ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುರುಳಿ

ವಿಕಿಸೋರ್ಸ್ದಿಂದ

ಹುರುಳಿ ಡೆಲಿಖೊಸ್‍ಬೈಫ್ಲೊರಸ್ ಎಂಬ ಪ್ರಭೇದದ ಈ ಸಸ್ಯ ಲೆಗ್ಯುಮಿನೆಸೀ ಅಥವಾ ಫ್ಯಾಬೇಸೀ ಕುಟುಂಬದ ಪ್ಯಾಪಿಲ್ಯೊನಿಯೆಸಿಯೇ ಉಪಕುಟುಂಬಕ್ಕೆ ಸೇರುತ್ತದೆ. ಇಂಗ್ಲಿಷಿನಲ್ಲಿ ಹಾರ್ಸ್‍ಗ್ರಾಮ್, ಹಿಂದಿಯಲ್ಲಿ ಕುಲ್‍ತಿ ಮತ್ತು ಕನ್ನಡದಲ್ಲಿ ಹುರುಳಿ ಎಂದು ಕರೆಯುತ್ತಾರೆ. ಇದು ತೆವಳಿಕೊಂಡು ಹಬ್ಬುವ ಒಂದು ಬಳ್ಳಿ. ಇದನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬೆಳೆಯುತ್ತಾರೆ. ಬೀಜಗಳನ್ನು ಬೇಯಿಸಿ ಅಥವಾ ಹುರಿದು ತಿನ್ನಲಾಗುತ್ತದೆ. ಇದರ ಹಸುರು ಸೊಪ್ಪನ್ನು ಪ್ರಾಣಿಗಳಿಗೆ ಆಹಾರವಾಗಿ ಕೊಡಲಾಗುತ್ತದೆ; ಅಥವಾ ಹಸಿರು ಗೊಬ್ಬರವಾಗಿ ಉಪಯುಕ್ತವಾಗುತ್ತದೆ. ಹಳ್ಳಿಮುಕ್ಕನಿಗೆ ಹಳ್ಳಿಕಜ್ಜಾಯ ಎಂಬ ಗಾದೆಮಾತು ಕನ್ನಡದಲ್ಲಿದ್ದು ಈ ಧಾನ್ಯದಿಂದ ಕಜ್ಜಾಯ ತಯಾರಿಸುತ್ತಿದ್ದರೆಂದು ತಿಳಿದುಬರುತ್ತದೆ. (ಎ.ಜಿ.ಡಿ.)