ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೂಂಟ್, ವಿಲ್ಹೆಲ್ಮ್‌ ಮ್ಯಾಕ್ಸ್‌

ವಿಕಿಸೋರ್ಸ್ದಿಂದ

ವೂಂಟ್, ವಿಲ್‍ಹೆಲ್ಮ್ ಮ್ಯಾಕ್ಸ್ 1832-1930. ಜರ್ಮನ್ ಶರೀರವಿ ಜ್ಞಾನಿ. ವೈದ್ಯಕೀಯದಲ್ಲಿ ಪಿಎಚ್.ಡಿ. ಮತ್ತು ಎಂ.ಡಿ. ಪದವಿ ಗಳಿಸಿದ ಬಳಿಕ ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಸೇರಿದ (1854). ಅಲ್ಲಿ ಈತನ ಆಸಕ್ತಿ ಮನೋವಿಜ್ಞಾನದತ್ತ ಹೊರಳಿತು. ವೇಬರ್, ಆನ್ಟ್ರ್ಸ್‍ಹೈನ್ರಿಚ್ (ನೋಡಿ- ವೇಬರ್,-ಅನ್ಸ್ರ್ಟ್-ಹೈನ್ರಿಚ್) ಮತ್ತು ಫೆಕ್ನರ್ (ನೋಡಿ- ಫೆಕ್ನರ್,-ಗುಸ್ಟಾಫ್-ತೀಯೊಡೋರ್) ಇವರ ಕೊಡುಗೆಗಳ ಬೆಳಕಿನಲ್ಲಿ ಮನೋವಿಜ್ಞಾನದ ಪುನವ್ರ್ಯಾಖ್ಯಾನಗೈಯಲು ಮುಂದಾದ. ಮಾನವ ವರ್ತನೆಯ ಕೆಲವು ಮುಖಗಳನ್ನು ಅಲ್ಲಿಯೂ ಸಂವೇದನ ಪ್ರಭಾವಗಳನ್ನು ವ್ಯಕ್ತಿ ಗ್ರಹಿಸುವ ಬಗೆಗಳನ್ನು, ಮಾಪನೆಗೆ ಒಳಪಡಿಸಬ ಹುದೆಂದು ಈತನಿಗೆ ಅನ್ನಿಸಿತು. ದೃಷ್ಟಿ ಮತ್ತು ಶ್ರವಣ ಕುರಿತಂತೆ ಹೆಲ್ಮ್‍ಹಾಲ್ಸ್ ನೀಡಿದ ಕೊಡುಗೆ ಗಮನಾರ್ಹವೆಂದು ಪರಿಗಣಿಸಿ ಈ ನಿಟ್ಟಿನಲ್ಲಿ ಪ್ರಾಯೋಗಿಕ ಮನೋವಿಜ್ಞಾನದ ಅಧ್ಯಯನಾರ್ಥ ವಿಶ್ವವಿದ್ಯಾಲಯದಲ್ಲಿ ತರಗತಿ ಆರಂಭಿಸಿದ. ಮುಂದೆ ಲೈಪ್‍ಜಿಗ್ ವಿಶ್ವವಿದ್ಯಾಲಯದಲ್ಲಿ ಈ ವಿಷಯ ಕ್ಕೆಂದೇ ಒಂದು ಪ್ರಯೋಗಾಲಯವನ್ನು ಕೂಡ ಸ್ಥಾಪಿಸಿದ. *

  *