ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಯಾಗ್ರ

ವಿಕಿಸೋರ್ಸ್ದಿಂದ

ವಯಾಗ್ರ ಪುರುಷ ನಪುಂಸಕತೆಗೆ (ಇಂಪೊಟೆನ್ಸಿ) ಒಂದು ಕಾರಣವಾದ ಶಿಶ್ನದ ನಿಮಿರು ಅವಕ್ರಿಯೆ (ಎರೆಕ್ಟೈಲ್ ಡಿಸ್¥sóÀಂಕ್ಷನ್)

ದೌರ್ಬಲ್ಯಕ್ಕೆ ಬಾಯಿಯ ಔಷಧಿಯಾಗಿ (ಯುಎಸ್ ಫುóಡ್ ಅ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಾನ್ಯತೆ: ಮಾರ್ಚ್ 1998) ಬಳಸುವ ಸಿಲ್ಡೆನಾಫಿóಲ್ ಸಿಟ್ರೇಟ್ ಎಂಬ ರಾಸಾಯನಿಕದ ಜನಪ್ರಿಯ ನಾಮ.

ಲೈಂಗಿಕವಾಗಿ ಉದ್ರಿಕ್ತನಾದ ಪುರುಷನ ಶಿಶ್ನ ನಿಮಿರಿ ಸಂಭೋಗಯೋಗ್ಯ ಆಗದಿರುವುದು ಅಥವಾ ಸಂಭೋಗಾವಧಿಯ ಆದ್ಯಂತ ಶಿಶ್ನ ತನ್ನ ನಿಮಿರು ಸ್ಥಿತಿಯನ್ನು ಉಳಿಸಿಕೊಳ್ಳದಿರುವುದೇ ನಿಮಿರು ಅವಕ್ರಿಯೆ. ಇದಕ್ಕೆ ಕಾರಣಗಳು: ಮಾನಸಿಕ, ದೈಹಿಕ ರೋಗ, ಔಷಧಗಳ ಪಾಶ್ರ್ವಪರಿಣಾಮ ಅಥವಾ ಹಾರ್ಮೋನ್ ಅಸಂತುಲನೆ. ನಿಮಿರಿಸಲಾಗುವ ಊತಕಗಳ (ಎರೆಕ್ಟೈಲ್ ಟಿಶ್ಯು) ಮೂರು ಪದರಗಳ ಭಿತ್ತಿ ಇರುವ (ಕಾರ್ಪೊರ ಕ್ಯಾವರ್ನೋಸ 2 ಪದರ, ಕಾರ್ಪೊರ ಸ್ಪಾಂಜಿಯೋಸಮ್ 1 ಪದರ) ಕೊಳವೆ ಮಾನವ ಶಿಶ್ನ. ಪುರುಷ ಲೈಂಗಿಕವಾಗಿ ಉದ್ರಿಕ್ತನಾದಾಗ ನಿಮಿರಿಸಲಾಗುವ ಊತಕಗಳೊಳಕ್ಕೆ ಹೆಚ್ಚು ರಕ್ತ ತಂತಾನೇ ಪ್ರವಹಿಸುತ್ತದೆ. ಶಿಶ್ನದ ಬುಡದಲ್ಲಿ ರಕ್ತವನ್ನು ಹೊರಗೊಯ್ಯುವ ಅಭಿಧಮನಿ ತಂತಾನೇ ಸಂಕುಚಿಸುತ್ತದೆ. ಇದರಿಂದಾಗಿ ನಿಮಿರಿಸಲಾಗುವ ಊತಕಗಳೊಳಗಿನ ರಕ್ತದ ಸಂಮರ್ದ ಹೆಚ್ಚಿ ಶಿಶ್ನ ಹಿಗ್ಗಿ ದೃಢವಾಗಿ ಸಂಭೋಗಕ್ಕೆ ಸಿದ್ಧವಾಗುತ್ತದೆ. ಶಿಶ್ನ ನಿಮಿರುವಿಕೆಯ ಪ್ರಸಾಮಾನ್ಯ ಶರೀರಕ್ರಿಯಾಯಂತ್ರತೆ ಇಂತಿದೆ: ಕಾರ್ಪೊರ ಕ್ಯಾವರ್ನೋಸಕ್ಕೆ ನೈಟ್ರಿಕ್ ಆಕ್ಸೈಡ್ ಬಿಡುಗಡೆ, ಗ್ವಾನೈಲೇಟ್ ಸೈಕ್ಲೇಸ್ ಕಿಣ್ವದ ಪಟುಕರಣ, ಸೈಕ್ಲಿಕ್ ಗ್ವಾನೋಸಿನ್ ಮಾನೋಫಾಸ್ಫೇóಟ್ ರಾಸಾಯನಿಕದ ಪ್ರಮಾಣದ ಹೆಚ್ಚಳ, ಕಾರ್ಪೊರ ಕ್ಯಾವರ್ನೋಸದ ಸ್ನಾಯುಬಿಗಿತ ಸಡಿಲವಾಗಿ ಹೆಚ್ಚು ರಕ್ತ ಪ್ರವಹಿಸುವಿಕೆ. ನಿಮಿರುವಿಕೆಯ ಅವಕ್ರಿಯೆಗೆ ಫಾóಸ್ಪೋಡೈ ಎಸ್ಟೆರೇಸ್ ಎಂಬ ರಾಸಾಯನಿಕದ ಪ್ರಭಾವದಿಂದ ಸೈಕ್ಲಿಕ್ ಗ್ವಾನೋಸಿನ್ ಮಾನೋಫಾಸ್ಫೇóಟ್‍ನ ಪ್ರಮಾಣ ಕಡಿಮೆಯಾಗುವುದು ಕಾರಣ.

ವಯಾಗ್ರ ಫಾóಸ್ಪೋಡೈಎಸ್ಟೆರೇಸನ್ನು ನಿರೋಧಿಸಿ ನೈಟ್ರಿಕ್ ಆಕ್ಸೈಡಿನ ಪ್ರಭಾವವನ್ನು ವರ್ಧಿಸುತ್ತದೆ. 25, 50 ಮತ್ತು 100 ಮಿಲಿಗ್ರಾಮ್ ಗುಳಿಗೆಗಳ ರೂಪದಲ್ಲಿ ವಯಾಗ್ರ ಲಭ್ಯ. ಸೇವಿಸಿದ ಬಳಿಕ 30-120 ನಿಮಿಷಗಳ ಒಳಗೆ ಕ್ರಿಯಾಶಿಲವಾಗುವ ಇದರ ಪ್ರಭಾವ 2-4 ಗಂಟೆಗಳ ಕಾಲವಿರುತ್ತದೆ. ಇದರ ಉಪಾಪಚಯವಾಗುವದು ಯಕೃತ್ತಿನಲ್ಲಿ. ಉಪಾಪಚಯಗಳ 80% ಭಾಗ ಮಲದ ಮೂಲಕವೂ 20% ಭಾಗ ಮೂತ್ರದ ಮೂಲಕವೂ ವಿಸರ್ಜನೆಯಾಗುತ್ತವೆ. ರಕ್ತದೊತ್ತಡ, ಹೃತ್ಸಂಬಂಧಿತ ಪ್ರಾಚಲಗಳು, ದೃಷ್ಟಿ ಮುಂತಾದವನ್ನು ವಯಾಗ್ರ ಪ್ರಭಾವಿಸುವದರ ಜೊತೆಗೆ ಕೆಲವರಲ್ಲಿ ತಲೆನೋವು, ಹಸಿವು ಕಡಿಮೆಯಾಗುವಿಕೆ, ಮೈ ಬೆಚ್ಚಗಾಗುವಿಕೆ, ಮೂಗು ಕಟ್ಟಿಕೊಳ್ಳುವಿಕೆ, ಮೂತ್ರನಾಳ ಸೋಂಕು, ಭೇದಿ, ತಲೆಸುತ್ತು ಇವೇ ಮೊದಲಾದ ಪಾಶ್ರ್ವಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯೂ ಇರುವುದರಿಂದ ಇದನ್ನು ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕವೇ ಸೇವಿಸಬೇಕು. (ಎನ್.ಎಸ್.ಒ.)