ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇಷ್ಮೆ ಹುಳು ಸಾಕಾಣಿಕೆ

ವಿಕಿಸೋರ್ಸ್ದಿಂದ

ರೇಷ್ಮೆ ಹುಳು ಸಾಕಾಣಿಕೆ

ರೇಷ್ಮೆ ಹುಳು ಸಾಕಣೆ ಒಂದು ಲಾಭದಾಯಕ ಗೃಹ ಕಸುಬು, ಜಾಗಾರೂಕತೆ ವಹಿಸಿದ್ದಲ್ಲಿ ಪ್ರತಿ ತಿಂಗಳಿಗೆ ಒಂದು ಬಾರಿ ಉತ್ತಮ ಇಳುವರಿ ಪಡೆದು ಹಣ ಸಂಪಾದಿಸಬಹುದು. ಹುಳು ಸಾಕಾಣಿಕೆ ಮನೆ: ಹುಳು ಸಾಕಣಿಕೆಗೆ ಪ್ರತ್ಯೇಕ ಮನೆ ಇರುವುದು ಸೂಕ್ತ. ಮಾದರಿ ಹುಳು ಸಾಕಣಿಕೆ ಮನೆಯ ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು. - ಸೋಂಕು ನಿವಾರಣೆಗೆ ಸೂಕ್ತವಾಗಿರಬೇಕು ಮತ್ತು ನೆಲ ಗೋಡೆಗಳು ನುಣುಪಾಗಿರಬೇಕು - ವಾಸದ ಮನೆಯಿಂದ ಸಾಕಾಣಿಕೆ ಮನೆ ಪ್ರತ್ಯೇಕವಾಗಿರಬೇಕು - ತೋಟದಿಂದ ತುಂಬಾ ದೂರದಲ್ಲಿರಬಾರದು - ಹುಳುಗಳ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಒದಗಿಸಲು ಅನುಕೂಲವಿರುವಂತೆ ಬಾಗಿಲು-ಕಿಟಕಿಗಳನ್ನು ಹೊಂದಿರಬೇಕು - ಸಾಕಾಣಿಕೆ ಮನೆಯಲ್ಲಿ, ಕಿಟಕಿ-ಬಾಗಿಲುಗಳು ಉತ್ತರ-ದಕ್ಷಿಣಕ್ಕೆ ಇದ್ದು ಮನೆಯ ಉದ್ದ ಪೂರ್ವ-ಪಶ್ಚಿಮಕ್ಕೆ ಇರಬೇಕು - ಸಾಕಾಣಿಕೆ ಮನೆಯ ಸುತ್ತಲು-ನೆರಳು ಉಂಟುಮಾಡುವಂತೆ ಗಿಡ-ಮರಗಳನ್ನು ಬೆಳೆಸಬೇಕು - ಸೊಪ್ಪು ಶೇಖರಿಸಲು, ಪ್ರತ್ಯೇಕ ಕೊಠಡಿಯಿರಬೇಕು - ಚಾಕಿ ಹುಳು-ಸಾಕಾಣಿಕೆಗೆ ಪ್ರತ್ಯೇಕ ಕೊಠಡಿಯಿದ್ದರೆ ಉತ್ತಮ ಸೋಂಕು ನಿವಾರಣೆ: - ಪ್ರತಿ ಬೆಳೆಯ ಮುನ್ನ ಮತ್ತು ಗೂಡು ಮಾರಾಟವಾದ ನಂತರ ಕಡ್ಡಾಯವಾಗಿ ಸೋಂಕು ನಿವಾರಣೆ ಮಾಡಬೇಕು. - ಪ್ರತಿ ಬೆಳೆಯ ನಂತರ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು, ಸಾಕಾಣಿಕೆ ಕೊಠಡಿಯನ್ನು ಕಸ ಸಹಿತ ಯಥಾ ಸ್ಥಿತಿಯಲ್ಲಿ ಪರಿಣಾಮಕಾರಿಯಾಗಿ ಸೋಂಕು ನಿವಾರಣೆ ಮಾಡಬೇಕು. ರೇಷ್ಮೆ ಮೊಟ್ಟೆಗಳ ಪರಿಪಾಕಿಸುವಿಕೆ: ರೋಗರಹಿತ ರೇಷ್ಮೆ ಮೊಟ್ಟೆಗಳನ್ನು ಬಿತ್ತನೆ ಕೋಠಿಯಿಂದ ಖರೀದಿಸಬೇಕು. ತಂಪಾದ ವೇಳೆಯಲ್ಲಿ ಸಂಜೆ ನಾಲ್ಕು ಗಂಟೆಯ ನಂತರ ಸಾಕಾಣಿಕೆ ಮಾಡಬೇಕು. - ಸಾಗಾಣಿಕೆ ಸಮಯದಲ್ಲಿ ತೀಕ್ಷ್ಣ ನೇರ ಬಿಸಿಲು, ಮಳೆ ಇತ್ಯಾದಿಗಳಿಂದ ಮೊಟ್ಟೆಗಳಿಗೆ ಹಾನಿಯಾಗಲಾರದಂತೆ ಎಚ್ಚರ ಅವಶ್ಯ. ತೇವಾಂಶ ಕಡಿಮೆಯಾಗಿರಬಾರದು. - ಮೊಟ್ಟ ಹಾಳೆಗಳನ್ನು ಒತ್ತೊತ್ತಾಗಿಟ್ಟು, ಗಾಳಿ ಸಂಚಾರವಿಲ್ಲದ ಪ್ಲಾಸ್ಟಿಕ ಚೀಲದಲ್ಲಿ ಅಥವಾ ತರಕಾರಿ ಚೀಲದಲ್ಲಿ ಇನ್ನಿತರ ವಸ್ತಗಳ ಜೊತೆಗೆ ಅಥವಾ ಬಟ್ಟೆಯಲ್ಲಿ ಸುತ್ತಿಕೊಂಡು ಸಾಕಾಣಿಕೆ ಮಾಡಬಾರದು. - ಕೀಟ ನಾಶಕಗಳ ಜೊತೆ, ಮೊಟ್ಟೆಗಳನ್ನು ಸಾಗಾಣಿಕೆ ಮಾಡಬಾರದು. - ವಾಹನದಲ್ಲಿ ಪ್ರಯಾಣಿಸುವಾಗ `ಇಂಜಿನ್ ಪಕ್ಕದಲ್ಲಿ ಇಟ್ಟುಕೊಂಡು ಪ್ರಯಾಣ ಮಾಡಬಾರದು. - ಮೊಟ್ಟೆಗಳನ್ನು ತಂದ ನಂತರ ಶೇ.2ರ ಫಾರ್ಮಾಲಿನ್ ದ್ರಾವಕದಲ್ಲಿ 5-10ನಿಮಿಷ ಕಾಲ ಅದ್ದಿ, 1/2 ಗಂಟೆ ನೆರಳಿನಲ್ಲಿ ಆರಲು ಬಿಡುವುದರಿಂದ ಮೊಟ್ಟೆಗಳ ಮೇಲಿರುವ ರೋಗಾಣುಗಳು ಇದ್ದಲ್ಲಿ ನಾಶವಾಗುವವು. - ಪರಿಪಾಕಿಸುವ ಸಮಯದಲ್ಲಿ ಅಗತ್ಯವಾದ ಉಷ್ಣಾಂಶ ಮತ್ತು ತೇವಾಂಶವಿರುವಂತೆ ನೋಡಿಕೊಳ್ಳಬೇಕು.

ಉಷ್ಣಾಂಶ ತೇವಾಂಶ

ಪರಿಸಾಕಣೆ 24-28ಲಿಅ 80%


ಕಪ್ಪು ಪೆಟ್ಟಿಗೆ ವಿಧಾನ: ತೆಳುವಾದ ಕಾಗದದಲ್ಲಿ ಪ್ಯಾಕೆಟ್‍ನಂತೆ ಮೊಟ್ಟೆ ಹಾಳೆಗಳನ್ನು ಸುತ್ತಿ ಅವನ್ನು ಪುನಃ ಕಪ್ಪು ಪೆಟ್ಟಿಗೆಯಲ್ಲಿಡಬೇಕು. - ಚಾಕಿಯಾಗದ ದಿನದಂದು ಮೊಟ್ಟೆಗಳನ್ನು ಕಪ್ಪು ಪೆಟ್ಟಿಗೆಯಿಂದ ಹೊರತೆಗೆದು ಬೆಳಿಗ್ಗೆ ಮಂದವಾದ ಬೆಳಕಿಗೆ ಎರಡು ಗಂಟೆಗಳ ಕಾಲ ಇಟ್ಟಲ್ಲಿ ಶೇ. 90-95 ಚಾಕಿಯಾಗುವುದು. ಯಾವುದೇ ಕಾರಣಕ್ಕೂ ನೇರ ಸೂರ್ಯನ ಬೆಳಕಿಗೆ ಇಡಬಾರದು.

ಮೊಟ್ಟೆಗಳ ಹಂತ ಕಪ್ಪು ಪೆಟ್ಟಿಗೆಯಲ್ಲಿ ಇಡುವ ಅವಧಿ ಬೆಳಕಿಗೆ ತೆರೆದಿಡುವ ದಿನ

ಶೇ.50ಕ್ಕಿಂತ ಕಡಿಮೆ ಕಪ್ಪು ಚುಕ್ಕೆ ಶೇ.50ಕ್ಕಿಂತ ಹೆಚ್ಚು ಕಪ್ಪು ಚುಕ್ಕೆ ಶೇ.50ಕ್ಕಿಂತ ಕಡಿಮೆ ಬೂದು ಬಣ್ಣ ಶೇ.50ಕ್ಕಿಂತ ಹೆಚ್ಚು ಬೂದು ಬಣ್ಣ 3 ದಿನಗಳು 2 ದಿನಗಳು 2 ದಿನಗಳು ಒಂದು ದಿನ ನಾಲ್ಕನೇಯ ದಿನ ಮೂರನೇ ದಿನ ಮೂರನೇ ದಿನ ಎರಡನೇ ದಿನ


ಚಾಕಿ ಸಾಕಾಣಿಕೆ : ಚಾಕಿ ಸಾಕಣೆ ಅತೀ ಸೂಕ್ಷ್ಮವಾದ ಮತ್ತು ಮುಖ್ಯ ಅಂಶ ಗೂಡಿನ ಗುಣಮಟ್ಟ ಮತ್ತು ಒಟ್ಟು ಇಳುವರಿ ಸಂಪೂರ್ಣವಾಗಿ ಸಮರ್ಪಕ ಚಾಕಿ ಸಾಕಾಣಿಕೆ ಮೇಲೆ ಅವಲಂಬಿಸಿದೆ. ಚಾಕಿ ಮಾಡುವ ಮುನ್ನ ಸೋಂಕು ನಿವಾರಣೆ, ಮೊಟ್ಟೆ ಪರಿಸಾಕಣೆಗೆ ಅಲ್ಲದೇ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು. - ಚಾಕಿ ಕಟ್ಟುವುದನ್ನು ಬೆಳಗಿನ 10 ಗಂಟೆಯ ಒಳಗೆ ಮಾಡುವುದು ಸೂಕ್ತ ನಿಗದಿತ ಸಮಯದ ನಂತರ ಚಾಕಿ ಕಟ್ಟಬಾರದು. - ಉತ್ತಮ ಗುಣಮಟ್ಟದ ಚಾಕಿ ಸೊಪ್ಪನ್ನು ಕಂದು, ಚಿಕ್ಕದಾಗಿ ಚೌಕಾಕಾರದಲ್ಲಿ ಕತ್ತರಿಸಿ ಹುಳುಗಳಿಗೆ ನೀಡಬೇಕು. - ಆಯಾ ಹಂತಕ್ಕೆ ಅನುಗುಣವಾಗಿ ಕೋಷ್ಟಕದಲ್ಲಿ ತಿಳಿಸಿದಂತೆ, ನಿಗದಿತ ಪ್ರಮಾಣದಲ್ಲಿ ಸೊಪ್ಪನ್ನು ನೀಡುವುದು ಅವಶ್ಯ. ಹುಳುಗಳ ಗಾತ್ರಕ್ಕೆ ಅನುಗುಣವಾಗಿ ಸೊಪ್ಪನ್ನು ಚೌಕಾಕಾರವಾಗಿ ಕತ್ತರಿಸಿ ದಿನಕ್ಕೆ ನಾಲ್ಕು ಬಾರಿ ನೀಡಬೇಕು ಮತ್ತು ಸ್ಥಳಾವಕಾಸ ಒದಗಿಸಬೇಕು. - ಬೆಳಿಗ್ಗೆ ಮತ್ತು ಸಾಯಂಕಾಲದ ತಂಪು ಹೊತ್ತಿನಲ್ಲಿ ಸೊಪ್ಪು ತರಬೇಕು. - ಚಾಕಿ ಹುಳುಗಳಿಗೆ ಬೇಕಾಗಿರುವ ಅಧಿಕ ಉಷ್ಣಾಂಶ ಮತ್ತು ತೇವಾಂಶ ಕೊಠಡಿಯಲ್ಲಿರುವಂತೆ ನೋಡಿಕೊಳ್ಳಬೇಕು. - ಚಾಕಿ ಹುಳು ಸಾಕಾಣಿಕೆಯನ್ನು ಮರದ ತಟ್ಟೆಗಳಲ್ಲಿ ಮಾಡುವುದು ಸೂಕ್ತ. ಇಲ್ಲವಾದಲ್ಲಿ ಬಿದಿರಿನ ತಟ್ಟೆಗಳಲ್ಲಿ ಮಾಡಬಹುದು. ಪ್ರತಿ ತಟ್ಟೆಯಲ್ಲ ಕೇವಲ 25 ಮೊಟ್ಟೆಗಳನ್ನು ಮಾತ್ರ ಚಾಕಿ ಕಟ್ಟಬೇಕು. ಕಾರಣ ರೋಗ ಹರಡದಂತೆ ಕಾಪಾಡಬಹುದು. ಚಾಕಿ ಕಟ್ಟಿದ 25 ಮೊಟ್ಟೆಗಳ ಮರಿಗಳನ್ನು ಎರಡನೇ ಹಂತದ ಕೊನೆಯವರೆಗೆ ಅದೇ ತಟ್ಟೆಯಲ್ಲಿ ಮುಂದುವರಿಸಬೇಕು. - ಮೊದಲ ಹಂತದಲ್ಲಿ ಹಾಸಿಗೆ ಬದಲಾಯಿಸಬಾರದು. ಎರಡನೇ ಹಂತದ ಅವಧಿಯಲ್ಲಿ ಜ್ವರದಿಂದ ಎದ್ದ ಹುಳುಗಳಿಗೆ 1-2 ಸೊಪ್ಪು ಕೊಟ್ಟ ನಂತರ ಮತ್ತು ಎರಡನೇ ಜ್ವರಕ್ಕೆ ಹೋಗುವ ಮೊದಲು (2 ಸೊಪ್ಪು ಮೊದಲ), ಮತ್ತು ಮೂರನೇ ಹಂತದಲ್ಲಿ ಪ್ರತಿದಿನ ಹಾಸಿಗೆ ಬದಲಾಯಿಸಬೇಕು. ಕಸ ತೆಗೆಯಲು ಬಲೆಗಳನ್ನು ಉಪಯೋಗಿಸಬೇಕು. - ಜ್ವರಕ್ಕೆ ಕೂಡುವ, ಸಮಯದಲ್ಲಿ ಮೇಲೆ ಮುಚ್ಚಿದ ಮೇಣದ ಕಾಗದ ಮತ್ತು ಫೋ ರಬ್ಬರನ್ನು ತೆಗೆಯಬೇಕು. ಪ್ರತಿಸಾರಿ ಹುಳುಗಳು ಜ್ವರದಲ್ಲಿರುವಾಗ ಸುಣ್ಣದ ಪುಡಿಯನ್ನು ಉದುರಿಸಿ ಹಾಸಿಗೆ ಒಣದಾಗಿರುವಂತೆ ನೋಡಿಕೊಳ್ಳಬೇಕು. - ಹುಳುಗಳು ಜ್ವರದಲ್ಲಿರುವಾಗ ಪದೇ ಪದೇ ಕದಲಿಸಬಾರದು. - ಶೇ. 90ರಷ್ಟು ಹುಳುಗಳು ಜ್ವರದಿಂದ ಎದ್ದ ನಂತರವೇ ಸೊಪ್ಪು ಕೊಡಬೇಕು. - ಮುಂಜಾಗೃತೆ ಕ್ರಮವಾಗಿ ರೋಗಗಳನ್ನು ತಡೆಯಲು ಹಾಸಿಗೆ ಸೋಂಕು ನಿವಾರಕಗಳನ್ನು ಜ್ವರದಿಂದ ಎದ್ದ ನಂತರ ಶಿಫಾರಸ್ಸಿನಂತೆ ಉಪಯೋಗಿಸಬೇಕು. - ಬರಿಗೈಯಿಂದ ಚಾಕಿ ಹುಳುಗಳನ್ನು ಯಾವುದೇ ಕಾರಣದಿಂದ ಮುಟ್ಟಬಾರದು. - ಕೋಷ್ಟಕದಲ್ಲಿರುವಂತೆ, ಆಯಾ ಹಂತಕ್ಕೆ ತಕ್ಕಂತೆ ಹಾಸಿಗೆಯ ಸ್ಥಳಾವಕಾಶವನ್ನು ಹೆಚ್ಚಿಸುತ್ತಿರಬೇಕು. ಒತ್ತೊತ್ತಾಗಿ ಗಾಳಿಯಾಡದಂತೆ ಹುಳುಗಳನ್ನು ಇಟ್ಟಿದ್ದೆ ಆದಲ್ಲಿ ಬೇಗನೇ ರೋಗಗಳಿಗೆ ತುತ್ತಾಗಿ ಬೆಳೆ ಹಾನಿಯಾಗುವುದು. - ರೈತರು ಚಾಕಿಯನ್ನು ಚಾಕಿ ಸಾಕಾಣಿಕೆ ಕೇಂದ್ರದಿಂದ ತರುವ ಸಂದರ್ಭಗಳಲ್ಲಿ, ಆರೋಗ್ಯವಂತ ಚಾಕಿಯನ್ನು ಎರಡನೇ ಜ್ವರದ ನಂತರ 1-2 ಸೊಪ್ಪು ಕೊಟ್ಟ ನಂತರ ತಂಪಾದ ವೇಳೆಯಲ್ಲಿ ಸಮೀಪದ ಕೇಂದ್ರದಿಂದ ತರಬೇಕು. ಬೆಳೆದ ಹುಳು ಸಾಕಾಣಿಕೆ: - ಐದನೇ ಹಂತದ ಮೂರನೇ ದಿನದಿಂದ ಬಲಿಕೆ ಸೊಪ್ಪನ್ನು ಕೊಡಬೇಕು. - ಮಣ್ಣು ಮಿಶ್ರಿತ ರೋಗ ತಗುಲಿದ, ಹಣ್ಣಾದ ಸೊಪ್ಪನ್ನು ನೀಡಬಾರದು. - ನಾಲ್ಕನೇ ಹಂತದಲ್ಲಿ ಒಂದು ಎಲೆಯನ್ನು ಅರ್ಧದಂತೆ ಕತ್ತರಿಸಿದ ಎಲೆಯನ್ನು ನೀಡಬೇಕು ಐದನೇ ಹಂತ. - 4ನೇ/5ನೇ ಹಂತದಲ್ಲಿ ಪ್ರತಿ ದಿನವು ಹಾಸಿಗೆಯನ್ನು ಬದಲಾಯಿಸಬೇಕು. ಅಲ್ಲದೇ ಕಸ ಬದಲಾಯಿಸುವ ಬೆಲೆಗಳನ್ನು ಉಪಯೋಗಿಸಬೇಕು.

100 ದ್ವಿತಳಿ ಮೊಟ್ಟೆಗಳಿಗೆ ಬೇಕಾಗುವ ಸ್ಥಳಾವಕಾಶ, ಸೊಪ್ಪಿನ ಪ್ರಮಾಣ, ಉಷ್ಣಾಂಶ, ತೇವಾಂಶ ಹುಳುವಿನ ಹಂತ ಸ್ಥಳಾವಕಾಶ (3 1/2 ಅಡಿ ತಟ್ಟೆಗಳು) ಸೊಪ್ಪಿನ ಪ್ರಮಾಣ ಉಷ್ಣಾಂಶ (ಸೆಂ) ತೇವಾಂಶ (%)

ಮೊದಲನೇ ಹಂತ ಎರಡನೇ ಹಂತ ಮೂರನೇ ಹಂತ ನಾಲ್ಕನೇ ಹಂತ ಐದನೇ ಹಂತ 2 2-5 5-10 10-20 20-40 2.5-3 ಕೆ.ಜಿ. 10 ಕೆ.ಜಿ. 50 ಕೆ.ಜಿ. 100-125 ಕೆ.ಜಿ. 800-900 ಕೆ.ಜಿ. 27-28 27-28 25-26 24-25 23-24 85-90 85-90 75-80 70-75 65-70


- ಬೆಳೆದ ಹುಳುಗಳಿಗೆ ಬೇಕಾದ ಉಷ್ಣಾಂಶ ಮತ್ತು ತೇವಾಂಶ ಕೋಷ್ಠಕದಲ್ಲಿರುವಂತೆ ಒದಗಿಸಬೇಕು. - ಪ್ರೌಢ ಹುಳುಗಳಿಗೆ ಸಮರ್ಪಕ, ನಿಗದಿತ ಪ್ರಮಾಣದಲ್ಲಿ ಸೊಪ್ಪು ನೀಡಬೇಕು. ಅತಿ ಹೆಚ್ಚಿನ ಸೊಪ್ಪು ನೀಡಬಾರದು. - ದಟ್ಟವಾಗಿ ಹುಳು ಸಾಕಾಣಿಕೆ ಮಾಡಬಾರದು ಇದರಿಂದ ರೋಗಗಳು ಬರುವ ಸಂಭವ ಹೆಚ್ಚು ಹುಳುಗಳನ್ನು ಅತಿ ವಿರಳವಾಗಿರುವುದರಿಂದ ಸೊಪ್ಪು ವ್ಯರ್ಥವಾಗುತ್ತದೆ. - ಮುಂಜಾಗ್ರತಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಜ್ವರದಿಂದ ಎದ್ದ ನಂತರ, ಮೂರು/ನಾಲ್ಕನೇ ದಿನ ಸೊಪ್ಪು ಕೊಡುವ ಮುನ್ನ ಹಾಸಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಿ ಅರ್ಧ ಗಂಟೆ ಕಾಲ ಪೇಪರಿನಿಂದ ಮುಚ್ಚಿ ನಂತರ ಸೊಪ್ಪು ಕೊಡಬೇಕು. - ಪ್ರೌಢ ಹುಳು ಸಾಕಾಣಿಕೆಯಲ್ಲಿ ಮೂರನೇ ಹಂತದಿಂದ ಶಿಫಾರಸ್ಸಿನಂತೆ ಊರು ಹುಳು ನಿಯಂತ್ರಣಕ್ಕೆ ಊದಿ ಪುಡಿಯನ್ನು ಉಪಯೋಗಿಸಬೇಕು. - ಅವಶ್ಯಕತೆಯಿದ್ದೆಲ್ಲಿ ದಿನ ಬಿಟ್ಟು ದಿನ ಅಥವಾ ಪ್ರತಿದಿನ ಕಸ ತೆಗೆದ ನಂತರ ಸೋಂಕು ನಿವಾರಕಗಳನ್ನು ಉಪಯೋಗಿಸಬೇಕು. - ಕೀಟನಾಶಕ/ಇತರ ವಿಷಯುಕ್ತ ರಸಾಯನಿಕಗಳನ್ನು ಸಿಂಪಡಿಸಿದ ಸೊಪ್ಪನ್ನು ಸುರಕ್ಷಿತ ಕಾಲಾವಧಿ ಮೊದಲು ಕೊಡಬಾರದು ಸಂಶಯವಿದ್ದಲ್ಲಿ, ಸ್ವಲ್ಪ ಹುಳುಗಳಿಗೆ ನೀಡಿ ಪರೀಕ್ಷಿಸಿ, ಹಾನಿ ಇಲ್ಲದಿದ್ದಲ್ಲಿ ನೀಡಬೇಕು. - ಬೀಡಿ, ಸಿಗರೇಟು ಹೊಗೆಯು ರೇಷ್ಮೆ ಹುಳುಗಳಿಗೆ ಹಾನಿಕಾರಕ ಆದ್ದರಿಂದ ಸಾಕಾಣಿಕೆ ಮನೆಯಲ್ಲಿ ಸೇದಬಾರದು. ರೋಗಪೀಡಿತ ಹುಳುಗಳ ನಿರ್ವಹಣೆ: - ರೋಗಪೀಡಿತ ಹುಳುಗಳನ್ನು ತಟ್ಟೆಗಳಿಂದ ಸಂಗ್ರಹಿಸಿ ಫಾರ್ಟಾಲಿನ್/ಬ್ಲೀಚಿಂಗ್ ಪುಡಿ/ ಸುಣ್ಣದಲ್ಲಿ ಶೇಖರಿಸಬೇಕು. - ಈ ಹುಳುಗಳನ್ನು ಹುಳು ಮನೆಯ ಸುತ್ತಮುತ್ತ ಬಿಸಾಕಬಾರದು. - ಇಂತಹ ಹುಳುಗಳನ್ನು ಸುಟ್ಟು ಇಲ್ಲವೆ ಹೂತು ಹಾಕಬೇಕು. ರೆಂಬೆ ಪದ್ಧತಿ : ದೊಡ್ಡ ಹುಳು ಸಾಕಾಣಿಕೆ: - ಮೂರನೇ ಅಥವಾ ನಾಲ್ಕನೇ ಹಂತದ ಹುಳುಗಳನ್ನು ರೆಂಬೆಗಳಿಂದ ಬೆಳೆಸಬಹುದು. - ಈ ವಿಧಾನದಲ್ಲಿ ದಡೇವು, ತಟ್ಟೆಗಳ ಬದಲಾಗಿ ಮೇಜುಗಳ ಮೇಲೆ ಹುಳು ಸಾಕಾಣಿಕೆ ಮಾಡಬೇಕು. - ಒಂದು ಮೇಜಿನ (5*35 ಅಡಿ) ಮೇಲೆ ಸುಮಾರು 50 ಮೊಟ್ಟೆ (20,000 ಹುಳು)ಗಳನ್ನು ಮೇಯಿಸಬಹುದು. - ರೆಂಬೆಗಳನ್ನು ಎರಡರಿಂದ ಮೂರು ಕಣ್ಣುಗಳನ್ನು ಬಿಟ್ಟು ಕಾಂಡ ಸೀಳದಂತೆ ಕತ್ತರಿಸಿ 20 ರಿಂದ 30ಕೆ.ಜಿ. ತೂಕದಂತೆ ಸಂಗ್ರಹಿಸಿಡಬೇಕು. ಒದ್ದೆ ಗೋಣಿ ಚೀಲದಿಂದ ತೇವಾಂಶ ಕಾಪಾಡಬೇಕು. - 4 ಮತ್ತು 5ನೇ ಹಂತದ ಹುಳುಗಳಿಗೆ ಬೇಕಾಗಿದ್ದಲ್ಲಿ ದಿನಕ್ಕೆ 3-4ಬಾರಿ ಸೊಪ್ಪು ಕೊಟ್ಟು, ಬೆಳವಣಿಗೆಗೆ ತಕ್ಕಂತೆ ಸ್ಥಳಾವಕಾಶ ಒದಗಿಸಬೇಕು. - ಹುಳುಗಳು ಜ್ವರದಲ್ಲಿದಾಗ (ಶೇ.90ರಷ್ಟು) ರೆಂಬೆಗಳನ್ನು ಕೊಡುವುದನ್ನು ನಿಲ್ಲಿಸಿ, ಹಾಸಿಗೆ ಒಣಗುವಂತೆ, ಸುಣ್ಣದ ಪುಡಿ ಧೂಳೀಕರಿಸಬೇಕು. - ಈ ಪದ್ಧತಿಯಲ್ಲಿ ಬೆಳೆದ ಹುಳುಗಳ ಸಾಕಾಣಿಕೆಯ 12-13ದಿನಗಳ ಅವಧಿಯಲ್ಲಿ, ನಾಲ್ಕನೇ ಜ್ವರದಿಂದ ಎದ್ದ ಮೇಲೆ ಕಸ ತೆಗೆಯಬೇಕು. - ಹುಳುಗಳು ಜ್ವರದಿಂದ ಎದ್ದ ಮೇಲೆ ಹಾಸಿಗೆ ಸೋಂಕು ನಿವಾರಕಗಳನ್ನು ಸಿಂಪರಣೆ ಮಾಡಿ, ಅರ್ಧ ಗಂಟೆ ನಂತರ ಸೊಪ್ಪು ನೀಡಬೇಕು. - ಊರು ಹಾವಳಿ ತಡೆಯಲು, 3,4,5ನೇ ಹಂತದಲ್ಲಿ ಕೋಷ್ಠಕದಲ್ಲಿ ತಿಳಿಸಿರುವಂತೆ ಊದೆ ಪುಡಿಯನ್ನು ಎಲ್ಲಾ ಹುಳುಗಳ ಮೇಲೆ ಒಂದು ಪದರು ಬೀಳುವಂತೆ ಸಿಂಪಡಿಸಬೇಕು.

ಕೋಷ್ಠಕ ಸಂಜೀವಿನಿ/ಸುರಕ್ಷ ಹಾಸಿಗೆ ಸೋಂಕು ನಿವಾರಕಗಳನ್ನು ಉಪಯೋಗಿಸುವ ವಿಧಾನ ಹುಳುವಿನ ಹಂತ ತಟ್ಟೆಯ ಸಂಖ್ಯೆ (ಸ್ಥಳಾವಕಾಶ ಚ.ಅ.) ಒಟ್ಟು ಪ್ರಮಾಣ ಗ್ರಾಂ

ಚಾಕಿ ಹಂತದಲ್ಲಿ ಮೊದಲ ಜ್ವರದಿಂದ ಎದ್ದ ನಂತರ ಎರಡನೆ ಜ್ವರದಿಂದ ಎದ್ದ ನಂತರ ಮೂರನೇ ಜ್ವರದ ನಂತರ ನಾಲ್ಕನೇ ಜ್ವರದ ನಂತರ ಐದನೇ ಹಂತದ 3/4ನೇ ದಿನ 2(4) 2(15) 4(15) 8(90) 15(180) 25(270) 20 50 120 320 750 1500

ಒಟ್ಟು 2700 ಗ್ರಾಂ

ನೂರು ಮೊಟ್ಟೆಗಳಿಗೆ = 2.7ರಿಂದ 3 ಕೆ.ಜಿ.


ಹಣ್ಣು ಹುಳುಗಳ ನಿರ್ವಹಣೆ : ಹಣ್ಣು ಹುಳುಗಳ ಸೊಪ್ಪು ತಿನ್ನುವುದನ್ನು ನಿಲ್ಲಿಸಿ, ತಲೆಯೆತ್ತಿ, ಗೂಡನ್ನು ಕಟ್ಟಲು ಜಾಗ ಹುಡುಕಾಡುತ್ತವೆ. ಈ ಹಂತದಲ್ಲಿ ಅಲಕ್ಷ್ಯತನ ತೋರಿದಲ್ಲಿ ಹುಳುಗಳು ತಟ್ಟೆಯಲ್ಲಿಯೆ ರೇಷ್ಮೆ ಎಳೆಗಳನ್ನು ಬಿಡಲು ಪ್ರಾರಂಭಿಸುವುದರಿಂದ ರೇಷ್ಮೆಯು ವ್ಯರ್ಥವಾಗುವುದು. ಮಾದರಿ ಹಣ್ಣು ಹುಳು ಕಾಣಿಸಿಕೊಂಡ ಮೇಲೆ ಸೊಪ್ಪನ್ನು ಕತ್ತರಿಸಿ ತೆಳುವಾಗಿ ಕೊಡಬೇಕು. ಇಲ್ಲವಾದಲ್ಲಿ ಹುಳುಗಳು ಸೊಪ್ಪಿನ ಕೆಳಗೆ ಅವಿತುಕೊಂಡು ಅಲ್ಲಿಯೇ ಗೂಡು ಕಟ್ಟಲಾರಂಭಿಸುತ್ತವೆ. ಇದರಿಂದ ಗೂಡಿನ ಗುಣಮಟ್ಟ ಕಡಿಮೆಯಾಗಿ ಹೆಚ್ಚಿನ ಬೆಲೆ ಸಿಗುವುದಿಲ್ಲ. - ಸ್ವಚ್ಛಗೊಳಿಸಿ ಸೋಂಕು ನಿವಾರಣೆ ಮಾಡಿದಂತಹ ಚಂದ್ರಿಕೆಗಳಲ್ಲಿ ಉಪಯೋಗಿಸಬೇಕು. ಇವುಗಳನ್ನು ಓರೆಯಾಗಿ ನಿಲ್ಲಿಸಬೇಕು. - ಸರಿಯಾಗಿ ಹಣ್ಣಾದ ಹುಳುಗಳನ್ನು ಆಯ್ದು 6ಘಿ4 ಅಡಿ ಚಂದ್ರಿಕೆಗಳ ಮೇಲೆ ಅಂದಾಜು 900-1000 ಹುಳುಗಳನ್ನು ಬಿಡಬೇಕು. ಮಳೆಗಾಲದಲ್ಲಿ ಸ್ವಲ್ಪಮಟ್ಟಿಗೆ ತೆಳುವಾಗಿ ಬಿಡುವುದು ಸೂಕ್ತ. - ಚಂದ್ರಿಕೆಗಳನ್ನು ಇದುವೆ ಕೊಠಡಿಯಲ್ಲಿ, ಸಾಕಷ್ಟು ಗಾಳಿ ಸಂಚಾರ ಇರಬೇಕು. ಇಲ್ಲವಾದಲ್ಲಿ ಕೊಠಡಿಯಲ್ಲಿ ತೇವಾಂಶ ಹೆಚ್ಚಾಗಿ ನೂಲು ಬಚ್ಚಾಣಿಕೆಯು ಕಡಿಮೆಯಾಗಿ ಗೂಡಿನ ಬೆಲೆ ಕಡಿಮೆಯಾಗುವುದು. - ಚಂದ್ರಿಕೆಯ ಮೇಲೆ ರೋಗಗ್ರಸ್ಥ ಅಥವಾ ಸತ್ತ ಹುಳು ಕಂಡು ಬಂದಲ್ಲಿ ಅವುಗಳನ್ನು ಕೂಡಲೇ ಸಂಗ್ರಹಿಸಿ ಸುಡಬೇಕು ಇಲ್ಲವೇ ಹೂತು ಹಾಕಬೇಕು. - ಗೂಡು ಕಟ್ಟುವಾಗ ಕೊಠಡಿಯಲ್ಲಿ ಒಂದೇ ಸಮನಾದ ಮಂದ ಬೆಳಕು ಒಳ್ಳೆಯದು. - ಗೂಡು ಕಟ್ಟುವ ಸ್ಥಳದಲ್ಲಿ ನಿಗಧಿತ ಉಷ್ಣಾಂಶ ಮತ್ತು ತೇವಾಂಶವಿರಬೇಕು.

ಉಷ್ಣಾಂಶ ತೇವಾಂಶ

ಹಣ್ಣು ಹುಳು 25-26ಲಿಅ 65-70%


- ಪೂರ್ಣವಾಗಿ ಹಣ್ಣಾಗದ ಹುಳುಗಳನ್ನು ಚಂದ್ರಿಕೆಯ ಮೇಲೆ ಬಿಡಬಾರದು. ಅವುಗಳ ಮಾತ್ರ ಮತ್ತು ಹಿಕ್ಕೆಗಳು ಕಟ್ಟಿದ ಗೂಡುಗಳ ಮೇಲೆ ಬಿದ್ದು ಕಳಪೆ ಗೂಡುಗಳ ಸಂಖ್ಯೆ ಹೆಚ್ಚಾಗುವುದು. ಗೂಡು ಬಿಡಿಸುವುದು: ಗೂಡುಗಳನ್ನು ಕೋಶಾವಸ್ಥೆಯಲ್ಲಿಯೇ ಬಿಡಿಸಿದರೆ, ಕರಗಿದೆ ಗೂಡುಗಳ ಸಂಖ್ಯೆ ಕಡಿಮೆಯಾಗುವುದು. ಕಾರಣ 5,6ನೇ ದಿನ ಬಿಡಿಸಿ ಒಳ್ಳೆಯ ಗೂಡುಗಳನ್ನು ಮಾತ್ರ ಮಾರಾಟ ಮಾಡಬೇಕು. - ನಿಗದಿತ ಸಮಯದ ನಂತರ ಗೂಡುಗಳನ್ನು ಬಿಡಿಸಿದರೆ ತೂಕದಲ್ಲಿ ಕಡಿಮೆಯಾಗುತ್ತದೆ. - ಗೂಡು ಬಿಡಿಸುವ ಮೊದಲೆ, ಚಂದ್ರಿಕೆಯಲ್ಲಿಯ ಜೆಲ್ಲಿ ಗೂಡು ಮೊದಲು ತೆಗೆಯಬೇಕು. ಇಲ್ಲವಾದಲ್ಲಿ ಇವುಗಳಲ್ಲಿಯ ಸತ್ತ ಹುಳುಗಳ ರಸ ಒಳ್ಳೆಯ ಗೂಡುಗಳ ಮೇಲೆ ಬಿದ್ದು ಗೂಡುಗಳ ಗುಣಮಟ್ಟ ಕಡಿಮೆಯಾಗುವುದು. - ಬಿಡಿಸಿದ ಗೂಡುಗಳನ್ನು ಒತ್ತೊತ್ತಾಗಿ ಇಡದೇ, ಗಾಳಿಯಾಡುವಂತೆ ತಟ್ಟೆಯಲ್ಲಿ ಹರಡಿ ಇರುವೆ, ಇತ್ಯಾದಿಗಳಿಂದ ಕಾಪಾಡಬೇಕು. - ಗೂಡುಗಳನ್ನು ಮಾರುಕಟ್ಟೆಗೆ ಸಾಗಿಸುವಾಗ ಒತ್ತೊತ್ತಾಗಿ ಚೀಲಗಳಲ್ಲಿ ತುಂಬದೆ, ಹಗುರವಾಗಿ ಗಾಳಿಯಾಡುವಂತೆ ರಂಧ್ರವಿರುವ ಚೀಲಗಳಲ್ಲಿ ಸಾಗಿಸಬೇಕು. - ಗೂಡುಗಳನ್ನು ಮಾರುಕಟ್ಟೆಗೆ ಸಾಗಿಸುವಾಗ ಸೀರೆ ಮಳೆ, ಬಿಸಿಲುಗಳಿಂದ ಕಾಪಾಡಬೇಕು - ಗೂಡುಗಳನ್ನು ಸಾಗಿಸುವಾಗ ಅಥವಾ ಕೆಳಗೆ ಇಳಿಸುವಾಗ ನೆಲಕ್ಕೆ ಅಪ್ಪಳಿಸಬಾರದು. ಇದರಿಂದ ಗೂಡಿನ ಒಳಗಿರುವ ಕೋಶಗಳಿಗೆ ಧಕ್ಕೆ / ಹಾನಿಯಾಗುವುದು. ಊರು ನೊಣ ಮತ್ತು ನಿಯಂತ್ರಣ ಕ್ರಮಗಳು: - ಊಜಿ ಬಲೆಯನ್ನು ಬಾಗಿಲು, ಕಿಟಕಿ ಮತ್ತು ದಡೆವುಗಳಿಗೆ ಅಳವಡಿಸಬೇಕು. - ಊಜಿ ನೊಣ ಸೊಪ್ಪಿನ ಜೊತೆ ಸಾಕಾಣಿಕೆ ಮನೆ ಒಳಗೆ ಬರದಂತೆ ಜಾಗ್ರತೆವಹಿಸಬೇಕು - ಊಜಿಗೆ ತುತ್ತಾದ ಹುಳುಗಳನ್ನು ಅಂಗಳದಲ್ಲಿ ಬಿಸಾಕದೆ ನಾಶಪಡಿಸಬೇಕು. - ರೂಢಿಯಲ್ಲಿರುವ ಊಜಿನಾಶಕಗಳಾದ ಊಜಿಪುಡಿ ಇತ್ಯಾದಿಗಳಿಂದ ನಿಗದಿತ ಕ್ರಮದಲ್ಲಿ ಊಜಿ ಹಾವಳಿ ತಡೆಯಬೇಕು. - ಊಜಿ ಪುಡಿ ಉಪಯೋಗಿಸಿದ ಸಮಯದಲ್ಲಿ ಉಳಿಕೆ ಹಾಸಿಗೆಯನ್ನು ದನಕರುಗಳಿಗೆ ನೀಡಬಾರದು. ಕೋಷ್ಠಕ : ಊಜಿ ಪುಡಿಯನ್ನು ಉಪಯೋಗಿಸುವ ವಿಧಾನ ಹುಳುವಿನ ಹಂತ ಬಳಸುವ ದಿನ ಬೇಕಾಗುವ ಪ್ರಮಾಣ

ಮೂರನೇ ಹಂತ ನಾಲ್ಕನೇಯ ಹಂತ ಐದನೆಯ ಹಂತ ಎರಡನೇ ದಿನ ಎರಡು ಮತ್ತು ನಾಲ್ಕನೆ ದಿನ ಎರಡು ನಾಲ್ಕು ಮತ್ತು ಆರನೆಯ ದಿನ 290 ಗ್ರಾಂ 1080 ಗ್ರಾಂ 3240 ಗ್ರಾಂ

ನೂರು ಮೊಟ್ಟೆ= ತಟ್ಟೆ ಪದ್ಧತಿ = 4 ಕೆ.ಜಿ. ರೆಂಬೆ ಪದ್ಧತಿ = 5 ಕೆ.ಜಿ


ಡಾ|| ಚಿನ್ನಸ್ವಾಮಿ