ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹ್ವೀಟ್ಸ್ಟೋನ್ ಬ್ರಿಜ್

ವಿಕಿಸೋರ್ಸ್ದಿಂದ

ಹ್ವೀಟ್‍ಸ್ಟೋನ್ ಬ್ರಿಜ್ - ಅಜ್ಞಾತ ರೋಧವನ್ನು (ರೆಸಿಸ್ಟೆನ್ಸ್) ಜ್ಞಾತ ಶಿಷ್ಟ ರೋಧದೊಂದಿಗೆ ಹೋಲಿಸಿ ಮೊದಲಿನದರ ವಿದ್ಯುದ್ರೋಧವನ್ನು ಅಳೆಯುವ ಸಾಧನ. ಹ್ವೀಟ್‍ಸ್ಟೋನ್ ನೆಟ್‍ವರ್ಕ್, ರೆಸಿಸ್ಟೆನ್ಸ್ ಬ್ರಿಜ್ ಎಂಬ ಹೆಸರುಗಳೂ ಇವೆ. ಇಂಗ್ಲಿಷ್ ಭೌತವಿಜ್ಞಾನಿ ಹಾಗೂ ಉಪಜ್ಞೆಕಾರ ಚಾಲ್ರ್ಸ್ ಹ್ವೀಟ್‍ಸ್ಟೋನ್ (1802-1914) ಎಂಬಾತ ಇಂಗ್ಲಿಷ್ ಗಣಿತವಿದ ಸ್ಯಾಮ್ಯುಯಲ್ ಹಂಟರ್ ಕ್ರಿಸ್ಟಿ ಎಂಬವನ ಚಿಂತನೆಯಿಂದ ಪ್ರಭಾವಿತನಾಗಿ ನಿರ್ಮಿಸಿದ ಸಾಧನವಿದು. ವಿದ್ಯುದ್ರೋಧಗಳ ಹೋಲಿಕೆಯ ವಿಧಾನವನ್ನು ಇಲ್ಲಿ ಅನುಸರಿಸುವುದಿದೆ. ಈ ವಿಧಾನ ವಿದ್ಯುತ್ಪ್ರವಾಹದ ಅತಂತ್ರಸ್ಥಿತಿಯನ್ನು ಅವಲಂಬಿಸಿರುವುದರಿಂದ ಈ ಬ್ರಿಡ್ಜನ್ನು ಬಳಸಿ ಮಾಡುವ ಮಾಪನೆ ನಿಜಮೌಲ್ಯದ್ದಾಗಿರುತ್ತದೆ.

ಹ್ವೀಟ್‍ಸ್ಟೋನ್ ಬ್ರಿಜ್‍ನ ತತ್ತ್ವದ ಆಧಾರದ ಮೇಲೆ ರಚನೆಯಾಗಿರುವ ಮತ್ತೊಂದು ಸಾಧನ ವ್ಯುತ್ಕ್ರಮಪ್ರವಾಹ ಬ್ರಿಜ್. ಪ್ರೇರಕತ್ವವನ್ನು (ಇಂಡಕ್ಟನ್ಸ್) ಮತ್ತು ಧಾರಿತ್ವವನ್ನು (ಕಪ್ಯಾಸಿಟನ್ಸ್) ಇದರಿಂದ ಅಳೆಯುತ್ತಾರೆ. *