ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೆಸ್, ವಾಲ್ಟರ್ ರೂಡೋಲ್ಫ್‌

ವಿಕಿಸೋರ್ಸ್ದಿಂದ

ಹೆಸ್, ವಾಲ್ಟರ್ ರೂಡೋಲ್ಫ್ 1881-1973. ಸ್ವಿಟ್ಸರ್ಲೆಂಡಿನ ದೇಹವಿe್ಞÁನಿ ಮತ್ತು 1949ರ ನೊಬೆಲ್ ಪ್ರಶಸ್ತಿ ಪುರಸ್ಕøತ. ಫ್ರಾನ್‍ಫೆಲ್ಡ್‍ನಲ್ಲಿ ಜನನ. ಲ್ವಾಸೇನ್, ಬರ್ನ್, ಝಾರಿಟ್, ಬರ್ಲಿನ್ ಮತ್ತು ಕೀಲ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಪದವೀಧರನಾದ (1906). ಝೂರಿಚ್ ವಿಶ್ವವಿದ್ಯಾಲಯದಲ್ಲಿ ದೇಹವಿe್ಞÁನ ಪ್ರಾಧ್ಯಾಪಕನೂ ಫಿಸಿಯಾಲಜಿ ಇನ್‍ಸ್ಟಿಟ್ಯೂಟಿನ ನಿರ್ದೇಶಕನೂ (1917-51) ಆಗಿ ಸಂಶೋಧನೆ ಮಾಡಿದ. ರಕ್ತದೊತ್ತಡದ ಕ್ರಮನಿಯಂತ್ರಣ ಹಾಗೂ ಗುಂಡಿಗೆ ಮಿಡಿತದರ ಮತ್ತು ಉಸಿರಾಟದೊಂದಿಗೆ ಇವುಗಳ ಸಂಬಂಧ-ಇವನ್ನು ಅಧ್ಯಯನಗೈದ. ಮಿದುಳತಳದಲ್ಲಿಯ ರಚನೆಗಳ ಕ್ರಿಯಾತಂತ್ರದ ಬಗ್ಗೆ 1925ರಿಂದ ಮುಂದಕ್ಕೆ ಸಂಶೋಧನೆ ಎಸಗಿದ. ಮಿದುಳಿನ ವಿಶಿಷ್ಟ ಪ್ರದೇಶಗಳನ್ನು ಅತಿಸೂಕ್ಷ್ಮ ಸೂಜಿ ಎಲೆಕ್ಟ್ರೋಡುಗಳನ್ನು ನವುರಾಗಿ ಕುತ್ತಿ ಉದ್ದೀಪನಗೊಳಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಿದ. ಈ ತಂತ್ರಗಳಿಂದಾಗಿ ಮಿದುಳವ್ಯಾಪಾರ ಅರಿಯುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುವುದು ಕೈಗೂಡಿತು. ಹೈಪೊತೆಲಮಸ್‍ನ ವಿವಿಧ ಭಾಗಗಳನ್ನು ಉದ್ದೀಪನಗೊಳಿಸಿ ದೇಹೋಷ್ಣತೆ, ರಕ್ತದೊತ್ತಡ, ಉಸಿರಾಟಗಳಲ್ಲಿಯೂ ಜೊತೆಗೆ ಕೋಪ, ಲೈಂಗಿಕಾಸಕ್ತಿ, ನಿದ್ರೆಗಳಲ್ಲಿಯೂ ವ್ಯತ್ಯಯಗಳನ್ನು ತರಬಹುದೆಂದು ಹೆಸ್ ತೋರಿಸಿದ. (ಎಸ್.ಕೆ.ಎಚ್.)