ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೋಹಿಣಿ

ವಿಕಿಸೋರ್ಸ್ದಿಂದ

ರೋಹಿಣಿ ವೃಷಭ (ಟಾರಸ್) ರಾಶಿಯಲ್ಲಿಯ ಪ್ರಮುಖ ತಾರೆ (ಅಲ್ಡೆಬರಾನ್; ಟಾರಿ). ಇದೊಂದು ರಕ್ತದೈತ್ಯ (ಅಂದರೆ ಹೀಲಿಯಮ್ ನಕ್ಷತ್ರ) ಚಾಂದ್ರ ಕಕ್ಷೆಯ 27 ನಕ್ಷತ್ರಗಳ ಪೈಕಿ ಒಂದು. ಇದರ ವಿಷುವದಂಶ 4ಗಂ. 34ಮಿ. 39ಸೆ; ಫಂಟಾವೃತ್ತಾಂಶ 1602758" ಉತ್ತರ. ಒಂದನೆಯ ಕಾಂತಿಮಾನದ ಕೆಂಪುಬಣ್ಣದ ನಕ್ಷತ್ರ. ವ್ಯಾಸ ಸೂರ್ಯ ವ್ಯಾಸದ ಸುಮಾರು 35ಮಡಿ; ಉಜ್ಜ್ವಲತೆ ಸೂರ್ಯನದರ 90ರಷ್ಟು. ಸೂರ್ಯನಿಂದ 68 ಜೋತಿರ್ವರ್ಷ ದೂರದಲ್ಲಿದೆ. ಕ್ರಾಂತಿ ವೃತ್ತದ ಬಳಿಯೇ ಇರುವುದರಿಂದ ಸೂರ್ಯ ಮತ್ತು ಚಂದ್ರ ಈ ನಕ್ಷತ್ರಕ್ಕೆ ತೀರ ಸಮೀಪದಲ್ಲಿ ಹಾದುಹೋಗುತ್ತವೆ. *