ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಬ್ಬರ್ ಮರ

ವಿಕಿಸೋರ್ಸ್ದಿಂದ

ರಬ್ಬರ್ ಮರ - ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಆರ್ಥಿಕ ಪ್ರಾಮುಖ್ಯವುಳ್ಳ ಮರ. ಹೀವಿಯ ಬ್ರಸಿಲಿಯೆನ್ಸಿಸ್ ಇದರ ಸಸ್ಯಶಾಸ್ತ್ರೀಯ ಹೆಸರು. ದಕ್ಷಿಣ ಅಮೆರಿಕದ ಬ್ರಜಿóಲ್ ದೇಶದ ಅಮೆeóÁನ್ ನದೀಕಣಿವೆ ಇದರ ತವರು. 770-810ಅ ಉಷ್ಣತೆ, ಹೆಚ್ಚು ಆದ್ರ್ರತೆ ಇರುವ ಕಣಿವೆ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಸಬಹುದಾಗಿದೆ.

ದಕ್ಷಿಣ ಭಾರತದಲ್ಲಿ ಇದನ್ನು ಮೊತ್ತಮೊದಲಿಗೆ 1879ರಲ್ಲಿ ಬೆಳೆಸಲು ಪ್ರಯತ್ನಿಸಿದ ವರದಿ ಇದೆ. ಕೇರಳದ ಪೆರಿಯಾರ್ ನದೀದಡದ ತಟ್ಟಕಾಡ್‍ನಲ್ಲಿ ಮೊತ್ತಮೊದಲನೆಯ ರಬ್ಬರ್ ತೋಟ 1902ರಲ್ಲಿ ಸ್ಥಾಪಿತವಾಯಿತು. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ರಬ್ಬರ್ ತೋಟಗಳಿದ್ದು ಅರಣ್ಯ ಇಲಾಖೆಯ ವಾರ್ಷಿಕ ನೆಡುತೋಪುಗಳ ಕಾರ್ಯಕ್ರಮದಲ್ಲಿ ಇದೂ ಸೇರಿದೆ. ಕಾಡುಗಿಡ ಕಸಕಡ್ಡಿಗಳನ್ನು ಬೇರು ಸಹಿತ ತೆಗೆದು, ಚೊಕ್ಕಟವಾಗಿ ಹದಮಾಡಿದ ನೆಲದಲ್ಲಿ ಸಸಿಗಳನ್ನು ಮಳೆಗಾಲದಲ್ಲಿ ನೆಟ್ಟು, ಜಾನುವಾರು, ಜಿಂಕೆ ಇವುಗಳಿಂದ ಕಾಪಾಡಿ ಬೂಸರು ಇತ್ಯಾದಿ ಪೀಡೆಗಳಿಗೆ ಒಳಗಾಗದಂತೆ ರಕ್ಷಕ ಪದಾರ್ಥಗಳಿಂದ ಸಂಸ್ಕರಿಸಿ ಕೆಲವು ವರ್ಷ ಕಾಪಾಡಲಾಗುತ್ತದೆ. ಸಸಿನೆಟ್ಟ 6ನೆಯ ವರ್ಷದಿಂದ ರಬ್ಬರ್ ತೆಗೆಯಬಹುದಾದರೂ 8-10 ವರ್ಷಗಳ ಬಳಿಕ ಉತ್ಪತ್ತಿ ಹೆಚ್ಚುವುದು. ಕಾಂಡವನ್ನು ಚೊಕ್ಕಟ ಮಾಡಿ ಗಿ-ಆಕಾರದ ಕಚ್ಚುಮಾಡಿ, ಸಣ್ಣ ಬಟ್ಟಲುಗಳನ್ನು ಕೆಳಭಾಗದಲ್ಲಿ ಕಟ್ಟಿ ಅದರಲ್ಲಿ ಮರದಿಂದ ಒಸರುವ `ಹಾಲ್ನೊರೆಯನ್ನು (ಲೇಟೆಕ್ಸ್) ಸಂಗ್ರಹಿಸಲಾಗುತ್ತದೆ. ಇದನ್ನು ಸಂಸ್ಕರಿಸಿ ರಬ್ಬರ್ ತಯಾರಿಸಲಾಗುತ್ತದೆ.