ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೈದ್ಯಕೀಯ ವಿಷವಿಜ್ಞಾನ

ವಿಕಿಸೋರ್ಸ್ದಿಂದ

ವೈದ್ಯಕೀಯ ವಿಷವಿಜ್ಞಾನ - ತಿಳಿದೋ ತಿಳಿಯದೆಯೋ ಯಾವುದೇ ಬಗೆಯ ವಿಷಸೇವನೆಯ ದುಷ್ಪರಿಣಾಮಗಳನ್ನು ವೈe್ಞÁನಿಕವಾಗಿ ಅಭ್ಯಸಿಸಿ ಯುಕ್ತ ಪರಿಹಾರ ಸೂಚಿಸುವ ವೈದ್ಯಕೀಯ ಶಾಖೆ (ಮೆಡಿಕಲ್ ಟಾಕ್ಸಿಕಾಲಜಿ). ಉಸಿರಾಟ, ಆಹಾರ ಅಥವಾ ಚರ್ಮದ ಮೂಲಕ ಅತ್ಯಲ್ಪ ಪ್ರಮಾಣದಲ್ಲಿ ದೇಹ ಸೇರಿದರೂ ಅಹಿತಕರ ಪರಿಣಾಮ ಉಂಟುಮಾಡುವ ಪರಕೀಯ ವಸ್ತುವೇ ವಿಷ. ಉಪ್ಪು, ನೀರು ಮುಂತಾದ ಅಗತ್ಯ ಪದಾರ್ಥಗಳನ್ನಾದರೂ ಮಿತಿಮೀರಿ ಸೇವಿಸಿದರೆ ಅವು ವಿಷಕಾರಿ ಆಗದಿರವು. ಔಷಧಿಜನ್ಯ, ಪರಿಸರಮಾಲಿನ್ಯಜನ್ಯ, ಕಾವಳಜನ್ಯ ಮುಂತಾದ ವಿಷಗಳಂತೂ ಇಂದು ಸರ್ವಸಾಧಾರಣವಾಗಿವೆ. ಸೀಮೆಎಣ್ಣೆ, ಇಲಿಪಾ ಷಾಣ, ಕಲುಷಿತ ಆಹಾರ ಪದಾರ್ಥಗಳು ಮತ್ತು ನೀರು, ಮಿತಿಮೀರಿ ಸೇವಿಸಿದ ಔಷಧಿ, ಕ್ರಿಮಿಕೀಟದಂಶನ ಮುಂತಾದವು ವಿಷಕಾರಕಗಳು.

ವಿಷವಿe್ಞÁನದಲ್ಲಿ ಎರಡು ಭಾಗಗಳಿವೆ: ವಿಷವಿe್ಞÁನ ನ್ಯಾಯಶಾಸ್ತ್ರ (ಫಾರೆನ್ಸಿಕ್ ಟಾಕ್ಸಿಕಾಲಜಿ), ವೈದ್ಯಕೀಯ ವಿಷವಿe್ಞÁನ (ಮೆಡಿಕಲ್ ಟಾಕ್ಸಿಕಾಲಜಿ). ಮೊದಲನೆಯದು ವಿಶ್ಲೇಷಣ ರಸಾಯನವಿe್ಞÁನ ಮತ್ತು ವಿಷವಿe್ಞÁನಗಳ ಮೂಲತತ್ತ್ವಗಳನ್ನು ನ್ಯಾಯಶಾಸ್ತ್ರದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ. ಎರಡನೆಯದು ರೋಗಿ ಸೇವಿಸಿದ ಅಥವಾ ಆತನ ದೇಹ ಹೊಕ್ಕ ವಿಷದ ಲಕ್ಷಣಗಳನ್ನು ಗುರುತಿಸಿ ಯುಕ್ತ ಚಿಕಿತ್ಸೆ ನೀಡಲು ವಿಧಿಸುತ್ತದೆ. ವಿಷಬಾಧಿತನನ್ನು ತುರ್ತುಘಟಕಕ್ಕೆ ಸೇರಿಸಿ ಒಡನೆ ಸಮರ್ಪಕ ಚಿಕಿತ್ಸೆ ಒದಗಿಸಬೇಕು. ಅಗತ್ಯ ಜೀವವ್ಯಾಪಾರಗಳನ್ನು ಕಾಪಾಡಬೇಕು. ಅಪೋಹನಕ್ಕೂ (ಡಯಾಲಿಸಿಸ್) ಶರಣಾಗಬೇಕಾಗು ವುದುಂಟು.

ಚಿಕಿತ್ಸಾಲಯದಲ್ಲಿ ಸ್ಪಷ್ಟವಾಗಿಯೂ ದೃಢವಾಗಿಯೂ ವ್ಯಕ್ತವಾಗುವ ಪರಿಣಾಮಗಳು: ಇವು ತುರುಚೆಯಂತೆ ಆರಂಭವಾಗಿ ಇಸಬು ರೀತಿಯಲ್ಲಿ ಪ್ರಕಟವಾಗಬಹುದು. ಚರ್ಮಕ್ಕೆ ಸವರಿದ ಔಷಧಿಗಳಿಂದ ರಕ್ತಕ್ಕೆ ಸೇರಿ ಪ್ರತಿಕ್ರಿಯೆಗಳನ್ನು ತೋರಿಸಬಹುದು. ಟೆಟ್ರಾಸೈಕ್ಲಿನ್ ಈ ರೀತಿ ಚರ್ಮದ ತೊಂದರೆ ಮಾಡುತ್ತದೆ. ಕೆಲವು ವೇಳೆ ಔಷಧಿ ಸವರಿದ ಸ್ಥಳದಿಂದ ಹೀರಲ್ಪಟ್ಟು ದೇಹದಲ್ಲೆಲ್ಲ ಹರಡಿ ವಿಷಪ್ರತಿಕ್ರಿಯೆಗಳನ್ನುಂಟು ಮಾಡಬಹುದು.

ಕೇಂದ್ರ ನರಮಂಡಲಗಳು, ಮೃದುಪರೆಗಳು, ಅಸ್ಥಿ ಮುಂತಾದವು ಕೂಡ ಈ ತೊಂದರೆಗಳಿಗೆ ಈಡಾಗುತ್ತವೆ. ಡಿಡಿಟಿ ಮೇದಸ್ಸಿನಲ್ಲಿ ಶೇಖರಗೊಂಡು ನಿಧಾನವಾಗಿ ರಕ್ತಪರಿಚಲನಾಂಗಗಳು, ಪಿತ್ತಜನಕಾಂಗ, ಮೂತ್ರಪಿಂಡ, ಫುಪ್ಫುಸ, ನರಗಳು, ದೇಹದ ಮಾಂಸಗಳು ಇಲ್ಲೆಲ್ಲ ಪರಿಣಾಮ ಬೀರುತ್ತದೆ. ಇದೇ ರೀತಿ ಡಿಎನ್‍ಎ ವ್ಯತ್ಯಯಗೊಂಡು ದುಷ್ಪರಿಣಾಮಗಳು ತಲೆದೋರಬಹುದು. ಹಲವು ಸಾಮಾನ್ಯ ವಿಷಗಳು: ಸೀಮೆಎಣ್ಣೆ, ಇಲಿಪಾಷಾಣ, ಕಲುಷಿತ ಆಹಾರ ಪದಾರ್ಥಗಳು, ನೀರು ಮತ್ತು ಪರಿಸರಮಾಲಿನ್ಯ, ನಿರ್ದಿಷ್ಟ ಪ್ರಮಾಣಕ್ಕಿಂತ ಅಧಿಕವಾಗಿ ಸೇವಿಸಿದ ಔಷಧಿಗಳು, ಕ್ರಿಮಿಕೀಟಗಳ ಕಚ್ಚುವಿಕೆ (ಹಾವು, ಚೇಳು, ದುಂಬಿ). (ಎಸ್.ಕೆ.ಎಚ್.)

  *