ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಾಟ್ಸನ್, ಜಾನ್ ಬ್ರೋಡಸ್

ವಿಕಿಸೋರ್ಸ್ದಿಂದ

ವಾಟ್ಸನ್, ಜಾನ್ ಬ್ರೋಡಸ್ 1877-1957. ಮನೋವಿಜ್ಞಾನದ ವರ್ತನ ಪಂಥ ಪ್ರವರ್ತಿಸಿದ ಅಮೆರಿಕದ ಮನೋವಿಜ್ಞಾನಿ. ಸೌತ್ ಕರೋಲಿನದ ಟ್ರ್ಯಾವಲರ್ಸ್ ರೆಸ್ಟ್‍ನಲ್ಲಿ 1878 ಜನವರಿ 9ರಂದು ಬಡ ಕುಟುಂಬವೊಂದರಲ್ಲಿ 6 ಮಕ್ಕಳ ಪೈಕಿ 4ನೆಯ ಮಗುವಾಗಿ ಜನಿಸಿದ. ಸೋಮಾರಿ ಮತ್ತು ಕರ್ತವ್ಯಭ್ರಷ್ಟ ತಂದೆ ಪಿಕೆನ್ಸ್ ಬಟ್ಲರ್ ವಾಟ್ಸನ್ ಈತ ಚಿಕ್ಕವನಾಗಿದ್ದಾಗಲೇ ಕುಟುಂಬ ತ್ಯಜಿಸಿ ಓಡಿಹೋದ. ಧರ್ಮನಿಷ್ಠ ತಾಯಿ ಎಮ್ಮ ಕೆಸಯ ವಾಟ್ಸನ್‍ಗೆ ಮಗ ಧರ್ಮಪ್ರಚಾರಕನಾಗ ಬೇಕೆಂಬ ಬಯಕೆ.

¥sóÀರ್ಮನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಾರಂಭ (1894). ರಾಜ್ಯಸ್ಥಾಪಿತ ಮಠದ ತತ್ತ್ವಗಳನ್ನು ಒಪ್ಪದವನೆಂದು (ನಾನ್‍ಕನ್ ಫóರ್ಮಿಸ್ಟ್) ಪ್ರಾಧ್ಯಾಪಕರ ಅಭಿಮತವಾಗಿದ್ದರೂ ಕ್ಯಾಪ ಆಲ್ಫ ಸಂಘದ ಸದಸ್ಯ. ಮನೋವಿಜ್ಞಾನದಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸಿದ ಸಾಧಾರಣ ವಿದ್ಯಾರ್ಥಿ. ತತ್ತ್ವಶಾಸ್ತ್ರ ಪ್ರಾಧ್ಯಾಪಕ ಗೋರ್ಡನ್ ಮೂರ್‍ನ ಅವಕೃಪೆಗೆ ಪಾತ್ರನಾಗಿ ಪದವಿ ಪಡೆಯಲು ನಾಲ್ಕು ವರ್ಷಕ್ಕೆ ಬದಲಾಗಿ ಐದು ವರ್ಷ ಅಧ್ಯಯನ.

ಸ್ನಾತಕ ಪದವಿ ಗಳಿಸಿದ ಕೊಂಚ ಕಾಲಾನಂತರ ತಾಯಿ ಮರಣಿಸಿದ್ದ ರಿಂದ ಧರ್ಮ ಪ್ರಚಾರಕನಾಗುವ ಬದಲು ತತ್ತ್ವಶಾಸ್ತ್ರ ಅಧ್ಯಯನಕ್ಕೆ ಶಿಕಾಗೊ ವಿಶ್ವವಿದ್ಯಾಲಯಕ್ಕೆ ದಾಖಲಾತಿ (1900). ವೆಚ್ಚ ಭರಿಸಲೋಸುಗ ಅರೆಕಾಲಿಕ ದ್ವಾರಪಾಲಕ, ಹೋಟೆಲ್ ಮಾಣಿ ಮೊದಲಾದ ವೃತ್ತಿನಿರತ. ತತ್ತ್ವಶಾಸ್ತ್ರ ಅಧ್ಯಯನಕ್ಕೆ ಈತನ ಶಿಷ್ಯವೃತ್ತಿ. ಆತನ ಪಾಠ ಅರ್ಥವಾಗುತ್ತಿಲ್ಲವೆಂದು ಪ್ರಾಯೋಗಿಕ ಮನೋವಿಜ್ಞಾನದಲ್ಲಿ ಪಿಎಚ್.ಡಿ ಪದವಿಗಾಗಿ ಜೇಮ್ಸ್ ರೊಲ್ಯಾಂಡ್ ಆ್ಯಂಜೆಲ್ ಎಂಬಾತನ ಮಾರ್ಗದರ್ಶನದಲ್ಲಿ ಅಧ್ಯಯನಾರಂಭ, ಪದವಿ ಪ್ರಾಪ್ತಿ (1903). ಈ ಪದವಿ ಗಳಿಸಿದವರ ಪೈಕಿ ಅತ್ಯಂತ ಕಿರಿಯನೆಂಬ ಹೆಗ್ಗಳಿಕೆ. ಗುರುವಿನ ಸಹಾಯಕನಾಗಿ, ಅಧ್ಯಾಪಕನಾಗಿ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಮುಂದಿನ ಐದು ವರ್ಷಕಾಲ ವಾಸ. ಶಿಷ್ಯೆ ಮೇರಿ ಐಕ್ಸ್‍ನೊಂದಿಗೆ ವಿವಾಹ (1904).

ಜಾನ್ಸ್‍ಹಾಪ್‍ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮತ್ತು ಮನೋವಿಜ್ಞಾನ ಪ್ರಯೋಗಾಲಯ ನಿರ್ದೇಶಕ ಹುದ್ದೆ ಸ್ವೀಕಾರ (1908). ಈ ವಿಶ್ವವಿದ್ಯಾಲಯದಲ್ಲಿ 14ವರ್ಷ ಸೇವೆ ಸಲ್ಲಿಕೆ. ಸೈಕಲಾಜಿಕಲ್ ರಿವ್ಯು ಪತ್ರಿಕೆಯಲ್ಲಿ ವರ್ತನ ಪಂಥದ ಉಗಮದಲ್ಲಿ ಪ್ರಮುಖ ಘಟ್ಟ ಎಂದು ಪರಿಗಣಿಸಲಾಗಿರುವ ಸೈಕಾಲಜಿ ಆ್ಯಸ್ ಎ ಬಿಹೇವಿಯರಿಸ್ಟ್ ವ್ಯೂಸ್ ಇಟ್ ಪ್ರಬಂಧ ಪ್ರಕಟಣೆ (1913). ಸೈಕಲಾಜಿಕಲ್ ರಿವ್ಯು ಪತ್ರಿಕೆಯ ಸಂಪಾದಕನಾಗುವ ಗೌರವ ಪ್ರಾಪ್ತಿ. ಜರ್ನಲ್ ಆ¥sóï ಎಕ್ಸ್‍ಪೆರಿಮೆಂಟಲ್ ಸೈಕಾಲಜಿ ಪತ್ರಿಕೆಯ ಮೊದಲನೆಯ ಸಂಪಾದಕ. ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್‍ನ ಅಧ್ಯಕ್ಷ (1915). ಸಂಶೋಧನ ಸಹಾಯಕಿ ರೋಸಾಲಿ ರೇನರ್ ಎಂಬಾಕೆಯೊಂದಿಗಿನ ವಿವಾಹಬಾಹಿರ ಪ್ರೇಮ ಪ್ರಕರಣ ಬಹಿರಂಗವಾಗಿ ವಿವಾಹ ವಿಚ್ಛೇದನ, ಪ್ರೇಮಿಯೊಂದಿಗೆ ವಿವಾಹ, ವಿಶ್ವವಿದ್ಯಾಲಯದ ಅಧಿಕಾರಿಗಳ ಸೂಚನೆ ಮೇರೆಗೆ ರಾಜಿನಾಮೆ ನೀಡಿಕೆ. ನ್ಯೂಯಾರ್ಕ್‍ಗೆ ವಲಸೆ. ಜಾಹಿರಾತುದಾರನಾಗಿ 1945ರಲ್ಲಿ ನಿವೃತ್ತಿ. ಕೃಷಿಕನಾಗಿ ಶೇಷ ಜೀವನ.

ಮನೋವಿಜ್ಞಾನ ಪಂಡಿತ ಸಮುದಾಯ ಈತನನ್ನು ಬಹಿಷ್ಕರಿಸಿದರೂ ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್ ಮನೋವಿಜ್ಞಾನ ಕ್ಷೇತ್ರಕ್ಕೆ ಈತನ ಕೊಡುಗೆಯನ್ನು ಗೌರವಿಸಿ ಪ್ರಶಂಸಾ ಪತ್ರವೊಂದನ್ನು ಇವನಿಗೆ ರವಾನಿಸಿತು (1957). ¥sóÀರ್ಮನ್ ವಿಶ್ವವಿದ್ಯಾಲಯ ಈತನ ಜನ್ಮಶತಾಬ್ದಿ ಅಂಗವಾಗಿ ಇವನ ಹೆಸರಿನಲ್ಲಿ ವಿದ್ವದ್ಗೋಷ್ಠಿಯೊಂದನ್ನು ಸಂಘಟಿಸಿದ್ದಲ್ಲದೆ (1979) ತನ್ನ ಮನೋವಿಜ್ಞಾನ ಪ್ರಯೋಗಾಲಯಕ್ಕೆ ಜಾನ್ ಬಿ ವಾಟ್ಸನ್ ಪ್ರಯೋಗಾಲಯ ಎಂದು ನಾಮಕರಣ ಮಾಡಿ ಗೌರವ ಸಲ್ಲಿಸಿತು. ಸೌತ್ ಕರೋಲಿನ್ ಹಾಲ್ ಆ¥sóï ಸೈನ್ಸ್‍ನಲ್ಲಿ ಈತನ ಹೆಸರು ಸೇರ್ಪಡೆ ಮಾಡಿ ಈತನ ಜನ್ಮಸ್ಥಳದ ಸಮೀಪ ಕಿರು ಸ್ಮಾರಕ ಸ್ಥಾಪಿಸುವುದರ (1984) ಮೂಲಕವೂ ರಾಷ್ಟ್ರ ಇವನಿಗೆ ಗೌರವ ಸಲ್ಲಿಸಿದೆ. (ಎನ್.ಎಸ್.ಓ.)