ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೈಕ್ಲೊಟ್ರಾನ್

ವಿಕಿಸೋರ್ಸ್ದಿಂದ

ಸೈಕ್ಲೊಟ್ರಾನ್ ಪರ್ಯಾಯಕ ವಿದ್ಯುತ್‍ಕ್ಷೇತ್ರವನ್ನು ಬಳಸಿ ಆವಿಷ್ಟಕಣಗಳನ್ನು ಸ್ಥಿರಕಾಂತಕ್ಷೇತ್ರದಲ್ಲಿ ವೃತ್ತಾರ್ಧವಾಗಿ ಬಾಗಿಸಿ ವರ್ತುಳೀಯ ಪಥದಲ್ಲಿ ವೇಗೋತ್ಕರ್ಷಿಸುವ ವೇಗೋತ್ಕರ್ಷಕ. ಇದು ಅತ್ಯಂತ ಹಳೆಯ ವೇಗೋತ್ಕರ್ಷಕಗಳ ಪೈಕಿ ಒಂದು, ಅಲ್ಲದೆ ವಿವಿಧ ಹಂತಗಳ ವೇಗೋತ್ಕರ್ಷಕಗಳ ಆರಂಭಿಕ ಹಂತವಾಗಿ ಇಂದಿಗೂ ಬಳಕೆಯಲ್ಲಿದೆ.

ವೇಗೋತ್ಕರ್ಷಿತವಾದ ಎಲೆಕ್ಟ್ರಾನ್‍ಗಳ ಮೇಲೆ ಸೈಕ್ಲೊಟ್ರಾನ್ ನಿಯಮವನ್ನು ಹೇರಿದಾಗ ಐತಿಹಾಸಿಕವಾಗಿ ಇದನ್ನು ಬೀಟಾಟ್ರಾನ್ ಎಂದು ಕರೆಯಲಾಗುತ್ತಿತ್ತು. “ಡೀಸ್” (ಆ - ಆಕಾರದ ವಿದ್ಯುದ್ಧ್ರುವ) ನಡುವೆ ಮಾತ್ರ ಆವಿಷ್ಟಕಣಗಳ ಗತಿ ವ್ಯತ್ಯಯವಾಗುತ್ತದೆ. ಸೈಕ್ಲೊಟ್ರಾನ್ ನಿಯಮದ ಪ್ರಕಾರ ಕಣಗಳು ವೃತ್ತಾರ್ಧವನ್ನು ಪೂರ್ಣಗೊಳಿಸಿದ ಅನಂತರ ತೆರಪಿನಾದ್ಯಂತ ಹಿಮ್ಮೊಗವಾಗಿ ವೇಗೋತ್ಕರ್ಷಿಸುವ ಸಲುವಾಗಿ ವಿದ್ಯುತ್‍ಕ್ಷೇತ್ರವನ್ನು ಸೈಕ್ಲೊಟ್ರಾನ್ ಆವೃತ್ತಿಯಲ್ಲಿ (ಸೈಕ್ಲೊಟ್ರಾನ್ ಫ್ರೀಕ್ವೆನ್ಸಿ) ವಿಪರ್ಯಯಗೊಳಿಸಲಾಗುವುದು. ಆಗ ಕಣಗಳು ಉಚ್ಚಜವದೊಂದಿಗೆ ದೊಡ್ಡದಾದ ವೃತ್ತಾರ್ಧದಲ್ಲಿ ಚಲಿಸಲಾರಂಭಿಸುತ್ತವೆ. ಈ ಪ್ರಕ್ರಿಯೆ ಹಲವು ಬಾರಿ ಮರುಕಳಿಸಿದಾಗ ಉಚ್ಚಜವದೊಂದಿಗೆ ನಿರ್ಗಮದ್ವಾರದ ಮೂಲಕ ಹೊರಬರುವುವು. *