ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿದ್ಯುತ್ತು

ವಿಕಿಸೋರ್ಸ್ದಿಂದ

ವಿದ್ಯುತ್ತು ಚಲನೆಯಲ್ಲಿ ಇರುವ ಅಥವಾ ಇಲ್ಲದ ವಿದ್ಯುದಾವೇಶ ಗಳಿಂದ (ಎಲೆಕ್ಟ್ರಿಕ್ ಚಾರ್ಜ್) ಉಂಟಾಗುವ ವಿದ್ಯಮಾನ (ಎಲೆಕ್ಟ್ರಿಸಿಟಿ). ದ್ರವ್ಯದ ಮೂಲಭೂತ ಗುಣಗಳ ಪೈಕಿ ವಿದ್ಯುದಾವೇಶವೂ ಒಂದು. ಎಲೆಕ್ಟ್ರಾನ್ ಮತ್ತು ಪ್ರೋಟಾನುಗಳಂಥ ಉಪಪರಮಾಣವಿಕ ಕಣಗಳಲ್ಲಿ ಇದು ನೆಲಸಿದೆ. ಈ ಕಣಗಳ ನಡುವಿನ ಆಕರ್ಷಣೆ ಅಥವಾ ವಿಕರ್ಷಣೆಗೆ ಅವುಗಳ ಈ ಗುಣವೇ ಕಾರಣ. ಚಲನೆಯಲ್ಲಿರುವ ವಿದ್ಯುದಾವೇಶಗಳಿಂದ ವಿದ್ಯುತ್ಪ್ರವಾಹದ ಮತ್ತು ಚಲನೆಯಲ್ಲಿ ಇಲ್ಲದವುಗಳಿಂದ ಸ್ಥಾಯೀ ವಿದ್ಯುತ್ತಿನ ವಿದ್ಯಮಾನಗಳು ಪ್ರಕಟವಾಗುತ್ತವೆ. ಬೆಳಕು ಅಥವಾ ಉಷ್ಣದಂತೆ ಶಕ್ತಿಯ ಒಂದು ವಿಶಿಷ್ಟ ರೂಪವೇ ವಿದ್ಯುತ್ತು ಎಂದು ಪರಿಗಣಿಸುವುದು ವಾಡಿಕೆ. ಆದ್ದರಿಂದಲೇ, ಇದನ್ನು ವಿದ್ಯುಚ್ಛಕ್ತಿ (ಎಲೆಕ್ಟ್ರಿಕ್ ಎನರ್ಜಿ) ಎಂದೂ ಕರೆಯುವುದುಂಟು. ಎಲೆಕ್ಟ್ರಾನ್ ಆವೇಶವನ್ನು ಋಣಾತ್ಮಕ ಎಂದೂ ಅವುಗಳ ಶೇಖರಣೆ ಮತ್ತು ಚಲನೆಯಫಲಿತವೇ ವಿದ್ಯುತ್ ವಿದ್ಯಮಾನ ಎಂದೂ ಪರಿಗಣಿಸುವುದು ಪದ್ಧತಿ.

(ಎ.ಕೆ.ಬಿ.)

ಸ್ಥಾಯೀ ವಿದ್ಯುದ್ವಿಜ್ಞಾನ: ಸ್ಥಾಯೀ ವಿದ್ಯುದಾವೇಶಗಳನ್ನು ಅಧ್ಯಯಿಸುವ ವಿಜ್ಞಾನಶಾಖೆ (ಎಲೆಕ್ಟ್ರೊಸ್ಟ್ಯಾಟಿಕ್ಸ್). ವಿದ್ಯುತ್ತಟಸ್ಥವಾಗಿರುವ ಅಥವಾ ವಿದ್ಯುದಾವಿಷ್ಟವಲ್ಲದ ವಸ್ತುವಿನಲ್ಲಿ ಋಣಾತ್ಮಕ ಆವೇಶಗಳಷ್ಟೇ ಧನಾತ್ಮಕ ಆವೇಶಗಳೂ ಇರುತ್ತವೆ. ವಿದ್ಯುತ್ತಟಸ್ಥವಲ್ಲದ ಅಥವಾ ವಿದ್ಯುದಾವಿಷ್ಟ ವಸ್ತುವಿನಲ್ಲಿ ಈ ಆವೇಶಗಳ ಪೈಕಿ ಯಾವುದಾದರೂ ಒಂದರ ಕೊರತೆ ಮತ್ತು ಇನ್ನೊಂದರ ಮಿಗತೆ ಇರುತ್ತವೆ. ಯಾವುದೇ ಸ್ವತಂತ್ರ ವ್ಯವಸ್ಥೆಯಲ್ಲಿ ಆವೇಶಗಳ ಮರುಹಂಚಿಕೆ ಆದರೂ ಆವೇಶಗಳ ಮೊತ್ತ ಬದಲಾಗದೆ ಸ್ಥಿರವಾಗಿರುತ್ತದೆ. ಈ ವಿದ್ಯಮಾನವೇ ವಿದ್ಯುದಾವೇಶ ಸಂರಕ್ಷಣೆ (ಕನ್ಸರ್ವೇಶನ್ ಆಫ್ ಚಾರ್ಜ್). ವಿದ್ಯುದಾವೇಶಗಳ ನಡುವೆ ಸದಾ ವರ್ತಿಸುತ್ತಿರುವ ಸ್ಥಾಯೀ ವಿದ್ಯುದ್ಬಲ (ಅಥವಾ ವಿದ್ಯುದ್ಬಲ) ಅವುಗಳ ನಡುವಿನ ಆಕರ್ಷಣೆ ಅಥವಾ ವಿಕರ್ಷಣೆಗಳಿಗೆ ಕಾರಣ. ವಿದ್ಯುತ್‍ಕ್ಷೇತ್ರ (ಎಲೆಕ್ಟ್ರಿಕ್ ಫೀಲ್ಡ್) ಮತ್ತು ವಿದ್ಯುದ್ವಿಭವ (ಎಲೆಕ್ಟ್ರಿಕ್ ಪೊಟೆನ್ಷಿಯಲ್) ಪ್ರಕಟವಾಗುವುದೂ ವಿದ್ಯುದಾವೇಶಗಳಿಂದಾಗಿಯೇ. ಯಾವುದೇ ವಿದ್ಯುತ್‍ಕ್ಷೇತ್ರದಲ್ಲಿ ಸ್ಥಾಯೀವಿದ್ಯುತ್ ಶಕ್ತಿ ನೆಲಸಿರುತ್ತದೆ. ಈ ಎಲ್ಲ ವಿಷಯಸಂಬಂಧೀ ಅಧ್ಯಯನಗಳು ಸ್ಥಾಯೀ ವಿದ್ಯುತ್ ವಿಜ್ಞಾನದ ವ್ಯಾಪ್ತಿಯಲ್ಲಿವೆ.

ಸ್ಥಾಯೀ ವಿದ್ಯುತ್ತು: ಎರಡು ಕಾಯಗಳು ಪರಸ್ಪರ ಘರ್ಷಿಸಿ ಆವೇಶ ಗಳು ಆಂಶಿಕವಾಗಿ ಒಂದರಿಂದ ಇನ್ನೊಂದಕ್ಕೆ ವರ್ಗಾವಣೆ ಆಗುವಾಗ ಉಂಟಾಗುವ ವಿದ್ಯಮಾನ (ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ). ಇದಕ್ಕೆ ಧನಾತ್ಮಕ ಮತ್ತು ಋಣಾತ್ಮಕ ಆವೇಶಗಳ ಅಸಂತುಲನೆ ಉಂಟಾಗುವುದರಿಂದ ಪ್ರಕಟವಾಗುವ ವಿದ್ಯಮಾನ, ಪ್ರವಾಹೀ ವಿದ್ಯುತ್ತಿಗೆ ವೈದೃಶ್ಯವಾಗಿ ಶ್ರಾಂತ ಸ್ಥಿತಿಯಲ್ಲಿರುವ ವಿದ್ಯುತ್ತು ಮುಂತಾದ ವ್ಯಾಖ್ಯಾನಗಳೂ ಉಂಟು. ಸ್ಥಾಯೀವಿದ್ಯುತ್ತಿಗೆ ಸಂಬಂಧಿಸಿದ ಪರಿಣಾಮಗಳು ಪ್ರಕಟವಾಗುವುದು ಆವೇಶ ಉತ್ಪಾದಿಸುವ ಸ್ಥಾಯೀ ವಿದ್ಯುತ್‍ಕ್ಷೇತ್ರದಿಂದಾಗಿ, ಪ್ರವಾಹೀ ವಿದ್ಯುತ್ತಿನ ಸಂದರ್ಭದಲ್ಲಾದರೋ ವಿದ್ಯುತ್ ಮತ್ತು ಕಾಂತಕ್ಷೇತ್ರ ಗಳಿಂದಾಗಿ.

ವಿದ್ಯುದಾವೇಶಗಳ ನಡುವೆ ವರ್ತಿಸುವ ಸ್ಥಾಯೀವಿದ್ಯುದ್ಬಲಸಂಬಂಧೀ ನಿಯಮವನ್ನು ಆವಿಷ್ಕರಿಸಿದಾತ (1785) ಫ್ರೆಂಚ್ ಭೌತವಿಜ್ಞಾನಿ ಚಾಲ್ರ್ಸ್ ಆಗಸ್ಟಿನ್ ಡೆ ಕೂಲಾಮ್ (1736-1806). ಕೂಲಾಮ್‍ನ ನಿಯಮದಂತೆ ಎರಡು ಬಿಂದು ಆವೇಶಗಳ (ಕಿ1,ಕಿ2) ನಡುವಿನ ಆಕರ್ಷಣ ಅಥವಾ ವಿಕರ್ಷಣ ಬಲ () ಆ ಆವೇಶಗಳ ಗುಣಲಬ್ಧಕ್ಕೆ ಅನುಲೋಮಾನು ಪಾತೀಯವಾಗಿಯೂ ಅವುಗಳ ನಡುವಿನ ಅಂತರದ (ಡಿ) ವರ್ಗಕ್ಕೆ ವಿಲೋಮಾನುಪಾತೀಯವಾಗಿಯೂ ಇರುತ್ತದೆ. ಸೂತ್ರೀಕರಿಸಿದಾಗ ಈ ನಿಯಮ ಇಂತಾಗುತ್ತದೆ: ಇಲ್ಲಿ ಞ ಎಂಬುದೊಂದು ಸ್ಥಿರಾಂಕ. ಞಯ ಮೌಲ್ಯ ಬಲ, ಆವೇಶ ಮತ್ತು ಅಂತರಗಳ ಅಳತೆಯ ಏಕಮಾನ ಗಳು ಯಾವ ಪದ್ಧತಿಯವು ಎಂಬುದನ್ನೂ ಆ ಆವೇಶಗಳು ನೆಲಸಿರುವ ಮಾಧ್ಯಮದ ವಿದ್ಯುಚ್ಛೀಲತೆಯನ್ನೂ ಅವಲಂಬಿಸಿದೆ. ಯಾವುದೇ ಬಿಂದುವಿನಲ್ಲಿ ಏಕಮಾನ ಆವೇಶ ಅನುಭವಿಸುವ ಬಲ ಅಲ್ಲಿಯ ವಿದ್ಯುತ್‍ಕ್ಷೇತ್ರದ ತೀವ್ರತೆ. ಒಂದು ಆವೇಶದ ಮೇಲೆ ಎರಡು ಅಥವಾ ಹೆಚ್ಚು ಆವೇಶಗಳು ಏಕಕಾಲದಲ್ಲಿ ಬಲ ಪ್ರಯೋಗಿಸುತ್ತಿದ್ದರೆ ಆ ಆವೇಶ ಅನುಭವಿಸುತ್ತಿರುವ ಒಟ್ಟಾರೆ ಬಲ ಆ ಎಲ್ಲ ಬಲಗಳ ಸದಿಶ ಮೊತ್ತ. ಇದೇ ಅಧ್ಯಾರೋಪಣ (ಸುಪರ್‍ಪೊಸಿಷನ್) ತತ್ತ್ವ. ವಿದ್ಯುತ್‍ಕ್ಷೇತ್ರದ ಯಾವುದೇ ಬಿಂದುವಿನಲ್ಲಿ ಏಕಮಾನ ಆವೇಶದ ವಿಭವಶಕ್ತಿ ಅನನ್ಯ. ಇದೇ ವಿದ್ಯುದ್ವಿಭವ ಅಥವಾ ಸರಳವಾಗಿ ವಿಭವ. ಎರಡು ಬಿಂದುಗಳ ವಿಭವಗಳ ನಡುವಿನ ಅಂತರವೇ ವಿಭವಾಂತರ.

ಆವೇಶಗಳ ಕ್ರಮಬದ್ಧ ಚಲನೆಯೇ ವಿದ್ಯುತ್ಪ್ರವಾಹ. ವಿದ್ಯುತ್ತು ಪ್ರವಹಿಸಬಹುದಾದ ಪದಾರ್ಥಗಳು ವಿದ್ಯುದ್ವಾಹಕಗಳು. ಇಂಥ ಎರಡು ವಾಹಕಗಳಿರುವ ಸಾಧನದಲ್ಲಿ ವಿದ್ಯುದಾವೇಶವನ್ನೂ ವಿದ್ಯುತ್‍ಕ್ಷೇತ್ರದಲ್ಲಿ ವಿಭವಶಕ್ತಿಯನ್ನೂ ಶೇಖರಿಸಿಡಬಹುದು. ಈ ಸಾಧನವೇ ವ್ಯಾಪಕ ಬಳಕೆಯುಳ್ಳ ಸಂಧಾರಿತ್ರ (ಕೆಪಾಸಿಟರ್). ಸ್ವತಂತ್ರ ಆವೇಶಗಳಿಲ್ಲದ, ವಿದ್ಯುತ್‍ಪ್ರವಾಹಕ್ಕೆ ಎಡೆಕೊಡದ ಪದಾರ್ಥಗಳು ಪರಾವೈದ್ಯುತಗಳು (ಡೈಎಲೆಕ್ಟ್ರಿಕ್‍ಗಳು). ವಿದ್ಯುತ್‍ಕ್ಷೇತ್ರದಲ್ಲಿ ಇವು ಋಣಾವಿಷ್ಟ ಎಲೆಕ್ಟ್ರಾನುಗಳನ್ನು ಧನಾವಿಷ್ಟ ಅಯಾನುಗಳಿಂದ ಪ್ರತ್ಯೇಕಿಸುತ್ತವೆ. ಇಂಥ ಧ್ರುವೀಕರಣ (ಪೋಲರೈಸೇಶನ್) ಆದಾಗ ವಿದ್ಯುತ್‍ದ್ವಿಧ್ರುವ ಮಹತ್ತ್ವ (ಎಲೆಕ್ಟ್ರಿಕ್ ಡೈಪೋಲ್ ಮೊಮೆಂಟ್) ಉಂಟಾಗುತ್ತದೆ. ಅನ್ವಿತ ವಿದ್ಯುತ್‍ಕ್ಷೇತ್ರದ ತೀವ್ರತೆಯೂ ಕಡಿಮೆ ಆಗುತ್ತದೆ. ಸಂಧಾರಿತ್ರಗಳಲ್ಲಿ ಪರಾವೈದ್ಯುತಗಳನ್ನು ಬಳಸಿದರೆ ಅವುಗಳ ಧಾರಕತೆ (ಕೆಪಾಸಿಟಿ) ಹೆಚ್ಚುತ್ತದೆ. (ಬಿ.ಎನ್.ಎನ್.ಐ.)

ಪ್ರವಾಹೀ ವಿದ್ಯುತ್ತು: ವಿದ್ಯುದಾವೇಶಗಳ ಕ್ರಮಬದ್ಧ ಚಲನೆಯಿಂದ ಉಂಟಾಗುವ ವಿದ್ಯಮಾನ (ಕರೆಂಟ್ ಎಲೆಕ್ಟ್ರಿಸಿಟಿ). ವಿದ್ಯುದಾವೇಶಗಳು ಹರಿಯುವ ಕಾಲದರವೇ (ಟೈಮ್ ರೇಟ್) ವಿದ್ಯುತ್ಪ್ರವಾಹ. ಈ ಹರಿವಿಗೆ ಒದಗುವ ವಿರೋಧವೇ ವಿದ್ಯುದ್ರೋಧ ಅಥವಾ ಸರಳವಾಗಿ ರೋಧ (ರೆಸಿಸ್ಟೆನ್ಸ್). ಆವೇಶಗಳು ಅಧಿಕ ವಿಭವಶಕ್ತಿ ಇರುವೆಡೆಯಿಂದ ಅಲ್ಪ ವಿಭವಶಕ್ತಿ ಇರುವೆಡೆ ಹರಿಯುತ್ತವೆ. ಅವು ಹರಿಯಬೇಕಾದರೆ ಅವುಗಳ ಮೇಲೆ ಬಲ ಪ್ರಯೋಗಿಸಬೇಕು. ಈ ಬಲವೇ ವಿದ್ಯುಚ್ಚಾಲಕಬಲ (ಎಲೆಕ್ಟ್ರೊಮೋಟಿವ್ ಫೋರ್ಸ್; ಇಎಮ್‍ಎಫ್). ವಿಭವಾಂತರ ಈ ಬಲವನ್ನು ಒದಗಿಸುತ್ತದೆ. ವಿದ್ಯುಚ್ಚಾಲಕ ಬಲವನ್ನು ಒದಗಿಸುವ ಯಂತ್ರತೆಯೇ (ಮೆಕ್ಯಾನಿಸಮ್) ಅದರ ಆಕರ. ಅಂತಾರಾಷ್ಟ್ರೀಯ ಪದ್ಧತಿಯಲ್ಲಿ ಆಂಪೇರ್, ಓಮ್ ಮತ್ತು ವೋಲ್ಟ್‍ಗಳು ಅನುಕ್ರಮವಾಗಿ ವಿದ್ಯುತ್ಪ್ರವಾಹ, ರೋಧ ಮತ್ತು ವಿದ್ಯುಚ್ಚಾಲಕಬಲಗಳ ಏಕಮಾನಗಳು.

ವಿದ್ಯುತ್ತನ್ನು ಹರಿಯಗೊಡುವ ಸೌಲಭ್ಯ ಆಧರಿಸಿ ಪದಾರ್ಥಗಳನ್ನು ವಾಹಕ (ಕಂಡಕ್ಟರ್), ಅವಾಹಕ (ನಾನ್‍ಕಂಡಕ್ಟರ್) ಅಥವಾ ಪರಾವೈದ್ಯುತ ಮತ್ತು ಅರೆವಾಹಕ (ಸೆಮಿಕಂಡಕ್ಟರ್) ಎಂದು ವರ್ಗೀಕರಿಸುತ್ತಾರೆ.

ಆವೇಶಗಳ ಹರಿಯುವಿಕೆಯಿಂದ ಪದಾರ್ಥಗಳಲ್ಲಿ ಉಂಟಾಗುವ ವಿದ್ಯುತ್ಪ್ರವಾಹವನ್ನು ವಹನಪ್ರವಾಹ (ಕಂಡಕ್ಷನ್ ಕರೆಂಟ್) ಎಂದೂ ಆಕಾಶದಲ್ಲಿ (ಸ್ಪೇಸ್) ವಿದ್ಯುದಾವಿಷ್ಟ ಕಣಗಳೇ ಚಲಿಸಿ ಉಂಟಾಗುವದನ್ನು ಸಂವಹನ ಪ್ರವಾಹ (ಕನ್ವೆಕ್ಷನ್ ಕರೆಂಟ್) ಎಂದೂ ಉಲ್ಲೇಖಿಸುವು ದುಂಟು. ವ್ಯತ್ಯಯಿಸುತ್ತಿರುವ ಕಾಂತಕ್ಷೇತ್ರಗಳು ಉಂಟುಮಾಡುವ ವ್ಯತ್ಯಯಶೀಲ ವಿದ್ಯುತ್‍ಕ್ಷೇತ್ರಗಳನ್ನು ವಿವರಿಸಲೋಸುಗ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‍ವೆಲ್ (1831-79) ರೂಪಿಸಿದ (1865) ಪರಿಕಲ್ಪನೆ ವಿಸ್ಥಾಪನಪ್ರವಾಹ (ಡಿಸ್ಪ್ಲೇಸ್‍ಮೆಂಟ್ ಕರೆಂಟ್). ಈ ವಿದ್ಯಮಾನದಲ್ಲಿ ಆವೇಶಗಳ ಹರಿಯುವಿಕೆ ಇಲ್ಲದಿರುವುದರಿಂದ ವಿಸ್ಥಾಪನಪ್ರವಾಹವನ್ನು ಹುಸಿಪ್ರವಾಹ (ಸುಡೋಕರೆಂಟ್) ಎಂದು ಪರಿಗಣಿಸುವುದುಂಟು. (ಎ.ಕೆ.ಬಿ.)

ವಿದ್ಯುದ್ವಹನ: ವಿದ್ಯುತ್‍ಕ್ಷೇತ್ರಕ್ಕೆ ಅನುಕ್ರಿಯೆಯಾಗಿ ಪದಾರ್ಥಗಳಲ್ಲಿ ಉಂಟಾಗುವ ಆವಿಷ್ಟಕಣಗಳ ಚಲನೆಯ ಅಥವಾ ವಿದ್ಯುತ್ ಹರಿವಿನ ವಿದ್ಯಮಾನ (ಎಲೆಕ್ಟ್ರಿಕಲ್ ಕಂಡಕ್ಷನ್). ಪದಾರ್ಥದಲ್ಲಿ ವಿದ್ಯುತ್ ಹರಿವಿ ಗಿರುವ ಸೌಲಭ್ಯವೇ ಆ ಪದಾರ್ಥದ ವಾಹಕತೆ (ಕಂಡಕ್ಟಿವಿಟಿ). ಇದು ಪದಾರ್ಥದಿಂದ ಪದಾರ್ಥಕ್ಕೆ ಬದಲಾಗುತ್ತದೆ.

ಘನಪದಾರ್ಥಗಳಲ್ಲಿ ಪ್ರತಿಯೊಂದು ಪರಮಾಣುವೂ ತನ್ನ ನೆರೆಯ ಪರಮಾಣುಗಳೊಂದಿಗೆ ಅಂತರವರ್ತಿಸುತ್ತದೆ. ಈ ಪರಮಾಣುಗಳಲ್ಲಿರುವ ಬಹುತೇಕ ಎಲೆಕ್ಟ್ರಾನುಗಳು ನಿಶ್ಚಿತ ಕಕ್ಷೆಗಳಲ್ಲಿ ಪರಮಾಣುವಿಗೆ ಬಂಧಿತ ವಾಗಿರುತ್ತವೆ. ಬಾಹ್ಯಕಕ್ಷೆಗಳಲ್ಲಿರುವ ಕೆಲವು ಎಲೆಕ್ಟ್ರಾನುಗಳು ನೆರೆಯ ಪರಮಾಣುಗಳ ಪ್ರಭಾವದಿಂದ ತಮ್ಮ ಕಕ್ಷೆಯಿಂದ ಹೊರಬಂದು ಇಡೀ ಘನಪದಾರ್ಥದಲ್ಲಿ ಚಲಿಸಬಲ್ಲವು. ಇವು ಮುಕ್ತ (ಫ್ರೀ) ಎಲೆಕ್ಟ್ರಾನುಗಳು. ಇವು ವಿದ್ಯುದ್ವಹನಕ್ಕೆ, ತನ್ಮೂಲಕ ವಿದ್ಯುತ್ಪ್ರವಾಹಕ್ಕೆ, ಕಾರಣವಾಗುತ್ತವೆ. ವಾಹಕಗಳಲ್ಲಿ ಹೆಚ್ಚು ಮುಕ್ತ ಎಲೆಕ್ಟ್ರಾನುಗಳೂ ಅರೆವಾಹಕಗಳಲ್ಲಿ ಸಾಪೇಕ್ಷವಾಗಿ ಕಡಿಮೆ ಎಲೆಕ್ಟ್ರಾನುಗಳೂ ಇರುತ್ತವೆ. ಅವಾಹಕಗಳಲ್ಲಾದರೋ ಮುಕ್ತ ಎಲೆಕ್ಟ್ರಾನುಗಳು ಹೆಚ್ಚುಕಡಿಮೆ ಇರುವುದೇ ಇಲ್ಲ.

ಎಲೆಕ್ಟ್ರಾನುಗಳಿಗೆ ಅವುಗಳದೇ ಆದ ವಿವಿಕ್ತ ಶಕ್ತಿಮಟ್ಟಗಳಿರುತ್ತವೆ (ಡಿಸ್ಕ್ರೀಟ್ ಎನರ್ಜಿ ಲೆವೆಲ್ಸ್). ಘನಪದಾರ್ಥಗಳಲ್ಲಿ ಇಂಥ ಮಟ್ಟಗಳು ಅಧಿಕ ಸಂಖ್ಯೆಯಲ್ಲಿಯೂ ನಿಬಿಡವಾಗಿಯೂ ಇರುತ್ತವೆ. ಈ ನಿಬಿಡತೆ ಯಿಂದಾಗಿ ಅವು ಪರಸ್ಪರ ಸಮೀಪಕ್ಕೆ ಸರಿದು ಶಕ್ತಿಪಟ್ಟೆಗಳು (ಎನರ್ಜಿ ಬ್ಯಾಂಡ್ಸ್) ನಿರ್ಮಾಣವಾಗುತ್ತವೆ. ಏಕಾಕಿ ಎಲೆಕ್ಟ್ರಾನುಗಳಿಗೆ ಶಕ್ತಿಮಟ್ಟ ಗಳು ಇರುವಂತೆ ಘನಪದಾರ್ಥದ ಎಲೆಕ್ಟ್ರಾನುಗಳಿಗೆ ಶಕ್ತಿಪಟ್ಟೆಗಳಿರುತ್ತವೆ. ಇಂಥ ಎರಡು ನೆರೆ ಪಟ್ಟೆಗಳ ನಡುವೆ ಇರುವ ತೆರಪು ಅಥವಾ ಎಡೆಯೇ ಶಕ್ತಿತೆರಪು (ಎನರ್ಜಿ ಗ್ಯಾಪ್). ಇದರಲ್ಲಿ ಎಲೆಕ್ಟ್ರಾನುಗಳಿರಲು ಸಾಧ್ಯವಿಲ್ಲದ್ದರಿಂದ ಇದನ್ನು ನಿಷೇಧಿತ ತೆರಪು (ಫರ್‍ಬಿಡನ್ ಗ್ಯಾಪ್) ಎಂದೂ ಕರೆಯುವುದುಂಟು. ಅವಾಹಕದಲ್ಲಿ ಇದರ ಅಗಲ ಸಾಪೇಕ್ಷವಾಗಿ ದೊಡ್ಡದಾಗಿಯೂ ಅರೆವಾಹಕದಲ್ಲಿ ಕಿರಿದಾಗಿಯೂ ವಾಹಕದಲ್ಲಿ ಅತಿಕಿರಿದಾಗಿಯೂ ಇರುತ್ತದೆ. ಎಲೆಕ್ಟ್ರಾನುಗಳಿರುವ ಅತ್ಯುಚ್ಚಶಕ್ತಿ ಪಟ್ಟೆಗೆ ವೇಲೆನ್ಸ್‍ಪಟ್ಟೆ ಎಂದು ಹೆಸರು. ಎಲೆಕ್ಟ್ರಾನುಗಳಿಲ್ಲದ ಅತ್ಯಲ್ಪಶಕ್ತಿ ಪಟ್ಟೆಯೇ ವಹನಪಟ್ಟೆ (ಕಂಡಕ್ಷನ್ ಬ್ಯಾಂಡ್). ವಿದ್ಯುತ್‍ಕ್ಷೇತ್ರ ಪ್ರಯೋಗಿಸಿದಾಗ ಎಲೆಕ್ಟ್ರಾನುಗಳು ಉಚ್ಚಶಕ್ತಿ ಪಟ್ಟೆಗಳಿಗೆ ಹೋಗಲು ಸಾಧ್ಯವಾದರೆ ವಿದ್ಯುತ್ಪ್ರವಾಹ ಉಂಟಾಗುತ್ತದೆ.

ತಾಮ್ರದಂಥ ಲೋಹವಾಹಕದ ವೇಲೆನ್ಸ್ ಪಟ್ಟೆಯಲ್ಲಿ ಎಲೆಕ್ಟ್ರಾನುಗಳು ಆಂಶಿಕವಾಗಿ ತುಂಬಿರುತ್ತವೆ. ಖಾಲಿ ಇರುವ ಉಚ್ಚಶಕ್ತಿ ಮಟ್ಟಗಳಿಗೆ ಎಲೆಕ್ಟ್ರಾನುಗಳು ಸುಲಭವಾಗಿ ಸಾಗಬಹುದಾದ್ದರಿಂದ ವಿದ್ಯುತ್ತು ಪ್ರವಹಿಸುವುದು ಸುಲಭ. ಎಂದೇ ಇಂಥವು ಉತ್ತಮ ವಿದ್ಯುದ್ವಾಹಕಗಳು.

ಅವಾಹಕಗಳಲ್ಲಿ ವೇಲೆನ್ಸ್ ಪಟ್ಟೆಯ ಎಲ್ಲ ಶಕ್ತಿ ಮಟ್ಟಗಳೂ ಪೂರ್ಣವಾಗಿ ತುಂಬಿರುತ್ತವೆ. ಅಲ್ಲಿಯ ಎಲೆಕ್ಟ್ರಾನುಗಳು ಉಚ್ಚಶಕ್ತಿ ಮಟ್ಟಗಳಿಗೆ ಏರಬೇಕಾದರೆ ನಿಷೇಧಿತ ಶಕ್ತಿತೆರಪನ್ನು ಜಿಗಿದು ವಹನಪಟ್ಟೆಗೆ ಬರಬೇಕು. ನಿಷೇಧಿತ ತೆರಪು ಬಲು ಅಗಲವಾಗಿರುವುದರಿಂದ ಈ ಸಾಧ್ಯತೆ ಕಡಿಮೆ. ಈ ಸನ್ನಿವೇಶದಲ್ಲಿ ವಿದ್ಯುತ್‍ಕ್ಷೇತ್ರವನ್ನು ಪ್ರಯೋಗಿಸಿದರೂ ಎಲೆಕ್ಟ್ರಾನುಗಳು ಉಚ್ಚಶಕ್ತಿ ಮಟ್ಟಗಳಿಗೆ ಸಾಗುವುದಿಲ್ಲ, ವಿದ್ಯುತ್ಪ್ರವಾಹವೂ ಉಂಟಾಗುವುದಿಲ್ಲ. (ಎ.ಸಿ.)

ಅರೆವಾಹಕಗಳಲ್ಲಿ ನಿಷೇಧಿತ ಶಕ್ತಿತೆರಪು ಅಗಲಕಿರಿದಾಗಿರುವುದರಿಂದ ಯುಕ್ತ ತೀವ್ರತೆಯ ವಿದ್ಯುತ್‍ಕ್ಷೇತ್ರವನ್ನು ಪ್ರಯೋಗಿಸಿದಾಗ ಎಲೆಕ್ಟ್ರಾನುಗಳು ಅದನ್ನು ಜಿಗಿದು ಉಚ್ಚಶಕ್ತಿ ಮಟ್ಟಗಳಿಗೆ ಏರಬಲ್ಲವು. ಅಲ್ಲದೆ, ಶುದ್ಧ ಅರೆವಾಹಕಗಳಿಗೆ ಇತರ ಧಾತುಗಳನ್ನು ಅಪೇಕ್ಷಿತ ಪ್ರಮಾಣದಲ್ಲಿ ಬೆರೆಸಿ ವಹನಪಟ್ಟೆಯಲ್ಲಿ ಎಲೆಕ್ಟ್ರಾನುಗಳು ಇರುವಂತೆ ಮಾಡಬಹುದು. ಡೋಪಿಂಗ್ ಅನ್ನುವ ಈ ಕ್ರಿಯೆಯಿಂದ ಅರೆವಾಹಕದ ವಾಹಕತೆಯನ್ನು ನಿಯಂತ್ರಿಸಬಹುದು. ಡಯೋಡ್, ಟ್ರಾನ್ಸಿಸ್ಟರ್‍ಗಳಂಥ ಸಾಧನಗಳ ತಯಾರಿ ಇದರಿಂದ ಸಾಧ್ಯವಾಗಿದೆ. (ಎಮ್.ಎಚ್.ಡಿ.) ಅಧಿವಾಹಕತೆ: ಒಂದು ನಿಶ್ಚಿತ ತಾಪಕ್ಕಿಂತ ಕಡಿಮೆ ತಾಪದಲ್ಲಿ ವಿದ್ಯುದ್ರೋಧ ಮಾಯವಾಗಿ ಉಂಟಾಗುವ ವಿದ್ಯಮಾನ (ಸುಪರ್‍ಕಂಡಕ್ಟಿ ವಿಟಿ). ಇದನ್ನು ಆವಿಷ್ಕರಿಸಿದಾತ (1911) ನೊಬೆಲ್ ಪ್ರಶಸ್ತಿ ಪುರಸ್ಕøತ (1913) ಡಚ್ ಭೌತವಿಜ್ಞಾನಿ ಹೈಕ್ ಕ್ಯಾಮರ್‍ಲಿಂಗ್ ಆನೆಸ್ (1853-1926). ಈತ 4 ಕೆ ತಾಪದಲ್ಲಿ ಪಾದರಸ ಅಧಿವಾಹಕವಾಗುವುದನ್ನು ಪತ್ತೆಹಚ್ಚಿದ. ನಿರಪೇಕ್ಷ ಶೂನ್ಯ ತಾಪದ ಸಮೀಪದ ಅತಿಶೈತ್ಯದಲ್ಲಿ ಕಂಡುಬರುತ್ತಿದ್ದ ಈ ವಿದ್ಯಮಾನ (ಉದಾ: ನಿಯೋಬಿಯಮ್ ನೈಟ್ರೈಡ್ 16 ಕೆ, ವೆನೆಡಿಯಮ್-3 ಸಿಲಿಕಾನ್ 17.5 ಕೆ) 1986ರಿಂದೀಚೆಗೆ ಸಾಪೇಕ್ಷವಾಗಿ ಅಧಿಕ ತಾಪಗಳಲ್ಲಿಯೂ ಗೋಚರಿಸಿದೆ (ಉದಾ: ಕ್ಯಾಲ್ಸಿಯಮ್ ಮತ್ತು ತ್ಯಾಲಿಯಮ್‍ಯುಕ್ತ ಸಿರ್ಯಾಮಿಕ್ 120 ಕೆ, ಪಾದರಸ, ಬೇರಿಯಮ್, ತಾಮ್ರಗಳ ವಿಶಿಷ್ಟ ಸಂಯೋಜನೆ 133 ಕೆ).

ಸಾಮಾನ್ಯ ವಾಹಕಗಳಲ್ಲಿ ವಿದ್ಯುತ್ತು ಪ್ರವಹಿಸುವಾಗ ತುಸು ಶಕ್ತಿ ನಷ್ಟವಾಗುತ್ತದೆ. ಅಧಿವಾಹಕಗಳು ಶಕ್ತಿನಷ್ಟವಿಲ್ಲದೆ ವಿದ್ಯುತ್ತನ್ನು ಒಯ್ಯಬಲ್ಲವು. ಸಾಮಾನ್ಯ ತಾಪಗಳಲ್ಲಿ ಉತ್ತಮ ವಾಹಕಗಳಾಗಿರುವ ಶುದ್ಧ ಲೋಹಗಳು ಅಧಿವಹನದ ಸ್ಥಿತಿಯನ್ನು ತಲಪುವುದಿಲ್ಲ. ಅವಾಹಕ ಗಳಾಗಿರುವ ಸಿರ್ಯಾಮಿಕ್‍ಗಳು ನಿಶ್ಚಿತ ಕೆಳತಾಪಗಳಲ್ಲಿ ಅಧಿವಾಹಕಗಳಾಗು ತ್ತವೆ. ಸಾಮಾನ್ಯ ತಾಪಗಳಲ್ಲಿ ಕಾರ್ಯನಿರ್ವಹಿಸಬಲ್ಲ ಅಧಿವಾಹಕಗಳ ಶೋಧ ಮುಂದುವರಿಯುತ್ತಿದೆ.

ಅಮೆರಿಕದ ಇಲ್ಲಿನಾಯ್ ವಿಶ್ವವಿದ್ಯಾಲಯದ ಜಾನ್ ಬಾರ್ಡೀನ್ (1908-91), ಲಿಯಾನ್ ನೆಯಿಲ್ ಕೂಪರ್ (ಜ 1930) ಮತ್ತು ಜಾನ್ ರಾಬರ್ಟ್ ಶ್ರೆಯ್‍ಫರ್ (ಜ 1931) ಎಂಬ ಭೌತವಿಜ್ಞಾನಿಗಳು ಅಧಿವಾಹಕ ವಿದ್ಯಮಾನವನ್ನು ವಿವರಿಸಬಲ್ಲ ಸಿದ್ಧಾಂತವೊಂದನ್ನು ಮಂಡಿಸಿದರು (1972). ಇದಕ್ಕಾಗಿ ಅವರಿಗೆ ಆ ವರ್ಷವೇ ನೊಬೆಲ್ ಪುರಸ್ಕಾರ ಸಂದಿತು. ಆವರ ಗೌರವಾರ್ಥ ಬಿಸಿಎಸ್ ಸಿದ್ಧಾಂತ ಎಂಬ ಹೆಸರಿನ ಇದು ಕ್ವಾಂಟಮ್ ಮೆಕ್ಯಾನಿಕ್ಸ್‍ನ ಪರಿಭಾಷೆಯಲ್ಲಿ ಅಧಿವಾಹಕತೆ ಯನ್ನು ವಿವರಿಸುತ್ತದೆ. ಅಧಿವಾಹಕದಲ್ಲಿ ಎಲೆಕ್ಟ್ರಾನುಗಳು ಕ್ವಾಂಟಮ್ ಭೂಸ್ಥಿತಿಯಲ್ಲಿ ಸಾಂದ್ರವಾಗುತ್ತವೆ ಹಾಗೂ ಜೋಡಿಗಳುಳ್ಳ ತಂಡವಾಗಿ ಪಯಣಿಸುವುದೇ ಇದರ ಕಾರಣ ಎಂಬುದು ಈ ಸಿದ್ಧಾಂತದ ಪ್ರಧಾನ ನಿಲುವು. ಇಂಥವುಗಳಿಗೆ ಕೂಪರ್ ಜೋಡಿಗಳೆಂದು ಹೆಸರು. ಸಾಮಾನ್ಯ ವಾಹಕಗಳಲ್ಲಾದರೋ ಎಲೆಕ್ಟ್ರಾನುಗಳು ಬಿಡಿಬಿಡಿಯಾಗಿಯೇ ಪಯಣಿಸು ತ್ತವೆ. ಜೋಡಿ ಎಲೆಕ್ಟ್ರಾನುಗಳು ಅಧಿವಾಹಕದಲ್ಲಿ ವಿದ್ಯುದಾವೇಶಗಳ ವಾಹಕಗಳು.

ನೇರ ವಿದ್ಯುತ್ಪ್ರವಾಹ: ಒಂದೇ ದಿಕ್ಕಿನಲ್ಲಿ ಹರಿಯುವ ವಿದ್ಯುತ್ತು (ಡೈರೆಕ್ಟ್ ಎಲೆಕ್ಟ್ರಿಕ್ ಕರೆಂಟ್). ವಾಹಕದ ಅಡ್ಡಛೇದಕ್ಕೆ ಲಂಬವಾಗಿ ಏಕಮಾನ ಕಾಲದಲ್ಲಿ ಹರಿಯುವ ವಿದ್ಯುದಾವೇಶಗಳ ಪ್ರಮಾಣದಿಂದ ವಿದ್ಯುತ್ಪ್ರವಾಹವನ್ನು ಅಳೆಯುತ್ತಾರೆ.

ವಾಹಕದ ಏಕಮಾನ ಗಾತ್ರದಲ್ಲಿರುವ ಎಲೆಕ್ಟ್ರಾನುಗಳ ಸಂಖ್ಯೆ ಟಿ, ಎಲೆಕ್ಟ್ರಾನ್ ಆವೇಶ e, ಎಲೆಕ್ಟ್ರಾನ್ ಚಲನೆಯ ಸರಾಸರಿ ವೇಗ ಟಿ, ಹಾಗೂ ವಾಹಕದ ಅಡ್ಡಛೇದದ ಸಲೆ ಂ ಆದರೆ, ವಿದ್ಯುತ್ಪ್ರವಾಹ, I=ಟಿeಟಿಂ. ಪ್ರವಾಹ ಸಾಂದ್ರತೆ, .ಬಹುತೇಕ ವಾಹಕಗಳಲ್ಲಿ ವಿದ್ಯುತ್ಪ್ರವಾಹ (I ) ವಾಹಕದ ಎರಡೂ ತುದಿಗಳ ನಡುವಿನ ವಿಭವಾಂತರಕ್ಕೆ (ಗಿ) ಅಥವಾ ವೋಲ್ಟೇಜಿಗೆ ಅನುಲೋಮಾನುಪಾತದಲ್ಲಿದೆ ಎಂಬುದನ್ನು ಜರ್ಮನಿಯ ಜಾರ್ಜ್ ಸೈಮನ್ ಓಮ್ (1789-1854) ಆವಿಷ್ಕರಿಸಿದ (1826). ಓಮ್‍ನ ನಿಯಮದ ಪ್ರಕಾರ ಗಿ=Iಖ. ಖ ಎಂಬ ಸ್ಥಿರಾಂಕವೇ ವಾಹಕದ ರೋಧ. ಇದು ವಾಹಕದ ಆಕಾರ, ಗಾತ್ರ ಮತ್ತು ಪದಾರ್ಥಗಳನ್ನು ಅವಲಂಬಿಸಿದೆ. ವಿದ್ಯುನ್ಮಂಡಲದ ವಾಹಕಗಳು ನಿಶ್ಚಲವಾಗಿದ್ದರೆ ಣ ಅವಧಿ ಹಾಗೂ ಗಿ ವಿಭವಾಂತರಗಳಲ್ಲಿ I ವಿದ್ಯುತ್ತು ಪ್ರವಹಿಸುವಾಗ ರೂಪಾಂತರಗೊಳ್ಳುವ ಭೌತಕಾರ್ಯ=Iಗಿಣ=I2ಖಣ=(ಗಿ2ಣ)ಖ. ರೋಧ, ಇಲ್ಲಿ ಡಿ = ರೋಧತೆ, ಟ = ವಾಹಕದ ಉದ್ದ. ವಾಹಕತೆ

 											(ಎ.ಕೆ.ಬಿ.)

ವಿದ್ಯುಚ್ಚಾಲಕ ಬಲದ ಆಕರಗಳು: ವಿದ್ಯುದಾವೇಶಗಳ ಸಾಗಣೆಗೆ ಬೇಕಾದ ವಿಭವಾಂತರವನ್ನು ಸದಾ ಉಳಿಸಿಕೊಳ್ಳಲು ಬೇಕಾದ ಸಾಧನ ಗಳು. ವಿದ್ಯುಚ್ಚಾಲಕ ಬಲದ ಆದರ್ಶ ಆಕರದಲ್ಲಿ ಯಾವುದೇ ಆಂತರಿಕ ರೋಧ ಇರುವುದಿಲ್ಲವಾದರೂ ಲಭ್ಯ ವಾಸ್ತವಿಕ ಆಕರದಲ್ಲಿ ಇದ್ದೇ ಇರುತ್ತದೆ. ವೋಲ್ಟಾಕೋಶ ರಾಸಾಯನಿಕ ಶಕ್ತಿಯನ್ನು ಉಪಯೋಗಿಸಿ ವಿದ್ಯುಚ್ಚಾಲಕ ಬಲವನ್ನು ಉತ್ಪಾದಿಸುತ್ತದೆ. ಅನೇಕ ವೋಲ್ಟಾಕೋಶ ಗಳನ್ನು ಜೋಡಿಸಿ ಪಡೆಯುವ ಬ್ಯಾಟರಿ ವಿದ್ಯುಚ್ಚಾಲಕ ಬಲದ ಸಾಮಾನ್ಯ ಆಕರ. ಮನೆ, ಕಚೇರಿಗಳಿಗೆ ವಿದ್ಯುತ್ ಒದಗಿಸುವ ವಿದ್ಯುಜ್ಜನಕವೂ ಈ ಬಲದ ಒಂದು ಆಕರ. ವ್ಯೋಮನೌಕೆಗಳಿಗೆ ಮತ್ತು ಸೌರಶಕ್ತಿಚಾಲಿತ ಉಪಕರಣಗಳಿಗೆ ಶಕ್ತಿ ಒದಗಿಸಲು ಉಪಯೋಗಿಸುವ ಸೌರಕೋಶಗಳು, ಅವಾಹಕ ಪಟ್ಟೆಯ ಮೂಲಕ ವಿದ್ಯುದಾವೇಶವನ್ನು ಯಾಂತ್ರಿಕವಾಗಿ ಸಾಗಿಸಿ ವಿಭವಾಂತರವನ್ನು ಉಳಿಸಿಕೊಳ್ಳುವ ವಾನ್ ಡಿ ಗ್ರಾಫ್ ವಿದ್ಯುಜ್ಜ ನಕ, ಇಂಧನಕೋಶಗಳು ಮತ್ತು ಥರ್ಮೊಪೈಲುಗಳು ವಿದ್ಯುಚ್ಚಾಲಕ ಬಲದ ಇತರ ಆಕರಗಳು. (ಎ.ಕೆ.ಬಿ.)

ನೇರಪ್ರವಾಹ ಮಂಡಲ: ನೇರ ವಿದ್ಯುತ್ಪ್ರವಾಹವನ್ನು ಅನುಕೂಲಿಸುವ ವಾಹಕಗಳ ಮತ್ತು ವಿದ್ಯುಚ್ಚಾಲಕ ಬಲ ಆಕರಗಳ ಸಂಯೋಗ (ಡೈರೆಕ್ಟ್ ಕರೆಂಟ್ ಸರ್ಕಿಟ್-ಡಿಸಿ ಸರ್ಕಿಟ್). ಗಿಂ ಮತ್ತು ಗಿಃ ವಿಭವಗಳಿರುವ ಎರಡು ಬಿಂದುಗಳ (ಂ,ಃ) ನಡುವೆ ಖ ರೋಧ ಇರುವಾಗ, ಂ ಯಿಂದ ಃಗೆ ಹರಿಯುವ ವಿದ್ಯುತ್ತು, ನೇರ ಪ್ರವಾಹ ಮಂಡಲಗಳಲ್ಲಿ ಪ್ರವಾಹಗಳು, ವೋಲ್ಟೇಜುಗಳು ಮತ್ತು ವಿದ್ಯುಚ್ಚಾಲಕ ಬಲಗಳು ಕಾಲದೊಂದಿಗೆ ಬದಲಾಗುವುದಿಲ್ಲ.

ಪ್ರತಿಯೊಂದು ಮಂಡಲದಲ್ಲಿ ಕವಲುಗಳೂ (ಬ್ರಾಂಚಸ್) ಸಂಧಿಗಳೂ (ಜಂಕ್ಷನ್ಸ್) ಇರುವುದು ಸಾಮಾನ್ಯ. ಯಾವುದೇ ಕವಲಿನಲ್ಲಿರುವ ವಿದ್ಯುತ್ಪ್ರವಾಹ ಅಥವಾ ವಿದ್ಯುಚ್ಚಾಲಕ ಬಲವನ್ನು ಕಿರ್ಖಫ್ ನಿಯಮಗಳ ನೆರವಿನಿಂದ ಗಣಿಸುತ್ತಾರೆ. ಜರ್ಮನ್ ಭೌತವಿಜ್ಞಾನಿ ಗುಸ್ತಾಫ್ ರಾಬರ್ಟ್ ಕಿರ್ಖಫ್ (1824-87) ಇವನ್ನು ಆವಿಷ್ಕರಿಸಿದ್ದರಿಂದ (1845) ಈ ಹೆಸರು. ನಿಯಮಗಳು ಇಂತಿವೆ: 1. ವಿದ್ಯುನ್ಮಂಡಲದ ಒಂದು ಸಂಧಿ ಯಲ್ಲಿ ಸಂಧಿಸುವ ವಿದ್ಯುತ್ಪ್ರವಾಹಗಳ ಬೀಜಗಣಿತೀಯ ಮೊತ್ತ ಸೊನ್ನೆ. 2. ವಿದ್ಯುನ್ಮಂಡಲದಲ್ಲಿ ಆಯ್ದ ಯಾವುದೇ ಸಂವೃತ ಕುಣಿಕೆಯಲ್ಲಿ (ಕ್ಲೋಸ್ಡ್ ಲೂಪ್) ವಿಭವಾಂತರಗಳ ಬೀಜಗಣಿತೀಯ ಮೊತ್ತ ಸೊನ್ನೆ.

ಮಂಡಲವನ್ನು ರೂಪಿಸುವ ವಾಹಕಗಳನ್ನು ಶ್ರೇಣಿಯಲ್ಲಾಗಲೀ (ಸೀರಿಸ್) ಸಮಾಂತರದಲ್ಲಾಗಲೀ (ಪ್ಯಾರಲಲ್) ಜೋಡಿಸಬಹುದು. ಶ್ರೇಣಿ ಜೋಡಣೆಯಲ್ಲಿ ಮಂಡಲದ ಎಲ್ಲ ಭಾಗಗಳಲ್ಲಿಯೂ ಒಂದೇ ಮೌಲ್ಯದ ವಿದ್ಯುತ್ಪ್ರವಾಹ ಹರಿಯುತ್ತದೆ. ಮಂಡಲದ ಒಟ್ಟು ವಿಭವಪಾತ (ಪೊಟೆನ್ಶಿಯಲ್ ಡ್ರಾಪ್) ಅದರ ವಿವಿಧ ಭಾಗಗಳಲ್ಲಿಯ ವಿಭವಪಾತಗಳ ಮೊತ್ತಕ್ಕೆ ಸಮ. ವಾಹಕಗಳಲ್ಲಿಯ ವಿಭವಪಾತಗಳು ಅವುಗಳ ರೋಧಗಳಿಗೆ ಸಮಾನುಪಾತದಲ್ಲಿರುತ್ತವೆ. ಖ1,ಖ2,…,ಖಟಿ ರೋಧಗಳಿರುವ ಟಿ ವಾಹಕಗಳು ಶ್ರೇಣಿಯಲ್ಲಿರುವಾಗ ಮಂಡಲದ ಒಟ್ಟು ರೋಧ, ಖ=ಖ1+ಖ2+…+ಖಟಿ.. ಸಮಾಂತರ ಜೋಡಣೆಯಲ್ಲಿ ಮಂಡಲದ ಕವಲುಗಳಲ್ಲಿ ಸಾಗುವ ಪ್ರವಾಹಗಳ ಒಟ್ಟು ಮೊತ್ತ, ಕವಲುಗಳಿಲ್ಲದ ಮಂಡಲಭಾಗದಲ್ಲಿ ಸಾಗುವ ಪ್ರವಾಹಕ್ಕೆ ಸಮ (ಅಂದರೆ I=I1+I2+…+Iಟಿ.. ಯಾವುದೇ ಕವಲಿನಲ್ಲಿಯ ವಿಭವಪಾತ ಅಥವಾ ವಿಭವಾಂತರ ಒಂದೇ ಮೌಲ್ಯದ್ದಾಗಿರುತ್ತದೆ (ಗಿ1=ಗಿ2=…=ಗಿಟಿ=ಗಿ.). ಸಮಾಂತರ ಕವಲುಗಳಲ್ಲಿ ರುವ ಪ್ರವಾಹಗಳು ಆಯಾ ವಾಹಕಗಳ ರೋಧಗಳಿಗೆ ವಿಲೋಮಾನು ಪಾತದಲ್ಲಿರುತ್ತವೆ ()ರೋಧದ ವ್ಯುತ್ಕ್ರಮವೇ ವಾಹ (ಕಂಡಕ್ಟೆನ್ಸ್, ಏ). ಸಮಾಂತರ ಜೋಡಣೆಯಲ್ಲಿ ಮಂಡಲದ ವಾಹ ಅದರ ಘಟಕ ವಾಹಕಗಳ ವಾಹಗಳ ಮೊತ್ತಕ್ಕೆ ಸಮ (ಏ1+ಏ2+…+ಏಟಿ.=ಏ). (ಎಮ್.ಎಚ್.ಡಿ.)

ಪರ್ಯಾಯಕ ವಿದ್ಯುತ್ಪ್ರವಾಹ: ಹರಿಯುವ ದಿಶೆ ಪರ್ಯಾಯವಾಗಿ ಬದಲಾಗುತ್ತಿರುವ ವಿದ್ಯುತ್ಪ್ರವಾಹ (ಆಲ್ಟರ್ನೇಟಿಂಗ್ ಕರೆಂಟ್). ಒಂದು ದಿಶೆಯಲ್ಲಿ ಹರಿಯುತ್ತಿರುವ ವಿದ್ಯುತ್ತು ಗರಿಷ್ಠ ಪ್ರಮಾಣ ತಲಪಿದಅನಂತರ ದಿಶೆ ಬದಲಿಸಿ ವಿರುದ್ಧ ದಿಶೆಯಲ್ಲಿ ಗರಿಷ್ಠ ಪ್ರಮಾಣ ತಲಪಿ ಪುನಃ ಮೊದಲಿನ ದಿಶೆಯಲ್ಲಿ ಹರಿದು ಗರಿಷ್ಠ ಪ್ರಮಾಣ ತಲಪಿದಾಗ ಒಂದು ಚಕ್ರ ಪೂರ್ಣವಾಗುತ್ತದೆ. ಪರ್ಯಾಯಕ ವಿದ್ಯತ್ಪ್ರವಾಹದಲ್ಲಿ ಈ ಚಕ್ರ ಸತತವಾಗಿ ಪುನರಾವರ್ತಿಸುತ್ತಿರುತ್ತದೆ. 1 ಸೆಕೆಂಡಿನಲ್ಲಿ ಪೂರ್ಣಗೊಳ್ಳುವ ಚಕ್ರಗಳ ಸಂಖ್ಯೆಯನ್ನು ವಿದ್ಯುತ್ಪ್ರವಾಹದ ಆವೃತ್ತಿ ಎನ್ನುತ್ತಾರೆ. ಕಾಲದೊಂದಿಗೆ ಆಗುವ ಪ್ರವಾಹದ ಅಥವಾ ವಿಭವದ ಏರಿಳಿತದ ಆಲೇಖ ಸೈನ್‍ವಕ್ರದಂತಿರುತ್ತದೆ. ಬೃಹತ್ಪ್ರಮಾಣದಲ್ಲಿ ಸಾರ್ವಜನಿಕ ಉಪಯೋಗಕ್ಕೆಂದು ಈ ರೂಪದಲ್ಲಿ ವಿದ್ಯುಚ್ಛಕ್ತಿ ಒದಗುತ್ತಿದೆ.

ಪರ್ಯಾಯಕ ವಿದ್ಯುತ್ಪ್ರವಾಹಕ್ಕೆ ಪ್ರತಿಬಾಧೆ (ಇಂಪೆಡೆನ್ಸ್) ಉಂಟುಮಾಡುವ ಮೂರು ಘಟಕಗಳಿರುವುದು ಸಾಧ್ಯ: ರೋಧಕ (ರೆಸಿಸ್ಟರ್), ಸಂಧಾರಿತ್ರ (ಕೆಪಾಸಿಟರ್) ಮತ್ತು ಪ್ರೇರಕ (ಇಂಡಕ್ಟರ್). ವಿದ್ಯುತ್ಪ್ರವಾಹದಿಂದಾಗಿ ರೋಧಕದಲ್ಲಿ ಉಷ್ಣ ಉತ್ಪತ್ತಿಯಾಗುವುದು. ಸಂಧಾರಿತ್ರದಲ್ಲಿ ವಿದ್ಯುತ್‍ಕ್ಷೇತ್ರ ರೂಪದಲ್ಲಿಯೂ ಪ್ರೇರಕದಲ್ಲಿ ಕಾಂತಕ್ಷೇತ್ರ ರೂಪದಲ್ಲಿಯೂ ಶಕ್ತಿ ಶೇಖರವಾಗುವುದು. ಸಂಧಾರಿತ್ರ ಮತ್ತು ಪ್ರೇರಕಗಳು ಒಡ್ಡುವ ಪ್ರತಿಬಾಧೆಗಳು ವಿದ್ಯುತ್ಪ್ರವಾಹದ ಆವೃತ್ತಿಯನ್ನು ಅವಲಂಬಿಸಿವೆ.

ಪರ್ಯಾಯಕ ವಿದ್ಯುಚ್ಚಾಲಕ ಬಲ ಅಥವಾ ವೋಲ್ಟೇಜನ್ನು ಗಿ=v0 ಛಿosತಿಣ ಎಂದು ಪ್ರತಿನಿಧಿಸಬಹುದು. ಇಲ್ಲಿ, ಗಿಯು ಣ ಕಾಲದಲ್ಲಿ ವಿಭವಾಂತರ ಅಥವಾ ವೋಲ್ಟೇಜಿನ ಮೌಲ್ಯ, ಟಿoಯು ಗರಿಷ್ಠ ವಿಭವಾಂತ ರದ ಮೌಲ್ಯ ಅಥವಾ ವೋಲ್ಟೇಜಿನ ಪಾರ, ತಿ ವು ಕೋನೀಯ ಆವೃತ್ತಿ (ಆವೃತ್ತಿ ಜಿ ಆಗಿರುವಾಗ ತಿ=2ಠಿಜಿ). (ಎ.ಕೆ.ಬಿ.)

ಪರ್ಯಾಯಕ ಪ್ರವಾಹ ಮಂಡಲ: ಪರ್ಯಾಯಕ ವಿದ್ಯುತ್ಪ್ರವಾಹವನ್ನು ಅನುಕೂಲಿಸುವ ವಾಹಕಗಳ ಮತ್ತು ಪರ್ಯಾಯಕ ವಿದ್ಯುಚ್ಚಾಲಕ ಬಲ ಆಕರಗಳ ಸಂಯೋಗ (ಆಲ್ಟರ್ನೇಟಿಂಗ್ ಕರೆಂಟ್ ಸರ್ಕಿಟ್, ಎಸಿ ಸರ್ಕಿಟ್). ಸಾಮಾನ್ಯವಾಗಿ, ಸೈನ್‍ವಕ್ರ ರೀತಿಯಲ್ಲಿ ಕಾಲದೊಂದಿಗೆ ಬದಲಾಗುವ ವಿದ್ಯುಚ್ಚಾಲಕ ಬಲವನ್ನು ಪ್ರಯೋಗಿಸುವ ಆಂದೋಲಕ ಮಂಡಲ (ಆಸಿಲೇಟಿಂಗ್ ಸರ್ಕಿಟ್) ಎಂಬ ವ್ಯಾಖ್ಯಾನವೂ ಉಂಟು. ಒಂದು ಲಾಕ್ಷಣಿಕ ಪರ್ಯಾಯಕ ಪ್ರವಾಹ ಮಂಡಲದಲ್ಲಿ ರೋಧಕ, ಸಂಧಾರಿತ್ರ ಮತ್ತು ಪ್ರೇರಕಗಳ ಶ್ರೇಣಿ ಜೋಡಣೆ ಇರುತ್ತದೆ. ಈ ಮಂಡಲದಲ್ಲಿ ವಿದ್ಯುತ್ಪ್ರವಾಹವೂ ವಿದ್ಯುಚ್ಚಾಲಕ ಬಲದ ಆವೃತ್ತಿಯಲ್ಲೇ ಸೈನ್‍ವಕ್ರ ರೀತಿಯಲ್ಲಿ ಆಂದೋಲಿಸುತ್ತದೆ. ಆದರೂ ವಿದ್ಯುತ್ಪ್ರವಾಹಕ್ಕೂ ವಿದ್ಯುಚ್ಚಾಲಕ ಬಲಕ್ಕೂ ನಿರ್ದಿಷ್ಟ ಪ್ರಾವಸ್ಥಾಂತರ (ಫೇಸ್ ಡಿಫರೆನ್ಸ್) ಇರುತ್ತದೆ.

ರೋಧ ಖ, ಧಾರಕತೆ ಅ ಮತ್ತು ಪ್ರೇರಕತೆ ಐ ಇರುವ ಮಂಡಲದಲ್ಲಿ ವಿದ್ಯುಚ್ಚಾಲಕ ಬಲ ಮತ್ತು ವಿದ್ಯುತ್ಪ್ರವಾಹಗಳೆರಡರ ಕೋನೀಯ ಆವೃತ್ತಿ ತಿ ಆಗಿರುವಾಗ ಮಂಡಲದಲ್ಲಿರುವ ಒಟ್ಟು ಪ್ರತಿಬಾಧೆ ಪರ್ಯಾಯಕ ವಿದ್ಯುತ್ಪ್ರವಾಹದ ಗರಿಷ್ಠಮೌಲ್ಯ ಅಥವಾ ಪಾರ, ಪರ್ಯಾಯಕ ವಿದ್ಯುತ್ಪ್ರವಾಹ, i=i0siಟಿ(ತಿಣ-ಜಿ). ಇಲ್ಲಿ ಪ್ರಾವಸ್ಥಾಂತರವನ್ನು ಎಂಬ ಉಕ್ತಿಯಿಂದ ಅಳೆಯಬಹುದು. ತಿಐ ಮತ್ತು ಗಳ ಸಾಪೇಕ್ಷ ಮೌಲ್ಯಗಳನ್ನು ಅವಲಂಬಿಸಿ ಜಿ ಧನಾತ್ಮಕ, ಋಣಾತ್ಮಕ ಅಥವಾ ಸೊನ್ನೆಯಾಗಬಹುದು. ಮಂಡಲದಲ್ಲಿ ಪ್ರತಿ ಸೆಕೆಂಡಿನಲ್ಲಿ ವ್ಯಯವಾಗುವ ಶಕ್ತಿ, ಅರ್ಥಾತ್ ಯಾವುದೇ ಕ್ಷಣದ ಸಾಮಥ್ರ್ಯ ಠಿ=iಗಿ=i0siಟಿ(ತಿಣ-ಜಿ)v0siಟಿತಿಣ. ಸರಾಸರಿ ಸಾಮಥ್ರ್ಯ ಪ್ರತಿರೋಧ ಕನಿಷ್ಠವಾದಾಗ ಮಂಡಲದಲ್ಲಿ ಪ್ರವಾಹದ ಪಾರ ಗರಿಷ್ಠವಾಗುವುದು. ಪ್ರತಿಬಾಧೆ ಕನಿಷ್ಠವಾಗಿರುವಾಗ ಪ್ರಾವಸ್ಥಾಂತರ ಸೊನ್ನೆ. ಆಗ ಕೋನೀಯ ಆವೃತ್ತಿ .ಈ ಸನ್ನಿವೇಶದಲ್ಲಿ ವಿದ್ಯುನ್ಮಂಡಲ ಅನುರಣನೆಯಲ್ಲಿದೆ ಎನ್ನುತ್ತೇವೆ. ಮಂಡಲದಲ್ಲಿ ಶೇಖರವಾಗುವ ವಿದ್ಯುಚ್ಛಕ್ತಿ ಮತ್ತು ಒಂದು ಅವಧಿಯಲ್ಲಿ (ಪೀರಿಯಡ್) ಸೋರಿಹೋಗುವ ಶಕ್ತಿ ಇವುಗಳ ನಿಷ್ಪತ್ತಿಯೇ ಮಂಡಲದ ಗುಣಾಂಶ (ಕ್ವಾಲಿಟಿ ಫ್ಯಾಕ್ಟರ್). ಪರ್ಯಾಯಕ ಪ್ರವಾಹ ಮಂಡಲದ ಅನ್ವಯಗಳನ್ನು ನಿರ್ಧರಿಸುವಲ್ಲಿ ಗುಣಾಂಶದ ಪಾತ್ರ ಮಹತ್ತ್ವದ್ದು. (ಎ.ಆರ್.)

ವಿದ್ಯುತ್ಸಂಬಂಧೀ ವಿದ್ಯಮಾನಗಳು: ವಿದ್ಯುತ್ತಿಗೆ ಸಂಬಂಧಿಸಿದಂತೆ ದ್ರವ್ಯಗಳಲ್ಲಿ ಹಲವು ವಿದ್ಯಮಾನಗಳು ಗೋಚರಿಸುತ್ತವೆ. ಅವುಗಳಲ್ಲಿ ಕೆಲವು ಇಂತಿವೆ: ಪೀಜೊ ವಿದ್ಯುತ್ತು, ದ್ಯುತಿ ವಿದ್ಯುತ್ಪರಿಣಾಮ, ವಿದ್ಯುದ್ಯುತಿ ವಿದ್ಯಮಾನ, ಉಷ್ಣ ವಿದ್ಯುತ್ತು, ಉಷ್ಣಾಯಾನ್ (ಥರ್ಮಿಯಾನಿಕ್) ಉತ್ಸರ್ಜನೆ, ದ್ಯುತಿವಿದ್ಯುದ್ವಹನ, ವಿದ್ಯುದ್ದೀಪ್ತಿ, ಜೈವಿಕವಿದ್ಯುತ್ತು. (ಎ.ಕೆ.ಬಿ.)

ಪೀಜೊ ವಿದ್ಯುತ್ತು: ಕೆಲವು ವಿದ್ಯುದ್ವಾಹಕ ಅಸಮವರ್ತಿ ಸ್ಫಟಿಕ ಹಲ್ಲೆಗಳ (ವೇಫರ್ಸ್) ಮೇಲೆ (ಉದಾ: ಕ್ವಾಟ್ರ್ಸ್, ರೋಚೆಲ್ ಲವಣ, ಬೇರಿಯಮ್ ಟೈಟನೇಟ್) ಯಾಂತ್ರಿಕವಾಗಿ ಪೀಡನವನ್ನು (ಸ್ಟ್ರೆಸ್) ಹೇರಿದಾಗ ವಿದ್ಯುದ್ಧ್ರುವೀಕರಣ ಉಂಟಾಗಿ ವಿದೃಶ ವಿದ್ಯುದಾವೇಶಗಳು ಹಲ್ಲೆಯ ವಿರುದ್ಧ ಮೇಲ್ಮೈಗಳಲ್ಲಿ ಮೂಡುವ ವಿದ್ಯಮಾನ. ಅಂತೆಯೇ, ಇಂಥ ಹಲ್ಲೆಗಳ ವಿರುದ್ಧ ಮೇಲ್ಮೈಗಳ ನಡುವೆ ವಿದ್ಯುದ್ವಿಭವಾಂತರ ಪ್ರಯೋಗಿಸಿದಾಗ ವಿಲೋಮ ಪರಿಣಾಮ ಉಂಟಾಗುತ್ತದೆ. ಅರ್ಥಾತ್, ಅವುಗಳ ಆಕಾರ ಮತ್ತು ಗಾತ್ರಗಳಲ್ಲಿ ವಿರೂಪಣೆ ಕಂಡುಬರುತ್ತದೆ.

ಪೀಡನೆಗೆ ಅನುಲೋಮಾನುಪಾತದಲ್ಲಿ ವಿದ್ಯುದ್ಧ್ರುವೀಕರಣವಿರುತ್ತದೆ. ವಿದ್ಯುದ್ಧ್ರುವೀಕರಣ =ಏ x ಪೀಡನ. ಇಲ್ಲಿ, ಏ ಎಂಬುದು ಪದಾರ್ಥದಿಂದ ಪದಾರ್ಥಕ್ಕೆ ಬದಲಾಗುವ ಪೀಜೊ ವಿದ್ಯುತ್ ಸಹಾಂಕ. ವಿಲೋಮ ಪೀಜೊ ವಿದ್ಯುತ್ಪರಿಣಾಮ ಬಲು ಅಲ್ಪ ಪ್ರಮಾಣದಲ್ಲಿರುತ್ತದೆ. ಉದಾ: 106 ವೋಲ್ಟ್/ಮೀಟರ್ ವಿದ್ಯುತ್‍ಕ್ಷೇತ್ರವನ್ನು ಪ್ರಯೋಗಿಸಿದಾಗ ಕ್ವಾಟ್ರ್ಸ್ ಸ್ಫಟಿಕದ 1 ಸೆಂಮೀ ಉದ್ದದಲ್ಲಾಗುವ ಬದಲಾವಣೆ ಕೇವಲ 0.001 ಮಿಮೀ.

ಇಂಥ ಸ್ಫಟಿಕವನ್ನೊಳಗೊಂಡ ವಿದ್ಯನ್ಮಂಡಲದಲ್ಲಿ ವಿದ್ಯುತ್ತಿನ ಆಂದೋಲನಗಳೊಂದಿಗೆ ಸ್ಫಟಿಕದಲ್ಲಾಗುವ ಕ್ಲುಪ್ತ ಆವೃತ್ತಿಯ ಯಾಂತ್ರಿಕ ಆಂದೋಲನಗಳನ್ನು ಮೇಳೈಸಬಹುದು. ಇದು ಆಂದೋಲನಗಳ ಆವೃತ್ತಿ ಸ್ಥಿರವಾಗಿರಬೇಕಾದ ಗಡಿಯಾರ, ರೇಡಿಯೊ ಪ್ರೇಷಕ ಮುಂತಾದ ಸಾಧನ ಗಳಲ್ಲಿ ಉಪಯುಕ್ತ. ಯಾಂತ್ರಿಕ ಸಂಜ್ಞೆಯನ್ನು ವಿದ್ಯುತ್ಸಂಜ್ಞೆಯಾಗಿಯೂ ವಿದ್ಯುತ್ಸಂಜ್ಞೆಯನ್ನು ಯಾಂತ್ರಿಕ ಸಂಜ್ಞೆಯಾಗಿಯೂ ಪರಿವರ್ತಿಸಲು ಕ್ರಮವಾಗಿ ಪೀಜೊ ವಿದ್ಯುತ್ಪರಿಣಾಮ ಮತ್ತು ಅದರ ವಿಲೋಮಗಳು ಉಪಯುಕ್ತ. ಶ್ರವಣಾತೀತ ಧ್ವನಿಯ ಉತ್ಪಾದನೆಯಲ್ಲಿಯೂ ವಿಲೋಮ ಪೀಜೊ ವಿದ್ಯುತ್ಪರಿಣಾಮದ ಬಳಕೆ ಉಂಟು. (ಎಮ್.ಸಿ.ಎಸ್.)

ದ್ಯುತಿವಿದ್ಯುತ್ಪರಿಣಾಮ: ಬೆಳಕು ಒಂದು ಪದಾರ್ಥದೊಂದಿಗೆ ವರ್ತಿಸು ವಾಗ ಫೋಟಾನುಗಳ ಶಕ್ತಿ ಎಲೆಕ್ಟ್ರಾನುಗಳಿಗೆ ವರ್ಗಾವಣೆಯಾಗಿ ಅವುಗಳ ಉತ್ಸರ್ಜನೆಯಾಗುವ ವಿದ್ಯಮಾನ (ಫೋಟೊಎಲೆಕ್ಟ್ರಿಕ್ ಎಫೆಕ್ಟ್). ಹೀಗೆ ಉತ್ಸರ್ಜನೆಯಾದ ಎಲೆಕ್ಟ್ರಾನುಗಳೇ ದ್ಯುತಿಎಲೆಕ್ಟ್ರಾನು ಗಳು. ಇವುಗಳಿಂದ ದ್ಯುತಿವಿದ್ಯುತ್ಪ್ರವಾಹ ಉಂಟಾಗುವುದು. ಇದು ಬೆಳಕಿನ ತೀವ್ರತೆಗೆ ಅನುಲೋಮಾನುಪಾತದಲ್ಲಿರುತ್ತದೆ. ದ್ಯುತಿಎಲೆಕ್ಟ್ರಾನುಗಳ ಗರಿಷ್ಠ ವೇಗ ಬೆಳಕಿನ ಆವೃತ್ತಿಯನ್ನು ಅವಲಂಬಿಸಿದೆ. ಪ್ರತಿಯೊಂದು ಪದಾರ್ಥಕ್ಕೂ ದ್ಯುತಿವಿದ್ಯುತ್ಪರಿಣಾಮ ಸಾಧ್ಯವಾಗಬಹುದಾದ ಬೆಳಕಿನ ಕನಿಷ್ಠ ಆವೃತ್ತಿಯೊಂದಿದೆ. ದ್ಯುತಿಕೋಶಗಳು (ಫೋಟೊ ಸೆಲ್ಸ್) ದ್ಯುತಿವಿದ್ಯುತ್ಪರಿಣಾಮದಿಂದಾಗಿ ಕಾರ್ಯ ನಿರ್ವಹಿಸುತ್ತವೆ.


* ದ್ಯುತಿವಿದ್ಯುದ್ವಹನ: ಬೆಳಕಿನಿಂದಾಗಿ ಪದಾರ್ಥಗಳ ವಿದ್ಯುದ್ವಹನತೆ ಹೆಚ್ಚುವ ವಿದ್ಯಮಾನ (ಫೋಟೊಎಲೆಕ್ಟ್ರಿಕ್ ಕಂಡಕ್ಷನ್). ಈ ವಿದ್ಯಮಾನ ದಲ್ಲಿ ಫೋಟಾನುಗಳ ಶಕ್ತಿಯನ್ನು ಹೀರುವ ಎಲೆಕ್ಟ್ರಾನುಗಳು ಪದಾರ್ಥ ದೊಳಗೇ ಉಳಿದು ವೇಲೆನ್ಸ್ ಪಟ್ಟೆಯಿಂದ ವಹನ ಪಟ್ಟೆಗೆ ಚಲಿಸುತ್ತವೆ. ತತ್ಪರಿಣಾಮವಾಗಿ ಸೃಷ್ಟಿಯಾದ ಖಾಲಿ ಜಾಗಗಳಿಗೆ ರಂಧ್ರಗಳು (ಹೋಲ್ಸ್) ಎಂದು ಹೆಸರು. ಇವನ್ನು ಧನಾತ್ಮಕ ಎಂದು ಪರಿಗಣಿಸಿದೆ. ವಹನ ಪಟ್ಟೆಯಲ್ಲಿರುವ ಎಲೆಕ್ಟ್ರಾನುಗಳು ಮತ್ತು ವೇಲೆನ್ಸ್ ಪಟ್ಟೆಯಲ್ಲಿ ರುವ ರಂಧ್ರಗಳು ವಿದ್ಯುದ್ವಹನತೆಯನ್ನು ಹೆಚ್ಚಿಸುತ್ತವೆ.

ವಿದ್ಯುದ್ಯುತಿ ವಿದ್ಯಮಾನ: ವಿದ್ಯುತ್‍ಕ್ಷೇತ್ರವನ್ನು ಪ್ರಯೋಗಿಸಿದಾಗ ವಸ್ತುವೊಂದರ ವಕ್ರೀಭವನಾಂಕ ಬದಲಾಗುವಿಕೆ (ಫೋಟೊಆಪ್ಟಿಕ್ ಫಿನಾಮಿನನ್). ಸ್ಕಾಟಿಷ್ ಭೌತವಿಜ್ಞಾನಿ ಜಾನ್ ಕೆರ್ (1824-1907) ಆವಿಷ್ಕರಿಸಿದ (1875) ವಿದ್ಯಮಾನ ಇದಾದ್ದರಿಂದ ಕೆರ್ ಪರಿಣಾಮ ಎಂದು ಹೆಸರು. ಇದರಿಂದ ಬೆಳಕಿನ ಮಾಡ್ಯುಲನ (ನಿಶ್ಚಿತ ಆವೃತ್ತಿಗೆ ಅನುಗುಣವಾಗಿ ಬೆಳಕಿನ ಬದಲಾವಣೆ) ಸಾಧ್ಯ. ಮಾಹಿತಿ ಸಾಗಣೆಯಲ್ಲಿ ಇದರ ಉಪಯೋಗ ಉಂಟು.

ಉಷ್ಣ ವಿದ್ಯುತ್ತು: ಲೋಹತಂತಿಯೊಂದರ ತುದಿಗಳನ್ನು ಭಿನ್ನ ಲೋಹದ ಇನ್ನೊಂದು ತಂತಿಯ ತುದಿಗಳಿಗೆ ಬೆಸುಗೆ ಹಾಕಿ ಜೋಡಿಸಿದ ಸಂಧಿಗಳನ್ನು ಭಿನ್ನ ತಾಪಗಳಲ್ಲಿ ಇರಿಸಿದಾಗ ಈ ಸಂವೃತ ಮಂಡಲದಲ್ಲಿ ವಿದ್ಯುಚ್ಚಾಲಕ ಬಲ ಉಂಟಾಗಿ ಹರಿಯುವ ವಿದ್ಯುತ್ತು (ಥರ್ಮೊಎಲೆಕ್ಟ್ರಿ ಸಿಟಿ). ವಿಭಿನ್ನ ಲೋಹಗಳ ಪರಮಾಣುಗಳ ನ್ಯೂಕ್ಲಿಯಸ್-ಎಲೆಕ್ಟ್ರಾನ್ ಬಂಧನಬಲಗಳು ವಿಭಿನ್ನವಾಗಿರುತ್ತವೆ. ಎರಡು ಭಿನ್ನಲೋಹಗಳು ಪರಸ್ಪರ ಸ್ಪರ್ಶಿಸಿದಾಗ ಎಲೆಕ್ಟ್ರಾನುಗಳು ಸಾಪೇಕ್ಷವಾಗಿ ಬಂಧನಬಲ ಕಡಿಮೆ ಇರುವ ಲೋಹದಿಂದ ಇನ್ನೊಂದಕ್ಕೆ ಹರಿಯುತ್ತವೆ. ತತ್ಪರಿಣಾಮ ವಾಗಿ ಸ್ಪರ್ಶಬಿಂದುವಿನಲ್ಲಿ ಅಥವಾ ಸಂಧಿಯಲ್ಲಿ ವಿಭವಾಂತರ ಉಂಟಾಗು ತ್ತದೆ. ಎರಡು ವಿಭಿನ್ನ ಲೋಹತಂತಿಗಳಿಂದ ರಚಿತವಾದ ಸಂವೃತ ಮಂಡಲದಲ್ಲಿ ಎರಡು ಸಂಧಿಗಳಿರುತ್ತವೆ. ಇವೆರಡರ ತಾಪಗಳು ಸಮವಿದ್ದಾಗ ಉತ್ಪತ್ತಿಯಾಗುವ ವಿಭವಾಂತರಗಳು ಸಮ ಮತ್ತು ವಿರುದ್ಧವಾಗಿದ್ದು ವಿದ್ಯುಚ್ಚಾಲಕ ಬಲ ಸೊನ್ನೆಯಾಗುತ್ತದೆ. ಸಂಧಿಗಳ ತಾಪಗಳು ಅಸಮವಾಗಿದ್ದರೆ ಅದು ಸೊನ್ನೆಯಾಗುವುದಿಲ್ಲ. ಎಂದೇ, ವಿದ್ಯುತ್ಪ್ರವಾಹ ಉಂಟಾಗುತ್ತದೆ. ರಷ್ಯನ್-ಜರ್ಮನ್ ಭೌತವಿಜ್ಞಾನಿ ತಾಮಸ್ ಯೋಹಾನ್ ಸೀಬೆಕ್ (1770-1831) ಈ ವಿದ್ಯಮಾನವನ್ನು ಆವಿಷ್ಕರಿಸಿದ್ದರಿಂದ (1821) ಸೀಬೆಕ್ ಪರಿಣಾಮ ಎಂಬ ಹೆಸರುಂಟು.

ಭಿನ್ನಲೋಹಗಳ ಸಂಧಿ ಮೂಲಕ ವಿದ್ಯುತ್ತನ್ನು ಹರಿಸಿದರೆ ಅಲ್ಲಿ ಉಷ್ಣದ ಹೀರಿಕೆ ಅಥವಾ ಬಿಡುಗಡೆ ಆಗುತ್ತದೆ. ಇದರಿಂದ ತಾಪವ್ಯತ್ಯಾಸ ಉಂಟಾಗುವುದು. ಫ್ರೆಂಚ್ ರಸಾಯನವಿಜ್ಞಾನಿ ಜೀನ್ ಚಾಲ್ರ್ಸ್ ಪೆಲ್ಟಿಯರ್ (1785-1845) ಆವಿಷ್ಕರಿಸಿದ (1834) ಈ ವಿದ್ಯಮಾನವೇ ಪೆಲ್ಟಿಯರ್ ಪರಿಣಾಮ. ಶೀತಲೀಕರಣದಲ್ಲಿ ಇದರ ಅನ್ವಯವಿದೆ.

ಉಷ್ಣಾಯಾನ್ ಉತ್ಸರ್ಜನೆ: ಲೋಹವನ್ನು ಕಾಸಿದಾಗ ಉಂಟಾಗುವ ಎಲೆಕ್ಟ್ರಾನುಗಳ ಉತ್ಸರ್ಜನೆ (ಥರ್ಮಯಾನಿಕ್ ಎಮಿಶನ್). ಲೋಹವನ್ನು ಕಾಸಿದಾಗ ಆಂಶಿಕವಾಗಿ ತುಂಬಿರುವ ಶಕ್ತಿಪಟ್ಟೆಗಳಲ್ಲಿರುವ ಎಲೆಕ್ಟ್ರಾನು ಗಳು ಶಕ್ತಿ ಪಡೆದು ಹೆಚ್ಚು ವೇಗವಾಗಿ ಚಲಿಸತೊಡಗುತ್ತವೆ. ಸಾಕಷ್ಟು ಶಕ್ತಿ ಪಡೆದೊಡನೆ ಲೋಹದಿಂದ ಅವುಗಳ ಉತ್ಸರ್ಜನೆಯಾಗುತ್ತದೆ. ಈ ಉತ್ಸರ್ಜಿತ ಎಲೆಕ್ಟ್ರಾನುಗಳಿಂದ ಉಂಟಾಗುವುದೇ ಉಷ್ಣಾಯಾನ್ (ಥರ್ಮಯಾನಿಕ್) ವಿದ್ಯುತ್ಪ್ರವಾಹ. ತಾಪದೊಂದಿಗೆ ಈ ವಿದ್ಯುತ್ಪ್ರವಾಹ ಸಾಂದ್ರತೆ ಹೇಗೆ ಬದಲಾಗುವುದೆಂಬುದನ್ನು ನೊಬೆಲ್ ಪುರಸ್ಕøತ ಬ್ರಿಟಿಷ್ ಭೌತವಿಜ್ಞಾನಿ ಓವೆನ್ ವಿಲ್ಯಾನ್ಸ್ ರಿಚರ್ಡ್‍ಸನ್ (1879-1959) ಆವಿಷ್ಕರಿಸಿದ ಸೂತ್ರ ವಿವರಿಸುತ್ತದೆ.

ವಿದ್ಯುದ್ದೀಪ್ತಿ: ಬೆಳಕಾಗಿ ವಿದ್ಯುಚ್ಛಕ್ತಿಯ ಅನುಷ್ಣೀಯ (ನಾನ್‍ಥರ್ಮಲ್) ಪರಿವರ್ತನೆ (ಎಲೆಕ್ಟ್ರೊಲ್ಯುಮಿನಿಸೆನ್ಸ್). ವಿದ್ಯುತ್ ಕ್ಷೇತ್ರವನ್ನು ಕೆಲವು ವಸ್ತುಗಳ ಮೇಲೆ ಪ್ರಯೋಗಿಸಿದಾಗ ಅದರ ವಹನ ಎಲೆಕ್ಟ್ರಾನುಗಳು ಸಾಕಷ್ಟು ಶಕ್ತಿ ಗಳಿಸಿ ಚಲಿಸುತ್ತ ಇತರ ಪರಮಾಣುಗಳಿಗೆ ಡಿಕ್ಕಿ ಹೊಡೆಯಬಹುದು. ಇದರಿಂದ ಉದ್ರೇಕಗೊಂಡ ಪರಮಾಣುಗಳು ತಮ್ಮ ಸಾಮಾನ್ಯ ಸ್ಥಿತಿಗೆ ಮರಳುವಾಗ ಫೋಟಾನುಗಳನ್ನು ಸೂಸುತ್ತವೆ. ಇದು ವಿದ್ಯುದ್ದೀಪ್ತಿ. ಎಲ್‍ಇಡಿ (ಲೈಟ್ ಎಮಿಟಿಂಗ್ ಡಯೋಡ್, ದ್ಯುತಿ ಉತ್ಸರ್ಜಕ ಡಯೋಡ್) ಎಂಬ ರೂಢನಾಮವುಳ್ಳ ಡಯೋಡುಗಳು ಸೂಸುವ ಬೆಳಕು ಇಂಥದ್ದು. ಇದರ ಪಿಎನ್ ಸಂಧಿಯಲ್ಲಿ ಎಲೆಕ್ಟ್ರಾನ್-ರಂಧ್ರ ಪುನಸ್ಸಂಯೋಗದಿಂದ ಫೋಟಾನ್ ಉತ್ಸರ್ಜನೆಯಾಗುತ್ತದೆ.

ಜೈವಿಕ ವಿದ್ಯುತ್ತು: ಜೈವಿಕಕೋಶಗಳಲ್ಲಿರುವ ಸ್ಥಾಯೀ ವೋಲ್ಟೇಜ್ ಮತ್ತು ಊತಕಗಳಲ್ಲಿ ಹರಿಯುವ ವಿದ್ಯುತ್ತು (ಬಯೊಎಲೆಕ್ಟ್ರಿಸಿಟಿ). ಉಪಾಪಚಯ ಶಕ್ತಿಯ ಶೇಖರಣೆಗೆ, ಕೆಲಸ ಮಾಡಲು, ಆಂತರಿಕ ಬದಲಾವಣೆಗಳನ್ನು ಉದ್ದೀಪಿಸಲು, ಸಂಜ್ಞೆಗಳನ್ನು ರವಾನಿಸಲು ಇದರ ಬಳಕೆ. ಅನೇಕ ಜೀವಿಗಳು ಸ್ವರಕ್ಷಣೆಗೂ ಈ ವಿದ್ಯುತ್ತನ್ನು ಬಳಸುತ್ತವೆ. ಉದಾ: ಸಾವಿರ ವೋಲ್ಟ್‍ನಷ್ಟು ಅಧಿಕ ವೋಲ್ಟೇಜಿನ ವಿದ್ಯುತ್ತನ್ನು ವಿದ್ಯುತ್ ಈಲ್ ಉತ್ಪಾದಿಸಬಲ್ಲುದು. (ಎ.ಕೆ.ಬಿ.)

ವಿದ್ಯುನ್ಮಾಪಕಗಳು: ವಿದ್ಯುತ್ಪ್ರವಾಹ, ವಿಭವ, ರೋಧ, ಸಾಮಥ್ರ್ಯ, ಧಾರಕತೆ ಮತ್ತು ಪ್ರೇರಕತೆಗಳನ್ನು ಅಳೆದು ಪ್ರಮಾಣಗಳನ್ನು ಸಂಬಂಧಿತ ಶಿಷ್ಟ ಏಕಮಾನಗಳಲ್ಲಿ ಸೂಚಿಸುವ ಸಾಧನಗಳು (ಎಲೆಕ್ಟ್ರಿಕಲ್ ಮೀಟರ್ಸ್). ನಮೂದಿತ ವಿದ್ಯುನ್ಮೌಲ್ಯಗಳನ್ನು ನೇರವಾಗಿ ವೀಕ್ಷಿಸಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ, ವಿದ್ಯುತ್ತಿನ ಯಾವುದಾದರೊಂದು ಲಕ್ಷಣವನ್ನು ಉಪಯೋಗಿಸಿ ಅಳೆಯಬಹುದಾದ ಭೌತಬಲವೊಂದನ್ನು ಉತ್ಪತ್ತಿಮಾಡಲಾಗುತ್ತದೆ.

ಗ್ಯಾಲ್ವನೊಮೀಟರ್‍ಗಳು ವಿದ್ಯುತ್ಪ್ರವಾಹವನ್ನು ಅಳೆಯುವ ಪ್ರಮುಖ ಸಾಧನಗಳು. ಕಾಂತಕ್ಷೇತ್ರದಲ್ಲಿ ವಿದ್ಯುತ್ತು ಹರಿಯುವಾಗ ಉತ್ಪತ್ತಿ ಯಾಗುವ ಬಲವನ್ನು ಇವು ಅವಲಂಬಿಸಿವೆ. ಎರಡು ಕಾಂತಧ್ರುವಗಳ ನಡುವೆ ಇರುವ ವಾಹಕ ಸುರುಳಿಯಲ್ಲಿ ವಿದ್ಯುತ್ಪ್ರವಾಹ ಹರಿಯುತ್ತಾ ಇರುವಾಗ ಆ ಸುರುಳಿಯ ಮೇಲೆ ಬಲಯುಗ್ಮ ಉಂಟಾಗುವುದು. ಇದೇ ಗ್ಯಾಲ್ವನೊಮೀಟರಿನ ಪ್ರಧಾನಯಂತ್ರತೆ. ಕಾಂತ ಅಥವಾ ಸುರುಳಿ ಚಲಿಸುವ ಮತ್ತು ಆ ಚಲನೆಯ ಪ್ರಮಾಣವನ್ನು ಸೂಚಿಯೊಂದರ ಹಾಗೂ ಯುಕ್ತ ಕ್ರಮಾಂಕನವಿರುವ (ಕ್ಯಾಲಿಬ್ರೇಶನ್) ಸ್ಕೇಲಿನ ನೆರವಿನಿಂದ ಅಳೆಯುವ ವ್ಯವಸ್ಥೆಯೂ ಇದೆ. ಚಲಿಸುವ ಭಾಗದ ಚಲನೆಯ ಪ್ರಮಾಣ ಅದರ ಮೇಲೆ ಪ್ರಯೋಗವಾದ ಬಲಯುಗ್ಮಕ್ಕೆ, ಅಂದರೆ ಸುರುಳಿಯಲ್ಲಿ ಹರಿದ ವಿದ್ಯುತ್ತಿನ ಪ್ರಮಾಣಕ್ಕೆ ಅನುಪಾತೀಯವಾಗಿರುವುದು. ವ್ಯವಹಾರದಲ್ಲಿ ವಿದ್ಯುತ್ಪ್ರವಾಹ ಅಳೆಯಲು ಬಳಸುವ ಆಮ್ಮೀಟರ್ ಈ ತತ್ತ್ವಾಧಾರಿತ ಉಪಕರಣ. ಗ್ಯಾಲ್ವನೊಮೀಟರಿನ ನಾಜೂಕು ಸುರುಳಿ ಅತ್ಯಲ್ಪ ಪ್ರಮಾಣದ ವಿದ್ಯುತ್ಪ್ರವಾಹವನ್ನು ಮಾತ್ರ ತಾಳಿಕೊಳ್ಳುತ್ತದೆ. ಆದ್ದರಿಂದ ವ್ಯವಹಾರದಲ್ಲಿ ಅದನ್ನು ಬಳಸಬಹುದಾದ ಸನ್ನಿವೇಶಗಳು ವಿರಳ. ಆಮ್ಮೀಟರುಗಳಲ್ಲಿ ವಿದ್ಯುತ್ಪ್ರವಾಹಕ್ಕೆ ಅನುಪಾತೀಯವಾದ ಅಲ್ಪ ಪ್ರಮಾಣದ ವಿದ್ಯುತ್ತು ಮಾತ್ರ ಸುರುಳಿಯಲ್ಲಿ ಹರಿಯುವಂತೆ ಮಾಡಿ ಉಳಿದ ಅಧಿಕಾಂಶವನ್ನು ಷಂಟ್ ಎಂಬ ಅಲ್ಪರೋಧದ ಮೂಲಕ ಕಳುಹಿಸುವ ವ್ಯವಸ್ಥೆ ಇದೆ. ಅಳೆಯಬೇಕಾದ ವಿದ್ಯುತ್ಪ್ರವಾಹದ ಪ್ರಮಾಣ, ಅಳತೆಯ ಅಪೇಕ್ಷಿತ ನಿಖರತೆ ಹಾಗೂ ವಿದ್ಯುತ್ಪ್ರವಾಹದ ಸ್ವರೂಪ (ಅರ್ಥಾತ್, ನೇರ ಅಥವಾ ಪರ್ಯಾಯಕ) ಇವನ್ನು ಆಧರಿಸಿ ಆಮ್ಮೀಟರ್ ರಚನೆಯಲ್ಲಿ ಯುಕ್ತ ಮಾರ್ಪಾಡು ಮಾಡುವುದುಂಟು. ಮೈಕ್ರೊಆಮ್ಮೀಟರ್, ಐರನ್ ವೇನ್ ಮಾಪಕಗಳು, ಉಷ್ಣಯುಗ್ಮ ಮಾಪಕಗಳು ಮುಂತಾದವು ವಿಶಿಷ್ಟ ಆಮ್ಮೀಟರುಗಳು.

ವಿಭವಾಂತರ ಅಥವಾ ವೋಲ್ಟೇಜ್ ಅಳೆಯಲು ಸಾಮಾನ್ಯವಾಗಿ ಬಳಸುವ ಸಾಧನ ವೋಲ್ಟ್‍ಮೀಟರ್. ಸುರುಳಿಯೊಂದಿಗೆ ಶ್ರೇಣಿ ಜೋಡಣೆ ಯಲ್ಲಿ ಉಚ್ಚರೋಧವುಳ್ಳ ಗ್ಯಾಲ್ವನೊಮೀಟರ್ ಇದು. ವೋಲ್ಟೇಜನ್ನು ಅಳೆಯಲು ತಕ್ಕುದಾದ ರೀತಿಯಲ್ಲಿ ಕ್ರಮಾಂಕಿಸಿದ ಮಾನಕ (ಸ್ಕೇಲ್) ಇರುತ್ತದೆ. ವಿದ್ಯುನ್ಮಂಡಲದ ಎರಡು ಬಿಂದುಗಳಿಗೆ ಇದನ್ನು ಜೋಡಿಸಿ ದಾಗ ಅವುಗಳ ನಡುವಿನ ವಿಭವಾಂತರಕ್ಕೆ ಅನುಪಾತೀಯವಾದ ಅಲ್ಪ ಪ್ರಮಾಣದ ವಿದ್ಯುತ್ತು ಸುರುಳಿಯಲ್ಲಿ ಪ್ರವಹಿಸುತ್ತದೆ. ಅಳೆಯಬಹುದಾದ ವೋಲ್ಟೇಜಿನ ಗರಿಷ್ಠ ಮೌಲ್ಯ ಶ್ರೇಣಿಜೋಡಣೆಯಲ್ಲಿರುವ ರೋಧದ ಮೌಲ್ಯವನ್ನು ಅವಲಂಬಿಸಿದೆ. ವೋಲ್ಟೇಜಿನ ಪ್ರಮಾಣ, ಅಳತೆಯ ಅಪೇಕ್ಷಿತ ನಿಖರತೆ ಹಾಗೂ ವಿದ್ಯುತ್ಪ್ರವಾಹದ ಸ್ವರೂಪ (ಅರ್ಥಾತ್, ನೇರ ಅಥವಾ ಪರ್ಯಾಯಕ) ಇವನ್ನು ಆಧರಿಸಿ ವೋಲ್ಟ್‍ಮೀಟರ್ ರಚನೆಯಲ್ಲಿ ಯುಕ್ತ ಮಾರ್ಪಾಡು ಮಾಡುವುದುಂಟು. ಅತ್ಯಲ್ಪ ಪ್ರಮಾಣದ ವೋಲ್ಟೇಜುಗಳನ್ನು ಅಳೆಯಲೋಸುಗ ನಿರ್ವಾತ ನಳಿಕೆ (ವ್ಯಾಕ್ಯುಮ್ ಟ್ಯೂಬ್), ಟ್ರಾನ್ಸಿಸ್ಟರ್ ಹಾಗೂ ಎಲೆಕ್ಟ್ರಾನಿಕ್ ಮಂಡಲಗಳ ಬಳಕೆ ಇರುವ ವೋಲ್ಟ್‍ಮೀಟರುಗಳಿವೆ. ಕ್ಯಾಥೋಡ್ ಕಿರಣ ದೋಲದರ್ಶಕದ (ಆಸಿಲೊಸ್ಕೋಪ್) ನೆರವಿನಿಂದಲೂ ವೋಲ್ಟೇಜ್ ಅಳೆಯಲು ಸಾಧ್ಯ. ವೋಲ್ಟೇಜ್, ರೋಧ ಹಾಗೂ ನೇರ ವಿದ್ಯುತ್ಪ್ರವಾಹಗಳನ್ನು ನಿಖರವಾಗಿ ಅಳೆಯಲು ಪ್ರಯೋಗಾಲಯಗಳಲ್ಲಿ ವಿಭವಮಾಪಕದ (ಪೊಟೆನ್ಶಿಯೊ ಮೀಟರ್) ಬಳಕೆ ಇದೆ.

ವಿದ್ಯುದ್ರೋಧವನ್ನು ಅಳೆಯುವ ಸಾಧನ ಓಮ್ ಮೀಟರ್. ಅಳೆಯಬೇಕಾದ ರೋಧದೊಂದಿಗೆ ಶ್ರೇಣಿಯಲ್ಲಿ ಮತ್ತು ಸಮಾಂತರವಾಗಿ ಜೋಡಿಸಿ ರೋಧ ಅಳೆಯಲು ತಕ್ಕುದಾದ ರೀತಿಯಲ್ಲಿ ಯುಕ್ತ ಮಾರ್ಪಾಟು ಮಾಡಿದ ಗ್ಯಾಲ್ವನೊಮೀಟರ್‍ಗಳು ಇವು. ಸಮಾಂತರವಾಗಿ ಜೋಡಿಸಬೇಕಾದ ಓಮ್‍ಮೀಟರ್‍ನ ಮೂಲಕ ಹರಿಯುವ ವಿದ್ಯುತ್ಪ್ರವಾಹ ಅಳೆಯಬೇಕಾದ ರೋಧಕ್ಕೆ ಅನುಲೋಮಾನು ಪಾತೀಯವಾಗಿಯೂ ಶ್ರೇಣಿಯಲ್ಲಿ ಜೋಡಿಸಬೇಕಾದ್ದರಲ್ಲಿ ವಿಲೋಮಾನುಪಾತೀಯವಾಗಿಯೂ ಇರುವುದು. ಉಚ್ಚರೋಧಗಳನ್ನು ಅಳೆಯಲು ಬಳಸುವ ಮಾಪಕಕ್ಕೆ ಮೆಗೋಮ್‍ಮೀಟರ್ ಅಥವಾ ಮೆಗ್ಗರ್ ಎಂದು ಹೆಸರು. ಪ್ರಯೋಗಾಲಯಗಳಲ್ಲಿ ವ್ಹೀಟ್‍ಸ್ಟನ್ ಸೇತು ಎಂಬ ಮಂಡಲದ ಬಳಕೆ ಇದೆ.

ವಿದುನ್ಮಂಡಲದ ಯಾವುದೇ ಭಾಗ ಉಪಯೋಗಿಸುವ ವಿದ್ಯುಚ್ಛಕ್ತಿ ಯನ್ನು (ಪವರ್) ಅಳೆಯುವ ಸಾಧನ ವಾಟ್‍ಮೀಟರ್. ಮನೆ, ಉದ್ಯಮ ಮುಂತಾದ ಸ್ಥಳಗಳಲ್ಲಿ ಉಪಯೋಗಿಸುವ ವಿದ್ಯುಚ್ಛಕ್ತಿಯನ್ನು ಅಳೆಯುವ ಸಾಧನ ವಾಟ್-ಅವರ್ ಮೀಟರ್. ಇದರಲ್ಲಿ ಚಲಿಸುವ ಸುರುಳಿಗೆ ಬದಲಾಗಿ ಕಾಂತೀಯ ನಿಯಂತ್ರಕ (ಮ್ಯಾಗ್ನೆಟಿಕ್ ಗವರ್ನರ್) ನಿಯಂತ್ರಿತ ಮೋಟರ್ ಆರ್ಮೆಚರ್ ಇರುತ್ತದೆ.

ಅಳತೆಗಳನ್ನು ಅಂಕಿಗಳಿಗೆ ಪರಿವರ್ತಿಸುವ ಚರ ಭಾಗಗಳೇ ಇಲ್ಲದ ಎಲೆಕ್ಟ್ರಾನಿಕ್ ಮಂಡಲಗಳಿರುವ ಡಿಜಿಟಲ್ ಮಾಪಕಗಳು ಮತ್ತು ಅನೇಕ ಅಂಶಗಳನ್ನು ಅಳೆಯಬಲ್ಲ ಮಲ್ಟಿಮೀಟರುಗಳೂ ಲಭ್ಯ. * ವಿದ್ಯುನ್ನಿರೋಧ: ಎರಡು ಅಥವಾ ಅಧಿಕ ವಾಹಕಗಳು ಪರಸ್ಪರ ಸಂಪರ್ಕಿಸದಂತೆ ತಡೆಯುವ ವ್ಯವಸ್ಥೆ (ಎಲೆಕ್ಟ್ರಿಕಲ್ ಇನ್‍ಸುಲೇಶನ್). ಇದನ್ನು ಆಗಗೊಳಿಸುವುದು ಉಚ್ಚರೋಧವುಳ್ಳ ನಿರೋಧಕಗಳು (ಇನ್‍ಸುಲೇಟರ್ಸ್). ನಿರೋಧಕಗಳಲ್ಲಿ ಮುಕ್ತ ಎಲೆಕ್ಟ್ರಾನುಗಳಿರದ ಕಾರಣ ವಿದ್ಯುತ್ತನ್ನು ಅವು ಹರಿಯಬಿಡುವುದಿಲ್ಲ. ಆದರೂ, ವಿದ್ಯುತ್‍ಕ್ಷೇತ್ರ ವನ್ನು ಪ್ರಯೋಗಿಸಿದಾಗ ಬಂಧಿತ ಎಲೆಕ್ಟ್ರಾನುಗಳು ತಮ್ಮ ಪ್ರಸಾಮಾನ್ಯ ಸ್ಥಾನದಿಂದ ವಿಸ್ಥಾಪನೆಗೊಂಡು ವಿದ್ಯುದ್ಧ್ರುವೀಕರಣ ಉಂಟುಮಾಡುತ್ತವೆ. ಪ್ರಯೋಗಿಸಿದ ವಿದ್ಯುತ್‍ಕ್ಷೇತ್ರಕ್ಕೆ ವಿರುದ್ಧವಾಗಿ ಧ್ರುವೀಕರಣ ವರ್ತಿಸಿ ಅದನ್ನು ದುರ್ಬಲಗೊಳಿಸುತ್ತದೆ.

ನಿರೋಧಕಗಳನ್ನು ವಾಹಕಗಳ ಸುತ್ತ ಇರಿಸಿ ಅವು ವಿದ್ಯುದೀಯವಾಗಿ ಸ್ಪರ್ಶಿಸದಂತೆ ಅಥವಾ ವಿದ್ಯುನ್ಮಂಡಲದ ವಿವಿಧ ಭಾಗಗಳು ಪರಸ್ಪರ ಸಂಪರ್ಕಿಸದಂತೆ ಮಾಡಬಹುದು. ನಿರೋಧಕ್ಕೆ ಬಳಸುವ ಪದಾರ್ಥಗಳ ಆಯ್ಕೆ ವಾಹಕ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿರುವುದು. ಉದಾ: ಮನೆಗಳಲ್ಲಿ ಬಳಸುವ ತಾಮ್ರದ ತಂತಿಗಳಿಗೆ ರಬ್ಬರ್ ಅಥವಾ ಪ್ಲಾಸ್ಟಿಕ್, ಉಚ್ಚವೋಲ್ಟೇಜಿನ ವಿದ್ಯುಚ್ಛಕ್ತಿ ಸರಬರಾಜು ಮಾಡುವ ತಂತಿಗಳಿಗೆ ಪಿಂಗಾಣಿ ಅಥವಾ ಯುಕ್ತ ಸಿರ್ಯಾಮಿಕ್, ವಿದ್ಯುಜ್ಜನಕಗಳಲ್ಲಿ ಅಭ್ರಕ.

(ಎಚ್.ಸಿ.ಕೆ.ಬಿ.)

ವಿದ್ಯುಜ್ಜನಕ: ಯಾಂತ್ರಿಕಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಧನ (ಎಲೆಕ್ಟ್ರಿಕ್ ಜನರೇಟರ್). ವಾಹಕ ಸುರುಳಿಯೊಂದು ಕಾಂತ ಬಲರೇಖೆಗಳನ್ನು ಛೇದಿಸಿದಾಗ ವಿದ್ಯುಚ್ಚಾಲಕ ಬಲ ಉತ್ಪತ್ತಿಯಾಗುತ್ತದೆ. ಈ ತತ್ತ್ವಾಧಾರಿತ ಸಾಧನ ವಿದ್ಯುಜ್ಜನಕ. ಸಾಮಾನ್ಯವಾಗಿ ಇದರಲ್ಲಿ ಎರಡು ಪ್ರಮುಖ ಘಟಕಗಳಿರುತ್ತವೆ: ಕಾಂತಕ್ಷೇತ್ರವನ್ನು ಉಂಟುಮಾಡುವ ಕ್ಷೇತ್ರಕಾಂತ ಎಂಬ ಹೆಸರಿನ ವಿದ್ಯುತ್ಕಾಂತ ಮತ್ತು ಕಾಂತಕ್ಷೇತ್ರವನ್ನು ಛೇದಿಸಲೋಸುಗ ಭ್ರಮಿಸಬಲ್ಲ ಆರ್ಮೆಚರ್ ಎಂಬ ಹೆಸರಿನ ವಾಹಕತಂತಿ ಸುರುಳಿ ವ್ಯವಸ್ಥೆ. ಆರ್ಮೆಚರ್ ಸ್ಥಿರವಾಗಿದ್ದು ಭ್ರಮಿಸುವ ಕ್ಷೇತ್ರಕಾಂತವುಳ್ಳ ವಿದ್ಯುಜ್ಜನಕಗಳೂ ಉಂಟು. ಇಂಥ ವಿದ್ಯುಜ್ಜನಕಗಳಲ್ಲಿ ಉತ್ಪತ್ತಿಯಾಗು ವುದು ಪರ್ಯಾಯಕ ವಿದ್ಯುತ್ಪ್ರವಾಹ. ಎಂದೇ, ಇವು ಪರ್ಯಾಯಕ ವಿದ್ಯುಜ್ಜನಕಗಳು. ದಿಕ್ಪರಿವರ್ತಕ (ಕಾಮ್ಯುಟೇಟರ್) ಎಂಬ ಇಬ್ಭಾಗಿತ ರಿಂಗು ವ್ಯವಸ್ಥೆಯ ನೆರವಿನಿಂದ ಪರ್ಯಾಯಕ ವಿದ್ಯುತ್ಪ್ರವಾಹವನ್ನು ನೇರ ವಿದ್ಯುತ್ಪ್ರವಾಹವಾಗಿ ಪರಿವರ್ತಿಸುವ ವ್ಯವಸ್ಥೆ ನೇರ ವಿದ್ಯುಜ್ಜನಕಗಳಲ್ಲಿ ಇರುವುದು.

(ಸಿ.ಟಿ.ಎಸ್.)

  *