ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೆನೆಟ್

ವಿಕಿಸೋರ್ಸ್ದಿಂದ

ರೆನೆಟ್ ಹಾಲು ಕುಡಿಯುವ ನವಜಾತ ಸ್ತನಿಗಳ ಜಠರರಸಗಳಲ್ಲಿ ಇರುವ ಪದಾರ್ಥ. ಇದರಲ್ಲಿ ಹಾಲನ್ನು ಗರಣೆಗಟ್ಟಿಸುವ ಕಿಣ್ವ ರೆನಿನ್ ಇದೆ. ಹಾಲು ಜೀರ್ಣಿಸಲು, ಅರ್ಥಾತ್, ಹಾಲಿನಲ್ಲಿ ಇರುವ ಕೇಸೀನ್ ಎಂಬ ಪ್ರೋಟೀನನ್ನು ಪ್ರತ್ಯೇಕಿಸಲು ಇದು ಆವಶ್ಯಕ. ಅಂಟು, ವಸ್ತ್ರ, ಬಣ್ಣ ಮತ್ತು ಪ್ಲಾಸ್ಟಿಕ್ ತಯಾರಿಗೂ ಕೇಸೀನ್ ಬಳಕೆ ಉಂಟು. ಗಿಣ್ಣು ಮತ್ತು ಜಂಕೆಟ್ ಎಂಬ ಮೊಸರೊಡಕಿನ ಸಿಹಿ ಭಕ್ಷ್ಯಗಳ ವಾಣಿಜ್ಯೋತ್ಪಾದನೆಯಲ್ಲಿ ರೆನೆಟ್ ಆಹರಣಗಳ ಬಳಕೆ ಉಂಟು. ಕರುಗಳ ನಾಲ್ಕನೆಯ ಜಠರದ ಒಳಭಿತ್ತಿಯಿಂದ ರೆನೆಟ್ ಆಹರಣಗಳ ವಾಣಿಜ್ಯೋತ್ಪಾದನೆ. (ಎನ್.ಎಸ್.ಜಿ.)