ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೋಡಿಂಗರ್, ಇರ್ವಿನ್

ವಿಕಿಸೋರ್ಸ್ದಿಂದ

ಶ್ರೋಡಿಂಗರ್, ಇರ್ವಿನ್ 1887-1961. ಆಸ್ಟ್ರಿಯದ ಭೌತವಿಜ್ಞಾನಿ ಮತ್ತು ಚಿಂತಕ. ನೊಬೆಲ್ ಪಾರಿತೋಷಿಕ ಪುರಸ್ಕøತ. ಈತನಿಗೆ ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ, ವ್ಯಾಕರಣ ಮತ್ತು ಜರ್ಮನ್ ಪದ್ಯಗಳ ಬಗ್ಗೆ ಅಪಾರ ಒಲವು. ಗ್ರೀಕ್ ಸಾಹಿತ್ಯ ಓದಿದ. 1906-1910ರ ತನಕ ವಿಯನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ (1906-10). ಒಂದನೆಯ ಮಹಾಯುದ್ಧದಲ್ಲಿ(1914-18) ಫಿರಂಗಿದಳ ಅಧಿಕಾರಿಯಾಗಿ ಕೆಲಸ. ಮುಂದೆ ಸ್ಟಟ್‍ಗಾರ್ಟ್, ಬ್ರೆಸ್ಲೊ ಮತ್ತು ಜûೂರಿಚ್ ವಿಶ್ವವಿದ್ಯಾ ಲಯಗಳಲ್ಲಿ ಪ್ರಾಧ್ಯಾಪಕ ಹುದ್ದೆ. ಜೂóರಿಚ್ಚಿನಲ್ಲಿದ್ದ 6 ವರ್ಷಗಳು ಬಲು ತೃಪ್ತಿದಾಯಕವಾಗಿದ್ದುವು. ಅಲ್ಲಿ ಈತನ ಆತ್ಮೀಯ ಗೆಳೆಯರಾದ ಹರ್ಮನ್ ವೈಲ್ (1885-1955) ಮತ್ತು ಪೀಟರ್ ಡಿಬೈ (1884-1966) ಇದ್ದರು. ಈತನ ಹೆಸರಿನಿಂದಲೇ ಪ್ರಸಿದ್ಧವಾಗಿರುವ ತರಂಗಸಮೀಕ ರಣವನ್ನು ಈತ ಸ್ಥಾಪಿಸಿದ್ದು ಇಲ್ಲೇ(1926).

ಈತನಿಗೆ ನೀಲ್ಸ್ ಬೋರ್‍ನ (1885-1962) ತತ್‍ಕ್ಷಣಿಕ ರೀತಿಯ ಶಕಲ ಸಿದ್ಧಾಂತ ಹಿಡಿಸಿರಲಿಲ್ಲ. ಯಾವುದಾದ ರೊಂದು ಬಗೆಯ ಐಗನ್ ಮೌಲ್ಯ ಸಮಸ್ಯೆಯಿಂದ ಪರ ಮಾಣುರೋಹಿತ ನಿರ್ಧರಿತ ವಾಗಬೇಕೆಂದು ಯೋಚಿಸುತ್ತಿದ್ದ. ಕಣಗಳೂ ತರಂಗಗಳಂತೆ ವರ್ತಿಸುತ್ತವೆ ಎಂಬ ಅಭಿ ಪ್ರಾಯವನ್ನು ಲೂಯಿಡಿ ಬ್ರಾಗ್ಲೀ (1892-1987) ಮಂಡಿಸಿದಾಗ ಇದನ್ನು ಗಣನೆಗೆ ತೆಗೆದುಕೊಂಡು ಎರಡನೆಯ ವರ್ಗದ ಒಂದು ಅವಕಲ ಸಮೀಕರಣವನ್ನು ಸ್ಥಾಪಿಸಿದ. ಇದಕ್ಕೆ ಶ್ರೋಡಿಂಗರ್ ಸಮೀಕರಣ ಎಂದು ಹೆಸರು.

ಇಲ್ಲಿ ತರಂಗ ಫಲನ (ವೇವ್ ಫಂಕ್ಷನ್), ಕಣಚಲಿಸುವ ಗಿ(ಡಿ,ಣ) = ವಿಭವ, (h=ಪ್ಲಾಂಕ್ ಸ್ಥಿರಾಂಕ). ಈ ಸಮೀಕರಣದಿಂದ ಈತ ಹೈಡ್ರೊಜನ್ ಪರಮಾಣುವಿನ ರೋಹಿತವನ್ನು ವಿವರಿಸಿದ. ಪರ ಮಾಣುಗಳ ಆಲ್ಫ ಕ್ಷಯಯನ್ನು (ಆಲ್ಫ ಡಿಕೇ) ಜಾರ್ಜ್ ಗ್ಯಾಮೊ (1904-68) ವಿವರಿಸಿದ. ಪರಮಾಣು ಮತ್ತು ನ್ಯೂಕ್ಲಿಯರ್ ಭೌತವಿಜ್ಞಾನದ ಅಧ್ಯಯನಕ್ಕೆ ಈ ಸಮೀಕರಣ ಅಡಿಗಲ್ಲಾಯಿತು. ಈ ಸಾಧನೆಗೆ ಈತನಿಗೆ 1933ರ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ದೊರೆಯಿತು. 1927ರಲ್ಲಿ ಈತ ಪ್ಲಾಂಕ್‍ನ (1858-1947) ಉತ್ತರಾಧಿಕಾರಿಯಾಗಿ ಬರ್ಲಿನ್ ವಿಶ್ವವಿದ್ಯಾಲ ಯದಲ್ಲಿ ಪ್ರಾಧ್ಯಾಪಕನಾದ. ಆಗ ಜರ್ಮನಿಯ ರಾಜಧಾನಿ ವಿದ್ವತ್ತಿನ ಗಣಿಯಾಗಿತ್ತು. 1938ರಲ್ಲಿ ಹಿಟ್ಲರ್ (1889-1945) ಆಸ್ಟ್ರಿಯವನ್ನು ವಶಪಡಿಸಿಕೊಂಡಾಗ ಈತ ತಲೆಮರೆಸಿಕೊಂಡು ಇಟಲಿಗೆ ಹೋದ. ಮುಂದೆ ಡಬ್ಲಿನ್‍ನಲ್ಲಿ ಸೈದ್ಧಾಂತಿಕ ಭೌತವಿಜ್ಞಾನ ಶಾಲೆಯ ನಿರ್ದೇಶಕನಾಗಿ ನೇಮಕಗೊಂಡ. ನಿವೃತ್ತನಾಗುವತನಕ ಅಲ್ಲಿಯೇ ಇದ್ದ. 1953ರಲ್ಲಿ ವಿಯನ್ನಕ್ಕೆ ಹಿಂತಿರುಗಿದ. 1961 ಜನವರಿ 4ರಂದು ನಿಧನನಾದ. ಈತ ವಾಟ್ ಈಸ್ ಲೈಫ್ ಎಂಬ ಕೃತಿಯನ್ನು ರಚಿಸಿದ್ದಾನೆ. (ಎಸ್.ಎ.ಎಚ್.)