ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇಷ್ಮೆ ಉದ್ದಿಮೆಯಲ್ಲಿ ಮೌಲ್ಯವೃದ್ಧಿಗಾಗಿ ಉಪ ಉತ್ಪನ್ನಗಳ ಬಳಕೆ

ವಿಕಿಸೋರ್ಸ್ದಿಂದ

ರೇಷ್ಮೆ ಉದ್ದಿಮೆಯಲ್ಲಿ ಮೌಲ್ಯವೃದ್ಧಿಗಾಗಿ ಉಪ ಉತ್ಪನ್ನಗಳ ಬಳಕೆ


ರೇಷ್ಮೆ ಕೃಷಿಯ ಹಲವಾರು ಅಂಗ ಘಟಕಗಳನ್ನೊಳಗೊಂಡಿರುವ ಹಿನ್ನೆಲೆಯಿಂದಾಗಿ ಒಂದು ಸಂಕೀರ್ಣ ಉದ್ದಿಮೆ ಎಂದೇ ಪರಿಗಣಿತವಾಗಿದೆ. ಇವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ:-

  • ಮಣ್ಣಿನಿಂದ ಸೊಪ್ಪಿನ ಉತ್ಪಾದನೆವರೆಗಿನ ಕೃಷಿ ಘಟಕ.
  • ಮೊಟ್ಟೆಯಿಂದ ಗೂಡಿನ ಉತ್ಪಾದನೆವರೆಗಿನ ಪ್ರಾಣಿ ಸಾಕಾಣಿಕ ಘಟಕ.
  • ಗೂಡಿನಿಂದ ನೂಲು-ಬಟ್ಟೆ ಉತ್ಪಾದನೆವರೆಗಿನ ಔದ್ಯಮಿಕ ಘಟಕ.

ಉದ್ದಿಮೆಯಲ್ಲಿ ಒದಗುವ ಹಲವಾರು ಉಪ ಉತ್ಪನ್ನಗಳ ಸದ್ಬಳಕೆಯಾದರೆ ಅದರಿಂದಾಗುವ ಮೌಲ್ಯ ಆದಾಯ ವೃದ್ಧಿಯಿಂದಾಗಿ ಬಹುಶಃ ರೇಷ್ಮೆ ಉದ್ದಿಮೆಯ ಆದಾಯ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ.

ರೇಷ್ಮೆ ಉದ್ದಿಮೆಯ ಪ್ರಮುಖ ಉಪ-ಉತ್ಪನ್ನಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ.

ಉಪಉತ್ಪನ್ನಗಳು

ಉಪಯೋಗ


ಬಳಕೆಯಾಗದ ಸೊಪ್ಪು

ಹಿಕ್ಕೆ ಹಾಗೂ ಇತರೆ ಉಳಿಕೆ ಸಸ್ಯ ರೂಪ ತ್ಯಾಜ್ಯ

ಒಣ ಕಾಂಡ ಪದಾರ್ಥ

ಮರಗೆಡ್ಡೆ ಹುಳುವಿನ ಒಣಕೋಶ

ಉಳಿಕೆ ರೇಷ್ಮೆ ಕೊರೆದ, ಇತರ ವ್ಯರ್ಥಗೂಡು ಸಾವಯವ ಗೊಬ್ಬರ ತಯಾರಿಕೆ, ಮೇವಿನಂತೆ ಆಳವಡಿಕೆ. ಸಾವಯವ ಗೊಬ್ಬರ ತಯಾರಿಕೆ, ಜೈವಿಕ ಅನಿಲ ಉತ್ಪಾದನೆ, ಮೇವಿನಂತೆ ಅಳವಡಿಕೆ, ಕೋಳಿಸಾಕಣೆ, ಮೀನುಗಾರಿಕೆ ಇತ್ಯಾದಿ. ಉರುವಲು, ಕಾಗದ ತಯಾರಿಕೆ ಇತ್ಯಾದಿ ಕ್ರೀಡಾ ಪದಾರ್ಥ/ಸಲಕರಣೆ ತಯಾರಿಕೆ. ಕೋಳಿ ಹಾಗೂ ಮೀನು ಸಾಕಾಣಿಕೆಯಲ್ಲಿ ಆಹಾರ, ಸಾಬೂನು ತಯಾರಿಕೆಗಾಗಿ ಎಣ್ಣೆ, ಹಿಂಡಿ (ಗೊಬ್ಬರ ರೂಪದ ತಯಾರಿಕೆ), ಮೇಣದ ಉತ್ಪಾದನೆ ಇತ್ಯಾದಿ. ಹಿಂಜು ರೇಷ್ಮೆ ತಯಾರಿಕೆ. ಹಿಂಜು ರೇಷ್ಮೆ ತಯಾರಿಕೆ.


ಬಹುಶಃ ಆ ದೇಶದ ರೇಷ್ಮೆ ಉದ್ದಿಮೆಯ ಪ್ರತಿಯೊಂದು ಉಪಉತ್ಪನ್ನ, ವ್ಯರ್ಥ ಪದಾರ್ಥಗಳ ಅಳವಡಿಕೆಯನ್ನು ಅವಲೋಕಿಸಿದರೆ ನಂಬಲಸಾಧ್ಯವಾದ ಚಿತ್ರಣ ಎದುರಾಗಬಹುದಾಗಿದೆ. ಇವುಗಳಲ್ಲಿ ಪ್ರಮುಖವಾದುವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದಾಗಿದೆ.

  • ಹಿಪ್ಪುನೇರಳೆ ತೊಗಟೆಯಿಂದ ಕಾಗದ ತಯಾರಿಕೆ.
  • ಕೋಶಗಳ ಆಹಾರ ರೂಪದ ಬಳಕೆ, ಎಣ್ಣೆ ಹಾಗೂ ಔಷಧಿ ತಯಾರಿಕೆ.
  • ಚಿಟ್ಟೆಗಳಿಂದ ವೈನ್ ಹಾಗೂ ಔಷಧಿ ತಯಾರಿಕೆ.
  • ಹಿಕ್ಕೆಗಳಿಂದ ಹಲವಾರು ಉತ್ಪನ್ನಗಳ ತಯಾರಿಕೆ.

ಉದಾ: ಹರಿತ್ತು, ಸೋಡಿಯಂ ಕಾಪರ್ ಕ್ಲೋರೋಫಿಲಿನ್, ಪೆಕ್ಟಿನ್, ಫೈಟೋಲ್, ಕೆರೋಟಿನ್, ಟ್ರಯೋಕಾಂಟಾನಾಲ್ ಇತ್ಯಾದಿ ಔಷಧೀಯ ಕೃಷಿ ಹಾಗೂ ಆಹಾರ ಬಳಕೆ ಪದಾರ್ಥಗಳು. ಹಿಪ್ಪು ನೇರಳೆ ಸೊಪ್ಪು : ಸಾಮಾನ್ಯ ಪ್ರಾಣಿ ಜೀವ ಪೂರಕ ಅಂಶಗಳನ್ನು ಹೊಂದಿದ ಹಿಪ್ಪುನೇರಳೆ ಸೊಪ್ಪು ಹಲವಾರು ಇತರ ಬಳಕೆಗೆ ಸೂಕ್ತವಾಗಿದ್ದು, ಆಯಾ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇವುಗಳಲ್ಲಿ ಪ್ರಮುಖವಾದುವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. 1. ಹಿಪ್ಪು ನೇರಳೆ ಚಹಾ/ಕಷಾಯ: ಇದು ಚೈನಾ ದೇಶದಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಿದೆ. 2. ಕರ್ರಿ : ಎಳೆಯ ಹಿಪ್ಪುನೇರಳೆ ಸೊಪ್ಪಿನೊಂದಿಗೆ, ಕೊಬ್ಬರಿ ಎಣ್ಣೆ, ಸಾಸಿವೆ, ಹಸಿಮೆಣಸಿನಕಾಯಿ, ಕೋಳಿ ಮೊಟ್ಟೆ, ಕರಿಬೇವು, ಉಪ್ಪು, ಈರುಳ್ಳಿಗಳ ಅಳವಡಿಕೆಯಿಂದ ತಯಾರಿಕೆ. 3. ಪರಾಠ: ಎಳೆಯ ಹಿಪ್ಪುನೇರಳೆ ಸೊಪ್ಪು. ಗೋಧಿ ಹಿಟ್ಟು, ಕೆಂಪು ಮೆಣಸಿನಕಾಯಿ, ಉಪ್ಪು, ಎಣ್ಣೆಗಳ ಅಳವಡಿಕೆಯಿಂದ ತಯಾರಿಕೆ. 4. ಪಕೋಡ: ಎಳೆಯ ಹಿಪ್ಪುನೇರಳೆ ಸೊಪ್ಪು, ಕಡ್ಲೆಹಿಟ್ಟು, ಉಪ್ಪು, ಕೆಂಪು ಮೆಣಸಿನಕಾಯಿ, ಎಣ್ಣೆಗಳ ಅಳವಡಿಕೆಯಿಂದ ತಯಾರಿಕೆ. 5. ಸಾಗು: ಎಳೆಯ ಹಿಪ್ಪುನೇರಳೆ ಸೊಪ್ಪು, ಟೊಮ್ಯಾಟೊ, ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಹಸಿಶುಂಠಿ, ಮೆಂತ್ಯ ಬೀಜ, ಉಪ್ಪು, ಎಣ್ಣೆಗಳ ಅಳವಡಿಕೆಯಿಂದ ತಯಾರಿಕೆ. 6. ಢೋಕ್ಲ: ಎಳೆಯ ಹಿಪ್ಪುನೇರಳೆ ಸೊಪ್ಪು, ಕಡ್ಲೆ ಬೇಳೆ, ಅಡಿಗೆ ಸೋಡ, ಉಪ್ಪು, ಮೆಣಸಿನಕಾಯಿ, ಮೆಂತ್ಯ ಬೀಜ, ಕರಿಬೇವು, ನಿಂಬೆಹಣ್ಣುಗಳ ಅಳವಡಿಕೆಯಿಂದ ತಯಾರಿಕೆ. ಈ ರೀತಿ ಹಲವು ಉಪಯುಕ್ತ ಗುಣಧರ್ಮ/ಘಟಕಗಳನ್ನು ಹೊಂದಿದ ಮಾನವ ಸೇವನೆ ಪೂರಕ ಪೋಷಕಾಂಶಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ವೈಜ್ಞಾನಿಕವಾಗಿ ನಮ್ಮ ನಿತ್ಯ ಆಹಾರದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಅಂತೆಯೇ ಮನೆಯಂಗಳದಲ್ಲಿ ಒಂದೆರಡು ಹಿಪ್ಪುನೇರಳೆ ಸಸಿಗಳನ್ನು ಬೆಳಸಿ, ಅವಶ್ಯಕ ಸೊಪ್ಪನ್ನು ಪಡೆಯುವುದೇ ಅಲ್ಲದೇ ಸೊಪ್ಪಿನಿಂದ ಸ್ವಾದಿಷ್ಟ, ವೈವಿಧ್ಯಮಯ ಆಹಾರ ಪದಾರ್ಥಗಳ ಪಟ್ಟಿಯನ್ನು ಬೆಳೆಸಬಹುದಾಗಿದೆ. ಹಿಪ್ಪುನೇರಳೆ ಹಣ್ಣು : ಮಳೆ ಆಶ್ರಿತ ತೋಟಗಳಲ್ಲಿ ಹಾಗೂ ಕಟಾವನ್ನು ಮಾಡದಿರುವ ಹಿಪ್ಪುನೇರಳೆ ಮರಗೆಡ್ಡೆಗಳಲ್ಲಿ ನೈಸರ್ಗಿಕವಾಗಿ ಹಣ್ಣಿನ ಉತ್ಪಾದನೆ ಕೆಲವು ಋತುಮಾನಕ್ಕನುಸರಿಸಿ, ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲೂ ಕಂಡುಬರುತ್ತದೆ. ಹೆಣ್ಣು ಹೂವನ್ನು ಹೊಂದಿದ ಎಲ್ಲಾ ಪ್ರಬೇಧ/ತಳಿಗಳಲ್ಲೂ ಹಣ್ಣು ಕಂಡುಬರುವುದು. ಅಂತೆಯೇ ನಮ್ಮಲ್ಲಿ ಪ್ರಚಲಿತ ಮೈಸೂರು ನಾಟಿ, ಕಣ್ವ-2, ಹಾಗೂ ಇತರೆ ತಳಿಗಳಲ್ಲಿ ಹಣ್ಣಿನ ಬೆಳವಣಿಗೆಯನ್ನು ಕಾಣಬಹುದಾಗಿದೆ. ಹಣ್ಣಿಗೆಂದೇ ವಿಶೇಷವಾಗಿ ಗುರುತಿಸಲ್ಪಟ್ಟ ಪ್ರಬೇಧ/ತಳಿಗಳೆಂದರೆ ಒoಡಿus ಚಿಟbಚಿ vಚಿಡಿ. ಚಿಣಡಿoಠಿuಡಿಠಿuಡಿeಚಿ, ಒoಡಿus ಟಿigಡಿಚಿ ಮುಂತಾದವುಗಳನ್ನು ಹೆಸರಿಸಬಹುದಾಗಿದೆ. ಇಂತಹ ಹಣ್ಣಿನ ವಾಣಿಜ್ಯಕ ಉತ್ಪಾದನೆ ಮಾರಾಟವನ್ನು ಮಹಾರಾಷ್ಟ್ರದ ಮಹಾಬಲೇಶ್ವರವೂ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ಕಾಣಬಹುದಾಗಿದೆ. ಬಿಳಿ, ಗುಲಾಬಿ ಮಿಶ್ರಿತ ಬಿಳಿ, ತೆಳು ಅಥವಾ ಗಾಢ ನೇರಳೆ ಅಥವಾ ಕಪ್ಪು ಬಣ್ಣಗಳ ಪ್ರಕಾರದ್ದಾಗಿರಬಹುದು. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ವಾರ್ಷಿಕ ಎರಡು ಬಾರಿ: ಜೂನ್-ಜುಲೈ ಹಾಗೂ ನವೆಂಬರ್-ಡಿಸೆಂಬರ್‍ನಲ್ಲಿ ಹಣ್ಣು ಉತ್ಪಾದನೆಯಾಗುತ್ತದೆ. ಒoಡಿus ಟಿigಡಿಚಿ ಎಂಬ ಪ್ರಬೇಧದಲ್ಲಿ ಮೇ-ಜೂನ್‍ನಲ್ಲಿ ಹಣ್ಣುಬಿಡುತ್ತದೆ. ಇದರ ಹಣ್ಣುಗಳು ಕಪ್ಪಗಿದ್ದು 2ರಿಂದ 2.5ಸೆಂ.ಮೀ. ಉದ್ದ, ಮೊಟ್ಟೆಯಾಕಾರವನ್ನು ಹೊಂದಿರುತ್ತದೆ. ಒoಡಿus seಡಿಡಿಚಿಣಚಿ ನ ಹಣ್ಣು 2.5ನಿಂದ 5.0 ಸೆಂ.ಮೀ. ಉದ್ದವಿದ್ದು, ನೇರಳೆ ಬಣ್ಣವನ್ನು ಹೊಂದಿರುತ್ತದೆ. ಹಿಪ್ಪುನೇರಳೆ ಹಣ್ಣುಗಳನ್ನು ನೇರವಾಗಿ ಸೇವಿಸುವುದೇ ಅಲ್ಲದೆ, ಉಪ್ಪಿನಕಾಯಿ, ಜಾಮ್, ಜೆಲ್ಲಿ, ಶರಬತ್ತು, ವೈನ್ ಮುಂತಾದ ಸ್ವಾದಿಷ್ಟ ತಯಾರಿಕೆಗಳಿಗೆ ಉಪಯೋಗಿಸಬಹುದಾಗಿದ್ದು, ಇವು ಹಲವಾರು ಆರೋಗ್ಯ ಪೂರಕ ಪೋಷಕಾಂಶ ಭರಿತವಾಗಿದ್ದುದೇ ಅಲ್ಲವೇ ಹಲವು ಔಷಧೀಯ ಗುಣಗಳನ್ನು ಹೊಂದಿವೆ. ಹಣ್ಣಿನಲ್ಲಿ ದೊರಕುವ ಪ್ರಮುಖ ಪೋಷಕಾಂಶ, ಪೂರಕ ಅಂಶಗಳ ಪೈಕಿ. ಪ್ರೋಟೀನ್, ಪಿಷ್ಠ, ಸಕ್ಕರೆಗಳಲ್ಲದೇ ಸುಣ್ಣ, ರಂಜಕ, ಕಬ್ಬಿಣ ಮುಂತಾದ ಖನಿಜಾಂಶಗಳು ಹಾಗೂ ವಿಟಮಿನ್ ಮತ್ತು ಅಮೈನೊ ಆಮ್ಲಗಳನ್ನು ಪ್ರಮುಖವಾಗಿ ಹೆಸರಿಸಬಹುದಾಗಿದೆ. ಹಣ್ಣಿನಿಂದ ತಯಾರಾದ ಶರಬತ್, ಕಷಾಯಗಳು-ದೇಹಕ್ಕೆ ತಂಪು ಒದಗಿಸುವುದಲ್ಲದೇ ಭೇದಿ ತಡೆಗಾಗಿ ಔಷಧಿ ರೂಪದಲ್ಲೂ ಬಳಸಬಹುದಾಗಿದೆ. ಆದರೆ ಆಮಶಂಕೆ ಪೀಡಿತರಿಗೆ ಇದು ಸೂಕ್ತವಲ್ಲ. ಹಣ್ಣು ಹೊಂದಿದ ಹುಳಿ-ಪೂರಿತ (ವಿಟಮಿನ್-ಸಿ) ವಿಶೇಷ ರುಚಿಯಿಂದಾಗಿ ವಿಶೇಷವಾಗಿ ಗರ್ಭಿಣಿ ಸ್ತ್ರೀಯರು ಇದನ್ನು ಅಗಿದು ತಿನ್ನಲು ಇಷ್ಟಪಡುತ್ತಾರೆ. ಹಿಪ್ಪುನೇರಳೆ ಉರುವಲಿವಾಗಿ (ಕಟ್ಟಿಗೆ) ಮರವಾಗಿ ಬೆಳೆದರೆ: ಹಿಪ್ಪುನೇರಳೆ ಕಟ್ಟಿಗೆಯು ನುಣುಪಿನೊಂದಿಗೆ ಗಟ್ಟಿತನವನ್ನು ಹೊಂದಿದ್ದು, ಇದನ್ನು ವಿಶೇಷವಾಗಿ ಕ್ರೀಡಾ ಸಾಮಗ್ರಿ ಉಪಕರಣಗಳ ತಯಾರಿಕೆಗಾಗಿ ಬಳಸಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಆವಿಯಿಂದ ಉಪಚರಿಸಿದರೆ ಅದು ಹಿಗ್ಗುವ ಹಾಗೂ ಮಣಿಯುವ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳುವ ಹಿನ್ನೆಲೆಯಲ್ಲಿ ಕ್ರಿಕೆಟ್, ಹಾಕಿ, ಟೆನ್ನಿಸ್, ಬ್ಯಾಂಡ್ಮಿಟನ್ ಮುಂತಾದ ಕ್ರೀಡಾ ಉಪಕರಣಗಳನ್ನು ತಯಾರಿಕೆಗೆ ಬಹಳ ಜನಪ್ರಿಯವಾಗಿದೆ. ಇದರ ವಿಶೇಷ ಗುಣಗಳಿಂದಾಗಿ, ಗೃಹೋಪಯೋಗಿ ಪೀಠೋಪಕರಣ, ಕೃಷಿ ಸಾಮಗ್ರಿ ಹಾಗೂ ಇತರೆ ಹಲವೆಡೆಗಳಲ್ಲೂ ಬಳಸಲಾಗುತ್ತಿದೆ. ಹಿಪ್ಪುನೇರಳೆ ತೊಗಟೆ: ಮರದ ತೊಗಟೆಯ ಹೊಂದಿದ ನಾರಿನ ಗುಣಧರ್ಮದಿಂದಾಗಿ ಇದನ್ನು ಚೈನಾ ಹಾಗೂ ಯುರೋಪ್‍ಗಳಲ್ಲಿ ಕಾಗದ ತಯಾರಿಕೆಗೆ ಬಳಸಲಾಗುತ್ತಿದೆ. ಸೊಪ್ಪು ಬಿಡಿಸಿದ ನಂತರ ದೊರಕುವ ಕಡ್ಡಿಗಳ ತೊಗಟೆಯನ್ನು ಸುಲಿದು ಸಣ್ಣ ಪ್ರಮಾಣದಲ್ಲಿ ಗೃಹ ಕೈಗಾರಿಕಾ ರೂಪದಲ್ಲಿ ಕಾಗದ ತಯಾರಿಕೆಗೆ ಬಳಸಬಹುದಾಗಿದೆ. ಈ ರೀತಿ ಸುಲಿದ ತೊಗಟೆಯನ್ನು ಶೇ.14ರ ಕಾಸ್ಟಿಕ್ ಸೋಡ ದ್ರಾವಣದಲ್ಲಿ ಉಪಚರಿಸಿ ಶೇ.5ರ ಕ್ಲೋರಿನ್ ದ್ರಾವಕದಲ್ಲಿ ಬಣ್ಣ ಕಲಸಿ ಕಾಗದ ತಯಾರಿಕೆಗೆ ಪಲ್ಪನ್ನು ಪಡೆಯಬಹುದು. ಹಿಪ್ಪು ನೇರಳೆ ಕಡ್ಡಿ-ಕಾಂಡ-ಬೇರು: ರೇಷ್ಮೆ ಕೃಷಿಯಲ್ಲಿ ಹಿಪ್ಪುನೇರಳೆ ಕಡ್ಡಿ, ಕಾಂಡ, ಬೇರು ಮುಂತಾದ ಉಳಿಕೆ ಪದಾರ್ಥಗಳನ್ನು ಆಯಾ ಪ್ರದೇಶದಲ್ಲಿ ಪ್ರಮುಖ ಉರುವಲಿಗಾಗಿ (ಸೌದೆ) ಬಳಸಲಾಗುತ್ತಿದೆ. ಜೊತೆಗೆ ಸೂಕ್ತವಾದ ಕಡ್ಡಿಗಳನ್ನು, ಹುಳು-ಸಾಕಾಣೆಯ ಮನೆ, ವಾಸದ ಗುಡಿಸಲು, ಛಾವಣಿ ಹಾಗೂ ಬುಟ್ಟಿಗಳ ತಯಾರಿಕೆಗೆ ಬಳಸುತ್ತಾರೆ. ಅಂದಾಜು ವಾರ್ಷಿಕ ಎಕರೆ ಒಂದಕ್ಕೆ 10ಟನ್ ಸೊಪ್ಪಿನ ಉತ್ಪಾದನೆಯ ತೋಟದಿಂದ ಅಂದಾಜು 8-12ಟನ್ ಕಡ್ಡಿಗಳ ಉತ್ಪಾದನೆಯಾಗುತ್ತದೆ. ನಾಟಿಗಾಗಿ ಒದಗುವ ಕಡ್ಡಿಯ ಜೊತೆಗೆ, ರೈತರಿಗೆ ಇದೊಂದು ಪರ್ಯಾಯ ಆದಾಯದ ಮೂಲವಾಗಿ ರೂಪುಗೊಂಡಿವೆ. ಹಿಪ್ಪುನೇರಳೆಯ ಒಟ್ಟಾರೆ ಔಷಧೀಯ ಗುಣಧರ್ಮಗಳು: ಹಿಪ್ಪುನೇರಳೆಯ ಹಲವಾರು ವಿಶಿಷ್ಟ ರಾಸಾಯನಿಕ ಜೀವರಾಸಾಯನಿಕ ಪದಾರ್ಥಗಳಿಂದ ಅನೇಕ ಔಷಧೀಯ ಗುಣಧರ್ಮಗಳನ್ನು ಹೊಂದಿದೆ. ಅವುಗಳಲ್ಲಿ,

  • ಕುವನಾನ್ ಜಿ ಮತ್ತು ಹೆಚ್ ಎಂಬ ಫೆನೋಲಿಕ್ ಪದಾರ್ಥವು ಭೂಷ್ಟ್ ಹಾಗೂ ಸೂಕ್ಷ್ಮಾಣು ನಿರೋಧಕ ಶಕ್ತಿಯನ್ನು ಹೊಂದಿದೆ.
  • ಪ್ರಿನೈಲ್ ಪ್ಲೆವನಾಯಡ್ ಸಂಬಂಧಿತ ರಾಸಾಯನಿಕಗಳು ಮಾಂಸಗೆಡ್ಡೆ ಬೆಳವಣಿಗೆಯನ್ನು ತಡೆಯಬಲ್ಲವು.
  • ಬೇರಿನ ದ್ರಾವಕವು ಹಲವು ಉರಿತ ಸಂಬಂಧಿತ ತೊಂದರೆಗಳನ್ನು ನಿವಾರಿಸಬಲ್ಲದು.
  • ಕಾಂಡದ ಹಾಲು-ದ್ರವವು ಗಾಯ ವಾಸಿ ಮಾಡುವ ಶಕ್ತಿಯನ್ನು ಹೊಂದಿದೆ.
  • ಸೊಪ್ಪಿನ ರಸವು ಚರ್ಮ ಮೃದುತ್ವವನ್ನು ಕಾಪಾಡಬಲ್ಲದು.
  • ಹಣ್ಣು ತಂಪು ಪರಿಣಾಮವನ್ನು ಹೊಂದಿದ್ದು, ಭೇದಿ ತಡೆಗೆ ಹಾಗೂ ಅತಿ ಜ್ವರವನ್ನು ತಡೆಯಲು, ಗಂಟಲು ಬೇನೆ ಹಾಗೂ ಇನ್ನಿತರ ತೊಂದರೆಗಳ ನಿವಾರಣೆಗೆ ಬಳಸಬಹುದು.
  • ಬೇರನ್ನು ಅಳವಡಿಸಿ ತಯಾರಾದ ಔಷಧಿಗಳನ್ನು ಕಫ, ಜ್ವರ, ಅಸ್ತಮಾ, ನ್ಯೂಮೋನಿಯಾ ಮುಂತಾದ ರೋಗಗಳ ಆರೈಕೆಗೆ ಬಳಸಲಾಗುತ್ತದೆ.
  • ಚೀನಾದಲ್ಲಿ ಕಾಂಡದ ತಿರುಳುಗಳನ್ನು ಬಳಸಿ ತಯಾರಾದ “ಎಚಿiಟಿg gi ಆiಟಿg ಅhvಚಿಟಿ Sಚಿಟಿ” ಎಂಬ ಔಷಧಿಯನ್ನು ಅಸ್ತಮಾ ಸಂಬಂಧಿತ ಕಾಯಿಲೆಯ ಉಪಚಾರಕ್ಕೆ ಬಳಸಲಾಗುತ್ತದೆ.
  • ಎಲೆಯ ಕಷಾಯವನ್ನು ಗಂಟಲು ಬೇನೆ, ಕಫ ಮುಂತಾದ ತೊಂದರೆ ನಿವಾರಣೆಗೆ ಬಳಸಬಹುದಾಗಿದೆ.

ಹುಳು ಸಾಕಣೆಯ ಕಸದಿಂದ ಕಾಂಪೋಸ್ಟ್ ಗೊಬ್ಬರ : ರೇಷ್ಮೆ ಹುಳು ಸಾಕಣೆಯಲ್ಲಿ ಒದಗಿಸಿದ ಸೊಪ್ಪು ಕಾಂಡಗಳ ಭಾಗಗಳು ಪೂರ್ತಿಯಾಗಿ ಸೇವನೆಯಾಗದೆ ಗಮನಾರ್ಹ ಪ್ರಮಾಣದಲ್ಲಿ ಉಳಿಕೆ ಕಸವು ಲಭ್ಯವಾಗುವುದು. ಒಂದು ಅಂದಾಜಿನ ಪ್ರಕಾರ ಪ್ರತಿ ನೂರು ಮೊಟ್ಟೆ ಹುಳು ಸಾಕಾಣೆಯಿಂದ ಅಂದಾಜು 100ರಿಂದ 150 ಕಿ.ಗ್ರಾಂ. ಉಳಿಕೆ ಸೊಪ್ಪು, ಎಳೆ ಕಡ್ಡಿಗಳಲ್ಲದೆ ಸುಮಾರು 100-150 ಕಿ.ಗ್ರಾಂ. ಹಿಕ್ಕೆಯು ದೊರಕುತ್ತದೆ. ಇಂತಹ ಉಳಿಕೆ ಸೊಪ್ಪು ಕಡಿಗಳನ್ನು ಹಾಗೂ ಹಿಕ್ಕೆಗಳನ್ನು ಸಾಮಾನ್ಯವಾಗಿ ದನದ ಮೇವಿಗಾಗಿ ಬಳಸಲಾಗುವುದಾದರೂ ಪರ್ಯಾಯವಾಗಿ ನೇರ ರೂಪದಲ್ಲಿ ಕಾಂಪೋಸ್ಟ್‍ಗಾಗಿ ಬಳಸಬಹುದಾಗಿದೆ. ಇಂತಹ ಕಸದಲ್ಲಿ ಪ್ರಮುಖ ಸಸ್ಯಕಾಂಶಗಳು ಗಮನಾರ್ಹ ಪ್ರಮಾಣದಲ್ಲಿದ್ದು (ಕೋಷ್ಟಕ) ಕಾಂಪೋಸ್ಟ್ ತಯಾರಿಕೆಗೆ ಬಳಸಿ ಅವುಗಳ ವ್ಯರ್ಥ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ.


ಹಿಪ್ಪುನೇರಳೆ ಸೊಪ್ಪು ಹುಳುಸಾಕಣೆಯ ಕಸ

ಸಾರಜನಕ ರಂಜಕ ಪೊಟ್ಯಾಷ್ 3-5% 0.2-0.5% 1.5-4.0% 1.2% 0.2-0.3% 1.0-2.0%


	ಒಂದು ಎಕರೆ ತೋಟದಿಂದ ಅಂದಾಜು ವಾರ್ಷಿಕ 4 ಟನ್ ಸಾಕಾಣಿಕೆ ಕಸ ಹಾಗೂ 4-5 ಟನ್ ಸಾಕಾಣಿಕೆ ಕಸ ಹಾಗೂ 4-5 ಟನ್ ಎಳೆಯ ಕಡ್ಡಿ ಹಾಗೂ ಇತರೆ ವ್ಯರ್ಥ ಉಳಿಕೆ ಪದಾರ್ಥಗಳು ಲಭ್ಯವಿದ್ದು, ಅವುಗಳ ಬಳಕೆಗೆ ಮೇಲೆ ತಿಳಿಸಿದ ಗಾತ್ರದ ಮೂರು ಗುಂಡಿಗಳನ್ನು ಒಂದು ಎಕರೆ ತೋಟಕ್ಕೆ ಹೊಂದಬಹುದಾಗಿದೆ. ಇದರಿಂದಾಗಿ ಅಂದಾಜು ವಾರ್ಷಿಕ 4 ಟನ್ ಕಾಂಪೋಸ್ಟ್ ಉತ್ಪಾದಿಸಬಹುದು.

ರೇಷ್ಮೆ ಹುಳು ಸಾಕಣೆ ಕಸ ಹಾಗೂ ಹಿಕ್ಕೆಗಳನ್ನು ನೇರವಾಗಿ ಭೂಮಿಗೆ ಸೇರಿಸಬಹುದಾದರೂ ಅದು ಹೊಂದಿರಬಹುದಾದ ರೇಷ್ಮೆ ಹುಳುವಿನ ರೋಗಾಣುಗಳ ನಾಶಕ್ಕಾಗಿ ಕಾಂಪೋಸ್ಟ್ ಮಾಡುವುದು ಹೆಚ್ಚು ಸೂಕ್ತ. ಕಾಂಪೋಸ್ಟ್ ಪ್ರಕ್ರಿಯೆಯಲ್ಲಿ ಒದಗುವ 60-65ಲಿಅ ನಷ್ಟು ಅಧಿಕ ಉಷ್ಣಾಂಶದಿಂದಾಗಿ ಇಂತಹ ರೋಗಾಣುಗಳು ನಾಶ ಹೊಂದುತ್ತದೆ. ಹುಳು ಸಾಕಣೆ ಕಸದಿಂದ ಎರೆಹುಳುವಿನ ಗೊಬ್ಬರ: ಎರೆಹುಳುವಿನ ಸಮರ್ಥ ತಳಿಗಳನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರಿಕೆಗಾಗಿ ಪ್ರಯತ್ನಿಸಲಾಗುತ್ತಿದೆ. ಹುಳು ಸಾಕಣೆ ಕಸವನ್ನು ಮೌಲ್ಯ ವೃದ್ಧಿಗಾಗಿ ಎರೆಹುಳುವಿನ ಗೊಬ್ಬರ ತಯಾರಿಕೆಗಾಗಿ ಅಳವಡಿಸಬಹುದಾಗಿದೆ. ಈ ಪ್ರಕ್ರಿಯೆಯಿಂದ ಕಾಂಪೋಸ್ಟ್ ತಯಾರಿಕೆಯ 4-5 ತಿಂಗಳ ಅವಧಿಯನ್ನು ಸುಮಾರು 2 ತಿಂಗಳಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ಜೊತೆಗೆ ಈ ರೀತಿ ತಯಾರಿಸಿದ ಗೊಬ್ಬರವು ದುರ್ವಾಸನೆ ಹಾಗೂ ರೋಗಗಳಿಂದ ಮುಕ್ತವಾಗಿದ್ದು ಹಲವಾರು ಅನುಕೂಲಕರ ಸೂಕ್ಷ್ಮಾಣುಗಳನ್ನು ಹೊಂದಿರುವುದೇ ಅಲ್ಲದೆ ಹಲವಾರು ಸಸ್ಯ ಪೋಷಕಾಂಶಗಳ ಆಗರವಾಗಿದೆ. ಎರೆಹುಳುವು ತಾನು ಸೇವಿಸುವ ಆಹಾರದ ಕೇವಲ ಶೇಕಡ 10ರಷ್ಟು ಮಾತ್ರ ಜೀರ್ಣಿಸಿ ಉಳಿದ 90%ರಷ್ಟನ್ನು ಪರಿಪಾಕಿಸಿ, ಗುಣಾತ್ಮಕ ಮೌಲ್ಯ ವೃದ್ಧಿಯೊಂದಿಗೆ ಹಿಕ್ಕೆ ರೂಪದಲ್ಲಿ ಹೊರ ಚೆಲ್ಲುತ್ತದೆ. ಇಂತಹ ಹಿಕ್ಕೆಗಳು ಹಲವಾರು ಸಸ್ಯ ಪೋಷಕಾಂಶಗಳೊಂದಿಗೆ, ವಿಟಮಿನ್, ಕಿಣ್ವಗಳು ಹಾಗೂ ಹಲವು ರೋಗ ನಿರೋಧಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಎರೆಹುಳುವಿನ ಗೊಬ್ಬರವು ಹಲವಾರು ಪೋಷಕಾಂಶಗಳನ್ನು ಒದಗಿಸುತ್ತವೆ. ಇದನ್ನು ಎಕರೆ ಒಂದಕ್ಕೆ 2 ಟನ್ ಪ್ರಮಾಣದಲ್ಲಿ ಹಿಪ್ಪುನೇರಳೆ ತೋಟಕ್ಕೆ ಒದಗಿಸಬಹುದು. ದನದ ಮೇವಿಗಾಗಿ ರೇಷ್ಮೆ ಹುಳುವಿನ ಹಿಕ್ಕೆ: ರೇಷ್ಮೆ ಹುಳುವು ಅಗಾಧವಾದ ದೇಹ ಬೆಳವಣಿಗೆ ಗತಿಯನ್ನು ಹೊಂದಿದೆ. ಚಾಕಿ ಒಡೆದು ಮರಿ ಆದಾಗಿನ ದೇಹ ತೂಕ 0.5 ಮಿ.ಗ್ರಾಂ.ನಿಂದ ಸುಮಾರು 25 ದಿನಗಳಲ್ಲಿ 10,000 ಪಟ್ಟು ಬೆಳೆದು ಸುಮಾರು 5ಗ್ರಾಂವರೆಗೆ ತಲುಪುತ್ತದೆ. ಒಂದು ಹುಳುವು ಅಂದಾಜು 20ಗ್ರಾಂ ಸೊಪ್ಪಿನ ಸೇವನೆ ಮಾಡಿ 4-5ಗ್ರಾಂ ತೂಕ ಸಾಧನೆಗೈದು, ಸುಮಾರು 15ಗ್ರಾಂ ಸೊಪ್ಪನ್ನು ವ್ಯರ್ಥಗೊಳಿಸಿ ದ್ರವ ಹಾಗೂ ಹಿಕ್ಕೆ ರೂಪದಲ್ಲಿ ದೇಹದಿಂದ ಹೊರಚೆಲ್ಲುತ್ತದೆ. ಒಂದು ಹುಳು ತನ್ನ ಜೀವಿತಾವಧಿಯಲ್ಲಿ ಅಂದಾಜು 10-12 ಗ್ರಾಂನಷ್ಟು ಹಿಕ್ಕೆಯನ್ನು ಒದಗಿಸುತ್ತದೆ. ಈ ರೀತಿ 100 ಮೊಟ್ಟೆ (40,000 ಹುಳು0ಗಳ ಸಾಕಣೆಯಿಂದ 400-500 ಕಿ.ಗ್ರಾಂ. ಹಿಕ್ಕೆ ಉತ್ಪಾದನೆ, ವಾರ್ಷಿಕ ಎಕರೆ ಒಂದಕ್ಕೆ ಒಂದು ಸಾವಿರ ಮೊಟ್ಟೆ ಸಾಕಣೆಯಿಂದ 4000-5000 ಕಿ.ಗ್ರಾಂ. (4-5 ಟನ್) ಹಿಕ್ಕೆ ಉತ್ಪಾದನೆ ಆಗುತ್ತದೆ. ಈ ರೀತಿ ಉತ್ಪಾದಿತ ಹಿಕ್ಕೆಯಲ್ಲಿ ಸಾಮಾನ್ಯ ಮೇವಿಗಿಂತ ಅಧಿಕ ಪ್ರಮಾಣದ ಪ್ರೋಟೀನ್‍ನನ್ನು ಹೊಂದಿದೆ. ಈ ಗುಣಮಟ್ಟದಿಂದಾಗಿ ಹಿಕ್ಕೆಯನ್ನು ಹಸು, ಆಡು, ಕುರಿ, ಕೋಳಿ, ಹಂದಿ ಮುಂತಾದ ಪ್ರಾಣಿಗಳಿಗೂ ಮೇವಿನ ರೂಪದಲ್ಲಿ ಬಳಸಬಹುದಾಗಿದೆ. ಜೈವಿಕ ಅನಿಲ ಉತ್ಪಾದನೆಗಾಗಿ ರೇಷ್ಮೆ ಹುಳುವಿನ ಹಿಕ್ಕೆ: ರೇಷ್ಮೆ ಹುಳುವಿನ ಹಿಕ್ಕೆಯನ್ನು ಮಾಡಿ ಜೈವಿಕ ಅನಿಲ ಉತ್ಪಾದನೆ ಸಾಧ್ಯ. ಜೈವಿಕ ಅನಿಲ ಉತ್ಪಾದನೆಯಲ್ಲಿ ವಿವಿಧ ಅನುಕೂಲಕರ ಗುಂಪಿನ ಸೂಕ್ಷ್ಮ ಜೀವಾಣುಗಳ ಅಳವಡಿಕೆಯಿಂದ ಸಾವಯವ ಪದಾರ್ಥಗಳ ಕಳಿಕೆ/ಪರಿಷ್ಕರಣೆಯನ್ನು ನಿಯೋಜಿತ ವ್ಯವಸ್ಥೆಯಲ್ಲಿ ನಿಯೋಜಿಸಿ ಹಂತ-ಹಂತವಾಗಿ ಮಿಥೇನ್ ಹಾಗೂ ಇಂಗಾಲದ ಡೈ ಆಕ್ಸೈಡ್‍ನ ಮಿಶ್ರಣದ ಉತ್ಪಾದನೆಯನ್ನು ಪಡೆಯುವುದು ಸಾಧ್ಯ. * ಹುಳುವಿನ ಹಿಕ್ಕೆಯನ್ನು ಜೈವಿಕ ಅನಿಲ ಉತ್ಪಾದನೆಗಾಗಿ ಸಗಣಿಗೆ ಪರ್ಯಾಯವಾಗಿ ಅಷ್ಟೇ ಸಮರ್ಥವಾಗಿ ಬಳಸಬಹುದು. * ಸಗಣಿ ಇತ್ಯಾದಿ ಸಾಮಾನ್ಯ ಬಳಕೆಯ ಕಚ್ಚಾ ವಸ್ತುವಿನೊಂದಿಗೆ ಹಿಕ್ಕೆಯನ್ನು ಮಿಶ್ರಣ ರೂಪದಲ್ಲಿ ಬಳಸಿದ ಅನಿಲ ಉತ್ಪಾದನೆಯನ್ನು ಒಂದೂವರೆಯಿಂದ ಎರಡು ಪಟ್ಟು ವೃದ್ಧಿಸಬಹುದು. * ಗುಣಾತ್ಮಕವಾಗಿ ಕೇವಲ ಹಿಕ್ಕೆಯ ಅಳವಡಿಕೆಯಿಂದ ಸಗಣಿಯ ಅಳವಡಿಕೆಗೆ ಹೋಲಿಸಿದರೆ ಅರ್ಧದಷ್ಟು ಅಧಿಕ ಅನಿಲ ಉತ್ಪಾದನೆಯನ್ನು ಸಾಧಿಸಬಹುದಾದರೂ, ಹಿಕ್ಕೆ ಒಂದರಿಂದಲೇ ಸಮರ್ಥ ನಿರ್ವಹಣೆ ಸಾಧ್ಯವಾಗದು, ಯಾಕೆಂದರೆ ಅವಶ್ಯಕ ಪ್ರಮಾಣದ ಹಿಕ್ಕೆ ದೊರಕಲಾರದು. ಈ ಮೇಲಿನ ಅಂಶದ ಹಿನ್ನೆಲೆಯಿಂದಾಗಿ ಹುಳುವಿನ ಹಿಕ್ಕೆಯನ್ನು ಜೈವಿಕ ಅನಿಲ ಉತ್ಪಾದನಾ ಘಟಕಗಳಲ್ಲಿ ಪೂರ್ಣ ಪ್ರಮಾಣದ ಸಾಮಗ್ರಿಯಾಗಿ ಬಳಸಲಾರದೆ, ಪರ್ಯಾಯ ಅಥವಾ ಪೂರಕ ಸಾಮಗ್ರಿಯಾಗಿ ಅಳವಡಿಸಬಹುದು. * ಅನಿಲ ಉತ್ಪಾದನಾ ಘಟಕದಲ್ಲಿನ ವಾತಾವರಣವು ಹಿಪ್ಪುನೇರಳೆ ಹಾಗೂ ಹುಳುಗಳಿಗೆ ಪೂರಕ ರೋಗಾಣುಗಳಿಗೆ ಅನುಕೂಲಕರವಿಲ್ಲದ್ದರಿಂದ, ಅದರಿಂದೊದಗುವ ಗಂಜಲು, ರೋಗ ನಿರ್ವಹಣಾ ದೃಷ್ಟಿಯಿಂದಲೂ ಹೆಚ್ಚು ಅನುಕೂಲಕರ. ಈ ರೀತಿ ರೇಷ್ಮೆ ಹುಳುವಿನ ಹಿಕ್ಕೆಯನ್ನು ಜೈವಿಕ ಅನಿಲ ಉತ್ಪಾದನಾ ಘಟಕಗಳಲ್ಲಿ ಅಳವಡಿಸಿ, ಪೋಷಕಾಂಶಗಳ ಲಭ್ಯತೆಯ ವೃದ್ಧಿಯ ಜೊತೆಗೆ, ಸಾವಯವ ಗೊಬ್ಬರ ನಿರ್ವಹಣೆಯ ಸಮರ್ಥತೆಯನ್ನು ವೃದ್ಧಿಸಿ, ಗೂಡಿನ ಇಳುವರಿ, ಉತ್ಪಾದಕತೆಗಳ ಸುಧಾರಣೆಯನ್ನು ಸಾಧಿಸಿ, ಒಟ್ಟಾರೆ ರೇಷ್ಮೆ ಕೃಷಿಯಲ್ಲಿ ಮೌಲ್ಯ ವೃದ್ಧಿಗೆ ಅನುವು ಮಾಡಿದಂತಾಗುವುದು. ರೇಷ್ಮೆ ಹುಳುವಿನ ಔಷಧೀಯ ಗುಣಧರ್ಮಗಳು: ಪ್ರಾಣಿ ಪ್ರಪಂಚದಲ್ಲಿ ರೇಷ್ಮೆ ಹುಳುವು ಹಲವಾರು ಕಾರಣಗಳಿಂದ ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಬಹಳ ಪ್ರಮುಖವಾಗಿ ಅದರ ದೇಹ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಸಾರಜನಕ ಸಂಬಂಧಿತ, ಅಮೈನೊ ಆಮ್ಲಗಳು ಪ್ರೋಟೀನ್ ಪದಾರ್ಥಗಳ, ಅದಕ್ಕೆ ಸಂಬಂಧಿತ ಹಲವಾರು ಜೀವ ರಾಸಾಯನಿಕಗಳ ಪರಿವರ್ತನೆ, ತಯಾರಿಕೆ ನಡೆದಿರುತ್ತದೆ. ಇಂತಹ ಪ್ರಕ್ರಿಯೆಗಳಲ್ಲಿ ಉತ್ಪತ್ತಿಯಾಗುವ ಹಲವು ಮಧ್ಯಂತರ ರಾಸಾಯನಿಕಗಳ ಲಭ್ಯತೆಯಿಂದಾಗಿ ವಿಶಿಷ್ಟ ಹೆಚ್ಚುವರಿ ಉಪಯೋಗಗಳನ್ನು ಪಡೆಯುವುದೂ ಕೂಡ ಸಾಧ್ಯವಾಗಿದೆ. ರೇಷ್ಮೆ ಹುಳುವಿನಿಂದ ಹಲವು ಸಾಧ್ಯ ಔಷಧೀಯ ಉಪಯೋಗಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಲಭ್ಯವಿದ್ದು ವಿಶೇಷವಾಗಿ ಚೈನಾ ದೇಶದಲ್ಲಿ ಇದರ ಬಗೆಗಿನ ಅಧಿಕ ಬಳಕೆಯಿರುವುದು ಕಂಡು ಬರುತ್ತದೆ. 1) ಆರೋಗ್ಯಕರ ಹುಳುಗಳನ್ನು ಸೋಂಕು ರಹಿತ ವ್ಯವಸ್ಥೆಯಲ್ಲಿ ಒಣಗಿಸಿ ವಾಣಿಜ್ಯಕ ಮಟ್ಟದಲ್ಲಿ ಚೈನಾ, ಜಪಾನ್, ಕೊರಿಯ, ಹಾಂಗ್‍ಕಾಂಗ್‍ಗಳಲ್ಲಿ ಆಹಾರಕ್ಕೆಂದು ಮಾರಾಟ ಮಾಡಲಾಗುತ್ತಿದೆ. ಅದನ್ನು ಪುಡಿ ಮಾಡಿ ಸೂಪು, ಸಾಸು ಮುಂತಾದ ಆಹಾರ ಪದಾರ್ಥಗಳ ತಯಾರಿಕೆಗೂ ಇತರ ಪ್ರಾಣಿ ಆಹಾರದ ರೂಪದಲ್ಲೂ ಬಳಕೆ ಇದೆ. 2) ಹುಳುವಿನ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಿರುವುದರಿಂದ ಅದನ್ನು ವಿಶೇಷವಾಗಿ ಹೃದ್ರೋಗಿ ಹಾಗೂ ಸಕ್ಕರೆ ಪೀಡಿತರಿಗೆ ಆಹಾರದಲ್ಲಿ ಬಳಸಲಾಗುತ್ತಿದೆ. 3) ಸುಣ್ಣಕಟ್ಟು ರೋಗ ಪೀಡಿತ ಹುಳುಗಳನ್ನು ಬಳಸಿ ತಯಾರಿಸಿದ ಕಷಾಯ ಶ್ವಾಸನಾಶ ಪೀಡಿತ ಅಸ್ತಮಾ ರೋಗಿಗಳಿಗೆ ಹಾಗೂ ಇತರೆ ಹಲವು ರೋಗ ನಿವಾರಣೆಗೆ ಬಳಕೆ ಇದೆ. 4) ಹುಳುಗಳಿಂದ ತಯಾರಿಸಿದ ಕಷಾಯವನ್ನಳವಡಿಸಿ ಮೊಡವೆ ಪೀಡೆ ನಿವಾರಣೆಗೆ ವಿಶೇಷ ಕ್ರೀಮ್‍ನ ತಯಾರಿಕೆ ಇದೆ. 5) ಹುಳುವಿನ ಕೋಶವು ಹೊಂದಿದ ಅಧಿಕ ಪ್ರಮಾಣದ ಪ್ರೋಟಿನ್, ಕೊಬ್ಬು, ಲೈಪೀನ್, ಮಿಥಿಯೋನಿನ್‍ನಂತಹ ಅಮೈನೋ ಆಮ್ಲಗಳಿಂದಾಗಿ ತಯಾರಿಸಲ್ಪಟ್ಟ ಆಹಾರಕ್ಕೆ ವಿಶೇಷ ಔಷಧೀಯ ಮಹತ್ವವಿದೆ. 6) ಹುಳುವಿನ ಕೋಶವು ಹೊಂದಿದ ಅಧಿಕ ವಿಟಮಿನ್ ಬಿ1, ಬಿ2 ಹಾಗೂ ವಿಟಮಿನ್ ಇ ಗಳಿಂದಾಗಿ ಔಷಧಿ ಬಳಕೆಗೆ, ಎಣ್ಣೆಯ ಉತ್ಪಾದನೆಗೆ ಬಳಸಲಾಗುತ್ತಿದೆ. 7) ಹುಳುವಿನ ಕೋಶದ ಎಣ್ಣೆಯನ್ನು ವಿಶೇಷವಾಗಿ ಯಕೃತ್, ರಕ್ತ ಸಂಬಂಧಿತ ಕಾಯಿಲೆಗೆ ಬಳಸಲಾಗುತ್ತಿದೆ. 8) ರೇಷ್ಮೆ ಹುಳುವಿನ ಚಿಟ್ಟೆಯಿಂದ ಬಹು ಉಪಯೋಗಿ ವೈನ್ ಹಾಗೂ ಔಷಧಿಗಳನ್ನು ತಯಾರಿಸಲಾಗುತ್ತಿದೆ. 9) ಗಂಡು ಚಿಟ್ಟೆಯಿಂದ ತಯಾರಿಸಲಾದ ಔಷಧಿಯನ್ನು ವಿಶೇಷವಾಗಿ ಸಂತಾನೋತ್ಪತ್ತಿ ಶಕ್ತಿ ಹೀನತೆಯ ಉಪಚಾರಕ್ಕೆ ಬಳಸಲಾಗುತ್ತಿದೆ. 10) ಹುಳುವಿನ ಹಿಕ್ಕೆಯಿಂದ ಹರಿತ್ತು, ಫೈಟಾಲೆ, ಪೆಕ್ವಿನ್, ಕೆರೋಟಿನ್, ಟ್ರೈಕಾಂಟೆನಾಲ್ ಇತ್ಯಾದಿ ಹಲವು ಪದಾರ್ಥಗಳನ್ನು ತಯಾರಿಸಿ ಔಷಧಿಯ ಉದ್ದಿಮೆಯಲ್ಲಿ ವಿಪುಲವಾಗಿ ಬಳಸಲಾಗುತ್ತಿದೆ. ಇವುಗಳಿಂದ ವಿಶೇಷವಾಗಿ ಜಠರ ಸಂಬಂಧಿತ ಅಲ್ಸರೆ, ಹೆಪಟೈಟಿಸೆ ನಿವಾರಣೆಗಾಗಿ ಔಷಧಿಗಳನ್ನು ತಯಾರಿಸಲಾಗುತ್ತಿದೆ. 11) ಹುಳುವಿನ ಹಿಕ್ಕೆಯಿಂದ ಉತ್ಪಾದಿತ ಹರಿತ್ತಿನ ತಯಾರಿಕೆಯನ್ನು ವಿಶೇಷ ಸೌಂದರ್ಯವರ್ಧಕ ಲೇಪನ, ಕ್ರೀಮ್ ಇತ್ಯಾದಿಗಳಲ್ಲಿ ಬಳಸಲಾಗುತ್ತಿದೆ. 12) ನೂಲು ಬಿಚ್ಚಾಣಿಕೆಯಲ್ಲಿ ಒದಗುವ ಕೊನೆಯ ಪದರು ಪಿಲಾಡ್ ಅನ್ನು ಅಳವಡಿಸಿದ ಆಹಾರ ಸೇವನೆ ವಿಶೇಷವಾಗಿ ರಕ್ತ ಸಕ್ಕರೆ ಹಾಗೂ ಕೊಲೆಸ್ಟ್ರಾಲ್‍ನ ಹತೋಟಿಗೆ ಪರಿಣಾಮಕಾರಿಯಾಗಿದೆ. 13) ರೇಷ್ಮೆಯಿಂದ ತಯಾರಿಸಿದ ಪೊರೆಯನ್ನು ಕೃತಕ ಚರ್ಮ, ರಕ್ತನಾಳ ಹಾಗೂ ಶಸ್ತ್ರಚಿಕಿತ್ಸೆಗಳಲ್ಲೂ ಬಳಸಲಾಗುತ್ತಿದೆ. ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿನ ಸಂಬಂಧಿತ ಉಪಉತ್ಪನ್ನಗಳು ಉಪ ಉತ್ಪನ್ನಗಳು ಪ್ರಯೋಗಗಳು

ಡಬ್ಬಲ್ ಗೂಡು ಮೊಟ್ಟೆ ತಯಾರಿಕಾ ಮೂಲದ ಕತ್ತರಿಸಲ್ಪಟ್ಟ ಅಥವಾ ಚಿಟ್ಟೆ ಕೊರೆವ ಗೂಡು ದೋಷಪೂರಿತ ಗೂಡುಗಳು ವ್ಯರ್ಥ ರೇಷ್ಮೆ ಸ್ಪನ್ ರೇಷ್ಮೆ ಉತ್ಪಾದನಾ ಮೂಲದ ನಾಯ್ಲ ವ್ಯರ್ಥ ರೇಷ್ಮೆ

ನೂಲು ಬಿಚ್ಚಾಣಿಕೆ ಬೇಸಿನ್‍ನ ಮೂಲದ ವ್ಯರ್ಥ ಉತ್ಪನ್ನ

ಬಿಸು ಡೂಪಿಯನ್ ರೇಷ್ಮೆ ಉತ್ಪಾದನೆ

ಮಟ್ಕ ರೇಷ್ಮೆ ಉತ್ಪಾದನೆ ಒರಟು ರೇಷ್ಮೆ ಉತ್ಪಾದನೆ ಸ್ಪನ್ ರೇಷ್ಮೆ ತಯಾರಿಕೆ ಪ್ರಕ್ರಿಯೆಯಿಂದ ಸ್ಪನ್ ರೇಷ್ಮೆ ಉತ್ಪಾದನೆ. ನಾಯ್ಲ ರೇಷ್ಮೆ ತಯಾರಿಕಾ ಪ್ರಕ್ರಿಯೆಯಿಂದ ನಾಯ್ಲ ದಾರದ ಉತ್ಪಾದನೆ. ಕೋಶದಿಂದ ಕೋಶ ಎಣ್ಣೆ, ಪ್ರಾಣಿ ಆಹಾರ, ಯೋಗ್ಯ ಹಿಂಡಿ ಸಾವಯವ ಗೊಬ್ಬರ. ಹಿಂಜು ರೇಷ್ಮೆದಾರ.


ಡಬಲ್ ಗೂಡಿನಿಂದ ಡೂಪಿಯನ್ ರೇಷ್ಮೆ : ಹಣ್ಣಾದ ರೇಷ್ಮೆ ಹುಳುಗಳನ್ನು ಗೂಡು ಕಟ್ಟಲೆಂದು ಚಂದ್ರಿಕ್‍ಗೆ ಬಿಟ್ಟಾಗ, ಸ್ಥಳಾವಕಾಶ ಅಭಾವದಿಂದ, ಎರಡನೆಯ ಹುಳುಗಳು ಒಟ್ಟಿಗೆ ಸೇರಿ ಒಂದು ಗೂಡನ್ನು ರಚಿಸುತ್ತದೆ. ಈ ರೀತಿಯ ಗೂಡುಗಳಲ್ಲಿ ಎರಡು ಹುಳುಗಳು ಒಟ್ಟಾರೆಯಾಗಿ ದಾರದೆಳೆಯನ್ನು ಬಿಟ್ಟು ಉತ್ಪಾದನೆ ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದಾಗಿ ಅವೆರಡು ದಾರದೆಳೆಗಳು ಒಟ್ಟಿಗೆ ಸೇರಿಕೊಂಡಿರುವುದರಿಂದ ನೂಲು ಬಿಚ್ಚಾಣಿಕೆಯಲ್ಲಿ ಸಲೀಸಾಗಿ ಬಿಡಿಸಲು ಸಾಧ್ಯವಾಗದೇ, ಹಂತ ಹಂತಗಳಲ್ಲಿ ಗುಂಪು ಗುಂಪಾಗಿ ಎಳೆಗಳು ಬಿಚ್ಚಿಕೊಂಡು, ಉತ್ಪಾದಿತ ದಾರವು ಸಮಾನತೆಯನ್ನು ಕಳೆದುಕೊಳ್ಳುತ್ತದೆ. ಈ ರೀತಿ ಸಮಾನತೆಯನ್ನು ಹೊಂದಿರದ, ಗುಂಟುಗಂಟಾಗಿ, ಗುಂಪು ಗುಂಪಾಗಿರುವ ಭೌತಿಕ ಗುಣ ಧರ್ಮಗಳನ್ನು ಹೊಂದಿದ ರೇಷ್ಮೆ ದಾರವೇ “ಡೂಪಿಯನ್ ರೇಷ್ಮೆ”. ಉತ್ತಮ ಗುಣಮಟ್ಟದ ಬಟ್ಟೆ ಉತ್ಪಾದನೆಗೆ ಸಮಾನ ಭೌತಿಕ ಗುಣಧರ್ಮಗಳನ್ನು ಅತ್ಯಂತ ಹೆಚ್ಚು ಉದ್ದದ ದಾರವು ಹೊಂದಿರಬೇಕೆಂಬುದು ಕಟು ಸತ್ಯ. ಇದಕ್ಕೆ ವ್ಯತಿರಿಕ್ತವಾಗಿ ಸಮಾನತೆ, ಅಪೇಕ್ಷಿತ ಗುಣಧರ್ಮಗಳನ್ನು ಹೊಂದಿರದ, ಭೌತಿಕ ವ್ಯತ್ಯಾಸಗಳನ್ನು ತನ್ನದೇ ಆದ ವಿಶಿಷ್ಟ ಕ್ರಮರಹಿತ ವೈವಿಧ್ಯತೆಯಿಂದಾಗಿ ಹೊಂದಿದೆ ಡೂಪಿಯನ್ ರೇಷ್ಮೆಯು ಹಲವಾರು ಬಳಕೆ ಮೌಲ್ಯವನ್ನು ಹೊಂದಿದೆ. ಇದೇ ಕಾರಣಗಳಿಂದಾಗಿ ತನ್ನದೇ ಆದ ವಿಶಿಷ್ಟ ಮಾರುಕಟ್ಟೆ ಬೇಡಿಕೆಯನ್ನು ಹೊಂದಿದೆ ಡೂಪಿಯನ್ ರೇಷ್ಮೆಯ ಬೇಡಿಕೆಯು ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಾಧಾನಕರ, ಉತ್ತೇಜನ ಪೂರಕ ಬೆಲೆಯನ್ನು ಪಡೆಯುತ್ತಿದೆ. ಈ ರೀತಿಯ ಬೇಡಿಕೆಯಿಂದ ಕೆಲವು ನೂಲು ಬಿಚ್ಚಾಣಿಕೆದಾರರು ಒಳ್ಳೆಯ ಗೂಡುಗಳನ್ನು ಅಳವಡಿಸಿ ಡೂಪಿಯನ್ ರೇಷ್ಮೆಯನ್ನು ಉತ್ಪಾದಿಸುತ್ತಾರೆ. ಡೂಪಿಯನ್ ರೇಷ್ಮೆಯಿಂದ ಉತ್ಪಾದಿತ ಒರಟು ಬಟ್ಟೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚುತ್ತಿದ್ದು ವಿಶಿಷ್ಟವಾಗಿ ಹಾಸಿಗೆ ಹೊದಿಕೆ, ತಲೆದಿಂಬು, ಕಿಟಕಿ-ಬಾಗಿಲು, ಪರದೆ, ಸೀರೆ, ಶರ್ಟು ಬಟ್ಟೆ ಮುಂತಾದವುಗಳಿಗೆ ಉಪಯೋಗಿಸಲಾಗುತ್ತಿದೆ. ಡೂಪಿಯನ್ ಉತ್ಪಾದನೆಗೆ ಸಂಬಂಧಿತ ಅಂಕಿ-ಅಂಶಗಳನ್ನು ಕೋಷ್ಟಕದಲ್ಲಿ ಕೊಡಲಾಗಿದೆ. ಕತ್ತರಿಸಿದ ಮತ್ತು ಚಿಟ್ಟೆ ಕೊರೆದ ಗೂಡಿನಿಂದ ಮಟ್ಕ ರೇಷ್ಮೆ ಉತ್ಪಾದನೆ: ಮೊಟ್ಟ ಉತ್ಪಾದನೆಯು ರೇಷ್ಮೆ ಉತ್ಪಾದನೆ ಉದ್ದಿಮೆಯ ಅವಿಭಾಜ್ಯ ಅಂಗವೆಂಬುದಕ್ಕೆ ಎರಡು ಮಾತಿರಲಾರದು. ಮೊಟ್ಟೆ ಉತ್ಪಾದನೆಗೆ ಅವಶ್ಯಕ ಗಂಡು-ಹೆಣ್ಣು ಚಿಟ್ಟೆಗಳನ್ನು ಪಡೆಯಲು ಆಯ್ದ ತಳಿಗಳ ಗಂಡು ಹೆಣ್ನು ಕೋಶಗಳನ್ನು ಹೊಂದಿದ ಬಿತ್ತನೆ ಗೂಡುಗಳನ್ನು ಅವಶ್ಯಕ. ನಿಗದಿತ ತಳಿಗಳ ಗಂಡು ಹೆಣ್ಣು ಚಿಟ್ಟೆಗಳ ಆಯ್ಕೆಗೆ ಆಯಾ ಲಿಂಗದ ಗೂಡುಗಳನ್ನು ಬೇರ್ಪಡಿಸಬೇಕು. ಈ ರೀತಿಯ ವಿಂಗಡಣೆಗೆ ಗೂಡುಗಳನ್ನು ಕತ್ತರಿಸುವುದು ಅನಿವಾರ್ಯ. ಕೋಶ (ಪ್ಯೂಪ)ಗಳ ಆಯ್ಕೆಯ ನಂತರ ದೊರಕುವ ರೇಷ್ಮೆ ಗೂಡಿನ ಕವಚವು ಬೃಹತ್ ಪ್ರಮಾಣದಲ್ಲಿ ಲಭ್ಯ. ಇದೇ ರೀತಿ ಕತ್ತರಿಸದೇ ಬಿಟ್ಟ ಗೂಡುಗಳಿಂದ ಚಿಟ್ಟೆಗಳು ನೈಸರ್ಗಿಕವಾಗಿ ಗೂಡನ್ನು ಕೊರೆದು ಹೊರಬರುತ್ತವೆ. ಇಂತಹ ಚಿಟ್ಟೆ ಕೊರೆದ ಹಾಗೂ ಕತ್ತರಿಸದ ಗೂಡುಗಳಿಂದ ಸಾಮಾನ್ಯ ನೂಲು ಬಿಚ್ಚಾಣಿಕೆ ಅಸಾಧ್ಯ. ಊಜಿ ಕೊರೆದ ಗೂಡಿನಿಂದ ನೂಲು ಬಿಚ್ಚಾಣಿಕೆ: ರೇಷ್ಮೆ ಉದ್ದಿಮೆಗೆ ಪ್ರಪಂಚದಾದ್ಯಂತ ಬಾಧಿಸುವ ಕೀಟ ಎಂಬ ಊಜಿ ನೊಣ ಕರ್ನಾಟಕದಲ್ಲಿ ಇದರ ಹಾವಳಿ ಇತ್ತೀಚಿನದೆಂದೇ ಹೇಳಬಹುದು. ಒಂದು ನೊಣವು ರೇಷ್ಮೆ ಹುಳುವಿನ ಮೇಲೆ, ಪ್ರತಿ ಹುಳುವಿಗೆ 1-2 ಮೊಟ್ಟೆಗಳಂತೆ ಸುಮಾರು 200-300 ಹುಳುಗಳಿಗೆ ಬಾಧಿಸಿ, ಸಾಯಿಸಿ ಇಲ್ಲವೇ ಗೂಡಿನ ಹಂತದಲ್ಲಿ ಅದರೆ ಮ್ಯಾಗಟ್ ಹುಳು ಹಂತದಲ್ಲಿ ಗೂಡು ಕೊರೆದು ಆಚೆ ಒಂದು ಹಾನಿಯನ್ನುಂಟುಮಾಡಬಲ್ಲದು. ಅಂದರೆ ಕೇವಲ ಒಂದು ಊಜಿ ನೊಣವು ಅಂದಾಜು ಅರ್ಧ ಕಿ.ಗ್ರಾಂ. ಗೂಡಿನ ಉತ್ಪಾದನೆಗೆ ಇಲ್ಲವೇ ಗೂಡಿಗೆ ಹಾನಿಕಾರವಾಗಬಲ್ಲುದು. ಈ ರೀತಿ ಊಜಿ ಪೀಡಿತ ಗೂಡುಗಳನ್ನು ಸಾಮಾನ್ಯವಾಗಿ ಗೂಡು ಉತ್ಪಾದಕರ ಹಾಗೂ ನೂಲು ಬಿಚ್ಚಾಣಿಕೆದಾರರು ವ್ಯರ್ಥ ಅಥವಾ ಕಳಪೆ ಗೂಡಿನೊಂದಿಗೆ ಬೆರೆಸಿ ಕಡಿಮೆ ಬೆಲೆಗೆ ಮಾರಾಟ ಮಾಡುವುದುಂಟು. ಸಾಮಾನ್ಯ ತಿಳುವಳಿಕೆಗೆ ವ್ಯತಿರಿಕ್ತವಾಗಿ ಊಜಿ ಮ್ಯಾಗಟ್ ಹುಳುವು ಕೋಶವನ್ನು ಕಡಿದು, ದಾರದೆಳೆಯನ್ನು ಕಟಾಯಿಸದೇ, ಅದನ್ನು ಬೇರ್ಪಡಿಸಿ ಆಚೆ ಬರಲು ಅನುವು ಮಾಡಿಕೊಂಡು ಹೊರಬರುವುದರಿಂದಾಗಿ ರೇಷ್ಮೆ ಗೂಡಿನ ಕೋಶವು ಕತ್ತರಿಸಲ್ಪಟ್ಟಿರುವುದಿಲ್ಲ. ಆದ್ದರಿಂದ ಅದನ್ನು ವಿಶೇಷ ಪರಿಣತಿಯನ್ನನ್ನುಸರಿಸಿ, ಭಾಗಶಃ ದಾರದೆಳೆಯನ್ನು ಬಿಚ್ಚಲು ಉಪಯೋಗಿಸಬಹುದಾಗಿದೆ. ಸ್ಟನ್ ರೇಷ್ಮೆ (ಹಿಂಜು) ದಾರ ಉತ್ಪಾದನೆ:

  • ಮೊಟ್ಟೆ ಉತ್ಪಾದನಾ ಘಟಕದಿಂದ ಚಿಟ್ಟೆ ಕೊರೆದ ಹಾಗೂ ಕತ್ತರಿಸಲ್ಪಟ್ಟ ಗೂಡಿನ ಕೋಶಗಳು.
  • ನೂಲು ಬಿಚ್ಚಾಣಿಕೆ ಪ್ರಕ್ರಿಯೆಯಲ್ಲಿ ದೊರಕುವ ವ್ಯರ್ಥ ರೇಷ್ಮೆ ಮತ್ತು ಬಟ್ಟೆ ತಯಾರಿಕಾ ಹಂತದ ವ್ಯರ್ಥ ರೇಷ್ಮೆ.

ಇಂತಹ ಗೂಡು ಹಾಗೂ ಇತರೆ ಕಚ್ಚಾ ಪದಾರ್ಥವು ಸಾಮಾನ್ಯವಾಗಿ ಕಳಪೆ ಎಂದು ಪರಿಗಣಿಸಲ್ಪಡುತ್ತಿದ್ದುದರಿಂದ ಅತಿ ಅಗ್ಗದ ಬೆಲೆಗೆ ಲಭ್ಯವಿದ್ದು ಇದರ ಮೌಲ್ಯ ವೃದ್ಧಿ ಪ್ರಕ್ರಿಯೆಯನ್ನಳವಡಿಸುವುದು ಅವಶ್ಯಕ. ಜೊತೆಗೆ ಇದರಿಂದ ಉತ್ಪಾದಿತ ಸ್ಪನ್ ರೇಷ್ಮೆ ದಾರವು, ಸಾಮಾನ್ಯ ನೂಲು ಬಿಚ್ಚಾಣಿಕೆಯಿಂದೊದಗಿವ ದಾರಕ್ಕೆ ಹೋಲಿಸಿದರೆ ಕಡಿಮೆ ಹೊಳಪನ್ನು ಹೊಂದಿದ್ದು, ಹೆಚ್ಚಿನ ಗಾತ್ರ ಹಾಗೂ ಗಾತ್ರದ ಅಸಮಾನತೆಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಂಡಿದ್ದು, ಅದಕ್ಕೆ ಅದರದೇ ವಿಶೇಷತೆಗಳಿವೆ. ಇಂತಹ ವಿಶೇಷತೆಗಳನ್ನು ಉಪಯೋಗಿಸಿ, ವಿಶಿಷ್ಟ ಬಳಕೆಯ ಬಟ್ಟೆ ಉತ್ಪಾದನೆ ಕೈಗೊಳ್ಳಬಹುದಾಗಿದೆ. ಇದರಲ್ಲಿ ಬಹಳ ಪ್ರಮುಖವಾಗಿ ರತ್ನಗಂಬಳಿ ಮುಂತಾದ ಕಾರ್ಪೆಟ್ ಆಧಾರಿತ ಉತ್ಪನ್ನಗಳೇ ಅಧಿಕ ಹಾಗೂ ಅತ್ಯಧಿಕ ಮೌಲ್ಯವರ್ಧಿತ ಉತ್ಪನ್ನಗಳಾಗಿವೆ. ಜೊತೆಗೆ ಇಂತಹ ಬಟ್ಟೆಗಳಿಂದ ಉತ್ಪಾದಿತ ಹಾಸಿಗೆ, ದಿಂಬು-ಹೊದಿಕೆ, ಕಿಟಕಿ-ಬಾಗಿಲು ಪರದೆ, ಶರ್ಟು, ಸೀರೆ ಮತ್ತು ಇತರೆ ಬಟ್ಟೆಗಳಿಗೂ ಅತ್ಯಧಿಕ ಬೇಡಿಕೆ ಇದೆ. ಸ್ಪನ್ ದಾರದ ಉತ್ಪಾದನೆಯ ಸಂಘಟಿತ ರೂಪದ ಕಾರ್ಖಾನೆಗಳಲ್ಲೂ, ಜೊತೆಗೆ ಸಣ್ಣಪ್ರಮಾಣದ ಅಸಂಘಟಿತ ಮಾನವ ಚಾಲಿತ ತಕಲಿ, ಚರಕ ಮುಂತಾದ ಘಟಕಗಳಿಂದಲೂ ಒರಟು ರೂಪದ ದಾರ ಉತ್ಪಾದನೆ ಆಗುತ್ತಿದೆ. ರೇಷ್ಮೆ ಸ್ಪನ್ ದಾರದ ಉತ್ಪಾದನೆಯು, ಇಂತಹ ಕಡಿತ ದಾರಗಳಾದ, ಉಣ್ಣೆ, ಹತ್ತಿ ಇತ್ಯಾದಿಗಳಂತೆಯೇ ಹಲವು ಪ್ರಕ್ರಿಯೆಗಳನ್ನು ಒಳಗೊಂಡಿದೆ. ಅಂತೆಯೇ ಒಳಗೊಂಡ ಪ್ರಮುಖ ಪ್ರಕ್ರಿಯೆಗಳೆಂದರೆ:-


ಅಂಟು ಬೇರ್ಪಡಿಸುವಿಕೆ

ನಿವರ್ಣಗೊಳಿಸುವಿಕೆ

ವ್ಯವಸ್ಥಿತ ಅನುಕರಣೆಕೆ

ಬಿಚ್ಚುವಿಕೆ

ಹಿಂಜುವಿಕೆ

ಎಳೆಯುವಿಕೆ

ಹೊಸಿಯುವಿಕೆ

ಉಗಿ-ಪರಿಚಾರಿಕೆ

ಬಣ್ಣ ಹಾಕುವಿಕೆ

ಒಪ್ಪಗೊಳಿಸುವಿಕೆ/ಮೆರಗುಗೊಳಿಸುವಿಕೆ ಈವರೆಗೆ ಕೇವಲ ಸರ್ಕಾರಿ ಸ್ವಾಮ್ಯದಲ್ಲಿದ್ದ ಸ್ಪನ್ ದಾರದ ಉದ್ದಿಮೆಯು ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಉದ್ದಿಮೆ ದಾರವನ್ನು ಆಕರ್ಷಿಸುತ್ತಲಿದ್ದು, ಆಕರ್ಷಕ ಭವಿಷ್ಯವನ್ನು ಹೊಂದಿದೆ. ನಮ್ಮ ದೇಶದಲ್ಲಿ ವಾರ್ಷಿಕ ಸುಮಾರು 4,500 ಮೆ-ಟನ್ ವ್ಯರ್ಥ ರೇಷ್ಮೆ, 600 ಟನ್ ವ್ಯರ್ಥ ಗೂಡುಗಳ ಲಭ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ವ್ಯರ್ಥ ರೇಷ್ಮೆಯ ಬಳಕೆಗಾಗಿ ದೇಶದಲ್ಲಿ ಸುಮಾರು 20 ಸ್ಪನ್ ರೇಷ್ಮೆ ಉತ್ಪಾದನಾ ಕಾರ್ಖಾನೆಗಳಿವೆ. ನೂಲು ಬಿಚ್ಚಾಣಿಕೆ ಬೇಸಿನ್ ಮೂಲದ ವ್ಯರ್ಥ ಉತ್ಪನ್ನ: ದೇಶದ ರೇಷ್ಮೆ ಉತ್ಪಾದನೆಯಾದ ಸುಮಾರು 15,000 ಮೆ.ಟನ್‍ನಲ್ಲಿ ಕರ್ನಾಟಕ ಒಂದರಲ್ಲೇ ಸುಮಾರು 9000 ಟನ್ ರೇಷ್ಮೆ ಉತ್ಪಾದನೆಗಾಗಿ ಅಂದಾಜು ವಾರ್ಷಿಕ 80,000 ಮೆ.ಟನ್ ಗೂಡಿನ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ವ್ಯರ್ಥ ಉತ್ಪನ್ನವಾದ ಸುಮಾರು 65,000-70,000 ಮೆ.ಟನ್ ಪ್ಯೂಪ ಅಂದರೆ ಗೂಡು-ಕೋಶವನ್ನು ಹೊಂದಿದೆ. ವಾರ್ಷಿಕ ನಮ್ಮ ದೇಶದಲ್ಲಿ 45,000 ಮೆ.ಟನ್ ಒಣ ಪ್ಯೂಪ ಉತ್ಪಾದನೆ ಆಗುತ್ತಿದೆ. ರೇಷ್ಮೆ ನೂಲಿಗೆ 8-9 ಕಿ.ಗ್ರಾಂ ಕೋಶ (ಪ್ಯೂಪ) ಅಂದರೆ ಸುಮಾರು 3 ಕಿ.ಗ್ರಾಂ ಒಣ ಪ್ಯೂಪ ಒದಗುತ್ತದೆ. ಒಣಗಿದ ಕೋಶದಲ್ಲಿ ಶೇ.25ರಷ್ಟು ಕೊಬ್ಬು ಹಾಗೂ ಶೇ.50ರಷ್ಟು ಪ್ರೋಟೀನ್ ಇರುತ್ತದೆ. ಜೊತೆಗೆ ಗಮನಾರ್ಹ ಪ್ರಮಾಣದ ಗಂಧಕ, ಸುಣ್ಣ ಹಾಗೂ ವಿಟಮಿನ್‍ಗಳೊಂದಿಗೆ, ಶೇಕಡ 5ರಷ್ಟು ಬೂದಿ ಪೂರಕ ಅಂಶವನ್ನು ಹೊಂದಿರುತ್ತದೆ. ಇದರಿಂದಾಗಿ ಸ್ವಚ್ಛಗೊಳಿಸಿದ, ಸಮರ್ಥ ಶೇಖರಣೆಗೊಳಗೊಂಡ ಕೋಶದಿಂದ ಸಾಬೂನು ತಯಾರಿಕೆಗಾಗಿ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಸಮರ್ಥ ಶೇಖರಣೆಗೊಳಪಡದಿರುವ ಕೋಶದ-ಕೊಳೆಯುವಿಕೆಯಿಂದಾಗಿ, ಉತ್ಪಾದಿತ ಎಣ್ಣೆಯು ವಾಸನೆ ಹಾಗೂ ಬಣ್ಣವನ್ನು ಹೊಂದಿ ಕಳಪೆ ಗುಣಮಟ್ಟದ್ದಾಗಿದ್ದು, ಅದರಿಂದ ಕಳಪೆ ಗುಣಮಟ್ಟದ ಸಾಬೂನು ಉತ್ಪಾದನೆಗೊಂಡು ಕೈಗಾರಿಕಾ ಮಟ್ಟದ ಅಳವಡಿಕೆಗೆ ಮಾತ್ರ ವಿನಿಯೋಗಿಸಲ್ಪಡುತ್ತದೆ. ಎಣ್ಣೆ ಬೇರ್ಪಡಿಕೆಯ ನಂತರದ ಒಣ ಕೋಶವನ್ನು ಕೋಳಿ ಹಾಗೂ ಮೀನು ಸಾಕಣೆಯಲ್ಲಿ ಆಹಾರೋತ್ಪಾದನೆಗಾಗಿ ಬಳಸಲಾಗುತ್ತದೆ. ಪಾರ್ಚಮೆಂಟ ಪೊರೆಯನ್ನು ಕೋಶದಿಂದ ಬೇರ್ಪಡಿಸಿ “ಬಿಸು-ರೇಷ್ಮೆ” ಯಲ್ಲಿ ಕೋಶದ ಪೊರೆ ಹಾಗೂ ಕೋಶದ ಉಳಿಕೆ ಭಾಗಗಳು ಒಳಗೊಂಡಿರುತ್ತವೆ. ಇಂತಹ ಬಿಸು ರೇಷ್ಮೆಯಿಂದ ಸ್ಪನ್, ಜೂಟೆ ಮುಂತಾದ ರೇಷ್ಮೆದಾರದ ಉತ್ಪಾದನೆಯಾಗುತ್ತದೆ. ಕೋಶದ ಉಪಯುಕ್ತತೆ: ರೇಷ್ಮೆ ಉತ್ಪಾದನೆಯ ಮುಂಚೂಣಿಯಲ್ಲಿರುವ ಚೈನಾ ದೇಶದಲ್ಲಿ ರೇಷ್ಮೆ ಹುಳುವಿನ ಕೋಶವನ್ನು ಆಹಾರ ಹಾಗೂ ಔಷಧಿ ಸಂಬಂಧಿತ ಪದಾರ್ಥಗಳ ಉತ್ಪಾದನೆಗಾಗಿ ಬಹು ಸಮರ್ಥವಾಗಿ ಬಳಸಲಾಗುತ್ತಿದೆ. ರೇಷ್ಮೆ ಹುಳು ಕೋಶದಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಅಧಿಕ ಪ್ರಮಾಣದಲ್ಲಿದ್ದುದರ ಹಿನ್ನೆಲೆಯಲ್ಲಿ ಇದರ ಅಳವಡಿಕೆಯಿಂದ ಬೃಹತ್ ಪ್ರಮಾಣದಲ್ಲಿ ಅಮೈನೋ ಆಮ್ಲಗಳನ್ನು ಉತ್ಪಾದಿಸಿ, ಸೋಯಾ ಅವರೆ, ಜಲಟಿನ್ ಮುಂತಾದ ಅಧಿಕ ಬೆಲೆಯ ಪದಾರ್ಥಗಳಿಗೆ ಪರ್ಯಾಯವಾಗಿ ಬಳಸುವ ಸಾಧ್ಯತೆಯಿದೆ. ಕೋಶದೆಣ್ಣೆ: ಕೋಶದೆಣ್ಣೆಯ ಉತ್ಪಾದನೆಗೆ ಯಾಂತ್ರಿಕ ವಿಧಾನದಲ್ಲಿ ಒತ್ತಡ ಪೂರಕ ವ್ಯವಸ್ಥೆಯನ್ನಳವಡಿಸಲಾಗುತ್ತಿದೆ. ಪರ್ಯಾಯವಾಗಿ ಸಾವಯವ ರಾಸಾಯನಿಕಗಳನ್ನು ಬಳಸಿ ಎಣ್ಣೆಯನ್ನು ಕರಗಿಸಿ ಬೇರ್ಪಡಿಕೆ ವಿಧಾನವನ್ನಳವಡಿಸಲಾಗುತ್ತದೆ. ಅಳವಡಿಸಲಾದ ವಿವಿಧ ವಿಧಾನಗಳು ಹಾಗೂ ಅವುಗಳ ವೈಜ್ಞಾನಿಕ ಉತ್ಕøಷ್ಟತೆಗಳನ್ನವಲಂಬಿಸಿ, ಎಣ್ಣೆಯ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅದಕ್ಕನುಗುಣವಾಗಿ ಕೋಶದೆಣ್ಣೆಗೆ ಹಲವು ಉಪಯುಕ್ತತೆಗಳನ್ನು ಗುರುತಿಸಲಾಗಿದ್ದು, ಪ್ರಮುಖವಾದುವೆಂದರೆ: 1) ಪಾಮಿಟಿಕ್ ಮತ್ತು ಸ್ಟಿಯರಿಕ್ ಆಮ್ಲ 24%, ಓಲಿಯಿಕ್ ಆಮ್ಲ 35%, ಲಿನೋಲಿಯಿಕ್ ಆಮ್ಲ 12%, ಮತ್ತು ಲಿನೋಲಿನಿಕ್ ಆಮ್ಲ 25%ಗಳನ್ನು ಹೊಂದಿದ ಎಣ್ಣೆಯನ್ನು ಕೈಗಾರಿಕಾ ಬಳಕೆಗಾಗಿನ ಸಾಬೂನು ತಯಾರಿಕೆಗೆ ಬಳಸಬಹುದು. 2) ಲಿನ್‍ಸೀಡ (ಅಗಸೆ) ಎಣ್ಣೆ ಹಾಗೂ ಕೋಶದೆಣ್ಣೆಗಳನ್ನು 3:1 ಪ್ರಮಾಣದಲ್ಲಿ ಪೇಂಟೆ ಹಾಗೂ ವಾರ್ನಿಶ್ ತಯಾರಿಕೆಗೆ ಬಳಸಬಹುದು. 3) ಕೋಶದೆಣ್ಣೆಯಲ್ಲಿ ಲಿನೋಲಿಕ್ ಹಾಗೂ ಔಲಿಕ್ ಆಮ್ಲಗಳಿರುವುದರಿಂದ, ಕೊಲೆಸ್ಟ್ರಾಲ್ ಸಂಬಂಧಿತ ರಕ್ತದೊತ್ತಡ ನಿವಾರಣೆಗೆ ಬಳಕೆ ಸಾಧ್ಯತೆ ಇದೆ. 4) ಕೋಶದೆಣ್ಣೆಯ ಶುದ್ಧೀಕರಣದ ನಂತರ ದೊರಕುವ ಬಿಳಿ ಕೊಬ್ಬು ಉತ್ತಮ ಗುಣಮಟ್ಟದ ಸಾಬೂನು ಹಾಗೂ ಮೇಣ ಬತ್ತಿ ತಯಾರಿಕೆಗೆ ಉತ್ತಮ ಕಚ್ಚಾ ಸಾಮಗ್ರಿ. ವ್ಯರ್ಥ ರೇಷ್ಮೆ ಅಳವಡಿಕೆ : ಉಪಯುಕ್ತತೆ: ಜಪಾನ್ ತಜ್ಞರ ಪ್ರಕಾರ ವ್ಯರ್ಥ ರೇಷ್ಮೆಯ ಫೈಬ್ರೊಯಿನ್‍ನ ಹಲವು ಉಪಯುಕ್ತ ಗುಣಧರ್ಮಗಳನ್ನು ಅನುಕೂಲಕರವಾಗಿ ಅಳವಡಿಸಬಹುದಾಗಿದೆ. ಇವುಗಳಲ್ಲಿ ಪ್ರಮುಖವಾದುದೆಂದರೆ:- 1) ರೇಷ್ಮೆ ಪಾನೀಯ 2) ರೇಷ್ಮೆ ಸ್ಟ್ರೇ 3) ಜೆಲ್-ಜಾಮ್ ಇತ್ಯಾದಿ 4) ಪ್ರಸಾಧನ ಸಾಮಗ್ರಿಗಳಿಗಾಗಿ ಪೌಡರ್-ಪಾಲಿಶ್ ಪದಾರ್ಥಗಳು 5) ಕೃತಕ ರಕ್ತನಾಳ, ಕಣ್ಣು ಪೊರೆ, ಚರ್ಮ ಇತ್ಯಾದಿ 6) ಫೈಬ್ರಸ್ ರೇಷ್ಮೆ ದಾರ ಅಥವಾ ಮರು ಉತ್ಪಾದಿತ ರೇಷ್ಮೆದಾರ ರೇಷ್ಮೆ ಆಧಾರಿತ ಆಹಾರ ಉತ್ಪನ್ನಗಳು : ಜಪಾನ್ ದೇಶದ ತಜ್ಞರಿಂದ ಲಭ್ಯ ಮಾಹಿತಿಯ ಪ್ರಕಾರ ರೇಷ್ಮೆ ಫೈಬ್ರೋಯಿನ್ ದಾರದಲ್ಲಿ ಪ್ರಾಣಿ ಆಹಾರಕ್ಕೆ ಅವಶ್ಯಕ ಅಮೈನೋ ಆಮ್ಲಗಳು ಅಧಿಕ ಪ್ರಮಾಣದಲ್ಲಿ ಉತ್ಕøಷ್ಟ ಗುಣಮಟ್ಟದಲ್ಲಿ ಲಭ್ಯವಿದ್ದುದರ ಹಿನ್ನೆಲೆಯಲ್ಲಿ ಹಲವು ಬಗೆಯ ಆಹಾರ ಬಳಕೆಯ ಉಪಯುಕ್ತತೆಗಳನ್ನು ಕಾಣಬಹುದಾಗಿದೆ. ರೇಷ್ಮೆಯಲ್ಲಿ 18 ಅಮೈನೋ ಆಮ್ಲಗಳನ್ನು ಹೊಂದಿದ ಪ್ರೋಟೀನ್ ಲಭ್ಯವಿದ್ದು ಅವುಗಳ ಶೇಕಡಾ 85ರಷ್ಟು ಅವಶ್ಯಕ ಅಮೈನೋ ಆಮ್ಲಗಳಾದ ಉಟಥಿಛಿiಟಿe, ಂಟಚಿಟಿiಟಿe, Seಡಿiಟಿe ಹಾಗೂ ಖಿಥಿಡಿosiಟಿe ಗಳನ್ನೊಳಗೊಂಡಿರುತ್ತವೆ. ಇದರಿಂದಾಗಿ ಇದನ್ನು ಬಹು ಉಪಯೋಗಿ ಆಹಾರ ಪದಾರ್ಥಗಳಾದ ಜಾಮ್, ಜೆಲ್ಲಿ, ಪಾನೀಯ, ಪೌಡರ್ ಮುಂತಾದವುಗಳನ್ನು ಉತ್ಪಾದಿಸಬಹುದಾಗಿದೆ. ರೇಷ್ಮೆ ಪೌಡರ್: ವ್ಯರ್ಥ ರೇಷ್ಮೆ ಗೂಡು, ಬಿಸು ರೇಷ್ಮೆ, ಹಿಂಜ-ವ್ಯರ್ಥ ರೇಷ್ಮೆಗಳ ಬಳಕೆಯಿಂದ ರೇಷ್ಮೆ ಪೌಡರ್‍ನ್ನು ಉತ್ಪಾದಿಸಬಹುದು. ರೇಷ್ಮೆಯು uv ಕಿರಣಸಂಬಂಧಿತ ಹಲವು ಅಪೇಕ್ಷಿತ ಗುಣ ಧರ್ಮಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಜೊತೆಗೆ ರೇಷ್ಮೆ ಪೌಡರು ಛಿದ್ರಿತ ಭೌತಿಕ ಗುಣ ಧರ್ಮಗಳನ್ನು ಹೊಂದಿದ್ದು, ಅಧಿಕ ತೇವಾಂಶವನ್ನು ಹೀರಿಕೊಳ್ಳುವ ಸಾಮಥ್ರ್ಯದಿಂದಾಗಿ ಅದನ್ನು ಪ್ರಸಾದನ ಸಂಬಂಧಿತ ಹಲವು ಪೌಡರ್, ಕ್ರೀಂ ಇತ್ಯಾದಿ ಪದಾರ್ಥಗಳ ತಯಾರಿಕೆಗೆ ಬಳಸಬಹುದು ಇದರೊಂದಿಗೆ ಔಷಧೀಯ ಪದಾರ್ಥ ರಸಾಯನಿಕಗಳನ್ನಳವಡಿಸಿ ಹಲವು ಔಷಧೀಯ ಪದಾರ್ಥಗಳನ್ನು ತಯಾರಿಸಬಹುದು. ಇಂತಹ ಹಲವು ಪದಾರ್ಥಗಳು ಚೈನಾದಲ್ಲಿ ಅಧಿಕ ಪ್ರಮಾಣದ ಬಳಕೆಯನ್ನು ಕಂಡಿದೆ. ರೇಷ್ಮೆ-ಪೊರೆ: ರೇಷ್ಮೆಯಿಂದ ಉತ್ಪಾದಿತ ಪೊರೆಯ ನೀರು ಹಾಗೂ ಆಮ್ಲಜನಕಗಳೆರಡಕ್ಕೂ ಒಳ್ಳೆಯ ವಾಹಕ ಗುಣಗಳನ್ನು ಹೊಂದಿದ್ದು ಅದನ್ನು ಕೃತಕ ಚರ್ಮ, ಕಣ್ಣು ಪೊರೆ, ರಕ್ತನಾಳಗಳ ತಯಾರಿಕೆಗೆ ಅಳವಡಿಸಲಾಗುತ್ತದೆ. ಅದೇ ರೀತಿ ಇದನ್ನು ಕೃತಕ ಎಲವು, ಜೈವಿಕ ಕ್ಷೀಣಪೂರಕ ಪ್ಲಾಸ್ಟಿಕ್ ಸಾಮಗ್ರಿಗಳ ತಯಾರಿಕೆಗೂ ಬಳಸಬಹುದುದಾಗಿದೆ. ರೇಷ್ಮೆ ಉಪ-ಉತ್ಪನ್ನಗಳಿಂದ ಕರಕುಶಲ ವಸ್ತುಗಳ ತಯಾರಿಕೆ: ಕರಕುಶಲ ವಸ್ತುಗಳ ತಯಾರಿಕೆಗೆ ಇಂತಹುದೇ ವಸ್ತು ಪದಾರ್ಥಗಳು ಬೇಕೆಂಬುದಿಲ್ಲ ಇಂತಹುದೇ ಪ್ರಯತ್ನಗಳನ್ನು ವ್ಯರ್ಥ ರೇಷ್ಮೆ ಗೂಡಿನ ಕವಚ, ನೂಲು ಇತ್ಯಾದಿ ಪದಾರ್ಥಗಳಿಂದ ಆಕರ್ಷಕ ಮಾಲೆಗಳು, ಗೊಂಬೆಗಳು, ಶುಭಾಶಯ ಪತ್ರಗಳನ್ನು ತಯಾರಿಸಬಹುದಾಗಿದೆ. ಈ ರೀತಿಯ ಹವ್ಯಾಸವನ್ನು ಅಳವಡಿಸಿಕೊಂಡು ಬಿಡುವಿನ ವೇಳೆಯಲ್ಲಿ ಅಲ್ಪ-ಸ್ವಲ್ಪ ಶ್ರಮವಹಿಸಿ ಹೆಚ್ಚುವರಿ ಆದಾಯವನ್ನು ಪಡೆಯಬಹುದು. ಇಂತಹ ಕರಕುಶಲ ಕೆಲಸಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳೆಂದರೆ: - ಕತ್ತರಿಸಿದ ಅಥವಾ ಚಿಟ್ಟೆ ಕೊರೆದ ಗೂಡಿನ ಕವಚಗಳು. - ಗೂಡುಗಳು ಚೌಳಾದ ಪೊರೆ. - ನೂಲು ಬಿಚ್ಚಾಣಿಕೆಯಲ್ಲಿ ಒದಗುವ ವ್ಯರ್ಥ ರೇಷ್ಮೆ. - ಬಟ್ಟೆ ನೇಯ್ಗೆಯಲ್ಲಿ ಒದಗುವ ವ್ಯರ್ಥ ರೇಷ್ಮೆ, ಮತ್ತು - ಪೂರಕ ಸಾಮಗ್ರಿಗಳಾದ ಕಾರ್ಡ್ ಶೇಟ್ ಕಾಗದ, ಟೇಲರಿಂಗ್‍ನಲ್ಲಿ ಒದಗುವ ಬಣ್ಣ, ಬಣ್ಣದ ಬಟ್ಟೆ ತುಂಡುಗಳು, ಬಣ್ಣಗಳು ಇತ್ಯಾದಿ. ಅಂತೆಯೇ ಇದಕ್ಕೆ ಬೇಕಿರುವ ಸಾಮಾನ್ಯ ಸಲಕರಣೆಗಳೆಂದರೆ:- - ಟ್ರೇಸಿಂಗ್ ಪೇಪರ್, ಸ್ಕೆಚ್ ಪೆನ್, ಫೆವಿಕಾಲ್ - ಕತ್ತರಿ, ಬ್ಲೇಡು, ಸೂಜಿ ಮತ್ತು - ಅಲಂಕಾರಿಕ ಸ್ಟಿಕರ್ಸ್, ಚಮಕಿ, ಮಿಂಚು, ಮಿಂಚುಹಾಳೆ ಇತ್ಯಾದಿ. - ಗೂಡು ಕವಚಕ್ಕೆ ಬಣ್ಣ ಹಾಕುವುದು - ಗೂಡು ಕವಚಗಳನ್ನು ಚೌಳು ಪೊರೆನಿಂದ ಬೇರ್ಪಡಿಸಿ, ಒಳಭಾಗವನ್ನು ಶುಚಿಗೊಳಿಸಿ. - 5 ಗ್ರಾಂ ಬಣ್ಣವನ್ನು ಅರ್ಧ ಲೀಟರ್ ನೀರಿನಲ್ಲಿ ಬೆರೆಸಿ 60-70ಲಿಅ ನ ಶಾಖದಲ್ಲಿ ಕರಗಿಸಿ. - ಕತ್ತರಿಸಿದ ಶುಚಿಗೊಳಿಸಿದ ಗುಡು ಕವಚನಗಳನ್ನು ಕರಗಿಸಿದ ಬಣ್ಣದಲ್ಲಿ 3-4 ನಿಮಿಷೆ ಅದ್ದಿ. - ಗೂಡು ಕವಚಗಳನ್ನು ಬಣ್ಣದ ದ್ರಾವಕದಿಂದ ಹೊರತೆಗೆದು ನೆರಳಲ್ಲಿ ಒಣಗಿಸಿ. - ಬಣ್ಣದ ಕವಚಗಳನ್ನು ಅವಶ್ಯಕತೆಗೆ ತಕ್ಕಂತೆ ಜಿಗ್‍ಜಾಗ್ ಕತ್ತರಿ ಅಥವಾ ಸಾಮಾನ್ಯ ಕತ್ತರಿಯಿಂದ ನೀಟಾಗಿ ಕತ್ತಿರಿಸಿ, ಇಲ್ಲವೆ ತುಂಡರಿಸಿ. ತಯಾರಿಸಬಹುದಾದ ಹಲವಾರು ಕರಕುಶಲ ವಸ್ತುಗಳೆಂದರೆ: - ರೇಷ್ಮೆ ಗೂಡುಗಳಿಂದ ತಯಾರಿಸಬಹುದಾದ ಮಾಲೆ (ಹಾರ), ಹೂವು, ಹೂಗುಚ್ಛ, ಗೊಂಬೆಗಳು ಇತ್ಯಾದಿ. - ರೇಷ್ಮೆಯಿಂದ ತಯಾರಿಸಬಹುದಾದ ಗೋಡೆಗೆ ನೇತು ಹಾಕಬಹುದಾದ ಕಾರ್ಪೆಟ್ ಇತ್ಯಾದಿ ಹಣದ ಪರ್ಸ್, ಕರವಸ್ರಗಳನ್ನು ಕಸೂತಿಯಿಂದ ವೈವಿಧ್ಯತೆ ಹಾಗೂ ಅಲಂಕಾರವನ್ನು ಹಚ್ಚಿಸುವುದು. - ಗೂಡು ಮತ್ತು ರೇಷ್ಮೆಯಿಂದ ಅಭಿನಂದನಾ ಪತ್ರಗಳು. ಡಾ|| ಚಿನ್ನಸ್ವಾಮಿ