ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೋಲ್ಟರ್ ಮಾನಿಟರ್

ವಿಕಿಸೋರ್ಸ್ದಿಂದ

ಹೋಲ್ಟರ್ ಮಾನಿಟರ್ - ಅಮೆರಿಕದ ಜೀವ ಭೌತಿಕ (ಬಯೋಫಿಸಿಕ್ಸ್) ಶಾಸ್ತ್ರಜ್ಞ ನಾರ್ಮನ್ ಜೆಫೆರಿಸ್ ಹೋಲ್ಟರ್ ಹೃದಯ ಸ್ಪಂದನದ ಪ್ರಾಸಗೆಡಿಕೆಯನ್ನು ನಿಖರವಾಗಿ ತಿಳಿಯಲು ದೇಹಕ್ಕಂಟದ ಸಾಧನವೊಂದನ್ನು ರೂಪಿಸಿದ. ಅದನ್ನು ಧರಿಸಿದ ವ್ಯಕ್ತಿ ತನ್ನ ದೈನಂದಿನ ಕಾರ್ಯಕ್ರಿಯೆಯನ್ನು ಯಥಾವತ್ತಾಗಿ ಕೈ ಕೊಳ್ಳಬಲ್ಲ. ಅದು ಒಂದು ಪಟ್ಟಿ (ಟೇಸ್)ಯ ಮೇಲೆ 2 ಇ.ಸಿ.ಜಿ ಜಾನೆಲ್‍ಗಳು ನಿರಂತರವಾಗಿ ವ್ಯಕ್ತಿಯ ವಿದ್ಯುತ್‍ಹೃದಯ ಚಿತ್ರಣವನ್ನು ದಾಖಲೆಮಾಡುತ್ತದೆ. ಈ ಪ್ರಯೋಗಪರೀಕ್ಷೆಯ ಕಾಲಾವಧಿ 24 ಘಂಟೆಗಳು.

ಇದರಿಂದ ವ್ಯಕ್ತಿಯಲ್ಲಿ ಕಾಲಕ್ಕೆ ಮೊದಲೇ (ಪ್ರಿಮೆಚೂರ್) ತಲೆದೋರುವ ಹೃತ್ಕ್ಕುಕ್ಷಿಯ (ವೆಂಟ್ರಿಕುಲರ್) ಹೆಚ್ಚುವರಿ ಆಕುಂಚನ (ಎಕ್ಸ್‍ಟ್ರಾ ಸಿಸ್ಟೋಲ್), ಹೃತ್ಕುಕ್ಷಿಯ ವೇಗಬರಿತ (ಟ್ಯಾಕಿಕಾರ್ಡಿಯ), ಆಕುಂಚನ ಎಲ್ಲರ ಮಧ್ಯಂತರ (ಇಂಟರ್‍ವಲ್)ಗಳ ಸಂಭಾವ್ಯವನ್ನೂ ಗುರುತಿಸಬಹುದು. ಪ್ರತಿಯೊಂದು ಬಗೆಯ ವ್ಯತ್ಯಯದ ಘಟನೆ ಎಷ್ಟು ಬಾರಿ, ಎಷ್ಟೊಂದು ತೀವ್ರಗತಿಯಲ್ಲಿ ಉಂಟಾಗುತ್ತದೆ ಎಂಬುದನ್ನು ಈ ನಿಗಾ ದಾಖಲೆಯಿಂದ ಗುರುತಿಸಿ ತಿಳಿಯಬಹುದು.

ಆರೋಗ್ಯವಂತ ಯುವಕನಲ್ಲಿ ಹೃದಯ ಪ್ರಾಸಬದ್ಧವಾಗಿ ಸಂಕುಚಿಸುವುದು ಅವರಲ್ಲಿ ಪ್ರಾಸಗತಿಯ ವ್ಯತ್ಯಯ ತೋರಬರುವುದು ತುಂಬ ಅಪರೂಪ. ಈ ನಿರೀಕ್ಷಣಾ ಸಾಧನದಿಂದ ಹೃದಯ ಪ್ರಾಸಗತಿಯ ವ್ಯತ್ಯಯದ ಸಂಭಾವ್ಯ ಮತ್ತು ಕಾಲಾವಧಿ ಬಗ್ಗೆ ತಿಳಿವಳಿಕೆ ಪಡೆಯಬಹುದು. ಅಲ್ಲದೆ ಗತಿರೂಪಕ (ಪೇಸ್ ಮೇಕರ್) ಕಾರ್ಯಕ್ರಿಯೆಯಲ್ಲಿ ಏನಾದರೂ ವ್ಯತ್ಯಯ ಇದೆಯೋ ಹೇಗೆ ಎಂಬುದನ್ನು ತಿಳಿಸುವುದು. ಸಾಮಾನ್ಯವಾಗಿ ತೆಗೆಯುವ ಇ.ಸಿ.ಜಿ.ಯಲ್ಲಿ ಹೃತ್ಕುಕ್ಷಿ ಅಥವಾ ಹೃತ್ಕರ್ಣದ ಪ್ರಾಸದಲ್ಲಿ ವ್ಯತ್ಯಾಸ ಅನೇಕ ಬಾರಿ ಗುರುತಿಸದೆ ಹೋಗಬಹುದು. ಅಲ್ಲದೆ ಹೃತ್ಕರ್ಣ ಹೃತ್ಕುಕ್ಷಿಯ ಮಧ್ಯದ ದಹನದಲ್ಲಿ ತಡೆಯ ಕೆಲವೊಮ್ಮೆ ಗೋಚರಿಸದೆ ಉಳಿಯಬಹುದು. ವಯಸ್ಸಾದವರಲ್ಲಿ ಪ್ರಾಸಗೆರಿಕೆ ಸಂಭಾವ್ಯ ಹೆಚ್ಚು ವ್ಯಕ್ತಿಯಲ್ಲಿ ಸೇರಿಬರುವ ಪ್ರಾಸಗೆಡಿಕೆ ಅನೇಕ ಬಾರಿ ಮಿದುಳಿನ ರಕ್ತ ಪೂರೈಕೆಗೆ ಕ್ಷಣ ಮಾತ್ರದ ಅಡ್ಡಿಯನ್ನುಂಟು ಮಾಡಬಹುದು. ಕಾಲಕ್ಕೆ ಮೊದಲೇ ತಲೆದೋರುವ ಹೃತ್ಕುಕ್ಷಿಯ ಹೆಚ್ಚುವರಿ ಆಕುಂಚನ ವಿಶೇಷವಾಗಿ ಹೃದಯದ ಅರಕ್ತತೆ (ಇಸ್‍ಕೀಮಿಯ) ಹೊಂದಿದವರಲ್ಲಿ ಮತ್ತು ಈಚೆಗೆ ಹೃದಯಾಘಾತ ಹೊಂದಿ ಚೇತರಿಸಿಕೊಂಡವರಲ್ಲಿ ವಿಶೇಷ. 6 ರಿಂದ 24 ಘಂಟೆಗಳ ಕಾಲಾವಧಿಯವರೆಗೆ ವೈದ್ಯಕೀಯ ನಿರೀಕ್ಷಣೆಯಲ್ಲಿ ವ್ಯಕ್ತಿ ಇರಬೇಕು. ಅದನ್ನು ಗುರುತಿಸುವಲ್ಲಿ ವ್ಯಕ್ತಿ ಆ ಕಾಲದಾದ್ಯಂತ ಧರಿಸಿರುವ ಮಾನಿಟರ್ ಸಹಾಯಕವಾಗುವುದು ಈ ರೀತಿಯ ಎಕ್ಟ್ರಾಸಿಸ್ಟೋಲ್‍ಗಳು ಹೃದಯದ ಅರಕ್ಷತೆಯನ್ನು ಹೊಂದಿರುದವರಲ್ಲಿ ಕೆಲವು ನಾಶಗಳಿಂದ 6 ತಿಂಗಳ ವರೆಗೆ ಉಳಿದು ಮುಂದೆ ದೂರವಾಗುತ್ತದೆ.

ಆದರೆ ಈ ರೀತಿಯ ಎಕ್ಟ್ರಾಸಿಸ್ಟೋಲ್‍ಗಳು ಪದೇ ಪದೇ ಬರುತ್ತಿದ್ದರೆ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ತಲೆದೋರುತ್ತಿದ್ದರೆ, ಕೆಲವು ಬಾರಿ ಸ್ಪಂದನ ಅಲೆಗಳು ಒಂದಕ್ಕೊಂದು ತೀರ ಸಮೀಪ ಬಂದು ಜೊತೆಗೂಡುತ್ತಿದ್ದರೆ ಅಥವಾ ಅಲೆಗಳು ಎರಡು ಉಬ್ಬು ಪಡೆದಿದ್ದರೆ ಇಲ್ಲವೆ ಹೃತ್ಕುಕ್ಷಿ ವೇಗಗತಿಯಿಂದ ಸಂಕುಚಿಸುತ್ತಿದ್ದರೆ ಚಿಕಿತ್ಸೆಗೊಳಪಡಬೇಕು. ಅವುಗಳ ಇರುವಿಕೆಯನ್ನು ಹೋಲ್ಟರ್ ಮಾನಿಟರ್ ತೋರಿಸಿಕೊಡುತ್ತದೆ. ಈ ಬಗೆಯ ತೊಂದರೆಗಳು ಅರಕ್ತತೆಯ ಹೃದಯ ರೋಗಹೊಂದಿದವರಲ್ಲಿ ತೋರಬರುತ್ತಿದ್ದರೆ ಅವು ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಅವುಗಳ ತಮ್ಮ ಇರುವಿಕೆಯಿಂದ ತೋೀರ್ಪಡಿಸುವ ಗುಣಲಕ್ಷಣಗಳ ಮಹತ್ವದ ಬಗ್ಗೆ ಎಲ್ಲ ಕಡೆ ಒಂದೇ ಬಗೆಯ ಅಭಿಪ್ರಾಯ ಇಲ್ಲ.

ಹೆಚ್ಚುಬಾರಿ, ತುಂಬ ಸಂಕೀರ್ಣ ರೀತಿಯಲ್ಲಿ ಹೃತ್ಕುಕ್ಷಿಯು ಸಂಕುಚನ ಗೊಳ್ಳುತ್ತಿದ್ದರೆ ಆದು ಏಕಾಏಕಿ ಬರುವ ಸಾಲಿಗೆ ಕಾರಣವಾಗಬಹುದು. ಅದು ಇಂತಹ ಅಂತ್ಯದ ಸೂಚನೆಯನ್ನು ಪರಿಣಮಿಸಬಹುದು. ಕೆಲವೊಮ್ಮೆ ಹೃತ್ಕುಕ್ಷಿಯ ತತ್ತರಿಕೆ (ಫಿಬ್ರಲೇಶನ್) ಉಂಟಾಗುವ ತೋರಲು ಪ್ರಿಮೆಚೂರ್ ವೆಂಕ್ಟುಲರ್ ಎಕ್ಸ್‍ಟ್ರಾ ಸಿಸ್ಟೇಲ್‍ಗಳು ಹೆಚ್ಚು ಬಾರಿ ಗೋಚರಿಸುತ್ತಿರಬಹುದು. ಇಲ್ಲವೆ ಹೃತ್ಕುಕ್ಷಿಯ ಕಾರ್ಯವ್ಯತ್ಯಯ ಮತ್ತು ಇಸಿಜಿಯಲ್ಲಿ ಎಸ್ ಟಿ ಅಲೆ ಮೇಲ್ಮುಖವಾಗಿರುವುದು ಸಾಮಾನ್ಯವಾಗಿ ಗೋಚರಿಸುತ್ತದೆ.

ಹೋಲ್ಟರ್ ಮಾನಿಟರ್ ತೋರಿಸಕೊಡದೆ ಪ್ರಾಸಗೆಡಿಕೆ ಹೆಚ್ಚು ಕಾಳ ಉಳಿದರೆ ಅದು ಅಪಾಯ ಸೂಚಕ. ಅವು ಹೃದಯ ಸ್ನಾಯುವಿನ ಹೆಚ್ಚಳ ಬೆಳೆವಣಿಗೆ, ಮೈಟರ್ ಕವಾಟ ಕುಸಿತ (ಪ್ರೇಲ್ಸಾಪ್ಸ್), ಹೃದಯ ದಹನ ವ್ಯವಸ್ಥೆ ಆಸ್ಥವ್ಯಸ್ತತೆ, ಬಟವೆ ಹಜಾರ (ಸೈನೇನಟ್ರಿಯಲ್) ಗಂಟಿನ ಕಾರ್ಯಕ್ರಿಯೆಯಲ್ಲಿ ಏರುಪೇರು ಇದ್ದಾಗ ಪ್ರಾಸಂಗೆಡಿಕೆ ವಿಶೇಷ. ಅದನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಕೈಗೊಳ್ಳುವಲ್ಲಿ ಈ ಮಾನಿಟರ್ ಉಪಯುಕ್ತ. (ಪಿ.ಎಸ್.ಎಸ್)