ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೈಜೋ಼ಪೊಡ

ವಿಕಿಸೋರ್ಸ್ದಿಂದ

ರೈಜೋಪೊಡ ಪ್ರಾಣಿಪ್ರಪಂಚದ ಮೊದಲನೆಯ ವಂಶ ಎನಿಸಿರುವ ಏಕಕೋಶೀಯ ಜೀವಿಗಳಿಗೆ ಸೇರಿದ ಒಂದು ವರ್ಗ. ಇವು ವಾಸಿಸುವ ಪರಿಸರ ಹಾಗೂ ಜೀವನಕ್ರಮವನ್ನು ಆಧರಿಸಿ ಇವುಗಳ ರಚನೆಯಲ್ಲಿ ಹಲವು ಮಾರ್ಪಾಡುಗಳಾಗಿವೆ. ಇವನ್ನು ಆಧರಿಸಿ ಏಕಕೋಶೀಯ ಜೀವಿಗಳ ಗುಂಪನ್ನು 4 ವರ್ಗಗಳಾಗಿ ವಿಂಗಡಿಸಿದೆ: 1. ರೈeóÉೂೀಪೊಡ, 2. ಮೆಸ್ಸಿಗೊಫೊರ, 3 ಸ್ವೊರೂeóÉೂೀವ, 4. ಸಿಲಿಯೊಫೊರ.

ರೈeóÉೂೀಪೊಡ ವರ್ಗದ ಸೇರಿದ ಎಲ್ಲ ಜೀವಿಗಳೂ ಮಿಥ್ಯಾಪಾದಿಗಳು. ಇವನ್ನು ಇವುಗಳ ವಿಥ್ಯಾಪಾದದ ರಚನೆ, ಕೋಶಕೇಂದ್ರಗಳ ಸಂಖ್ಯೆ ಮತ್ತು ಜೀವದ್ರವದ ಸುತ್ತಲಿರುವ ಕವಚ ಮೊದಲಾದವನ್ನು ಗಮನಿಸಿ ಅನೇಕ ಉಪವರ್ಗಗಳಾಗಿ ವಿಂಗಡಿಸಿದೆ. 1. ಲೊಬೊಸ 2. ಫೊರಾಮಿನಿಫೆರ, 3. ಹೀಲಿಯೊಜೋ:ವ 4. ರೇಡಿಯೊಲಾರಿಯ. 1. ಲೊಬೊಸ ಅಥವಾ ಅಮಿಬಿeóÉೂೀವ: ಇವು ಸಿಹಿನೀರಿನಲ್ಲಿರುವ ಸೂಕ್ಷ್ಮಜೀವಿಗಳು. ಇವಕ್ಕೆ ಚಿಕ್ಕ ಮತ್ತು ಮೊಂಡು ಮಿಥ್ಯಾಪಾದಗಳಿವೆ. ಸಾಮಾನ್ಯವಾಗಿ ಪರಿಚಿತವಿರುವ ಅಮೀಬ ಮತ್ತು ಪರತಂತ್ರಜೀವಿ ಎನಿಸಿರುವ ಎಂಟಮೀಬ ಈ ಉಪವರ್ಗಕ್ಕೆ ಸೇರುತ್ತದೆ. ಕೆಲವು ಜೀವಿಗಳ ಹೊರಮೈ ಕವಚದಿಂದ ಆವೃತವಾಗಿರುವುದು. ಇಂಥ ಜೀವಿಗಳಲ್ಲಿ ವಿಭಜನೆ ಮೂಲಕ ಪ್ರಜನನಕ್ರಿಯೆ ನಡೆಯುತ್ತದೆ.

2. ಪೊರಾಮಿನಿಫೆರ: ಇವು ಉಪ್ಪುನೀರಿನಲ್ಲಿರುವ ಜೀವಿಗಳು. ಇವಕ್ಕೆ ಅನೇಕ ಕವಲುಗಳಿರುವ ಮಿಥ್ಯಾಪಾದಗಳಿವೆ. ಬಿರುಸಾದ ಕವಚಗಳಲ್ಲಿ ಅನೇಕ ರಂಧ್ರಗಳಿದ್ದು, ಇವುಗಳ ಮೂಲಕ ಮಿಥ್ಯಾಪಾದಗಳು ಕೋಶದಿಂದ ಹೊರಕ್ಕೆ ಚಾಚಿಕೊಂಡಿರುತ್ತವೆ. ಪ್ರಜನನಕ್ರಿಯೆ ಮುಖ್ಯ ವಾಗಿ ವಿಭಜನೆಯ ಮೂಲಕ ಜರಗುತ್ತದೆ. ಉದಾಹರಣೆ: ಎಲ್‍ಫಿಡಿಯಮ್, ಗ್ಲೋಬಿಜರಿನ.

3. ಹೀಲಿಯೊeóÉೂೀವ: ಸಿಹಿನೀರಿನಲ್ಲಿ ವಾಸಿಸುವ ಈ ಜೀವಿಗಳಿಗೆ ಬಿರುಸಾದ, ಕಿರಣಗಳೋಪಾದಿಯಲ್ಲಿ ಹೊರಚಾಚಿಕೊಂಡಿರುವ ಮಿಥ್ಯಾಪಾದಗಳಿವೆ. ಉದಾಹರಣೆ: ಎಕ್ಟಿನೊಫ್ರಿಸ್, ಎಕ್ಟಿನೊಸ್ವೆರಿಯಮ್.

4. ರೇಡಿಯೊಲಾರಿಯ: ಇದು ರೈeóÉೂಪೊಡಗಳಲ್ಲಿ ಬಲು ದೊಡ್ಡ ಗುಂಪು. ಈ ಉಪವರ್ಗದ ಎಲ್ಲ ಜೀವಿಗಳೂ ಉಪ್ಪು ನೀರಿನಲ್ಲಿ ವಾಸಿಸುತ್ತವೆ. ರಂಧ್ರಗಳಿರುವ ಕೇಂದ್ರ ಕವಚ ಇವುಗಳ ಅತಿಮುಖ್ಯಗುಣ. ಈ ಕವಚ ಜೀವದ್ರವವನ್ನು ಒಳ ಮತ್ತು ಹೊರ ಭಾಗಗಳಾಗಿ ವಿಂಗಡಿಸುತ್ತದೆ. ಒಳಭಾಗದಲ್ಲಿ ಕೋಶಕೇಂದ್ರ ಇದೆ. ಕವಚ ಮರಳಿನಿಂ ದಾಗಿರುವುದರಿಂದ ಈ ವರ್ಗದ ಜೀವಿಗಳ ಪಳೆಯುಳಿಕೆಗಳು ಅಲ್ಲಲ್ಲಿ ಕಂಡುಬಂದಿವೆ. ಉದಾಹರಣೆ: ಎಕ್ಟಿನೊಮ, ಆಕೆಂಥೊಮೆಟ್ರಾ. (ಎಚ್.ಎನ್.ವೈ.)