ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುರುಗಲು

ವಿಕಿಸೋರ್ಸ್ದಿಂದ

ಹುರುಗಲು (ವ್ಯವಹಾರ ನಾಮ : ಸಾಟಿನ್ ವುಡ್) ಮೀಲಿಯೇಸೀ ಕುಟುಂಬದ ಕ್ಲೊರೊಕ್ಸೈಲಾನ್ ಸ್ವಿಟೀನಿಯ ಪ್ರಭೇದದ ಕುಳ್ಳ ಕಾಂಡದ, ಹರಡಿದ ತೆಳುವಾದ ಹರವಿನ ಪರ್ಣಪಾತಿಮರ. ತೊಗಟೆ ಮಂದವಾಗಿಯೂ ಬೆಂಡಾಗಿಯೂ ಹಳದಿಬಣ್ಣದಿಂದ ಕೂಡಿರುತ್ತದೆ. ಎಲೆಗಳಿಗೂ ತೊಗಟೆಗೂ ಒಂದು ವಿಶಿಷ್ಟ ವಾಸನೆ ಇದೆ. ಶುಷ್ಕತೆ ಇರುವ ಪರ್ಣಪಾತಿ ಕಾಡುಗಳಲ್ಲಿ ಇದು ಕಾಣದೊರೆಯುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಎಲೆಗಳು ಉದುರುತ್ತವೆ. ಕೆನೆಬಣ್ಣದ ಸಣ್ಣ ಹೂಗಳು ಏಪ್ರಿಲ್ ತಿಂಗಳಲ್ಲಿ ಮೂಡಿ, ಮೇ ಆಗಸ್ಟ್ ತಿಂಗಳಲ್ಲಿ ಕಾಯಿಬಲಿಯುತ್ತದೆ. ರೆಕ್ಕೆಯುಳ್ಳ ಬೀಜಗಳಿವೆ. ಇವು ಗಾಳಿಯಲ್ಲಿ ತೂರಾಡಿ ಪ್ರಸಾರವಾಗಿ ಸ್ವಾಭಾವಿಕ ಪುನರುತ್ಪತ್ತಿಗೆ ಅವಕಾಶವಾಗುವುದು. ಮರ ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಬೆಂಕಿಯಿಂದ ಹಾನಿ ಹೆಚ್ಚು. ಮೇಕೆ ಜಾನುವಾರುಗಳು ಈ ಮರದ ಎಲೆಗಳನ್ನು ತಿನ್ನುವುದಿಲ್ಲ.

ಚೌಬೀನೆ, ಸ್ಲೇಟುಗಳ ಹಾಗೂ ಪರದೆ ಚೌಕಟ್ಟುಗಳಿಗೂ ಬ್ರಷ್ ಹಿಡಿಗಳಿಗೂ, ಕಡತದ ಕೆಲಸಗಳಿಗೂ ಅಲಂಕಾರದ ಉಪಕರಣಗಳು, ಅಲಮಾರು ತಯಾರಿಕೆಗೂ ಉಪಯುಕ್ತವಾದೆ.

(ಎ.ಕೆ.ಎಸ್.)