ್ರಯೋಗಗಳಿಂದಲೂ ತಿಳಿಯುತ್ತದೆ. ರಕ್ತಕ್ಕೆ ಸ್ವಲ್ಪ ಪೊಟ್ಯಾಸಿಯಮ್ ಆಕ್ಸಲೇಟ್ ಪುಡಿಯನ್ನೂ (ಇದು ವಿಷ, ಇಂಥ ರಕ್ತವನ್ನು ದೇಹದೊಳಕ್ಕೆ ಪುನಃ ಹುಗಿಸಬಾರದು) ಸೋಡಿಯಮ್ ಸಿಟ್ರೇಟ್ ಪ್ಮಡಿಯನ್ನೂ ಸೇರಿಸಿದರೂ ರಕ್ತ ಗರಣೆಕಟ್ಟದೆ ದ್ರವವಾಗಿಯೇ ಇರುತ್ತದೆ. ಈ ಪುಡಿಗಳಿಂದ ರಕ್ತದಲ್ಲಿ ನೈಸರ್ಗಿಕವಾಗಿ ಇರುವ ಕ್ಯಾಲ್ಸಿಯಮ್ ಲವಣಗಳು ಕ್ರಿಯಾವೈಫಲ್ಯಗೊಳ್ಳುವುದರಿಂದ ರಕ್ತ ಗರಣೆ ಕಟ್ಟಲಾರದೆಂದು ತಿಳಿದುಬಂದಿದೆ. ಅಂದರೆ ರಕ್ತ ಹೆಪ್ಪು ಗಟ್ಟುವಿಕೆಗೆ (ನೈಸರ್ಗಿಕವಾಗಿ ರಕ್ತದಲ್ಲೆ ಇರುವ) ಕ್ಯಾಲ್ಸಿಯಮ್ ಅಯಾನ್‍ಗಳು ಅಗತ್ಯವೆನ್ನುವುದು ತಿಳಿಯುತ್ತದೆ.

ಒಂದು ತೊಟ್ಟು ರಕ್ತವನ್ನು ಗಾಜಿನ ಫಲಕದ ಮೇಲೆ ಇಟ್ಟು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸುತ್ತಿದ್ದರೆ, ರಕ್ತದ ಕಣಿತ್ರಗಳು ಅಲ್ಲಲ್ಲಿ ಗುಂಪುಗಳಾಗುವುದನ್ನೂ ಶೀಘ್ರದಲ್ಲೇ ಅವು ನಶಿಸುವುದನ್ನೂ ನೋಡಬಹುದು. ಇಂಥ ಸ್ಥಳಗಳಿಂದ ತೆಳುವಾಗಿ ನೆಟ್ಟಗೆ ಸೂಜಿಯಂತಿರುವ ಎಳೆಗಳು ಉದ್ಭವಿಸಿ ಎಲ್ಲ ದಿಕ್ಕಿನಲ್ಲು ಚಾಚಿಕೊಳ್ಳುವುದನ್ನೂ ಅವು ನೆರೆಗುಂಪುಗಳಿಂದ ಉದ್ಭವಿಸಿದ ಎಲೆಗಳೊಡನೆ ಸೇರಿಕೊಳ್ಳುವುದನ್ನೂ ಶೀಘ್ರದಲ್ಲೇ ಗಮನಿಸಬಹುದು. ಎಳೆಗಲ ಜಾಲರಿಯಲ್ಲಿ ರಕ್ತಕಣಗಳು ಸಿಕ್ಕಿಕೊಂಡಿರುವುದನ್ನೂ ವೀಕ್ಷಿಸಬಹುದು. ಈ ಸಮಯದಲ್ಲಿ ಗಾಜಿನ ಫಲಕವನ್ನೂ ಅತ್ತಿತ್ತ ಸರಿಸಿದರೆ ರಕ್ತದ ತೊಟ್ಟು ಅಲುಗಾಡದೆ ಗಟ್ಟಿಗೊಂಡುಬಿಟ್ಟಿರುತ್ತದೆ. ಫಲಕವವನ್ನು ಇನ್ನೂ 1/2 - 1 ಗಂಟೆ ಹಾಗೆಯೇ ಇಟ್ಟಿದ್ದರೆ ರಕ್ತದ ಹೆಪ್ಪು ಕುಗ್ಗಿ ಸಣ್ಣ ಗಂಟಿನಂತಾಗಿರುವುದೂ ಗಂಟಿನ ಸುತ್ತ ನೀರಿನಂತಿರುವ ದ್ರವ ಒಸರಿರುವುದೂ ಕಾಣಬರುತ್ತದೆ. ಈ ದ್ರವಕ್ಕೆ ರಕ್ತಲಸಿಕೆ (ಸೀರಮ್) ಎಂದು ಹೆಸರು. ಮೇಲಿನ ಪ್ರಯೋಗಕ್ಕೆ ಆಲ್ಕೋಹಾಲಿನಿಂದ ಶುದ್ಧಿಮಾಡಿದ ಬೆರಳನ್ನು ಅದೇ ರೀತಿ ಶುದ್ಧ ಮಾಡಿದ ಸೂಜಿಯಿಂದ ಚುಚ್ಚು ಫಲಕದ ಮೇಲೆ ರಕ್ತದ ತೊಟ್ಟನ್ನು ಪಡೆಯುವುದು ವಾಡಿಕೆ. ಹೀಗೆ ಚುಚ್ಚಿದಾಗ ರಕ್ತ ಹೊರಬಂದಾಗಿನಿಂದ ರಕ್ತದ ಘನೀಕರಣ ಅವಧಿಯನ್ನು (ಕೊಯಾಗ್ಯುಲೇಷನ್ ಟೈಮ್; ಕ್ಲಾಟಿಂಗ್ ಟೈಮ್) ಗೊತ್ತುಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಇದು 4 - 8 ಮಿನಿಟುಗಳು ಇಷ್ಟಕ್ಕಿಂತ ಕಡಿಮೆ ಅಥವಾ ಹೆಚ್ಚಾಗಿದ್ದರೆ ತೊಂದರೆ ಉಂಟಾಗುತ್ತದೆ. ಕಡಿಮೆ ಆಗಿದ್ದರೆ ದೇಹದ ಒಳಗೇ ರಕ್ತ ಹೆಪ್ಪುಗಟ್ಟಿಕೊಳ್ಳುವ ಸಂಬವದ ಸೂಚನೆ; ಅವಧಿಯನ್ನು ಶಸ್ತ್ರಕ್ರಿಯೆಗೆ ಮುಂಚೆ ನಿರ್ಧಾರಮಾಡಿಕೊಳ್ಳುವುದಿದೆ. ಈ ಅವಧಿಯನ್ನು ನಿರ್ಧರಿಸಲು ಬೇರೆ ಬೇರೆಯ ಹಾಗೂ ನಾಜೂಕಾದ ವಿಧಾನಗಳನ್ನೂ ಅನುಸರಿಸುತ್ತಾರೆ.

ರಕ್ತ ಹೆಪ್ಪುಗಟ್ಟುವುದಕ್ಕೆ ಪ್ರಾಥಮಿಕ ಕಾರಣ ರಕ್ತದ ದ್ರವಭಾಗದಲ್ಲಿ (ಪ್ಲಾಸ್ಮ) ಲೀನವಾಗಿರುವ ಫೈಬ್ರಿನೋಜೆನ್ ಎಂಬ ಪ್ರೋಟೀನು (ಸುಮಾರು 100 ಮಿಲಿ ರಕ್ತದಲ್ಲಿ 0.2 ಗ್ರಾಮ್ ನಷ್ಟಿರುತ್ತದೆ) ಫೈಬ್ರಿನ್ ಎಂಬ, ಲೀನವಾಗದ, ಪ್ರೋಟೀನಾಗಿ ರೂಪಾಂತರಗೊಳ್ಳುವುದು. ಹೆಪ್ಪುಗಟ್ಟುತ್ತಿರುವುದನ್ನು ಸೂಕ್ಷ್ಮದರ್ಶಕದ ಕೆಳಗೆ ವೀಕ್ಷಿಸುವಾಗ ಕಾಣಬರುವ ಸೂಜಿಯಂಥ ಎಳೆಗಳೇ ಫೈಬ್ರಿನ್. ರಕ್ತ ಗರಣೆಯ ಗಟ್ಟಿಯಲ್ಲಿ ಇದೂ ರಕ್ತಕಣಗಳೂ (ರಕ್ತದ ರಚಿತವಸ್ತು ಭಾಗ, ಫಾರಮ್ ಎಲಿಮೆಂಟ್ಸ್) ಇರುತ್ತವೆ. ರಕ್ತಲಸಿಕೆ ರಕ್ತದ್ರವದ ಉಳಿದ ಘಟಕಗಳನ್ನು ಹೊಂದಿದ್ದು ಅವೆರಡಕ್ಕೂ ಇರುವ ವ್ಯತ್ಯಾಸ ಎಂದರೆ ರಕ್ತದ್ರವದಲ್ಲಿ ಫೈಬ್ರಿನೋಜೆನ್ ಇರುವುದು. ಲಸಿಕೆಯಲ್ಲಿ ಅದಿಲ್ಲದಿರುವುದು ಅಷ್ಟೆ. ಗರಣೆ ಕಟ್ಟಲು ಫೈಬ್ರಿನೋಜೆನ್ ಫೈಬ್ರಿನ್ನಾಗಿ ಪರಿವರ್ತಿತವಾಗುವುದೇ ಮುಖ್ಯ ಕಾರಣವಾಗಿರುವುದರಿಂದ ರಕ್ತವಷ್ಟೇ ಅಲ್ಲದೆ ಬರಿ ರಕ್ತದ್ರವ ಕೂಡ ಗರಣೆ ಕಟ್ಟುವುದು ವ್ಯಕ್ತ.

ಇಲ್ಲಿ ಹೇಳಿರುವ ಪರಿವರ್ತನೆಗೆ ಥ್ರಾಂಬಿನ್ ಎಂಬ ಕಿಣ್ವ ಕಾರಣ. ಇದರ ಜನಕ ವಸ್ತು ಪ್ರೋಥ್ರಾಬಿನ್ ಎಂಬ ಪ್ರೋಟೀನು ರಕ್ತದಲ್ಲಿ ನೈಸರ್ಗಿಕವಾಗಿ ಆದರೆ. ಕಿಂಚಿತ್ತಾಗಿ (0.03%) ಇರುತ್ತದೆ. ಇದು ಥ್ರಾಂಬಿನ್ನಾಗಿ ಪರಿವರ್ತಿತವಾಗಬೇಕಾದರೆ ಥ್ರಾಂಬೊಪ್ಲಾಸ್ಟಿನ್‍ಗಳು ಮತ್ತು ಕ್ಯಾಲ್ಸಿಯಮ್ ಅಯಾನುಗಳು ಅಗತ್ಯ. ರಕ್ತದಲ್ಲಿ ನೈಸರ್ಗಿಕವಾಗಿ ಕ್ಯಾಲ್ಸಿಯಮ್ ಅಯಾನ್‍ಗಳು ಇರುವುದಾದರೂ ಥ್ರಾಂಬೊಪ್ಲಾಸ್ಟಿನ್‍ಗಳು ಇರುವುದಿಲ್ಲ. ಆದ್ದರಿಂದಲೇ ಪರಿಚಲನೆಯನ್ನು ರಕ್ತ ಗರಣೆಕಟ್ಟುವುದಿಲ್ಲ. ಗಾಯದಿಂದ ಹೊರಬಂದು ಸ್ಥಳವನ್ನು ಒದ್ದೆ ಮಾಡಿದಾಗ ಕಣಿತ್ರ ಹಾಗೂ ನಶಿಸಿದ ದೇಹಕೊಶಗಳಿಂದ ಥ್ರಾಂಬೊಪ್ಲಾಸ್ಟಿನ್‍ಗಳು ಉದ್ಭವವಾಗುವುದರಿಂದ ಹೊರಬಿದ್ದ ರಕ್ತ ಮಾತ್ರವೇ ಗರಣೆ ಕಟ್ಟಬಲ್ಲದು ಎಂಬುದು ಸ್ವಯಂವೇದ್ಯ.

ಥ್ರಾಂಬೊಪ್ಲಾಸ್ಟಿನ್‍ಗಳಲ್ಲದೆ ರಕ್ತದ್ರವದಲ್ಲಿ, ದೇಹಕೋಶಗಳ ಲಯದಿಂದ ಇನ್ನೂ ಅನೇಕ ವಸ್ತುಗಳು ಬಿಡುಗಡೆಯಾಗುತ್ತವೆ ಮತ್ತು ರಕ್ತಗರಣೆ ಕಟ್ಟಲು ಇವು ಅತ್ಯಾವಶ್ಯಕ ಎಂದು ಬಲು ಹಿಂದಿನ ಕಾಲದ ವ್ಯಾಸಂಗಗಳಿಂದಲೇ ಪತ್ತೆ ಆಗಿದೆ. ಪತ್ತೆ ಆದ ಹೊಸದರಲ್ಲಿ ವಿವಿಧ ಸಂಶೋಧಕರು ಈ ಘಟಕಗಳಿಗೆ ವಿವಿಧ ಹೆಸರುಗಳನ್ನು ಇಟ್ಟಿದ್ದು ವಿವರಣೆಗಳು ಗೊಂದಲಮಯವಾಗಿದ್ದವು. ಆದ್ದರಿಂದ ಈಚೆಗೆ (1964) ಘನೀಕರಣದಲ್ಲಿ ಭಾಗವಹಿಸಿರುವ ಘಟಕಗಳೆಲ್ಲ ಅನುಕ್ರಮವಾಗಿ ಘಟಕ 1, ಘಟಕ 2, ಇತ್ಯಾದಿ ಹೆಸರಿಡಬೇಕೆಂದು ನಿರ್ಧರಿಸಲಾಗಿದೆ (ಕೊಯಾಗ್ಯುಲೇಷನ್ ಫ್ಯಾಕ್ಟರ್ 1,2 ಇತ್ಯಾದಿ). ಇದರಂತೆ ಫೈಬ್ರಿನೊಜೆನ್ ಘಟಕ 1, ಪ್ರೊಥ್ರಾಂಬಿನ್ ಘಟಕ 2, ಥ್ರಾಂಭೋಪ್ಲಾಸ್ಟಿನ್ ಘಟಕ 3, ಕ್ಯಾಲ್ಸಿಯಮ್ ಅಯಾನ್‍ಗಳ ಘಟಕ 4, ಇವು ಮೊದಲಿನಿಂದಲೂ ಗೊತ್ತಿದ್ದಂತೆ ರಕ್ತ ಘನೀಕರಣದಲ್ಲಿ ಭಾಗವಹಿಸುವ ಘಟಕಗಳು, 5 ನೆಯ ಘಟಕಕ್ಕೆ ಆಕ್ಸಲರಿನ್ (ತ್ವರಿತಗೊಳಿಸುವ ಗ್ಲಾಬ್ಯುಲಿನ್) ಎಂಬುದು ಹಳೆ ಹೆಸರು. ಇದು ರಕ್ತದ್ರವದಲ್ಲಿ ಸಾಮಾನ್ಯವಾಗಿ ಇರುವ ಘಟಕವೇ. ಆದರೆ ಹರಿಯುತ್ತಿರುವ ರಕ್ತದಲ್ಲಿ ಇದು ಜಡಪದಾರ್ಥವಾದ ಪ್ರೊಆಕ್ಸೆಲರಿನ್ ಎಂದಾಗಿತ್ತೆಂದೂ ರಕ್ತ ಘನೀಕರಣ ಸಮಯದಲ್ಲಿ ಚುರುಕುಗೊಂಡು ಆಕ್ಸೆಲರಿನ್ ಆಗುತ್ತೆಂದೂ ಆದ್ದರಿಂದ ಇವೆರಡಕ್ಕೆ ಘಟಕ 5 ಮತ್ತು 6 ಎಂದು ಹೆಸರಿಸಬೇಕೆಂದೂ ಇತ್ತು. ಆದರೆ ಅನಂತರ ರಕ್ತದ್ರವದಲ್ಲಿ ನೈಸರ್ಗಿಕವಾಗಿರುವ 5 ನೆಯ ವಸ್ತುವೇ ಚುರುಕಾಗಿರುವುದೆಂದೂ ಅದೇ 6 ನೆಯ ಘಟಕವಾಗಿ ವರ್ತಿಸುವುದೆಂದೂ ತಿಳಿದುಬಂದು ಪ್ರೊಆಕ್ಸೆಲರಿನ್ ಎಂಬುದೂ 6 ನೆಯ ಘಟಕ ಎಂಬುದು ಕೈಬಿಡಲ್ಪಟ್ಟವು. ಪ್ರಾರಂಭವಾದ ರಕ್ತ ಘನೀಕರಣವನ್ನು 5 ನೆಯ ಘಟಕ ಅತಿತ್ವರಿತವಾಗಿ ಮುಂದುವರಿಯುವಂತೆ ಮಾಡುತ್ತದೆ. ಅಲ್ಲದೆ ಈ ಸಮಯದಲ್ಲಿ ಹೇಗೋ ಬಳಸಲ್ಪಟ್ಟು ಬಿಡುತ್ತದೆ. ಆದ್ದರಿಂದ ಗರಣೆಗಟ್ಟಿಯಲ್ಲಾಗಲಿ ರಕ್ತಲಸಿಕೆಯಲ್ಲಾಗಲಿ ಇದು ಇರುವುದಿಲ್ಲ. ಜೊತೆಗೆ ರಕ್ತವನ್ನು ಬೆಚ್ಚಗೆ ಮಾಡಿದರೆ (560 ಅ) ಇಲ್ಲವೇ ಸಿಟ್ರೇಟ್ ಸೇರಿಸಿ ಶೈತ್ಯದಲ್ಲಿ ಸ್ವಲ್ಪಹೊತ್ತು ಇಟ್ಟಿದ್ದರೆ ತಾನಾಗಿಯೇ ನಾಶವಾಗಿಬಿಡುತ್ತದೆ. ಆದ್ದರಿಂದ 5 ನೆಯ ಘಟಕಕ್ಕೆ ಅಸ್ಥಾಯಿಘಟಕ (ಲೆಬೈಲ್ ಫ್ಯಾಕ್ಟರ್) ಎಂದೂ ಹೆಸರಿದೆ. ಹೀಗೆ 5 ನೆಯ ಘಟಕ ನಾಶವಾಗಿರುವ ರಕ್ತ ಗರಣೆ ಕಟ್ಟದು. ಆದರೆ ಇದಕ್ಕೆ ತೀರ ಕೊಂಚವೇ ಹೊಸ ರಕ್ತವನ್ನು ಬೆರಸಿದರೆ, ಅರ್ಥಾತ್, ಲವಲೇಶದಷ್ಟು 5 ನೆಯ ಘಟಕವನ್ನು ಸೇರಿಸಿದರೆ ಇದೂ ಮಾಮೂಲಿನಂತೆ ಹೆಪ್ಪುಗಟ್ಟಬಲ್ಲದು.

7 ನೆಯ ಘಟಕದ ಮೂಲ ಹೆಸರು ಪ್ರೊಕನ್‍ವರ್‍ಟಿನ್, ಎಸ್, ಪಿ, ಸಿ. ಎ., ಸಾಕ್ಷಾತ್ ಕನ್‍ವರ್‍ಟಿನ್ ಎಂದೆಲ್ಲ ವ್ಯವಹರಿಸುವುದಿತ್ತು. ಇದೂ ರಕ್ತದ್ರವದಲ್ಲಿರುವ ಆದರೆ ಸ್ಥಿರವಾದ (ಸ್ಟ್ರಾಬಲ್) ಘಟಕ. 8 ನೆಯ ಘಟಕಕ್ಕೆ ಆಂಟಿ ಹೀಮೋಫೀಲಿಕ್ ಗ್ಲಾಬ್ಯುಲಿನ್ (ಹೀಮೋಫೀಲಿಯ ರೋಗನಿವಾರಕ ಗ್ಲಾಬ್ಯುಲಿನ್; ಎ. ಎಚ್. ಜಿ.) ಎಂಬ ಪ್ರೋಟಿನ್ ವಸ್ತು. ಇದು ರಕ್ತದ್ರವದಲ್ಲಿ ಸಹಜವಾಗಿ ಇರುತ್ತದೆ. ಆದರೆ ಹೀಮೋಫೀಲಿಯ ರೋಗಿಗಳಲ್ಲಿ ಇದು ಒಂದು ವಿಶಿಷ್ಟ ರೀತಿಯ ಅನುವಂಶಿಕ ಗುಣವಾಗಿ ಆ ಜನ್ಮಲೋಪವಾಗಿರುತ್ತದೆ. ಆದ್ದರಿಂದ ಇವರ ರಕ್ತಘನೀಕರಿಸಲಾರದೆ ಅಲ್ಪ ಗಾಯಗಳಿಂದಲೂ ಅಗಾಧವಾಗಿ ಹೆಚ್ಚು ಕಾಲ ರಕ್ತಸ್ರಾವವಾಗುತ್ತಲೇ ಇರುತ್ತದೆ. ಸಹಜವಾಗಿ ಇರಬೇಕಾದ ಈ ಘಟಕ ಇದ್ದದ್ದೇ ಅದರ ವ್ಯಕ್ತಿ ಹೀಮೋಫೀಲಿಯಕ್ಕೆ ಈಡಾಗುವುದಿಲ್ಲವಾದ್ದರಿಂದ ಇದಕ್ಕ ಎ. ಚ್. ಜಿ. ಎಂದು ಹೆಸರಿಸಿದ್ದಾಗಿದೆ. ಇದೂ 5 ನೆಯ ಘಟಕದಂತೆ ರಕ್ತಗರಣೆ ಕಟ್ಟಿದಾಗ ನಾಶವಾಗಿ ಹೋಗುತ್ತದೆ. ಆದ್ದರಿಂದ ಘನೀಕರಣಾನಂತರ ವಸ್ತುಗಳಲ್ಲಿ ಇದು ಇರುವುದಿಲ್ಲ. 9 ನೆಯ ಘಟಕಕ್ಕೆ ಕ್ರಿಸ್‍ಮಸ್ ಫ್ಯಾಕ್ಟರ್ ಎಂದಿತ್ತು. ಕ್ರಿಸ್‍ಮಸ್ ಎಂಬ ವ್ಯಕ್ತಿಯಲ್ಲಿ ಈ ಘಟಕ ಹೇಗೋ ಲೋಪವಾಗಿದ್ದು ಹೀಮೋಫೀಲಿಯದಂಥ ರೋಗದ (ಆದರೆ ನಿಜವಾಗಿ ಹೀಮೋಫೀಲಿಯ ಅಲ್ಲದೆ) ಕಾರಣವಾಗಿದ್ದುದೆಂದು ತಿಳಿದು ಬಂದು ಈ ಘಟಕಕ್ಕೆ ಸ್ಟೂವರ್ಟ್‍ಪ್ರೋವರ್ ಫ್ಯಾಕ್ಟರ್ ಎಂದು ಹೆಸರಿತ್ತು. ಹೀಗೆಯೇ 11, 12, 13, 14ನೆಯ ಘಟಕಗಳ ಆವಿಷ್ಕಾರವೂ ಆಗಿದೆ. ಇವುಗಳೆಲ್ಲ ಪ್ರೊಥ್ರಾಂಬಿನ್ - ಥ್ರಾಂಬೊಪ್ಲಾಸ್ಟಿನ್‍ಗಳನ್ನು ಚುರುಕುಗೊಳಿಸಿ ರಕ್ತ ಬೇಗ ಗರಣೆಗಟ್ಟುವಂತೆ ಮಾಡುವುವು. 5 ನೆಯ ಮತ್ತು 8 ನೆಯ ಘಟಕಗಳನ್ನು ಬಿಟ್ಟು ಮಿಕ್ಕೆಲ್ಲವೂಗರಣೆಯಲ್ಲೊ ರಕ್ತಲಸಿಕೆಯಲ್ಲೋ ಇದ್ದೆ ಇರುವುದರಿಂದ ಅವುಗಳೆಲ್ಲ ಕಿಣ್ವಗಳಂತೆ ವರ್ತಿಸುತ್ತವೆ ಎಂದು ನಿರ್ಧರಿಸಲಾಗಿದೆ. ಒಂದು ಘಟಕ ಇನ್ನೊಂದು ಘಟಕದೊಡನೆ (ಘಟಕದ ಅಂಕಿಗೆ ಅನುಸಾರವಾಗಿ ಅಲ್ಲ) ಒಂದು ಕ್ರಮ ಅನುಸರಿಸಿ ವರ್ತಿಸುತ್ತದೆ. ಇದರಿಂದ ಹೊಸ ವಸ್ತು ಕ್ಷಣಿಕವಾಗಿ ಉತ್ಪನ್ನವಾಗಿ ಅದು ಮತ್ತೊಂದು ಘಟಕದೊಡನೆ ಕ್ರಮಶಃ ವರ್ತಿಸುತ್ತದೆ. ಕೊನೆಗೊ ಥ್ರಾಂಬೊಪ್ಲಾಸ್ಟಿನ್ ಚುರುಕಾಗಿ (ಇದಕ್ಕೆ ಹಲವು ಸೆಕೆಂಡುಗಳು, ಗರಿಷ್ಠ 2 - 3 ಮಿನಿಟುಗಳು ಬೇಕು) ಪ್ರೊಥ್ರಾಂಬಿನನ್ನು ಥ್ರಾಂಬಿನ್ನಾಗಿ ಪರಿವರ್ತಿಸುತ್ತದೆ. ಕೂಡಲೇ ಇದ ಪೈಬ್ರಿನೊಜೆನ್ನನ್ನು ಫೈಬ್ರಿನ್ನಾಗಿ ಮಾಡಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಇವೆಲ್ಲ ಒಟ್ಟು 4 - 6 ಮಿನಿಟುಗಳಲ್ಲಿ ಮುಗಿಯುವ ಕ್ರಿಯೆ. ಕಣಿತ್ರದ ಲಯದ ಫಲವಾದ ಥ್ರಾಂಬೊಪ್ಲಾಸ್ಟಿನ್ನಿನ ಚುರುಕುಗೊಳಿಕೆಗೆ 7ನೆಯ ಘಟಕ ಬಿಟ್ಟು ಮಿಕ್ಕೆಲ್ಲವೂ ಅಗತ್ಯವೆಂದೂ ಸಾಮಾನ್ಯ ಕೋಶಲಯದ ಫಲವಾದ ಥ್ರಾಂಬೊಪ್ಲಾಸ್ಟಿನ್ನಿನ ಚುರುಕುಗೊಳಿಕೆಗೆ 8 ಮತ್ತು 9 ನೆಯ ಘಟಕಗಳು ಬೇಕಿಲ್ಲವೆಂದೂ ತಿಳಿದಿದೆ. ಥ್ರಾಂಬೊಪ್ಲಾಸ್ಟಿನ್ನಿನ ಈ ಸಕ್ರಮ ಚುರುಕುಗೊಳಿಕೆಯ ಕೆಲವು ಹಂತಗಳಲ್ಲಿ ಕ್ಯಾಲ್ಸಿಯಮ್ ಅಯಾನುಗಳ ಅಗತ್ಯವಿದೆ ಎಂದೂ ವ್ಯಕ್ತವಾಗಿದೆ.

ರಕ್ತಘನೀಕರಣದಿಂದ ಉದ್ಭವಿಸುವ ರೋಗಗಳು: ವಿವಿಧ ಘಟಕಗಳ ಕೊರತೆಯಿಂದಾಗಿ ರಕ್ತ ಗರಣೆ ಕಟ್ಟುವುದು ತಡವಾಗಬಹುದು. ಗರಣೆ ಕಟ್ಟದೆ ಹೋಗಬಹುದು. ಇದರ ಪರಿಣಾಮ ರಕ್ತಸ್ರಾವವಾದಾಗ (ರಕ್ತ ಹೆಪ್ಪುಗಟ್ಟಿ ಸ್ರಾವ ನಿಂತುಕೊಳ್ಳುವುದು ಸಾಧ್ಯವಾಗದೆ) ಅದು ಹೆಚ್ಚು ಹೊತ್ತು ಮುಂದುವರಿಯುತ್ತದೆ. ಕೊರತೆ ಘಟಕಗಳನ್ನು ಪೂರೈಕೆಮಾಡಿ ಇವುಗಳನ್ನು ಚಿಕಿತ್ಸಿಸಬೇಕು. ಹೀಮೋಫೀಲಿಯ ಮತ್ತು ಕ್ರಿಸ್‍ಮಸ್ ರೋಗಗಳ ವಿಚಾರ ಈ ಹಿಂದೆ ಹೇಳಿದೆ. ಪರ್‍ಪ್ಯುರ ಎಂಬುದು ಇನ್ನೊಂದು ರೋಗ. ಇದರಲ್ಲಿ ರಕ್ತದ ಕಣಿತ್ರಗಳು ಅತಿ ಕಡಿಮೆ ಸಂಖ್ಯೆಯಲ್ಲಿ ಒಂದು (ಘನಮಿಮೀ ರಕ್ತದಲ್ಲಿ 1 ಲಕ್ಷಕ್ಕೂ ಕಡಿಮೆ) ಇರುತ್ತದೆ. ಆದ್ದರಿಂದ ಲೋಮನಾಳಗಳ ನಿರಂತರವಾದ ಮಾಮೂಲು ಜಖಮ್ಮಿನಲ್ಲಿ ಕಿಂಚಿತ್ತಾಗಿ ಒಸg ಬಹುದಾದ ರಕ್ತ ವ್ಯರ್ಥವಾಗುವಷ್ಟು ಹೊರಬರುತ್ತದೆ. ಲೋಮನಾಳಗಳಿಂದಲೇ ಆಗುವ ಈ ರಕ್ತಸ್ರಾವ ಎಷ್ಟೆಂದರೂ ಕಡಿಮೆಯೇ ಆಗಿದ್ದು ಮುಖ್ಯವಾಗಿ ಚರ್ಮದ ಅಡಿಯಲ್ಲಿ ನೀಲಿ, ಹಸುರು ಮುಂತಾದ ಬಣ್ಣದ ಮಚ್ಚೆಗಳಾದಂತೆ ಕಾಣಿಸುತ್ತದೆ. ರಕ್ತಕಣಿತ್ರಗಳ ಪೂರೈಕೆಯಿಂದ ಪರ್‍ಪ್ಯುರವನ್ನು ಚಿಕಿತ್ಸಿಸುವುದಿದೆ.

ಕಾರಣಾಂತರಗಳಿಂದ ಪ್ರೋಥ್ರಾಂಬಿನ್ ಕೊರತೆ ತಲೆದೋರುವ ಸ್ಥಿತಿಗಳನ್ನು ವಿಶಿಷ್ಟವಾಗಿ ಗಮನಿಸಬೇಕು. ಸ್ವಾಭಾವಿಕವಾಗಿ ಪ್ರೋಥ್ರಾಂಬಿನ್ ಯಕೃತ್ತಿನಲ್ಲಿ ಉತ್ಪತ್ತಿ ಆಗುವ ಪ್ರೋಟೀನು. ಆದರೆ ಈ ಕ್ರಿಯೆಗೆ ಞ ವೈಟಮಿನ್ನು ಅತ್ಯಗತ್ಯ. ಞ ವೈಟಮಿನ್ನಿನ ಅಭಾವದಿಂದ ಪ್ರೋಥ್ರಾಂಬಿನ್ನಿನ ಉತ್ಪತ್ತಿಗೆ ಧಕ್ಕೆಯಾಗಿ, ರಕ್ತಘನೀಕರಿಸಲಾರದೆ ಗಾಯದಿಂದ ಅತಿಯಾಗಿ ರಕ್ತಸ್ರಾವವಾಗುವುದಿದೆ. ರಕ್ತ ನ್ಯೂನ್ಯತೆಯಿಂದ ಸಾಮಾನ್ಯವಾಗಿ ಞ ವೈಟಮಿನ್ನಿನ ಕೊರತೆ ಉಂಟಾಗುವುದು ಅಪರೂಪವಾದರೂ ಕಾಮಾಲೆ ರೋಗದಲ್ಲಿ ಈ ಕೊರತೆ ಉಂಟಾಗುವುದು ಸಾಮಾನ್ಯ. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಕಾಮಾಲೆ ರೋಗದಲ್ಲಿ ಪಿತ್ತರಸ ಕರುಳನ್ನು ಸೇರಲಾರದು. ಪಿತ್ತರಸದ ಅಭಾವಸ್ಥಿತಿಯಲ್ಲಿ ಆಹಾರದಲ್ಲಿರುವ ಞ ವೈಟಮಿನ್ನು ಕರುಳಿನಲ್ಲಿ ರಕ್ತಗತವೇ ಆಗುವುದಿಲ್ಲ. ತತ್ಫಲವಾಗಿ ವೈಟಮಿನ್ ಕೊರತೆ, ಪ್ರೊಥ್ರಾಂಬಿನ್ ಕೊರತೆ ಹಾಗೂ ರಕ್ತ ಘನೀಕರಣದ ಎಡವಟ್ಟುಗಳು ಕಂಡುಬರುತ್ತವೆ.

ಅಪರೂಪವಾಗಿ ರಕ್ತ ಮಾಮೂಲಿಗಿಂತ ಬಲು ಬೇಗನೇ ಗರಣೆ ಕಟ್ಟಿಕೊಳ್ಳುವ ಸ್ವಭಾವದ್ದಾಗಿ ಇರುವ ಸಂಭವವೂ ವ್ಯಕ್ತ. ಹೀಗಿದ್ದಾಗ ಹೃದಯ ಹಾಗೂ ರಕ್ತನಾಳಗಳ ಒಳಗೇ ರಕ್ತ ಗರಣೆ ಕಟ್ಟಿಕೊಳ್ಳಬಹುದು. ಆಗ ರಕ್ತಪರಿಚಲನೆಗೆ ಅಡ್ಡಿಯಾಗಿ ಅಂಗಾಂಗಗಳ ರಕ್ತಪೂರೈಕೆಗೆ ಧಕ್ಕೆಯಾಗುತ್ತದೆ. ಗರಣೆಯ ಒಂದು ತುಣುಕು ರಕ್ತಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ದೇಹದಲ್ಲಿ ಎಲ್ಲಿಯೋ ಕಿರಿ ಅಪಧಮನಿ ಒಂದರಲ್ಲಿ ಸಿಕ್ಕಿಕೊಂಡು ಅಲ್ಲಿಂದ ಮುಂದೆ ಹೋಗಲಾರದೆ ಆ ಅಪಧಮನಿಯಲ್ಲಿ ರಕ್ತ ಹೋಗದಂತೆ ತಡೆದುಬಿಡಬಹುದು. ಹೃದಯದಲ್ಲಿ ಈ ರೀತಿ ಆದರೆ ಹೃದಯಾಘಾತವಾಗುತ್ತದೆ. ಮಿದುಳಿನಲ್ಲಿ ಈ ರೀತಿ ಅದರ ಪಕ್ಷಪಾತ ತಲೆದೋರುತ್ತದೆ. ಈ ಸ್ಥಿತಿಗಳು ಮಾರಕವೂ ಆಗುವ ಸಂಭವ ಗಣನೀಯವಾಗಿಯೇ ಇದೆ. ಬೇರೆ ಸ್ಥಳಗಳಲ್ಲೂ ಇಂಥ ಅಡಚಣೆಯಿಂದ ರಕ್ತಪೂರೈಕೆ ಆಗದ ಭಾಗ ಮೃತಿಹೊಂದುವುದು ವ್ಯಕ್ತ. ಈ ಪ್ರಮೇಯವನ್ನು ತಪ್ಪಿಸಬೇಕಾದರೆ ರಕ್ತ ಹೆಪ್ಪುಗಟ್ಟುವ ಸಾಮಥ್ರ್ಯವನ್ನೇ ತಡೆಗಟ್ಟಬಹುದು. ಇದಕ್ಕಾಗಿ ಕ್ಯಾಲ್ಸಿಯಮ್ ಸಿಟ್ರೇಟನ್ನು ಔಷಧವಾಗಿ ಬಳಸುವುದಿದೆ. ಹೆಪಾರಿನ್ ಎಂಬ ರಾಸಾಯನಿಕ ಇನ್ನೊಂದು ಈ ಬಗೆಯದು. ಇದನ್ನು ಚುಚ್ಚುಮದ್ದಾಗಿ ಕೊಡಬೇಕಾಗುತ್ತದೆ. ಇದು ದೇಹದ ಅನೇಕ ಅಂಗಗಳಲ್ಲಿರುವ ಬಹಶಃ ರಕ್ತದಲ್ಲೂ ಇರುವ ಮಾಸ್ಟ್‍ಕೋಶಗಳಲ್ಲಿ ಉತ್ಪತ್ತಿ ಆಗುತ್ತಿದ್ದು ಕಿಂಚಿತ್ತಾಗಿ ರಕ್ತಕ್ಕೆ ಬಿಡುಗಡೆ ಆಗುತ್ತಿರುವ ರಾಸಾಯನಿಕ. ಕಾರಣಾಂತರಗಳಿಂದ ಪರಿಚಲಿಸುತ್ತಿರುವ ರಕ್ತದಲ್ಲಿ ಆಕಸ್ಮಾತ್ತಾಗಿ ಕೊಂಚ ಥ್ರಾಂಬಿನ್ ಉತ್ಪತ್ತಿ ಆಗಬಹುದು. ಆಗ ಅಲ್ಲೆ ರಕ್ತ ಗರಣೆ ಕಟ್ಟಿಕೊಳ್ಳುವುದನ್ನು ಈ ಹೆಪಾರಿನ್ ಬಹುಶಃ ತಪ್ಪಿಸುತ್ತದೆ. ಅರ್ಥಾತ್, ದೇಹದಲ್ಲಿ ಸ್ವಾಭಾವಿಕವಾಗಿ ರಕ್ತಗರಣೆ ಕಟ್ಟಿಕೊಳ್ಳದಂತೆ ತಡೆದು, ಪರಿಚಲಿಸುತ್ತಿರುವ ಅನುಕೂಲವಾಗುವಂತೆ ಅದನ್ನು ದ್ರವರೂಪದಲ್ಲೇ ಇರುವಂತೆ ಕಾಪಾಡಲು ಹೆಪಾರಿನ್ನೂ ಬಹುಶಃ ಒಂದು ಕಾರಣ. ಪರಿಚಲನೆಯಲ್ಲಿ ರಕ್ತ ಗರಣೆಕಟ್ಟಕೊಂಡು ಮಾರಕವೇ ಆಗಬಹುದಾದ ತೊಂದರೆಯನ್ನೂ ನಿವಾರಿಸಲು ಬಳಸುವ ಇನ್ನೊಂದು ಔಷಧ ಡೈಕೊಮಾರಿನ್ ಎಂಬುದು. ಕೆಟ್ಟುಹೋದ ಹಸುರು ಮೇವಿನಿಂದ ಈ ವಸ್ತುವನ್ನು ಮೊದಲು ಬೇರ್ಪಡಿಸಿದ್ದು ಅನಂತರ ಇದನ್ನು ಸಂಯೋಜಿಸಲಾಗಿದೆ. ಇದನ್ನು ಕೊಟ್ಟಾಗ ದೇಹದಲ್ಲಿ ಪ್ರೊಥ್ರಾಂಬಿನ್ನಿನ ಉತ್ಪತ್ತಿ ಸ್ಥಗಿತವಾಗಿ ಥ್ರಾಂಬಿನ್ನಿನ ಉತ್ಪತ್ತಿ ತತ್ಫಲವಾಗಿ ಸ್ಥಗಿತವಾಗಿ ರಕ್ತ ಗರಣೆ ಕಟ್ಟಿದಂತೆ ಆಗುತ್ತದೆ. ಪ್ರೊಥ್ರಾಂಬಿನ್ನಿನ ಉತ್ಪತ್ತಿ ಞ ವೈಟಮಿನ್ನಿನಿಂದ ಪ್ರಚೋದಿತವಾದುದು ಎಂದು ಹಿಂದೆ ಹೇಳಿದೆ. ಡೈಕೊಮಾರಿನನ್ನು ಕೊಟ್ಟಾಗ ಅದು ಞ ವೈಟನಿನ್ನಿಗೆ ಪ್ರತಿರೋಧಿಯಾಗಿ ವರ್ತಿಸಿ ಪ್ರೊಥ್ರಾಂಬಿನ್ನು ಉತ್ಪತ್ತಿ ಆಗದಂತೆ ಮಾಡುತ್ತದೆ. ಅಧಿಕ ಪ್ರಮಾಣದಲ್ಲಿ ಞ ವೈಟಮಿನನ್ನು ಕೊಟ್ಟು ಡೈಕೊಮಾರಿನ್ನಿನ ಕ್ರಿಯೆ ಅನಾವಶ್ಯಕವಾದಾಗ ತಡೆಗಟ್ಟಬಹುದು.

ರಕ್ತಸ್ರಾವವಾದಾಗ ಅದು ಘನೀಕರಿಸುವ ಕಾರ್ಯಕ್ರಮಕ್ಕೆ ವಿರುದ್ಧವಾಗಿ ರಕ್ತಹೃದಯ ರಕ್ತನಾಳಗಳಲ್ಲಿ ಇರುವಾಗ ಅದು ಘನೀಕರಿಸದಂಥ ಕಾರ್ಯಕ್ರಮವನ್ನು ಹೆಪಾರಿನ ಒದಗಿಸುತ್ತದೆ. ಇದರಿಂದ ವ್ಯಕ್ತಿಯ ಜೀವಿತಕಾಲದಲ್ಲಿ ಬಹುಶಃ ಇವೆಡರು ಕಾರ್ಯಕ್ರಮಗಳೂ ಒಂದಕ್ಕೆ ಅನುಗುಣವಾಗಿ ಇನ್ನೊಂದು ಜರುಗುತ್ತಿರುತ್ತದೆ. ಒಟ್ಟಿನಲ್ಲಿ ಪರಿಚಲಿಸುವ ರಕ್ತ ನಿರಂತವಾಗಿ ದ್ರವರೂಪದಲ್ಲಿ ಇರುವಂಥ ನೈಸರ್ಗಿಕ ಏರ್ಪಾಡಿದೆ ಎಂದು ಹೇಳಲಾಗಿದೆ. ಹಾಗೂ ಗರಣೆಕಟ್ಟಿದರೆ ಆ ಗರಣೆಯನ್ನು ಕರಗಿಸಿ ಪುನಃ ಅದನ್ನು ದ್ರವವನ್ನಾಗಿ ಮಾಡುವ ಕಾರ್ಯಲೈಸಿನ್ ಎಂದು ಹೆಸರು. ಆದರೆ ಪರಿಚಲಿಸುತ್ತಿರುವ ರಕ್ತದಲ್ಲಿ ಇದು ಇರುವುದಿಲ್ಲವೆಂಬುದು ವ್ಯಕ್ತ. ಕಾರಣ ಹಾಗಿದಿದ್ದೇ ಆಗಿದ್ದರೆ ಗರಣೆ ಕಟ್ಟುವಿಕೆಯಿಂದ ರಕ್ತಸ್ರಾವ ಕೊಂಚವೇ ಕಾಲ ನಿಂತಿದ್ದು ಪುನಃ, ಬಹುಶಃ ಪೂರಕವಾಗಿ ರಕ್ತಸ್ರಾವ ಪ್ರಾರಂಭವಾಗಿಬಿಡುತ್ತಿತ್ತು. ಆದ್ದರಿಂದ ಥ್ರಾಂಬಿನ್ನಿನ ವಿಷಯದಲ್ಲಿ ಹೇಗೋ ಹಾಗೆಯೇ ಫೈಬ್ರಿನೊಲೈಸಿನ್ ಕೂಡ ಅಗತ್ಯವಾದಾಗ ಮಾತ್ರ ಉದ್ಭವಿಸುತ್ತದೆ. ಫೈಬ್ರಿನೋಲೈಸಿನ್ನಿನ ಜನಕವಸ್ತು ಪ್ರೋಪೈಬ್ರಿನೊಲೈಸಿನ್ ಅಥವಾ ಪ್ಲಾಸ್ಮಿನೋಜೆನ್ ಎಂಬುದು ರಕ್ತದ್ರವದಲ್ಲಿ ನೈಸರ್ಗಿಕವಾಗಿಯೇ ಇರುವ ವಸ್ತು. ಇದು ಜಡ ಗರಣೆಯನ್ನು ತಾನೇ ಕರಗಿಸಲಾರದು. ಅದರ ಪೈಬ್ರಿನೋಕೈನೇಸ್ ಅಥವಾ ಪ್ಲಾಸ್ಮೊಕೈನೇಸ್ ಎಂಬ ಕಿಣ್ವದಿಂದ ಅದು ಪೈಬ್ರಿನೊಲೈಸಿನ್ ಆಗಿ ಪರಿವರ್ತಿತವಾಗುತ್ತದೆ. ತನ್ನ ಸರದಿಯಲ್ಲಿ ಇದು ರಕ್ತಗರಣೆಯನ್ನು ದ್ರವೀಕರಿಸುತ್ತದೆ. ಥ್ರಾಂಬಿನ್ನು ಆಕಸ್ಮಾತ್ತಾಗಿ ಕಿಂಚಿತ್ ಪ್ರಮಾಣದಲ್ಲಿ ಪರಿಚಲಿಸುತ್ತಿರುವ ರಕ್ತದಲ್ಲಿ ಉತ್ಪತ್ತಿ ಆಗುವಂತೆ ಪ್ಲಾಸ್ಮಿನ್ನೂ ಉತ್ಪತ್ತಿ ಆಗುತ್ತದೆ ಮತ್ತು ಥ್ರಾಂಬಿನ್ನಿಗೆ ವಿರೋಧವಾಗಿ ವರ್ತಿಸುತ್ತದೆ. ಇವೆರಡರ ಈ ಪರಸ್ಪರ ವಿರೋಧವೂ ರಕ್ತಪರಿಚಲನೆ ವ್ಯೂಹದಲ್ಲಿ ದ್ರವರೂಪದಲ್ಲಿ ಇರುವುದಕ್ಕೆ ಇನ್ನೊಂದು ಕಾರಣ ಎನಿಸಿದೆ. ರಕ್ತಸ್ರಾವವಾದಾಗ ಅಗಾಧ ಪ್ರಮಾಣದಲ್ಲಿ ಥ್ರಾಂಬಿನ್ನಿನ ಉತ್ಪತ್ತಿ ಆಗುವುದರಿಂದ ಅದು ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ಹೆಪಾರಿನ್ನಾಗಲಿ ಪ್ಲಾಸ್ಮಿನ್ನಾಗಲಿ ತಡೆಯಲಾರವು. (ಎಸ್.ಆರ್.ಬಿ.) 7. ರಕ್ತ ಪಂಗಡಗಳು ಮತ್ತು ರಕ್ತ ಪೂರಣೆ ಇತಿಹಾಸ : ಆರೋಗ್ಯವಂತ ಯುವಕರ ರಕ್ತದಿಂದ, ವಯಸ್ಸಾದವರನ್ನೂ ಅಥವಾ ರೋಗಪೀಡಿತರನ್ನು ಮತ್ತೆ ಆರೋಗ್ಯವಂತ ಯುವಕರಂತೆ ಮಾಡಬಹುದು ಎಂಬ ನಂಬಿಕೆಯಿಂದ 1542ರಲ್ಲಿ, ಪೋಪ್ ಇನ್ನೊಸೆಂಟ್-8 (Poಠಿe Iಟಿಟಿoಛಿeಟಿಣ ಗಿIII )ಗೆ, ಮೂವರು ಯುವಕರ ರಕ್ತ ಕೊಡಲಾಯಿತು. ಆದರೆ, ಅದರಿಂದ ಅವರು ನಾಲ್ವರೂ ತೀರಿಕೊಂಡರು. 1628ರಲ್ಲಿ, ಸರ್.ವಿಲಿಯಂ ಹಾರ್ವೆ, ಮಾನವನ ದೇಹದಲ್ಲಿ ರಕ್ತ ಚಲನೆಯ ವಿಧಾನವನ್ನು ಕಂಡುಹಿಡಿದನು. 17ನೆಯ ಶತಮಾನದಲ್ಲಿ ರಿಚರ್ಡ್ ಲೋವರ್ ಎಂಬುವನು, ನಾಯಿಗಳಲ್ಲಿ ರಕ್ತ ಪೂರಣೆಯ ಪ್ರಯೋಗ ಮಾಡಿದನು. ಜೀನ್ ಡೆನಿಸ್ ಎಂಬುವನು 1704ರಲ್ಲಿ ಪ್ರಾಣಿಗಳ ರಕ್ತವನ್ನು ಮಾನವರಿಗೆ ಕೊಡುವ ಪ್ರಯೋಗವನ್ನೂ ಮಾಡಿದನು. ಆದರೆ ಅದರಿಂದ ಆ ವ್ಯಕ್ತಿ ಮರಣಹೊಂದಿದನು. ಮುಂದೆ ಹದಿನೆಂಟನೆಯ ಶತಮಾನದಲ್ಲಿ, ಜೇಮ್ಸ್ ಬ್ಲಂಡೆಲ್ ಮತ್ತು ಡಾ.ಲೀಕಾಕ್ ಎಂಬುವರು, ಕೇವಲ ಮಾನವರ ರಕ್ತವನ್ನೇ ಮಾನವರಿಗೆ ಕೊಡಬಹುದು ಎಂದು ಪ್ರತಿಪಾದಿಸಿದರು. ಹೆರಿಗೆಯ ನಂತರ ರಕ್ತಸ್ರಾವವಾದ ಸುಮಾರು ಹತ್ತು ಮಹಿಳೆಯರಿಗೆ ಡಾ.ಬ್ಲಂಡೆಲ್‍ನು ರಕ್ತ ಪೂರಣೆಯನ್ನು ಮಾಡಿದನು. ಅವರಲ್ಲಿ ಕೆಲವು ಮಹಿಳೆಯರು ಮೃತರಾದರು. ಆವಾಗ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ವಿಧಾನ ಕಂಡುಹಿಡಿದಿರಲಿಲ್ಲ.

1901ರಲ್ಲಿ ಮೊದಲ ಬಾರಿಗೆ, ಕಾರ್ಲ ಲ್ಯಾಂಡಸ್ಟೀನರ್ ಎಂಬುವನು, ರಕ್ತದ (ಂಃಔ)' ಎ, ಬಿ, ಓ ವರ್ಗೀಕರಣ ಮಾಡಿದನು. 1940ರಲ್ಲಿ, ವೀನರ್ ಎಂಬುವನ ಜೊತೆಗೂಡಿ, ರಕ್ತದ `ಆರ್‍ಎಚ್ (ಖh) ವರ್ಗೀಕರಣವನ್ನೂ ಮಾಡಿದನು. ಈ ಮಧ್ಯೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ವಿಧಾನವನ್ನು ಕಂಡುಹಿಡಿಯಲಾಯಿತು. 1960ರ ವರೆಗೆ ರಕ್ತಸಂಗ್ರಹಣೆಯನ್ನು ಗಾಜಿನ ಬಾಟಲಿಯಲ್ಲಿ ಮಾಡುತ್ತಿದ್ದರು. ಮತ್ತು ಸಂಗ್ರಹಿಸಿದ ರಕ್ತವನ್ನು ಯಾವ ರೋಗದ ಸಲುವಾಗಿಯೂ ಪರೀಕ್ಷೆಗೆ ಒಳಪಡಿಸುತ್ತಿರಲಿಲ್ಲ. 1965ರಿಂದ, ಅPಆ-ಂ ದ್ರಾವಣವಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ರಕ್ತವನ್ನು ಸಂಗ್ರಹಿಸಲಾಗುತ್ತಿದೆ.

I ) ರಕ್ತದ ಎ ಬಿ, ಓ (ಂಃಔ) ವರ್ಗೀಕರಣ. ಇದರ ಮುಖ್ಯ ಅಂಶಗಳೆಂದರೆ, 1) ಮನುಷ್ಯರ ರಕ್ತವನ್ನು ಕೆಳಕಂಡ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

ಗುಂಪು (ಉಡಿouಠಿ) ರೋಧಕ (ಂಟಿಣigeಟಿ) ಪ್ರತಿರೋಧಕ (ಂಟಿಣiboಜಥಿ) ಶೇಕಡಾ (%)

ಎ(ಂ) ಎ `ಬಿ 42

ಬಿ( ಃ) ಬಿ `ಎ' 9

ಓ(ಔ) - `ಎ', `ಬಿ 46

ಎಬಿ( ಂಃ) ಎ,ಬಿ -- 3


ಅಂದರೆ, ವ್ಯಕ್ತಿಯ ಕೆಂಪುರಕ್ತಕಣದಲ್ಲಿ ಯಾವ ರೋಧಕವಿರುವುದಿಲ್ಲವೋ, ಅವರ ಸಿರಂ(seಡಿum )ನಲ್ಲಿ ಅದರ ಪ್ರತಿರೋಧಕಗಳಿರುತ್ತವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಕೆಂಪು-ರಕ್ತಕಣದ ಮೇಲೆ, `ಎ' ರೋಧಕಗಳಿರುತ್ತವೆ. ಆದರೆ `ಬಿ ರೋಧಕಗಳಿರುವುದಿಲ್ಲ. ಆ ವ್ಯಕ್ತಿಯ ಸಿರಂನಲ್ಲಿ `ಬಿ ಪ್ರತಿರೋಧಕಗಳಿರುತ್ತವೆ.

2) ಈ ಪದ್ಧತಿಯ ಪ್ರತಿರೋಧಕಗಳು, ನೈಸರ್ಗಿಕವಾಗಿಯೇ ಇರುವಂತಹ ಪ್ರತಿರೋಧಕಗಳು.(3) ಎಬಿ, ಓ ರೋಧಕಗಳನ್ನು ಆರು ವಾರದ ಭ್ರೂಣದಲ್ಲೂ ಪತ್ತೆ ಹಚ್ಚಬಹುದಾದರೂ, ಇವುಗಳು ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಲು ಮಗುವಿಗೆ ಕನಿಷ್ಠ ಮೂರು ವರ್ಷಗಳಾದರೂ ಆಗಬೇಕು. ಈ ರೋಧಕಗಳು ರಕ್ತದಲ್ಲಿ ಮಾತ್ರವಲ್ಲದೆ ನಮ್ಮ ದೇಹದ ಇತರ ಅಂಗಾಂಶಗಳನ್ನೂ ಪಸರಿಸಿರುತ್ತವೆ, ಮತ್ತು ನಮ್ಮ ದೇಹದಲ್ಲಿರುವ ಗ್ರಂಥಿಗಳು ಸ್ರವಿಸುವ ಎಲ್ಲಾ ದ್ರವಗಳಲ್ಲಿಯೂ ಈ ರೋಧಕಗಳಿರುತ್ತವೆ. ನಮ್ಮ ದೇಹದಲ್ಲಿನ ಎಲ್ಲಾ ಜೀವಕೋಶಗಳ ಮೇಲೂ ಇವುಗಳು ಇರುವುದರಿಂದ, ರಕ್ತಪೂರಣೆಯಲ್ಲಿ ಹಾಗೂ ಅಂಗಾಂಗಗಳ ಕಸಿ ಮಾಡುವಾಗ, ಈ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ.

4.




ತಾಯಿ ತಂದೆಯ ರಕ್ತದ ಗುಂಪಿನಿಂದ, ಮಗುವಿನ ರಕ್ತದ ಗುಂಪಿನ ನಿರ್ಧಾರವಾಗುತ್ತದೆ. 5. ಒಬ್ಬ ವ್ಯಕ್ತಿಯ ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ `ಎ, ಅಥವಾ `ಬಿ ರೋಧಕಗಳು ಮತ್ತು ಆ ವ್ಯಕ್ತಿಯ ರಕ್ತದಲ್ಲಿರುವ ಪ್ರತಿರೋಧಕಗಳು ಇರಲು ಮುಖ್ಯ ಕಾರಣವೆಂದರೆ, ಆ ವ್ಯಕ್ತಿಯ ಎಲ್ಲಾ ಜೀವಕೋಶಗಳಲ್ಲಿ, ಒಂದೇ ತೆರನಾಗಿರುವ, ಆನುವಂಶಿಕವಾಗಿ ಬಂದಿರುವ ಜೀನ್ಸ್(geಟಿes) `ಎ ಮತ್ತು `ಬಿ ಜೀನ್ಸ್‍ಗಳು ಮೇಲುಗೈ (ಜomiಟಿಚಿಟಿಣ) ಯಾಗಿ ಇರುವುದರಿಂದ ಅವುಗಳ ನಿರ್ದೇಶನದಲ್ಲಿ ತಯಾರಾಗುವ `ಎ ಮತ್ತು / ಅಥವಾ `ಬಿ ರೋಧಕಗಳು ಆ ವ್ಯಕ್ತಿಯ ಕೆಂಪುರಕ್ತಕಣಗಳ/ಜೀವಕೋಶಗಳ ಮೇಲೆ ಗೋಚರಿಸುತ್ತದೆ. `ಓ ಜೀನ್ ಹಿಂಸರಿಕ (ಡಿeಛಿessive) ವಾಗಿ ಇರುವುದರಿಂದ, ಅಂಥ ವ್ಯಕ್ತಿಯಲ್ಲಿ ಯಾವುದೇ ರೋಧಕಗಳು ಗೋಚರಿಸುವುದಿಲ್ಲ.

6.`ಎಚ್ (ಊ) ಜೀನ್ ಎಂಬ ಇನ್ನೊಂದು ಮುಖ್ಯವಾದ ಜೀನ್‍ನ ನಿರ್ದೇಶನದಲ್ಲಿ `ಎಚ್ ಪದಾರ್ಥ (ಊ subsಣಚಿಟಿಛಿe) ತಯಾರಾಗುತ್ತದೆ. `ಎ ಮತ್ತು `ಬಿ ಜೀನ್‍ಗಳ ನಿರ್ದೇಶನದಲ್ಲಿ ತಯಾರಾದ ಕಿಣ್ವ (eಟಿzಥಿmes) ಗಳು, `ಎಚ್ ಪದಾರ್ಥ ಅನುಕ್ರಮವಾಗಿ `ಎ ಮತ್ತು `ಬಿ ರೋಧಕಗಳನ್ನಾಗಿ ಮಾರ್ಪಡಿಸುತ್ತವೆ. `ಎ, `ಬಿ, `ಎ,ಬಿ ಮತ್ತು `ಓ ಗುಂಪಿನ ವ್ಯಕ್ತಿಗಳಲ್ಲಿ ಈ `ಎಚ್ ಪದಾರ್ಥ ಇರುತ್ತದೆ.

ಆದರೆ, `ಓ ಗುಂಪಿನ ಕೆಲವು ವ್ಯಕ್ತಿಗಳಲ್ಲಿ ಈ `ಎಚ್ ಪದಾರ್ಥ ಕಂಡುಬರುವುದಿಲ್ಲ. ಅಂತಹ ವ್ಯಕ್ತಿಗಳಲ್ಲಿ `ಎಚ್ ಜೀನ್, ಡಿeಛಿessive ಇರುತ್ತದೆ. ಇವರಲ್ಲಿ `ಎ, `ಬಿ ಜೀನ್‍ಗಳು ಇದ್ದರೂ, `ಎಚ್ ಪದಾರ್ಥದ ಕೊರತೆಯಿಂದ, `ಎ `ಬಿ ರೋಧಕಗಳು ಗೋಚರಿಸುವುದಿಲ್ಲ. ಆದ್ದರಿಂದ ಅವರ ರಕ್ತದ ಗುಂಪು `ಓ ಎಂದಾಗುತ್ತದೆ-ಮೊದಲ ಸಲ ಪರೀಕ್ಷೆ ಮಾಡಿದಾಗ. ಆದರೆ ಇವರ ರಕ್ತವನ್ನು ಬೇರೆ `ಓ ಗುಂಪಿನವರಿಗೆ ಕೊಟ್ಟರೆ, ರಕ್ತ ಹೆಪ್ಪುಗಟ್ಟಲು ಶುರುವಾಗುತ್ತದೆ. ಆದ್ದರಿಂದ, ಇಂತಹ ಗುಂಪಿಗೆ `ಃombಚಿಥಿ ಃಟooಜ ಉಡಿouಠಿ `ಬಾಂಬೆ ಗುಂಪು ಎಂದು ಕರೆಯುತ್ತಾರೆ. ಈ ಗುಂಪನ್ನು ಖಚಿತ ಪಡಿಸಿಕೊಳ್ಳುವ ವಿಧಾನವೆಂದರೆ, (`ಂಟಿಣi +) `ಎಚ್ ಪ್ರತಿರೋಧಕವನ್ನು ಸಾಮಾನ್ಯ `ಓ' ಗುಂಪಿನ ಕೆಂಪು ರಕ್ತಕಣಗಳೊಂದಿಗೆ ಬೆರೆಸಿದಾಗ, ರಕ್ತ ಹೆಪ್ಪುಗಟ್ಟುತ್ತದೆ. ಆದರೆ, ಅದನ್ನು `ಬಾಂಬೆ ಗುಂಪಿನ ಕೆಂಪು ರಕ್ತಕಣಗಳೊಂದಿಗೆ ಬೆರೆಸಿದಾಗ, ರಕ್ತ ಹೆಪ್ಪುಗಟ್ಟುವುದಿಲ್ಲ.

---1952ರಲ್ಲಿ ಮುಂಬೈ ನಗರದ ``ಡಾ.ಬಾಂಡೆ ``ಬಾಂಬೆ ಗುಂಪು ಗುರುತಿಸಿದರು. 5) `ಎ' ಗುಂಪನ್ನು ಮತ್ತೆ ಂ1 ಮತ್ತು ಂ2 ಎಂದು ವಿಂಗಡಿಸಲಾಗಿದೆ. ಅದೇ ಪ್ರಕಾರ, ಂಃ ಗುಂಪನ್ನು ಂ,ಃ ಮತ್ತು ಂ2ಃ ಎಂದು ವಿಂಗಡಿಸಲಾಗಿದೆ. ಂ ಮತ್ತು ಂಃ ಗುಂಪಿನಲ್ಲಿ, ಶೇಕಡಾ 80ರಷ್ಟು ಜನರು ಂ1 ಮತ್ತು ಂ1ಃ (ಅನುಕ್ರಮವಾಗಿ) ಇರುತ್ತಾರೆ. ಮತ್ತು ಶೇಕಡಾ 20ರಷ್ಟು ಜನರು ಂ2 ಮತ್ತು ಂ2ಃ (ಅನುಕ್ರಮವಾಗಿ) ಇರುತ್ತಾರೆ.

II ) ಆರ್.ಎಚ್ (ಖh) ವರ್ಗೀಕರಣ

`ಎ', `ಬಿ, `ಓ' ವರ್ಗೀಕರಣದ ನಂತರ, `ಆರ್ ಎಚ್ ವರ್ಗೀಕರಣ, ಬಹಳ ಮುಖ್ಯವಾದುದು. ಶೇಕಡಾ 80ರಷ್ಟು ಮನುಷ್ಯರಲ್ಲಿ ಈ ರೋಧಕಗಳು ಇರುತ್ತವೆ. ಇಂತಹವರನ್ನು `ಆರ್ ಎಚ್ ಪಾಸಿಟಿವ್ (ಖh-ಠಿosiಣive) ಎನ್ನುತ್ತಾರೆ. ಈ ರೋಧಕಗಳಿಲ್ಲದವರನ್ನು `ಆರ್ ಎಚ್ ನೆಗೆಟಿವ್ (ಖh-ಟಿegಚಿಣive) ಎನ್ನುತ್ತಾರೆ. ಈ ಗುಂಪಿನ ಪ್ರಾಮುಖ್ಯತೆಗಳೆಂದರೆ,

1) ತಾಯಿಯು `ಆರ್ ಎಚ್ ನೆಗೆಟಿವ್ ಇದ್ದು, ಅವಳ ಗರ್ಭದಲಿ ಭ್ರೂಣವು `ಆರ್ ಎಚ್ ಪಾಸಿಟಿವ್ ಇದ್ದರೆ, ಮುಂದೆ ಮಗು ಹುಟ್ಟುವಾಗ ಅದಕ್ಕೆ ಣhemoಟಥಿಣiಛಿ ಜiseಚಿse oಜಿ ಟಿeತಿ boಡಿಟಿ ಅಂದರೆ ಹಸುಳೆಯಲ್ಲಿ ಕೆಂಪು ರಕ್ತ ಕಣಗಳ ನಾಶ ಆಗುವ ಸಾಧ್ಯತೆಗಳಿವೆ.

2) ಆರ್ ಎಚ್ ನೆಗೆಟಿವ್ ರೋಗಿಗೆ, `ಆರ್ ಎಚ್ ಪಾಸಿಟಿವ್ ರಕ್ತಕೊಟ್ಟರೆ, ಆ ರೋಗಿಯ ರಕ್ತದಲ್ಲಿ `ಆರ್ ಎಚ್ ಪ್ರತಿರೋಧಕಗಳು ಉತ್ಪತ್ತಿಯಾಗುತ್ತವೆ. ಇತರ ರಕ್ತದ ಗುಂಪುಗಳು :-

`ಎ', `ಬಿ, `ಓ' ಮತ್ತು `ಆರ್ ಎಚ್ ಗುಂಪುಗಳಲ್ಲದೇ, ನಮ್ಮೆಲ್ಲರ ರಕ್ತದಲ್ಲಿ ಇನ್ನಿತರ ರಕ್ತದ ಗುಂಪುಗಳ ರೋಧಕಗಳಿರುತ್ತವೆ. ಈ ರೋಧಕಗಳಿರುವ ರಕ್ತವನ್ನು, ರೋಧಕಗಳಿಲ್ಲದವರಿಗೆ ಸಂಯೋಜನೆ ಮಾಡಿದಾಗ, ಅವರಲ್ಲಿ ಆ ರೋಧಕಗಳಿಗೆ, ಪ್ರತಿರೋಧಕಗಳ ಉತ್ಪತ್ತಿಯಾಗುತ್ತದೆ. ಆದ್ದರಿಂದ, ರಕ್ತ ಸಂಯೋಜನೆ ಮಾಡುವ ಮೊದಲು, ಇಂತಹ ಪ್ರತಿರೋಧಕಗಳಿಗಾಗಿ ಪರೀಕ್ಷೆ ಮಾಡುವುದು ಬಹಳ ಮುಖ್ಯ.

III) ಲೆವಿಸ್ (ಐeತಿis/ಐW ) ವರ್ಗೀಕರಣ:

ಲೆವಿಸ್ ಪ್ರತಿರೋಧಕಗಳಿರುವವರಿಗೆ, ಲೆವಿಸ್ ರೋಧಕಗಳಿರುವ ರಕ್ತವನ್ನು ರಕ್ತವನ್ನು ಸಂಯೋಜನೆ ಮಾಡಿದಾಗ, ಲೆವಿಸ್ ರೋಧಕಗಳಿರುವ ಕೆಂಪುರಕ್ತಕಣಗಳ ನಾಶವಾಗುವ ಸಾಧ್ಯತೆಗಳಿವೆ.

IV) ಒಓSS `ಎಮ್ ಎನ್ ಎಸ್ ವರ್ಗೀಕರಣ ಆಯಾ ರೋಧಕಗಳಿರುವ ರಕ್ತವನ್ನು ಅವುಗಳ ಪ್ರತಿರೋಧಕಗಳಿರುವವರಿಗೆ ನೀಡಿದಾಗ ಕೆಂಪು ರಕ್ತಕಣಗಳು ನಾಶವಾಗುವ ಸಾಧ್ಯತೆಗಳಿವೆ. ಮತ್ತು ಪ್ರತಿರೋಧಕಗಳಿರುವ ತಾಯಿಯ ಗರ್ಭದಲ್ಲಿ ರೋಧಕಗಳಿರುವ ಭ್ರೂಣವಿದ್ದಾಗ, ಮುಂದೆ ಹುಟ್ಟುವ ಮಗುವಿನ ಕೆಂಪು ರಕ್ತಕಣಗಳ ನಾಶವಾಗಬಹುದು. ಇನ್ನಿತರ ಅನೇಕ ಗುಂಪುಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ v) `ಪಿ (P )ವರ್ಗೀಕರಣ VI) ಲುಥೆರಾನ್ (ಐuಣheಡಿಚಿಟಿ) ವರ್ಗೀಕರಣ VII) ಕೆಲ್ (ಏeಟಟ)ವರ್ಗೀಕರಣ VIII) ಡಫಿ (ಆuಜಿಜಿಥಿ)ವರ್ಗೀಕರಣ

IX) ಕಿಡ್ (ಏiಜಜ )ವರ್ಗೀಕರಣ 
X) ಡೀಗೋ (ಆiego)ವರ್ಗೀಕರಣ 
xI) ಕಾರ್ಟರೈಟ್(ಅಚಿಡಿಣuಡಿigh ಣ) ವರ್ಗೀಕರಣ 
XII) ಎಕ್ಸ್‍ಜಿ(ಘಿg) ವರ್ಗೀಕರಣ 
XIII) ಸಿಯನ್ನಾ(Sಛಿiಚಿಟಿಟಿಚಿ) ವರ್ಗೀಕರಣ 
xIV) ಡಾಂಬ್ರಾಕ್(ಆombಡಿoಛಿಞ) ವರ್ಗೀಕರಣ 
XV) ಕೋಲ್ಟನ್ (ಛಿoಟಣoಟಿ) ವರ್ಗೀಕರಣ
XVI) ಲ್ಯಾಂಡ್‍ಸ್ಟೀನರ್-ವೀನರ್(ಐಚಿಟಿಜsಣeiಟಿeಡಿ-ತಿeiಟಿeಡಿ)
XVII) ಚೀಡೋ-ರೋಗರ್ (ಛಿhiಜo-ಖogeಡಿs ) ವರ್ಗೀಕರಣ 
xvIII) ಎಚ್ ಎಚ್(ಊh) ವರ್ಗೀಕರಣ 
XIx ) ಗೆರ್‍ಬಿಕ್(ಉeಡಿbiಛಿh) ವರ್ಗೀಕರಣ
xx) ಕ್ರೋಮರ್ (ಅಡಿomeಡಿ)ವರ್ಗೀಕರಣ 
XXI) ನಾಫ್(ಏಟಿoಠಿs) ವರ್ಗೀಕರಣ

ರಕ್ತದಾನ ಮಾಡಲು ಇರಬೇಕಾದ ಅರ್ಹತೆಗಳು

ರಕ್ತದಾನ ಮಾಡುವ ವ್ಯಕ್ತಿ (ಸ್ತ್ರೀ/ಪುರುಷ) ಸಂಪೂರ್ಣವಾಗಿ ಆರೋಗ್ಯವಂತರಾಗಿರಬೇಕು. ವಯಸ್ಸು - 18ರಿಂದ 60 ವರ್ಷ ದೇಹದ ತೂಕ 45 ಕಿಗ್ರಾಂ ಗಿಂತ ಹೆಚ್ಚಾಗಿರಬೇಕು ರಕ್ತದೊತ್ತಡ - ಸಾಮಾನ್ಯ ಸ್ಥಿತಿಯಲ್ಲಿರಬೇಕು (120/80mm oಜಿ ಊg) ನಾಡಿಬಡಿತ - ಒಂದು ನಿಮಿಷಕ್ಕೆ ಸರಾಸರಿ 72 ಬಡಿತ ರಕ್ತದಲ್ಲಿನ ಹಿಮೊಗ್ಲೋಬಿನ್‍ನ ಅಂಶ-12.5 ಗ್ರಾಂ/1 ಮಿ.ಲಿ. ಯಕೃತ್ತಿನ ಕಾಯಿಲೆಗಳು/ಕಾಮಾಲೆ ರೋಗವಿರಬಾರದು. ಮೂತ್ರಪಿಂಡದ ಕಾಯಿಲೆಗಳಿರಬಾರದು ಮಧುಮೇಹ/ಅಧಿಕ ರಕ್ತದೊತ್ತಡ/ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿರಬಾರದು. ಏಡ್ಸ್ ರೋಗಿಯಾಗಿರಬಾರದು/ಸಿಫಿಲಿಸ್ ರೋಗಿಯಾಗಿರಬಾರದು ಕ್ಯಾನ್ಸರ್ ರೋಗಿಯಾಗಿರಬಾರದು ಇತ್ತೀಚೆಗೆ, ಅಂದರೆ ರಕ್ತದಾನಮಾಡುವುದಕ್ಕಿಂತ 6 ತಿಂಗಳು ಅಥವಾ ಒಂದು ವರ್ಷದೊಳಗಾಗಿ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರಬಾರದು ಟೈಫಾಯಿಡ್ ಅಥವಾ ಮಲೇರಿಯಾ ಜ್ವರ ಬಂದಿದ್ದರೆ, ಅದರಿಂದ ಸಂಪೂರ್ಣ ಗುಣಹೊಂದಿರಬೇಕು. ವ್ಯಕ್ತಿಗೆ ಸರಾಯಿ ಕುಡಿಯುವ ಚಟವಿರಬಾರದು. ಯಾವುದೇ ತರಹದ ಔಷಧಿಯನ್ನು ತೆಗೆದುಕೊಳ್ಳುತ್ತಿರಬಾರದು. ಮಹಿಳೆಯರಲ್ಲಿ 6 ತಿಂಗಳ ಒಳಗಾಗಿ, ಹೆರಿಗೆ ಅಥವಾ ಗರ್ಭಸ್ರಾವವಾಗಿರಬಾರದು. ಅಥವಾ ಋತುಸ್ರಾವದ ದಿನಗಳಾಗಿರಬಾರದು. ಒಂದು ವರ್ಷದ ಒಳಗೆ, ಹುಚ್ಚುನಾಯಿಕಡಿತದ ಸಲುವಾಗಿ ರೇಬೀಸ್ ಲಸಿಕೆ ತೆಗೆದುಕೊಂಡಿರಬಾರದು. 6 ತಿಂಗಳ ಒಳಗಡೆ, ರಕ್ತದಾನ ಮಾಡಿರಬಾರದು.

ರಕ್ತದಾನ-ಶೇಖರಣೆ ಮತ್ತು ಸಂಗ್ರಹಣೆ :

ರಕ್ತನಿಧೀ ಕೇಂದ್ರಗಳಲ್ಲಿ ಒಳ್ಳೆಯ ಬೆಳಕುಳ್ಳ., ಸುಸಜ್ಜಿತ, ಹವಾನಿಯಂತ್ರಿತ ಕೊಠಡಿಯಲ್ಲಿ ದಾನಿಯನ್ನು ಮಂಚದ ಮೇಲೆ ಆರಾಮವಾಗಿ ಮಲಗಿಸಿ, ಅವರ ಮೊಣಕೈ ಮುಂಭಾಗದಲ್ಲಿರುವ ಅಭಿಧಮನಿಯಿಂದ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ. 350 ಮಿಲೀ ರಕ್ತವನ್ನು 49 ಮಿ.ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಅPಆ-ಂ ದ್ರಾವಣವಿರುವ ಪ್ಲಾಸ್ಟಿಕ್ ಚೀಲದಲ್ಲಿ ಶೇಖರಿಸಲಾಗುತ್ತದೆ. ಅದರ ಪೈಪನ್ನು ಸೀಲ್ (seಚಿಟ) ಮಾಡುವ ಮೊದಲು ಅದರಿಂದ 2 ಮಿ.ಲಿ ರಕ್ತವನ್ನು ಪರೀಕ್ಷೆಗಾಗಿ, ಟೆಸ್ಟ್‍ಟ್ಯೂಬ್‍ನಲ್ಲಿ ತೆಗೆದಿರಿಸಲಾಗುತ್ತದೆ. ನಂತರ ಪ್ಲಾಸ್ಟಿಕ್ ಚೀಲವನ್ನು ಸ್ಪೆಷಲ್ ಬ್ಲಡ್ ಬ್ಯಾಂಕ್ ರೆಫ್ರಿಜರೇಟರ್‍ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಅದರಲ್ಲಿ ತಾಪಮಾನ 2-6ಡಿಗ್ರಿ ಸೆ. ಇದರಲ್ಲಿ ರಕ್ತವನ್ನು ಸುಮಾರು 30 ದಿನಗಳ ಕಾಲ ಕೆಡದಂತೆ ಸಂರಕ್ಷಿಸಿ ಇಡಬಹುದು.

ರಕ್ತದಾನ ಶಿಬಿರಗಳಲ್ಲಿ, ರಕ್ತದ ಬ್ಯಾಗುಗಳನ್ನು ಐಸ್ ಪ್ಯಾಕ್ (Iಛಿe-ಠಿಚಿಛಿಞs) ಗಳಿರುವ ದೊಡ್ಡ ಪ್ಲಾಸ್ಟಿಕ್ ಡಬ್ಬಗಳಲ್ಲಿ ರಕ್ತವನ್ನು ಶೇಖರಿಸಿಟ್ಟು, ರಕ್ತನಿಧಿಗೆ ಬಂದ ಮೇಲೆ ಮತ್ತೆ ಅವುಗಳನ್ನು ರೆಫ್ರಿಜರೇಟರ್‍ನಲ್ಲಿ ಇಡಲಾಗುತ್ತದೆ.

ಟ್ಯೂಬ್‍ನಲಿ ಶೇಖರಿಸಿದ ರಕ್ತವನ್ನು ಕೆಲವು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮೊದಲು ರಕ್ತದ ಗುಂಪನ್ನು ಕಂಡುಹಿಡಿಯಲಾಗುತ್ತದೆ. ಅನಂತರ, ಆ ರಕ್ತವನ್ನು ಎಚ್‍ಐವಿ; ಹೆಪಟೈಟಿಸ್-ಬಿ, ಹೆಪಟೈಟಿಸ್ ಸಿ; ಸಿಫಿಲಿಸ್ ಮತ್ತು ಮಲೇರಿಯಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೊಂಕಿಲ್ಲದ ರಕ್ತವನ್ನು ಸಂಗ್ರಹಿಸಿ ಇಡಲಾಗುತ್ತದೆ. ಸೋಂಕಿರುವ ರಕ್ತವನ್ನು ನಾಶಪಡಿಸಲಾಗುತ್ತದೆ.

ರಕ್ತಪೂರಣೆ

ರೋಗಿ ರಕ್ತದ ಆವಶ್ಯಕತೆಯನ್ನು, ಆಯಾ ವಿಭಾಗದ ವೈದ್ಯರೇ ನಿರ್ಧರಿಸುತ್ತಾರೆ. ರೋಗಿಗೆ ರಕ್ತ ಪೂರಣೆಯ ಆವಶ್ಯಕತೆ ಇರುವ ಸಂದರ್ಭಗಳೆಂದರೆ : ತೀವ್ರವಾದ ಅಪಘಾತಗಳಾಗಿ, ತುಂಬಾ ರಕ್ತಸ್ರಾವವಾದಾಗ, ತೀವ್ರವಾದ ರಕ್ತಹೀನತೆ ಗಂಭೀರ ಸ್ವರೂಪದ ಮಲೇರಿಯಾ ಜ್ವರದಲ್ಲಿ, ಬಹಳಷ್ಟು ಕೆಂಪು ರಕ್ತಕಣಗಳ ನಾಶವಾದಾಗ (ಫಾಲ್ಸಿಪಾರಮ್ ಮಲೇರಿಯಾ), ಥಾಲಸ್ಸೀಮಿಯಾ ರೋಗಿಗಳಲ್ಲಿ ಸಿಕಲ್ ಸೆಲ್ ರೋಗಿಗಳಲ್ಲಿ ಬದಲಿ ಪೂರಣೆ (exಛಿhಚಿಟಿge ಣಡಿಚಿಟಿsಜಿusioಟಿ) ರಕ್ತಸ್ರಾವರೋಗದಲ್ಲಿ (ನವಜಾತ ಶಿಶುವಿನಲ್ಲಿ) ಶಸ್ತ್ರಚಿಕಿತ್ಸೆ ಮಾಡುವಾಗ ಅತಿಯಾದ ರಕ್ತಸ್ರಾವವಾದಾಗ, ಹೆರಿಗೆ ಸಮಯದಲ್ಲಿ ಅತಿಯಾದ ರಕ್ತಸ್ರಾವವಾದಾಗ, ಗರ್ಭಸ್ರಾವವಾದಾಗ.

ಹಾಗೂ, ಇನ್ನಿತರ ಅನೇಕ ಸಂದರ್ಭಗಳಲ್ಲಿ ರೋಗಿಗೆ ರಕ್ತ ಪೂರಣೆಯ ಅಗತ್ಯ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ಸಂಬಂಧಿಸಿದ ವೈದ್ಯರು ರಕ್ತನಿಧಿಯಲ್ಲಿರುವ ಬೇಡಿಕೆ ಪತ್ರ (ಖeguisiಣioಟಿ ಜಿoಡಿm) ದಲ್ಲಿ ರೋಗಿಯ ವಿವರಗಳನ್ನೆಲ್ಲ ತುಂಬಿ, ರೋಗಿಯ ರಕ್ತದ ಸ್ಯಾಂಪಲ್ಲಿನ ಜೊತೆ ಕಳುಹಿಸಿಕೊಡುತ್ತಾರೆ. ರಕ್ತನಿಧಿಯಲ್ಲಿ,

ಮೊದಲು ರೋಗಿಯ ರಕ್ತದ ಗುಂಪನ್ನು ಕಂಡುಹಿಡಿಯಲಾಗುತ್ತದೆ.

ರೋಗಿಯ ರಕ್ತದ ಜೊತೆ, ರಕ್ತನಿಧಿಯಲ್ಲಿರುವ ಅದೇ ಗುಂಪಿನ ರಕ್ತದ ಜೊತೆ ಹೊಂದಾಣಿಕೆ ಆಗುತ್ತದೋ ಇಲ್ಲವೋ ಎಂದು ಪರೀಕ್ಷಿಸಿ ನೋಡಲಾಗುತ್ತದೆ. (ಛಿಡಿoss mಚಿಣಛಿhiಟಿg ) ರೋಗಿಯ ರಕ್ತದಲ್ಲಿ ಯಾವುದಾದರೂ ಅನಪೇಕ್ಷಿತ ಪ್ರತಿರೋಧಕಗಳು (uಟಿexಠಿeಛಿಣeಜ ಚಿಟಿಣiboಜies) ಇವೆಯೋ ಎಂದು ಪರೀಕ್ಷಿಸಿ ನೋಡಲಾಗುತ್ತದೆ.

ತಾಜಾ ರಕ್ತ (ಜಿಡಿesh bಟooಜ) ಅಂದರೆ 24 ಗಂಟೆಗಳ ಒಳಗಾಗಿ ಶೇಖರಿಸಿದ ರಕ್ತದ ಸಲುವಾಗಿ ಬಹಳ ಜನ ವೈದ್ಯರು ಬೇಡಿಕೆ ಸಲ್ಲಿಸುತ್ತಾರೆ. ಆದರೆ, ಆ ರಕ್ತದ ಗುಂಪನ್ನು ಪರೀಕ್ಷಿಸಿ, ನಂತರ ಹೆಚ್.ಐ.ವಿ, ಎಚ್.ಬಿ.ಎಸ್ ರೋಧಕ, ಹೆಪಟೈಟಿಸ್ ಸಿ, ಮಲೇರಿಯಾ ಮತ್ತು ಸಿಫಿಲಿಸ್(ವಿಡಿಆರ್‍ಎಲ್) ಗಳಿಗಾಗಿ ಪರೀಕ್ಷಿಸಬೇಕು. ಮತ್ತೆ ಯಾವುದಾದರೂ ಪ್ರತಿರೋಧಕಗಳಿವೆಯೋ ಎಂದು ಪರೀಕ್ಷಿಸಬೇಕು. ನಂತರ ರೋಗಿಯ ರಕ್ತದ ಜೊತೆ ರಕ್ತದ ಹೊಂದಾಣಿಕೆಯಾಗಬೇಕು. ಇಷ್ಟೆಲ್ಲಾ ಆಗಲು ಕನಿಷ್ಠ ಒಂದು ದಿನವಾದರೂ ಬೇಕು. ಆದ್ದರಿಂದ ಇವೆಲ್ಲಾ ಪರೀಕ್ಷೆಗಳಿಗೆ ಒಳಪಟ್ಟ, ಒಳ್ಳೆಯ, ಯಾವ ರೋಗದ ಸೊಂಕೂ ಇಲ್ಲದ ಮತ್ತು ಯಾವ ಪ್ರತಿರೋಧಕಗಳೂ ಇಲ್ಲದ ರಕ್ತವನ್ನು ರೋಗಿಗೆ ಕೊಡುವುದು ಹೆಚ್ಚು ಸೂಕ್ತ.

ಸಂಬಂಧಿಕರ ರಕ್ತವನ್ನೇ ಪೂರಣೆಮಾಡಬೇಕೆಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಸಂಬಂಧಿಕರ ರಕ್ತವನ್ನು ನೀಡಿದರೆ, ಕಸಿ-ಅತಿಥೇಯ ರೋಗ (ಉಡಿಚಿಜಿಣ ಗಿeಡಿsಚಿs ಊosಣ) (ಈ ರೋಗ) ಆಗುವ ಸಂಭವ ಹೆಚ್ಚೆಂದು ದೃಢಪಟ್ಟಿದೆ. ಮತ್ತು ಕೆಲವರು ತಮ್ಮ ಸಂಬಂಧಿಗಳಿಗೆ ರಕ್ತದಾನ ಮಾಡುವಾಗ, ತಮಗಿರುವ ಅಥವಾ ಹಿಂದೆ ಆಗಿರಬಹುದಾದ ಕಾಯಿಲೆಗಳನ್ನು ಮುಚ್ಚಿಡುವ ಸಂದರ್ಭಗಳೇ ಹೆಚ್ಚು. ಆದ್ದರಿಂದ ಸಂಬಂಧಿಕರಿಗೆ ರಕ್ತದಾನ ಮಾಡಬೇಕೆಂಬುದು ಒಂದು ತಪ್ಪು ಕಲ್ಪನೆ.

ರಕ್ತಪೂರಣೆಯಿಂದಾಗುವ ಕೆಲವು ಪರಿಣಾಮಗಳೆಂದರೆ, ಕೆಲವೇ ಕೆಲವರಲ್ಲಿ, ಅಂದರೆ ಶೇಕಡಾ 1 ರಿಂದ 2 ರಷ್ಟು ಜನರಲ್ಲಿ ಕೆಲವು ದುಷ್ಪರಿಣಾಮದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಲಕ್ಷಣಗಳು ರಕ್ತ ಪೂರಣೆ ಪ್ರಾರಂಭಿಸಿದ ಕೆಲವು ಕ್ಷಣಗಳಲ್ಲಿ ಕಾಣಿಸಿಕೊಳ್ಳಬಹುದು, ಅಥವಾ ಕೆಲವು ಗಂಟೆಗಳ ನಂತರ ಕಾಣಿಸಿಕೊಳ್ಳಬಹುದು. ಅವುಗಳೆಂದರೆ, ಮೈಯಲ್ಲಿ ದದ್ದೆ (uಡಿಣಡಿಚಿಟಿiಚಿಟ ಡಿಚಿsh) ಏಳುವುದು., ತುರಿಕೆಯುಂಟಾಗುವುದು, ಮೈ ಕೆಂಪಾಗುವುದು, ಜ್ವರ, ಚಳಿ, ತಲೆನೋವು, ಹೆಚ್ಚಾದ ಎದೆಬಡಿತ, ದಮ್ಮು ಬರುವುದು, ಸೊಂಟನೋವು, ಮೂತ್ರದಲ್ಲಿ ರಕ್ತಹೋಗುವುದು ಇತ್ಯಾದಿ. ಈ ಲಕ್ಷಣಗಳಲ್ಲಿ ಯಾವುದಾದರೂ ಒಂದು ಕಾಣಿಸಿಕೊಂಡರೂ ಕೂಡಲೇ ಸಂಬಂಧಿಸಿದ ವೈದ್ಯರು ರಕ್ತಪೂರಣೆಯನ್ನು ನಿಲ್ಲಿಸಿ, ಸೂಕ್ತಚಿಕಿತ್ಸೆಯನ್ನು ನೀಡಬೇಕು. ಮತ್ತು ಸಂಬಂಧಿಸಿದ ರಕ್ತನಿಧಿಯ ವೈದ್ಯಾಧಿಕಾರಿಗೆ ಅದರ ಬಗ್ಗೆ ತಿಳಿಸಬೇಕು. ಮತ್ತು ಅದಕ್ಕೆ ಕಾರಣವೇನೆಂದು ಪತ್ತೆ ಹಚ್ಚಬೇಕು.

ಮತ್ತೆ ಕೆಲವರಲ್ಲಿ, ಸುಮಾರು ರಕ್ತಪೂರಣೆಮಾಡಿದ 10-12 ದಿನಗಳ ನಂತರ ಕಸಿ-ಅತಿಥೇಯ ಪ್ರತಿಕ್ರಿಯೆ ಕಾಣಿಸಿಕೊಳ್ಳಬಹುದು. ಅದರ ಲಕ್ಷಣಗಳೆಂದರೆ, ಜ್ವರ, ಮೈಮೇಲೆ ಗುಳ್ಳೆಗಳೆದ್ದು ಚರ್ಮಸುಲಿಯುವುದು, ಭೇದಿಯಾಗುವುದು, ಕಾಮಾಲೆಯಾಗುವುದು ಹಾಗೂ ಎಲ್ಲಾ ರಕ್ತಕಣಗಳ ಸಂಖ್ಯೆ ತುಂಬಾ ಕಡಿಮೆಯಾಗುವುದು. ಇದು ಸಂಬಂಧಿಕರಿಂದ ರಕ್ತ ಪಡೆದವರಲ್ಲಿ, ಹಾಗೂ ರೋಗನಿರೋಧಕ ಶಕ್ತಿ ಕಡಿಮೆಯಾದವರಲ್ಲಿ ಕಾಣಿಸಿಕೊಳ್ಳುವುದು. ರಕ್ತಕಣಗಳನ್ನು ಗಾಮಾ ವಿಕರಣಕ್ಕೆ (ಉಚಿmmಚಿ ಖಚಿಜiಚಿಣioಟಿ) ಒಳಪಡಿಸಿದರೆ ಇದನ್ನು ತಡೆಗಟ್ಟಬಹುದು. ರಕ್ತವನ್ನು ಇಡಿಯಾಗಿ ಕೊಡಬಹುದಾದಂತಹ ಸಂದರ್ಭಗಳೆಂದರೆ, ಅಪಘಾತಗಳಾದಾಗ ಅಥವಾ ಹೆರಿಗೆಯಲ್ಲಿ ರಕ್ತಸ್ರಾವವಾದಾಗ ಅಥವಾ ಗರ್ಭಪಾತವಾದಾಗ, ಅಥವಾ ಮಗುವಿನಲ್ಲಿ ಬದಲಿಪೂರಣೆ ಮಾಡಬೇಕಾದಾಗ, ಅಂದರೆ, ರೋಗಿಯಲ್ಲಿ ರಕ್ತದ ಪ್ರಮಾಣ ಕಡಿಮೆಯಾದಾಗ. ಆದರೆ ಕೆಲವು ಸಂದರ್ಭಗಳಲ್ಲಿ ರಕ್ತವನ್ನು ಇಡಿಯಾಗಿ ಕೊಡುವುದಕ್ಕಿಂತ, ಅದರ ಘಟಕಗಳನ್ನು ಬೇರ್ಪಡಿಸಿ, ರೋಗಿಗೆ ಯಾವ ಅಂಶದ ಕೊರತೆಯಿದೆಯೋ ಅದನ್ನು ಮಾತ್ರ ಕೊಡಲಾಗುತ್ತದೆ. ದೊಡ್ಡ ದೊಡ್ಡ ನಗರಗಳ ದೊಡ್ಡ ರಕ್ತನಿಧಿ ಕೇಂದ್ರಗಳಲ್ಲಿ ಅಂತಹ ಸೌಲಭ್ಯಗಳಿವೆ. ಅಂತಹ ಕೇಂದ್ರಗಳಲ್ಲಿ 55 ಕೆ.ಜಿ.ಗಿಂತ ಹೆಚ್ಚಿನ ದೇಹತೂಕವಿರುವ ರಕ್ತದಾನಿಯಿಂದ 450 ಮಿಲಿ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ.

1) ಕೆಂಪುರಕ್ತಕಣಗಳು ಮಾತ್ರ (ಖeಜ ಛಿeಟಟ ಛಿoಟಿಛಿeಟಿಣಡಿಚಿಣe ) : ಕೆಂಪು ರಕ್ತಕಣಗಳನ್ನು ಪ್ಲಾಸ್ಮಾ

(Pಟಚಿsmಚಿ) ದಿಂದ ಬೇರ್ಪಡಿಸಿ (ಅಂದರೆ 450 ಮಿಲಿ ರಕ್ತದಿಂದ, ಸುಮಾರು 150-200 ಮಿ.ಲಿ.ನಷ್ಟು ಕೆಂಪು ರಕ್ತಕಣಗಳನ್ನು) 2 ಡಿಗ್ರಿ ಸೆ. ರಿಂದ 6 ಡಿಗ್ರಿ ಸೆ.ನ ತಾಪಮಾನವಿರುವ ರೆಫ್ರಿಜರೇಟರ್‍ನಲ್ಲಿ (30 ದಿನಗಳವರೆಗೆ) ಸಂಗ್ರಹಿಸಿಡಲಾಗುತ್ತದೆ. ಇದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ತುಂಬಾ ಉಪಯೋಗವಾಗುತ್ತದೆ. ಮತ್ತು ಇದರಲ್ಲಿ ಪ್ಲಾಸ್ಮಾ ತುಂಬಾ ಕಡಿಮೆಯಿರುವುದರಿಂದ, ಪ್ರತಿರೋಧಕಗಳೂ ತುಂಬಾ ಕಡಿಮೆಯಿರುತ್ತದೆ. ಂಃಔ ಮತ್ತು ಖh ಹೊಂದಾಣಿಕೆ ಮಾಡಿ, ಇದನ್ನು ಕೊಡಬೇಕು.

2) ಕೆಂಪು ರಕ್ತಕಣಗಳ ದ್ರಾವಣ (ಖeಜ ಛಿeಟಟ Susಠಿeಟಿsioಟಿ) . : 150-200 ಮಿಲಿ ಕೆಂಪುರಕ್ತಕಣಗಳನ್ನು ಪ್ಲಾಸ್ಮಾದಿಂದ ಬೇರ್ಪಡಿಸಿ, ನಂತರ ಅವುಗಳನ್ನು Sಂಉ-ಒ ದ್ರಾವಣ- (ಓoಡಿmಚಿಟ Sಚಿಟiಟಿe, ಂಜemiಟಿe, gಟuಛಿose ಮತ್ತು ಒಚಿಟಿmiಣoಟ soಟuಣioಟಿ) -100 ಮಿ.ಲಿ ದೊಂದಿಗೆ ಬೆರೆಸಿ ಅದನ್ನು 2 ರಿಂದ 6 ಡಿಗ್ರಿ ಸೆ.ನ ತಾಪಮಾನವಿರುವ ರೆಫ್ರಿಜರೇಟರ್‍ನಲ್ಲಿ (30 ದಿನಗಳವರೆಗೆ) ಸಂಗ್ರಹಿಸಿಡಲಾಗುತ್ತದೆ. ಇದನ್ನು ಕೂಡ ಂಃಔ ಮತ್ತು ಖh ಹೊಂದಾಣಿಕೆಯಾಗುವ, ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೊಡಬಹುದು. ಇದರಲ್ಲೂ ಪ್ರತಿರೋಧಕಗಳು ತುಂಬಾ ಕಡಿಮೆಯಿರುತ್ತದೆ.

3) ಬಿಳಿ ರಕ್ತಕಣಗಳಿಲ್ಲದಿರುವ ಕೆಂಪು ರಕ್ತಕಣಗಳು (ಐeuಛಿoಛಿಥಿಣe-ಜeಠಿಟeಣeಜ ಡಿeಜ ಛಿeಟಟs) : ಕೆಂಪುರಕ್ತಕಣಗಳಿರುವ ದ್ರಾವಣವನ್ನು , ಬಿಳಿರಕ್ತಕಣಗಳನ್ನು ಬೇರ್ಪಡಿಸುವ ಜಿiಟಣeಡಿ ನ ಮೂಲಕ ಹಾಯಿಸಿದಾಗ, ಬರೀ ಕೆಂಪುರಕ್ತಕಣಗಳು ಉಳಿಯುತ್ತವೆ. ಇದನ್ನು ಕೂಡ 2 ರಿಂದ 6 ಡಿಗ್ರಿ ಸೆ. ತಾಪಮಾನದಲ್ಲಿ (30 ದಿನಗಳವರೆಗೆ) ಸಂಗ್ರಹಿಸಿ ಇಡಬಹುದು. ಇದನ್ನು, ಹಿಂದೆ ಒಂದೆರಡು ಸಲ ರಕ್ತಪೂರಣೆಮಾಡಿದಾಗ, ಜ್ವರ ಬಂದಂತಹ ರೋಗಿಗಳಿಗೆ ಕೊಡಬಹುದು. ಇದರಿಂದ ಬಿಳಿರಕ್ತಕಣಗಳ ವಿರುದ್ಧ ಪ್ರತಿರೋಧಕಗಳು ತಯಾರಾಗದಂತೆ ತಡೆಯಬಹುದು.

4) ಚಪ್ಪಟಿಕ (ಪ್ಲೇಟಲೆಟ್)ಗಳು ಮಾತ್ರ (Pಟಚಿಣeಟeಣ ಛಿoಟಿಛಿeಟಿಣಡಿಚಿಣe): ಇವುಗಳನ್ನು ಒಬ್ಬ ದಾನಿಯಿಂದ ಪಡೆದ ರಕ್ತದಿಂದ ಬೇರ್ಪಡಿಸಿದರೆ-50ರಿಂದ 60 ಮಿಲಿ ಪ್ಲಾಸ್ಮಾದಲ್ಲಿ 55 x 109 ಚಪ್ಪಟಿಕಗಳು ಸಿಗುತ್ತವೆ. ಅಥವಾ, 4 ರಿಂದ 6 ದಾನಿಗಳಿಂದ ಪಡೆದ ರಕ್ತದಿಂದಲೂ ಬೇರ್ಪಡಿಸಬಹುದು. (ಆ ದಾನಿಗಳಿಂದ ಪಡೆದ ರಕ್ತದ ಗುಂಪು ಒಂದೇ ಆಗಿದ್ದರೆ ತುಂಬಾ ಒಳ್ಳೆಯದು). ಅಂತಹ ರಕ್ತದಿಂದ ಸುಮಾರು 240 x 109 ಪ್ಲೇಟಲೆಟ್ಸ್ ಸಿಗುತ್ತವೆ. ಇದನ್ನು 20 ಡಿಗ್ರಿ ಸೆ.ನಿಂದ 24 ಡಿಗ್ರಿ ಸೆ.ನ ತಾಪಮಾನದಲ್ಲಿಡಬೇಕು. ಅಂದರೆ ರೆಫ್ರಿಜರೇಟರ್‍ನಲ್ಲಿ ಇಡಬಾರದು. ದಾನಿ/ದಾನಿಗಳಿಂದ ಸ್ವೀಕರಿಸಿದ 72 ಗಂಟೆಗಳೊಳಗಾಗಿ ಅವುಗಳನ್ನು ಬೇರ್ಪಡಿಸಿ, ಅವುಗಳ ಕೊರತೆಯಿರುವ ರೋಗಿಗಳಿಗೆ ಪೂರಣೆಮಾಡಬೇಕು. ಸಾಧ್ಯವಾದಷ್ಟೂ, ಂಃಔ ಮತ್ತು ಖh ಹೊಂದಾಣಿಕೆಯಾಗುವ ರೋಗಿಗಳಿಗೆ ಅವುಗಳನ್ನು ಕೊಡಬೇಕು.

5. ತಾಜಾ ಶೀತಲಿಕರಣದ ರಕ್ತರಸ (ಫ್ರೆಶ್ ಫ್ರೋಝನ್ ಪ್ಲಾಸ್ಮಾ) (ಈಡಿesh ಜಿಡಿozeಟಿ ಠಿಟಚಿsmಚಿ): ಒಬ್ಬರೇ ದಾನಿಯಿಂದ ಸ್ವೀಕರಿಸಿದ ರಕ್ತ (450 ಮಿಲಿ) ವನ್ನು ಸ್ವೀಕರಿಸಿದ 6 ಗಂಟೆಗಳೊಳಗಾಗಿ, ಕೆಂಪು ರಕ್ತಕಣಗಳಿಂದ ಬೇರ್ಪಡಿಸಿದ ಪ್ಲಾಸ್ಮಾವನ್ನು-25 ಡಿಗ್ರಿ ಸೆಂ.ನ ತಾಪಮಾನ ಅಥವಾ ಅದಕ್ಕಿಂತಲೂ ಕಡಿಮೆಯಿರುವ ರೆಫ್ರಿಜರೇಟರ್‍ನಲ್ಲಿ ಸುಮಾರು ಒಂದು ವರ್ಷದವರೆಗೆ ಸಂಗ್ರಹಿಸಿಡಬಹುದು. ರೋಗಿಗೆ ಕೊಡುವುದಕ್ಕಿಂತ ಮೊದಲು ಅದನ್ನು 30 ರಿಂದ 37 ಡಿಗ್ರಿ ಸೆಂ.ನ ತಾಪಮಾನಕ್ಕೆ ತರಬೇಕು. ಇದನ್ನು ರಕ್ತ ಹೆಪ್ಪುಗಟ್ಟಲು ಬೇಕಾದ ಫ್ಯಾಕ್ಟರ್ (ಜಿಚಿಛಿಣoಡಿ) ಗಳ ಕೊರತೆಯಿರುವ ರೋಗಿಗಳಿಗೆ, ಮತ್ತು ಅಂಗದೊಳಗೆ ರಕ್ತಹೆಪ್ಪುಗಟ್ಟುವ ರೋಗದ (ಆissemiಟಿಚಿಣeಜ Iಟಿಣಡಿಚಿvಚಿsಛಿuಟಚಿಡಿ ಛಿoಚಿguಟಚಿಣioಟಿ) ರೋಗಿಗಳಿಗೆ ಕೊಡಲಾಗುವುದು. ಂಃಔ ಹೊಂದಾಣಿಕೆಯಾದರೆ ಒಳ್ಳೆಯದು. ಹೊಂದಾಣಿಕೆ ಪರೀಕ್ಷೆ ಬೇಕಾಗಿಲ್ಲ.

6 ಕ್ರಯೋಪ್ರಿಸಿಪಿಟೇಟ್ (ಅಡಿಥಿoಠಿಡಿeಛಿiಠಿiಣಚಿಣe) :- ಇದನ್ನು ಜಿಡಿesh ಜಿeozeಟಿ ಠಿಟಚಿsmಚಿ ದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಫ್ಯಾಕ್ಟರ್ ಗಿIII (80-100 ಯೂನಿಟ್ಸ್) ಮತ್ತು ಫೈಬ್ರಿನೋಜೆನ್ (ಜಿibಡಿiಟಿogeಟಿ -150-300 mg )ನಷ್ಟು ಇರುತ್ತವೆ. ಬೇರೆ ಫ್ಯಾಕ್ಟರ್‍ಗಳು ಮತ್ತು ಆಲ್ಬುಮಿನ್(ಂಟbumiಟಿ) ಇರುವುದಿಲ್ಲ. ಇದನ್ನು ಕೂಡ 25 ಡಿಗ್ರಿ ಸೆಂ.ನಲ್ಲಿ ಸುಮಾರು ಒಂದು ವರ್ಷದವರೆಗೆ ಸಂಗ್ರಹಿಸಿಡಬಹುದು. ಇದನ್ನೂ ಹೀಮೋಫೀಲಿಯ ರೋಗಿಗಳಿಗೆ (ಫ್ಯಾಕ್ಟರ್- ಗಿIII ರ ಕೊರತೆ), ಗಿoಟಿ Wiಟಟebಡಿಚಿಟಿಜ ಜiseಚಿse ಮತ್ತು ಫ್ಯಾಕ್ಟರ್ - ಘಿIII ರ ಕೊರತೆಯಿರುವ ರೋಗಿಗಳಿಗೆ ಕೊಡಲಾಗುವುದು. ಂಃಔ ಹೊಂದಾಣಿಕೆಯಾದರೆ ಒಳ್ಳೆಯದು. ಹೊಂದಾಣಿಕೆ ಪರೀಕ್ಷೆ ಬೇಕಾಗಿಲ್ಲ.

7. ಫ್ಯಾಕ್ಟರ್ - ಗಿIII ಕಾನ್ಸ್‍ನ್‍ಟ್ರೇಟ್ (ಈಚಿಛಿಣoಡಿ-ಗಿIII ಅoಟಿಛಿeಟಿಣಡಿಚಿಣe) :- ತುಂಬಾ ಜನ ದಾನಿಗಳಿಂದ ಸಂಗ್ರಹಿಸಿದ ರಕ್ತದಿಂದ, ಕೇವಲ ಫ್ಯಾಕ್ಟರ್ ಗಿIII ನ್ನು ಮಾತ್ರ ಬೇರ್ಪಡಿಸಿ, ಅದನ್ನು ಶ್ಶೆತ್ಯಾಗಾರದಲ್ಲಿ ಒಣಗಿಸಿ, ಪೌಡರ್ ರೂಪದಲ್ಲಿ ಚಿಕ್ಕ ಗಾಜಿನ ಬಾಟಲಿಗಳಲ್ಲಿ 2 ರಿಂದ 6 ಡಿಗ್ರಿ ಸೆಂ.ನ ತಾಪಮಾನದಲ್ಲಿ ಸಂಗ್ರಹಿಸಿಡಲಾಗುವುದು. ಇದರಲ್ಲಿ ಸುಮಾರು 250 uಟಿiಣs ನಷ್ಟು ಫ್ಯಾಕ್ಟರ್- ಗಿIII ಇರುತ್ತದೆ. ಇದನ್ನು ಹೀಮೋಮಿಲಿಯ ರೊಗಿಗಳಿಗೆ ಕೊಡುವ ಮೊದಲು ಅದನ್ನು ದ್ರಾವಣ ಮಾಡಿ, ನಂತರ ಕೊಡಲಾಗುತ್ತದೆ.

ಹೀಗೆ ಇನ್ನೂ ಅನೇಕ ಘಟಕಗಳನ್ನು ಬೇರ್ಪಡಿಸಲಾಗುತ್ತದೆ. ರಕ್ತ ಪೂರಣೆಯು ನವೀನ, ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ, ರೋಗಿಯ ಪ್ರಾಣವನ್ನು ಉಳಿಸುತ್ತದೆ ಮತ್ತು ರೋಗಿಯ ದೈಹಿಕ ಸ್ಥಿತಿ ಉತ್ತಮಗೊಳಿಸುತ್ತದೆ. ಆದರೆ, ಕೆಲವು ಸಲ ರಕ್ತದಿಂದ ಹರಡಬಹುದಾದಂತಹ ರೋಗಗಳಿರುವುದರಿಂದ, ರೋಗಿಗೆ ರಕ್ತ ಪೂರಣೆ ಮಾಡುವ ಮೊದಲು, ನಿಜವಾಗಿಯೂ ರೋಗಿಗೆ ರಕ್ತವೇ ಬೇಕಾಗುತ್ತದೋ, ಅಥವಾ ಬೇರೆ ಔಷಧಗಳು ಅಥವಾ ದ್ರಾವಣಗಳಿಂದ (ಜಿಟuiಜs) ರೋಗವನ್ನೂ ಗುಣಪಡಿಸಬಹುದೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ, ಅಧಿಕೃತ ಪರವಾನಿಗಿ ಪಡೆದ ರಕ್ತನಿಧಿ ಕೇಂದ್ರದಿಂದ ಮಾತ್ರ ರಕ್ತವನ್ನು ಪಡೆಯಬೇಕು. ಜನರಲ್ಲಿ ಜಾಗೃತಿ ಮೂಡಬೇಕು. ಸ್ವಯಂಸೇವಾಸಮಾಜಗಳು ಮತ್ತು ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ಆರೋಗ್ಯವಂತ ಯುವಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವಂತೆ ಉತ್ತೇಜಿಸಬೇಕು. ಇದರಿಂದ ಹಣಕ್ಕೋಸ್ಕರ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಮತ್ತು ಅಂತಹವರಲ್ಲಿ ಸಾಮಾನ್ಯವಾಗಿ ಇರುವಂತ ರೋಗಗಳು ಇತರರಿಗೆ ಹರಡುವುದನ್ನು ತಡೆಗಟ್ಟಬಹುದು. ಯಾಕೆಂದರೆ ಕೆಲವು ಸಲ ರೋಗ ಪ್ರಾರಂಭವಾಗಿ ಸುಮಾರು 3 ರಿಂದ 6 ತಿಂಗಳವರೆಗೆ (ತಿiಟಿಜoತಿ ಠಿeಡಿioಜ ಪರೀಕ್ಷೆಗಳಿಂದ ಆ ರೋಗವನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಆದ್ದರಿಂದ, ಆರೋಗ್ಯವಂತ ಯುವಜನರು ತಮ್ಮ ದೇಹದಲ್ಲಿರುವ 5 ಲೀಟರ್ ರಕ್ತದಲ್ಲಿ, ಕೇವಲ 350 ಮಿಲಿ ದಾನ ಮಾಡಿ, ಒಂದು ಅಮೂಲ್ಯ ಜೀವವನ್ನು ಉಳಿಸಬಹುದು. ಪರಿಷ್ಕರಣೆ: ಡಾ|| ಮಂದಾಕಿನಿ ಶ್ರೀನಿವಾಸ ಕಾಖಂಡಕಿ